Translate

ಗುರುವಾರ, ಜನವರಿ 17, 2013

ಅನ್ನನಾಳದಲ್ಲಿ ಆಹಾರದ ಹಿಮ್ಮುಖ ಸಮಸ್ಯೆಗಳು

ಡಾ| ಎಂ. ಪಾಂಡುರಂಗ ಕಾಮತ್‌, ಪ್ರೊಫೆಸರ್‌, ಇಎನ್‌ಟಿ ವಿಭಾಗ 

 
ಹಿಮ್ಮುಖ ಚಲನೆ ಅಂದರೆ, ಹೊಟ್ಟೆಯಲ್ಲಿರುವ ಆಹಾರದ ಅಂಶಗಳು ಅನ್ನನಾಳದೊಳಗೆ ಅಥವಾ ಗಂಟಲಿಗೆ ಹಿಮ್ಮುಖವಾಗಿ ಚಲಿಸುವುದು ಅಥವಾ ಹಿಂದಕ್ಕೆ ಬರುವುದು ಎಂದು ಅರ್ಥ. ಒಂದು ವೇಳೆ, ಆಹಾರದ ಅಂಶಗಳು ಅಧಿಕ ಪ್ರಮಾಣದಲ್ಲಿ ಅನ್ನನಾಳದೊಳಕ್ಕೆ ಹಿಮ್ಮುಖವಾಗಿ ಚಲಿಸಿದರೆ, ಅನ್ನನಾಳದ ಅಂಗಾಂಶಗಳಿಗೆ ಅಥವಾ ಜೀವಕೋಶಗಳಿಗೆ ಹಾನಿಯಾಗುವ ಅಪಾಯ ಹೆಚ್ಚು. ಮಾತ್ರವಲ್ಲ, ಹೊಟ್ಟೆಯುಬ್ಬರ, ಎದೆಯುರಿ... ಇತ್ಯಾದಿ ಲಕ್ಷಣಗಳೂ ಸಹ ಕಾಣಿಸಿಕೊಳ್ಳಬಹುದು. ಇದಕ್ಕೆ ಗ್ಯಾಸ್ಟ್ರೋ ಈಸೊಫೇಜಿಯಲ್‌ ರೆಫÉಕ್ಸ್‌ ಡಿಸೀಸ್‌  ಅಥವಾ ಜಠರ-ಅನ್ನನಾಳಗಳಲ್ಲಿ ಹಿಮ್ಮುಖ ಚಲನೆಯ ಕಾಯಿಲೆ ಎಂದು ಹೆಸರು.

ಹೊಟ್ಟೆಯಲ್ಲಿರುವ ಆಹಾರದ ಅಂಶಗಳು ಗಂಟಲಿಗೆ ಬಂದಾಗ, ಜೀವಕೋಶಗಳಿಗೆ ಹಾನಿಯಾಗಿ ಧ್ವನಿ ಗೊಗ್ಗರಾಗಬಹುದು, ಗಂಟಲಲ್ಲಿ ಕಫ‌ ಕಟ್ಟಿಕೊಳ್ಳಬಹುದು. ಈ ಕಾರಣದಿಂದ, ಆಗಾಗ ಗಂಟಲನ್ನು ತೆರವು ಮಾಡಿಕೊಳ್ಳುತ್ತಿರಬೇಕಾಗುತ್ತದೆ. ಇದಕ್ಕೆ ಲ್ಯಾರಿಂಜೋ ಫಾರಿಂಜಿಯಲ್‌ ರೆಫ‌Éಕ್ಸ್‌  (ಔಕR) ಅಥವಾ ಗಂಟಲ ಕುಹರದ ಹಿಮ್ಮುಖ ಚಲನೆ ಎಂದು ಹೆಸರು.
ಲಕ್ಷಣಗಳು
ಗ್ಯಾಸ್ಟ್ರೋ ಈಸೊಫೇಜಿಯಲ್‌ ರೆಫÉಕ್ಸ್‌ ಡಿಸೀಸ್‌ ಅಂದರೆ, ಜಠರ ಅನ್ನನಾಳದ ಹಿಮ್ಮುಖ ಚಲನೆಯ ರೋಗ ಲಕ್ಷಣಗಳು, ಲ್ಯಾರಿಂಜೋ ಫಾರಿಂಜಿಯಲ್‌ ರೆಫ‌Éಕ್ಸ್‌  ಲಕ್ಷಣಗಳಿಗಿಂತ ಸ್ವಲ್ಪ ಭಿನ್ನವಾಗಿದ್ದರೂ ಸಹ, ರೋಗಿಯ ಒಟ್ಟಾರೆ ಲಕ್ಷಣಗಳು ಒಂದೋ ಎಉRಈಗೆ ಅಥವಾ ಔಕRಗೆ ಸಂಬಂಧಪಟ್ಟದ್ದಾಗಿರುತ್ತದೆ.
GERDನ ವಿಶೇಷ ಲಕ್ಷಣಗಳು

1. ಎದೆಯುರಿ - ಹೆಚ್ಚಾಗಿ ಬಾಧಿಸುತ್ತದೆ.

2. ಹೊಟ್ಟೆಯುಬ್ಬರ.
 LPRನ ಲಕ್ಷಣಗಳು 

1. ಧ್ವನಿ ಗೊಗ್ಗರಾಗುವುದು - ಹೆಚ್ಚು
 ಬಾಧಿಸುತ್ತದೆ.

2. ಆಗಾಗ ಗಂಟಲನ್ನು ತೆರವು
 ಮಾಡಬೇಕಾಗುವುದು.

3. ಕಫ ಹೆಚ್ಚುವುದು.

4. ಮೂಗಿನಲ್ಲಿ ದ್ರವ ಹನಿಯುವುದು.

5. ದೀರ್ಘ‌ಕಾಲಿಕ ಕಫ.

6. ಆಹಾರ ನುಂಗಲು ಕಷ್ಟವಾಗುವುದು
 (ಡಿಸ್‌ಫೇಜಿಯಾ).

7. ಗಂಟಲಲ್ಲಿ  ಏನೋ ಗಂಟು ಇರುವಂತೆ
 ಅನ್ನಿಸುವುದು.

8. ಶ್ವಾಸ ಕಟ್ಟಿದಂತೆ ಅನ್ನಿಸುವುದು.
LPRಇರುವ ಕೆಲವು ಜನರಲ್ಲಿ ಎದೆಯುರಿಯ ಲಕ್ಷಣಗಳು ತೀವ್ರವಾಗಿದ್ದರೆ, ಇನ್ನು ಕೆಲವರಲ್ಲಿ ಸ್ವಲ್ಪವೇ ಕಾಣಿಸಿಕೊಳ್ಳಬಹುದು; ಮತ್ತೆ ಕೆಲವರಲ್ಲಿ ಈ ಲಕ್ಷಣವೇ ಇಲ್ಲದಿರಬಹುದು. ಹಿಮ್ಮುಖವಾಗಿ ಚಲಿಸುವ ಆಹಾರದ ಅಂಶಗಳು ಅನ್ನನಾಳದಲ್ಲಿ ಬಹಳ ಸಮಯ ನಿಲ್ಲದೇ ಇರುವುದರಿಂದ, ಅಥವಾ ಅನ್ನನಾಳವನ್ನು ಆಮ್ಲವು ಬಹಳ ಸಮಯ ಕಿರಿಕಿರಿ ಮಾಡದೇ ಇರುವುದರಿಂದಲೂ ಸಹ ಈ ರೀತಿ ಲಕ್ಷಣಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳಬಹುದು.
LPRಸಮಸ್ಯೆಯನ್ನು ಎದುರಿಸುತ್ತಿರುವ ಹಿರಿಯರಲ್ಲಿ ಹೆಚ್ಚಾಗಿ ಗಂಟಲಿನ ಹಿಂಭಾಗದಿಂದ ತೀಕ್ಷ್ಣ ಪಿತ್ತರಸ ಹೊರಸೂಸುತ್ತಿರುತ್ತದೆ. ಗಂಟಲಿನಲ್ಲಿ ಗಂಟುಗಳಿರುವಂತೆ ಅನ್ನಿಸುತ್ತದೆ, ಮಾತ್ರವಲ್ಲ ಆಹಾರ ನುಂಗಲೂ ಸಹ ಕಷ್ಟವಾಗುತ್ತದೆ. ಗಂಟಲಿನಲ್ಲಿ ಉರಿಯುವಂತೆ ಅನ್ನಿಸಿ, ಉಸಿರಾಟವೂ ಸಹ ಕಷ್ಟವಾಗಬಹುದು. ಸಾಮಾನ್ಯವಾಗಿ, ಬೆಳಗ್ಗೆ ಎದ್ದ ಕೂಡಲೇ ಈ ಲಕ್ಷಣಗಳು ಹೆಚ್ಚಾಗಿ ಗೋಚರಿಸುತ್ತವೆ. ಎಉRಈನಲ್ಲಿ  ಲಕ್ಷಣಗಳು ವ್ಯಕ್ತಿಯು ರಾತ್ರಿಯಲ್ಲಿ ಅಂಗಾತ ಮಲಗಿಕೊಂಡಾಗ ಹೆಚ್ಚಾಗಿ ಗೋಚರಿಸಿದರೆ, ಔಕR ನಲ್ಲಿ ವ್ಯಕ್ತಿಯು ಬೆಳಗ್ಗೆ ಎದ್ದಾಗ ಲಕ್ಷಣಗಳು ಗೋಚರಿಸುತ್ತವೆ.

ಆಮ್ಲಗಳ ತೆರವು ಗೊಳಿಸುವಿಕೆ ಪ್ರಕ್ರಿಯೆಯ ಹೆಚ್ಚಳದಿಂದಾಗಿ,  ರೋಗಿಗಳ ಅನ್ನನಾಳದ ಚಲನಶೀಲತೆ ಕಡಿಮೆಯಾಗಿರುವುದು ಹಾಗೂ ಕೆಳ ಅನ್ನನಾಳದ ಸಂಕುಚನಾ ಸ್ನಾಯುಗಳಲ್ಲಿ  ತೊಂದರೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ,  ರೋಗಿಗಳ ಅನ್ನನಾಳದ ಚಟುವಟಿಕೆ ಚೆನ್ನಾಗಿದ್ದು, ಆಮ್ಲ ತೆರವುಗೊಳಿಸುವ ಪ್ರಕ್ರಿಯೆಯೂ ಸಹ ಸಾಧಾರಣವಾಗಿ ಉತ್ತಮವಿರುತ್ತದೆ.

ರೋಗಿಗಳನ್ನು ಹೆಚ್ಚು ಬಾಧಿಸುವುದು ಮೇಲಿನ ಅನ್ನನಾಳದ ಸಂಕುಚನಾ ಸ್ನಾಯುಗಳ ತೊಂದರೆ. ಗಂಟಲ ಕುಳಿಯಲ್ಲಿ ಆಮ್ಲವನ್ನು ತೆರವುಗೊಳಿಸುವ ಚಟುವಟಿಕೆ ನಡೆಯದಿರುವುದರಿಂದ, ಹಾಗೂ ಇಲ್ಲಿಯ ಜೀವಕೋಶಗಳು ಅತ್ಯಂತ ತೆಳು, ನಾಜೂಕು ಹಾಗೂ ಹಿಮ್ಮುಖ ಚಲನೆಯ ವಿರುದ್ಧ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸುರಕ್ಷತೆಯನ್ನು ಹೊಂದಿರುವುದರಿಂದಾಗಿ, ಅನ್ನನಾಳಕ್ಕಿಂತಲೂ, ಗಂಟಲಕುಳಿಯು ಆಮ್ಲದಿಂದ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚು.  ಸಾಮಾನ್ಯವಾಗಿ ಒಬ್ಬ ವ್ಯಕ್ತಿಯಲ್ಲಿ, ದಿನ ಒಂದರಲ್ಲಿ ಐವತ್ತು ಸಲ ಹೊಟ್ಟೆಯಿಂದ, ಅನ್ನನಾಳಕ್ಕೆ ಆಹಾರಾಂಶಗಳು ಚಲಿಸುತ್ತಿರುತ್ತವೆ. ಆದರೆ, ಈ ರೀತಿಯ ಸಹಜ ಹಿಮ್ಮುಖ ಚಲನೆಯಲ್ಲಿ ಕನಿಷ್ಠ ಎರಡು ಸಲವಾದರೂ ಅವು ಗಂಟಲ ಕುಳಿಯ ಜೀವಕೋಶಗಳನ್ನು ಸಂಪರ್ಕಿಸುತ್ತವೆ. ಹೀಗಾದರೆ, ಅದು ಗಂಟಲ ಕುಳಿಯ ಜೀವಕೋಶಗಳಲ್ಲಿ ಅಸಹಜತೆಯನ್ನುಂಟು ಮಾಡುತ್ತದೆ. ಹಾಗಾಗಿ, ಇದು ಗಂಟಲಕುಳಿಯ ಎಡೆಮಾ ಅಥವಾ ಬಾವು ಅಥವಾ ಗಂಟಲಕುಳಿಯ ಊತವೇ ಹೊರತು, ಇದು ಗಂಟಲಕುಳಿಯ  ಕೆಂಪೇರುವಿಕೆಯಲ್ಲ. ಇದು ಅತ್ಯಂತ ಪ್ರಮುಖ ರೋಗ ಲಕ್ಷಣ.
LPRನ ತಪಾಸಣೆ
LPRನ ತಪಾಸಣೆಗೆ ಅನೇಕ ಪರೀಕ್ಷೆಗಳು ಲಭ್ಯ ಇವೆ. ಅವುಗಳೆಂದರೆ,

1. ಡಬಲ್‌ ಪ್ರೋಬ್‌ ಟಏ ಮಾನಿಟರಿಂಗ್‌ -
 24 ಗಂಟೆ ಅಥವಾ 48 ಗಂಟೆಗಳ ಪರೀಕ್ಷೆ.

2. ಸೆನ್‌ಸರಿ ಟೆಸ್ಟಿಂಗ್‌ ಅಥವಾ ಸಂವೇದನಾ
 ಪರೀಕ್ಷೆ.

3. ಆಹಾರ ನುಂಗುವಿಕೆಯ

ಎಂಡೊಸ್ಕೋಪಿಕ್‌ ತಪಾಸಣೆ - ಫೆೆÉಕ್ಸಿಬಲ್‌ ಎಂಡೊಸ್ಕೋಪಿಕ್‌ ಇವ್ಯಾಲ್ಯುಯೇಷನ್‌ ಆಫ್‌ ಸ್ವಾಲೋವಿಂಗ್‌ ವಿದ್‌ ಸೆನ್‌ಸರಿ ಟೆಸ್ಟಿಂಗ್‌ .

4. ಬೇರಿಯಂ ಈಸೋಫಾಗೋಗ್ರಫಿ.

5. ಈಸೋಫಾಗೊಸ್ಕೋಪಿ.

6. ಬರ್ನ್ಸ್ಟನ್‌ ಆಸಿಡ್‌ ಪರ್ಫ್ಯೂಷನ್‌.

7. ರೆಫÉಕ್ಸ್‌ ಸಿಂಪ್ಟಮ್‌ ಇಂಡೆಕ್ಸ್‌ . ಹಾಗೂ ರೆಫ‌Éಕ್ಸ್‌ ಫೆೈಂಡಿಂಗ್‌ ಸ್ಕೋರ್‌ .
ಹಿಮ್ಮುಖ ಚಲನೆಯನ್ನು ನಿಖರವಾಗಿ ಕಂಡುಹಿಡಿಯಲು ಮಾಡುವಂತಹ ಸಾಮಾನ್ಯ ಪರೀಕ್ಷೆಗಳು ಅಂದರೆ:

ರೋಗಿಯ ಹಿನ್ನೆಲೆ ಹಾಗೂ ದೈಹಿಕ ಪರೀಕ್ಷೆ.

ಟ್ರಾನ್ಸ್‌ನಾಸಲ್‌ ಫೆೆÉಕ್ಸಿಬಲ್‌ ಲ್ಯಾರಿಂಜೋಸ್ಕೋಪಿ  - ಈ ವಿಧಾನದಲ್ಲಿ ತೆಳುವಾದ, ಬಳುಕುವ ಎಂಡೋಸ್ಕೋಪ್‌ನ್ನು, ಮೂಗಿನ ಮೂಲಕ ಗಂಟಲಿನ ಕುಹರಕ್ಕೆ ಹಾಯಿಸಿ, ಇಲ್ಲಿಯ ರಚನೆ ಹಾಗೂ ಚಟುವಟಿಕೆಗಳ ದೊಡ್ಡ ಚಿತ್ರವನ್ನು ಪಡೆದು, ಪರೀಕ್ಷೆ ಮಾಡುತ್ತಾರೆ.

ಲ್ಯಾರಿಂಜಿಯಲ್‌ ಸೆನ್‌ಸರಿ ಟೆಸ್ಟಿಂಗ್‌.

24 ಗಂಟೆಗಳ ಟಏ ಟೆಸ್ಟಿಂಗ್‌ - ಇಲ್ಲಿ ಅನ್ನನಾಳ ಹಾಗೂ ಮೂಗಿನ ಕುಹರದ ನಡುವೆ ಒಂದು ಸಾಧನವನ್ನು ಇರಿಸುತ್ತಾರೆ. ಅನ್ನನಾಳದ ವಿವಿಧ ಸ್ಥಳಗಳಲ್ಲಿ  ಟಏ ವ್ಯತ್ಯಾಸವಾಗುವುದನ್ನು ರೋಗಿಯ ಹತ್ತಿರವಿರುವ ಅಥವಾ ಆತ ಧರಿಸಿರುವ ಟ್ರಾನ್ಸ್‌ಮೀಟರ್‌ನಲ್ಲಿ ದಾಖಲಿಸುತ್ತಾರೆ.

ಬೇರಿಯಂ ನುಂಗುವ ಪರೀಕ್ಷೆ (ಬೇರಿಯಂ ಈಸೋಫಾಗೋಗ್ರಫಿ ಅಥವಾ ಈಸೋಫಾಗೊಗ್ರಾಮ್‌) - ಇದು ಅನ್ನನಾಳದ ಎಕ್ಸ್‌-ರೇ ಪರೀಕ್ಷೆ. ಈ ಪರೀಕ್ಷೆಯಲ್ಲಿ, ಬೇರಿಯಂನ್ನು ನುಂಗಿ, ಆ ಬಳಿಕ, ಅದು ಬಾಯಿಂದ ಗಂಟಲಿಗೆ, ಅಲ್ಲಿಂದ ಅನ್ನನಾಳಕ್ಕೆ, ಅನ್ನನಾಳದಿಂದ ಹೊಟ್ಟೆಗೆ ಹರಿದು ಸಾಗುವ ಎಕ್ಸ್‌-ರೇ ಚಿತ್ರಣವನ್ನು ತೆಗೆಯುತ್ತಾರೆ.

ಈಸೋಫಾಗೊಸ್ಕೋಪಿ -ಅನ್ನನಾಳದ ಒಳಭಾಗವನ್ನು ಪರೀಕ್ಷಿಸುವುದು (ಎಂಡೋಸ್ಕೋಪಿ ಮೂಲಕ). ವ್ಯಕ್ತಿಗೆ ಜನರಲ್‌ ಅನಸ್ತೀಷಿಯಾ ಕೊಟ್ಟು, ಆತನ ಬಾಯಿಯ ಮೂಲಕ, ಒಂದು ದೊಡ್ಡ ಬಳುಕುವ ದರ್ಶಕವನ್ನು ಒಳಹಾಯಿಸುತ್ತಾರೆ, ಅಥವಾ ಆಂಶಿಕ ಅನಸ್ತೀಷಿಯಾವನ್ನು ಹೊರರೋಗಿಯಾಗಿಯೇ ನೀಡಿ, ತೆಳುವಾದ ಬಳುಕುವ ದರ್ಶಕವನ್ನು ಮೂಗಿನ ಮೂಲಕ ಹಾಯಿಸುತ್ತಾರೆ .
 ಚಿಕಿತ್ಸೆ
ಆಹಾರದ ಹಿಮ್ಮುಖ ಚಲನೆಯ ಕಾಯಿಲೆಯ ಚಿಕಿತ್ಸೆಗಳನ್ನು  ಈ ರೀತಿಯಲ್ಲಿ  ವಿಂಗಡಿಸಲಾಗಿದೆ.
1. ನಡವಳಿಕೆಯ ಚಿಕಿತ್ಸೆ

ವ್ಯಕ್ತಿಯು ಮಲಗುವ ಹಾಸಿಗೆಯ ತಲೆಯಿರಿಸುವ ಭಾಗವನ್ನು ಎತ್ತರಿಸು ವಂತೆ ಮಾಡುವುದು. ನಡವಳಿಕೆಯ ಚಿಕಿತ್ಸೆಯ ಯಶಸ್ಸಿನ ಅಂಶಗಳಲ್ಲಿ ಇದೂ ಒಂದು. ವ್ಯಕ್ತಿಯ ರೋಗಲಕ್ಷಣಗಳನ್ನು ಹೊಂದಿಕೊಂಡು, ಈ ಇರುವ ರೋಗಿಗಳಿಗೆ ಈ ವಿಧಾನದಿಂದ ಬಹಳ ಪ್ರಯೋಜನವಾಗುತ್ತದೆ.  ಇರುವವರಿಗೂ ಸಹ ಈ ವಿಧಾನದಿಂದ ಪ್ರಯೋಜನವಾಗಬಹುದು. ಆದರೆ, ಇದು ವ್ಯಕ್ತಿಯ ರೋಗಲಕ್ಷಣಗಳನ್ನು ಅವಲಂಭಿಸಿದೆ. ಇಷ್ಟು ಮಾತ್ರವಲ್ಲದೆ, ರಾತ್ರಿಬಹಳ ಹೊತ್ತಿನ ನಂತರ ಆಹಾರ ಸೇವಿಸುವುದು ಹಾಗೂ ಬಿಗಿಯಾದ ಉಡುಪುಗಳನ್ನು ಧರಿಸದೇ ಇರುವುದರಿಂದ ಪ್ರಯೋಜನವಾಗಬಹುದು. ಚಿಕಿತ್ಸೆಗಳು ಯಶಸ್ವಿಯಾಗಲು, ತಂಬಾಕಿನ ಎಲ್ಲ ರೀತಿಯ ಉತ್ಪನ್ನಗಳ ಸೇವನೆಯಿಂದಲೂ ದೂರವಿರುವುದು ಅತ್ಯವಶ್ಯಕ.
2. ಆಹಾರ ಕ್ರಮ
ಆಹಾರದ ಹಿಮ್ಮುಖ ಚಲನೆಯ ಕಾಯಿಲೆಯ ಚಿಕಿತ್ಸಾ ವಿಧಾನದಲ್ಲಿ ಅನುಸರಿಸಬಹುದಾದ ಆಹಾರ ಕ್ರಮಗಳೆಂದರೆ, ಕೆಫಿನ್‌, ಚಾಕಲೇಟ್‌, ಆಲ್ಕೋಹಾಲ್‌ ಹಾಗೂ ಮಿಂಟ್‌ಯುಕ್ತ ಆಹಾರಗಳನ್ನು ಮಿತಿಯಲ್ಲಿ ಸೇವಿಸುವುದು. ಟೊಮ್ಯಾಟೋಯುಕ್ತ  ಆಹಾರಗಳು ಹೊಟ್ಟೆಯಲ್ಲಿ ಆಮ್ಲದ ಉತ್ಪತ್ತಿಯನ್ನು ಹೆಚ್ಚಿಸುತ್ತವೆ. ಹಾಗಾಗಿ, ರೋಗಲಕ್ಷಣಗಳನ್ನು ಉಂಟು ಮಾಡುವ ಆಹಾರವನ್ನು ಮಿತಿಯಲ್ಲಿ ಹಾಗೂ ಎಚ್ಚರಿಕೆಯಿಂದ ಸೇವಿಸುವುದು ಒಳ್ಳೆಯದು.
3. ಔಷಧಿ, ಚಿಕಿತ್ಸೆ
ಆಮ್ಲ - ನಿರೋಧಕಗಳು ಅಥವಾ ಆಂಟಾಸಿಡ್‌ಗಳ ಸೇವನೆಯಿಂದ, ಆಹಾರದ ಹಿಮ್ಮುಖ ಚಲನೆಯ, ರೋಗ ಲಕ್ಷಣಗಳಿಂದ ಮುಕ್ತಿ ಸಿಗಬಹುದು. ಪ್ರೋಟಾನ್‌ ಪಂಪ್‌ ಇನ್‌ಹಿಬಿಟರ್ಸ್‌ ನಂತಹ ಆಮ್ಲ -ನಿರೋಧಕ ಔಷಧಿಗಳಿಂದ ಔಕRನ್ನು ಯಶಸ್ವಿಯಾಗಿ ನಿಭಾಯಿಸಬಹುದು. ಆದರೆ, ಹೆಚ್ಚಿನ ರೋಗಿಗಳಿಗೆ ದಿನಕ್ಕೆ ಎರಡುಸಲ ಈ ಔಷಧಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಫಾರ್ಮಕೋಜಿನೋಮಿಕ್ಸ್‌ ಭವಿಷ್ಯದ ಔಷಧೀಯ ಭರವಸೆ

ಡಾ| ಪದ್ಮಲತಾ ರೈ ಎಸ್‌., ಪ್ರೊಫೆಸರ್‌, ಬಯೊಟೆಕ್ನಾಲಜಿ ವಿಭಾಗ

 
ಫಾರ್ಮಕೋಜಿನೋಮಿಕ್ಸ್‌ ಎಂಬುದು ಒಂದು  ವಿಜ್ಞಾನ. ಜೀನ್‌ಗಳು ಅಥವಾ ವರ್ಣತಂತುಗಳ ಆನುವಂಶಿಕ ವ್ಯತ್ಯಾಸಗಳು, ವೈವಿಧ್ಯತೆಗಳ ಮೇಲೆ ವಿವಿಧ ಔಷಧಿಗಳು ಬೀರುವ  ಒಳ್ಳೆಯ ಪ್ರಭಾವ, ಕೆಟ್ಟ  ಪ್ರಭಾವ, ಅಥವಾ ತಟಸ್ಥ  ಪ್ರಭಾವಗಳು ಏನು ಎಂಬುದನ್ನು ಈ ವಿಜ್ಞಾನವು  ವಿಶ್ಲೇಷಿಸುತ್ತದೆ; ಪರೀಕ್ಷಿಸುತ್ತದೆ. ಈ ರೀತಿಯಲ್ಲಿ  ಫಾರ್ಮಕೋಜಿನೋಮಿಕ್ಸ್‌  ವ್ಯಕ್ತಿಯ ಜಿನೋಟೈಪ್‌ ಅಥವಾ ಜೀನ್‌ಗಳ ಸಂಯೋಜನೆಯನ್ನು ಆಧರಿಸಿ, ಹೆಚ್ಚು  ಖಚಿತವಾದ, ಪರಿಣಾಮಕಾರಿಯಾದ ಹಾಗೂ ಕಡಿಮೆ ಅಡ್ಡ ಪರಿಣಾಮಗಳುಳ್ಳ ಔಷಧಿ ಚಿಕಿತ್ಸೆಯನ್ನು  ಅಭಿವೃದ್ಧಿಗೊಳಿಸುವ ಉದ್ದೇಶವನ್ನಿರಿಸಿಕೊಂಡಿದೆ. ಇಂತಹ ಸಂಶೋಧನೆಗಳು ವೈಯಕ್ತಿಕ  ಔಷಧಿ ಎಂಬ ಸೌಲಭ್ಯದ ಭರವಸೆಯನ್ನು  ಮೂಡಿಸುತ್ತದೆ.

ಇದರಲ್ಲಿ  ಪ್ರತೀ ವ್ಯಕ್ತಿಗೆ ಅನುಸರಿಸುವ ಔಷಧೀಯ ಸಂಯೋಜನೆಗಳು ಆತನ ಆನುವಂಶೀಯ ವೈಶಿಷ್ಟéದ ಆಧಾರದಲ್ಲಿ   ಅತ್ಯುತ್ತಮವಾದವುಗಳಾಗಿರುತ್ತವೆ.
ಫಾರ್ಮಕೋಜಿನೋಮಿಕ್ಸ್‌ನ ನಿರೀಕ್ಷಿತ
ಪ್ರಯೋಜನಗಳು ಯಾವುವು?

ಹೆಚ್ಚು ಪ್ರಭಾವಶಾಲಿಯಾದ ಔಷಧಿಗಳು

ಔಷಧಿ ಕಂಪೆನಿಗಳು ರೋಗಿಗಳ ಪ್ರೊಟೀನ್‌ಗಳು, ಎನ್‌ಝೈಮ್‌ಗಳು ಅಥವಾ ಕಿಣ್ವಗಳು, ಜೀನ್‌ ಹಾಗೂ ಕಾಯಿಲೆಗಳಿಗೆ ಸಂಬಂಧಿಸಿದ  ಮಾಲಿಕ್ಯೂಲ್‌ಗ‌ಳನ್ನು ಆಧರಿಸಿ ಔಷಧಿಗಳನ್ನು  ತಯಾರಿಸಬಹುದು. ಇದರಿಂದಾಗಿ, ಔಷಧಿಗಳ ಸಂಶೋಧನೆ ಹಾಗೂ ತಯಾರಿಕೆಯಲ್ಲಿ ಗಣನೀಯ ಪ್ರಯೋಜನವಾಗಲಿದೆ ಮಾತ್ರವಲ್ಲ ; ಒಂದು ಕಾಯಿಲೆಗೆ ಸಂಬಂಧಿಸಿದಂತೆ ಹೆಚ್ಚು  ನಿಖರವಾದ ಔಷಧಿ, ಚಿಕಿತ್ಸೆ ಗಳು ಲಭ್ಯವಾಗಲಿವೆ. ಇದರಿಂದ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗುವುದು  ಮಾತ್ರವಲ್ಲ; ಚಿಕಿತ್ಸಾ ಹಾನಿಗಳು ಕಡಿಮೆಯಾಗಲಿವೆ.
ಮೊದಲ ಬಾರಿಗೇ ಉತ್ತಮ
ಹಾಗೂ ಸುರಕ್ಷಿತ  ಔಷಧಿಗಳು

ರೋಗಿಗೆ ಹೊಂದಾಣಿಕೆಯಾಗುವ, ಸೂಕ್ತ ಔಷಧಿಗಾಗಿ ನಡೆಸಲಾಗುವ ಪ್ರಾಯೋಗಿಕ, ಪ್ರಮಾಣೀಕೃತ  ವಿಧಾನಗಳಿಗೆ  ಬದಲಾಗಿ, ವೈದ್ಯರು  ರೋಗಿಯ ಆನುವಂಶಿಕ ವೈಶಿಷ್ಟéವನ್ನು   ವಿಶ್ಲೇಷಿಸಲು ಹಾಗೂ ಲಭ್ಯವಿರುವ ಸೂಕ್ತ ಔಷಧಿ, ಚಿಕಿತ್ಸೆಯನ್ನು  ಆರಂಭದಿಂದಲೇ ಸೂಚಿಸಲು  ಸಮರ್ಥರಿರುತ್ತಾರೆ. ಇದರಿಂದ, ಬರಿಯ ಅಂದಾಜಿನ ಮೇಲೆ ಔಷಧಿಯನ್ನು ಸೂಚಿಸುವುದು ತಪ್ಪುತ್ತದೆ ಮಾತ್ರವಲ್ಲ ; ನಿರೀಕ್ಷಿತ ಅಡ್ಡ ಪರಿಣಾಮಗಳನ್ನು  ಮೊದಲೇ ನಿವಾರಿಸಿಕೊಂಡಿರುವ ಕಾರಣದಿಂದ, ಈ ರೀತಿಯ ಚಿಕಿತ್ಸೆಯಲ್ಲಿ ವ್ಯಕ್ತಿಯ ಸುರಕ್ಷತೆಯೂ ಹೆಚ್ಚಿ ಅತ್ಯಂತ ಕಡಿಮೆ ಅವಧಿಯಲ್ಲೇ ರೋಗಿ ಚೇತರಿಸಿಕೊಳ್ಳಬಲ್ಲ ರು.
ಸೂಕ್ತ ಔಷಧಿಗಳನ್ನು, ಸರಿಯಾದ
ಪ್ರಮಾಣವನ್ನು  ನಿರ್ಧರಿಸುವಲ್ಲಿ ಹೆಚ್ಚು
ಖಚಿತವಾದ ವಿಧಾನಗಳು
ರೋಗ ವಿಶ್ಲೇಷಣೆಯು, ವ್ಯಕ್ತಿಯ ತೂಕ ಹಾಗೂ ಪ್ರಾಯವನ್ನು ಆಧರಿಸಿಕೊಂಡಿರುವ ಪ್ರಸುತ್ತ ವಿಧಾನಗಳಿಗೆ ಬದಲಾಗಿ, ವ್ಯಕ್ತಿಯ ಆನುವಂಶಿಕ ಅಂಶಗಳನ್ನು ಆಧರಿಸಿರುತ್ತವೆ. ದೇಹವು ಎಷ್ಟು  ಚೆನ್ನಾಗಿ ಔಷಧಿಯನ್ನು  ಸಂಶ್ಲೇಷಿಸುತ್ತದೋ, ಅಷ್ಟೇ ಕ್ಷಿಪ್ರವಾಗಿ ಅದು ಚಯಾಪಚಯಗೊಳ್ಳುತ್ತದೆ. ಇದರಿಂದ, ಚಿಕಿತ್ಸೆಯ ಪ್ರಭಾವ ಹೆಚ್ಚುವುದು ಮಾತ್ರವೇ ಅಲ್ಲ, ಔಷಧಿಯ  ಪ್ರಮಾಣವು  ಹೆಚ್ಚಿಗೆಯಾಗುವ ಸಂಭವ ಕಡಿಮೆಯಾಗುವುದು.
ಆರಂಭದ ಹಂತದಲ್ಲೆ  ಕಾಯಿಲೆಗಳ 
ತಪಾಸಣೆ

ಒಬ್ಬ  ವ್ಯಕ್ತಿಯು ತನ್ನ ಆನುವಂಶಿಕ  ಲಕ್ಷಣಗಳನ್ನು  ಮೊದಲೆ ತಿಳಿದುಕೊಂಡಿರುವುದರಿಂದ, ಆತ ತನ್ನ ಜೀವನ ಶೈಲಿ ಹಾಗೂ  ಪರಿಸರದಲ್ಲಿ ಬಹಳ ಬೇಗನೇ ಸೂಕ್ತ ಬದಲಾವಣೆಗಳನ್ನು  ಮಾಡಿಕೊಂಡು, ಬರಬಹುದಾದ ಆನುವಂಶಿಕ ಕಾಯಿಲೆಗಳ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು, ಅಥವಾ ಅದು ಬರದಂತೆ ತಪ್ಪಿಸಬಹುದು. ಅಂತೆಯೇ, ಒಬ್ಬ ವ್ಯಕ್ತಿಯ ಕಾಯಿಲೆಯ ಬಗ್ಗೆ ಮೊದಲೇ ಅರಿವಿದ್ದರೆ, ಆ ಕಾಯಿಲೆಯನ್ನು  ಜಾಗರೂಕತೆಯಿಂದ ಗಮನಿಸಿ, ಸೂಕ್ತ ಹಂತದಲ್ಲಿ  ಆ ವ್ಯಕ್ತಿಗೆ ಸರಿಯಾದ ಹಾಗೂ ಗರಿಷ್ಠ  ಪರಿಣಾಮ ಬೀರಬಲ್ಲ ಚಿಕಿತ್ಸೆಯನ್ನು  ನೀಡಬಹುದು.
ಉತ್ತಮ ಚುಚ್ಚು ಮದ್ದುಗಳು
ಆನುವಂಶಿಕ ಅಂಶಗಳಾದ  ಆಧಾರಗಳನ್ನು ಉಪಯೋಗಿಸಿಕೊಂಡು  ತಯಾರಿಸಿದ ಔಷಧಿಗಳು, ಯಾವುದೇ ಅಪಾಯಕರ ಅಂಶ ರಹಿತವಾಗಿ, ಈಗಾಗಲೆ ಲಭ್ಯವಿರುವ ಚುಚ್ಚುಮದ್ದುಗಳ ಎಲ್ಲಾ  ಪ್ರಯೋಜನಗಳನ್ನು  ಒದಗಿಸಲಿವೆ. ಈ ಚುಚ್ಚು ಮದ್ದುಗಳು ಹೆಚ್ಚು  ವೆಚ್ಚದಾಯಕವಲ್ಲದ, ಸ್ಥಿರವಾದ, ಸಂಗ್ರಹಿಸಲು ಸುಲಭವಾದ, ಹಾಗೂ ಒಂದೇ ಸಲಕ್ಕೆ ಹಲವಾರು ರೋಗಲಕ್ಷಣಗಳನ್ನು  ನಿವಾರಿಸಲು ಸಾಮರ್ಥಯವಿರುವಂಥಹವುಗಳು.

ಔಷಧಿ ಸಂಶೋಧನೆ ಮತ್ತು
ಮಾನ್ಯತೆ ಪ್ರಕ್ರಿಯೆಯಲ್ಲಿ ಅಭಿವೃದ್ಧಿ

ಜಿನೋಮ್‌ ಉದ್ದೇಶಗಳನ್ನು  ಬಳಸಿಕೊಂಡಾಗ, ಔಷಧಿ ಕಂಪೆನಿಗಳಿಗೆ  ಸಂಭಾವ್ಯ ಚಿಕಿತ್ಸೆಗಳನ್ನು  ಕಂಡುಕೊಳ್ಳುವುದು ಸುಲಭವಾಗುತ್ತದೆ. ಈ ಹಿಂದೆ ವಿಫಲಗೊಂಡ ಔಷಧಿಗಳನ್ನೂ ಸಹ , ಅವು ಬಹಳಕೆಯಾಗಬಹುದಾದ ಜನ  ಸಮುದಾಯಕ್ಕೆ ಹೊಂದಿಕೆ ಆಗುವ ಬಗ್ಗೆ ಮರುಪರಿಶೀಲನೆ ಸಾಧ್ಯವಾಗಲಿದೆ. ಔಷಧಿ, ಸಂಶೋಧನೆಗಳು ನಿರ್ದಿಷ್ಟ   ಜನಸಮುದಾಯಗಳನ್ನು  ಉದ್ದೇಶಿಸಿ ನಡೆಯಬೇಕಾದಾಗ, ಔಷಧಿ  ಮಾನ್ಯತೆ  ಪ್ರಕ್ರಿಯೆಯೂ  ಕೂಡ ಅದೇ ಹಾದಿಯಲ್ಲಿ  ನಡೆಯಬೇಕಾಗುತ್ತದೆ. ಆಗ ಮಾತ್ರ ಹೆಚ್ಚಿನ ಯಶಸ್ಸು ಸಾಧ್ಯ. ಔಷಧಿಗೆ  ಪ್ರತಿಕ್ರಿಯಿಸಬಲ್ಲ ಜನರನ್ನು ಮಾತ್ರ ಗುರಿಯಾಗಿಸಿ  ಕ್ಲಿನಿಕಲ್‌ ಸಂಶೋಧನೆಗಳು ನಡೆದಾಗ, ಅದರ ವೆಚ್ಚ ಮತ್ತು ಅಪಾಯಗಳೂ ಕಡಿಮೆ ಆಗುತ್ತವೆ.
ಆರೋಗ್ಯ ಆರೈಕೆಯ ಒಟ್ಟು 
ವೆಚ್ಚದಲ್ಲಿ ಕಡಿತ


ಔಷಧಿಗಳ ಅಡ್ಡ  ಪರಿಣಾಮಗಳು, ಔಷಧಿ ಅಧ್ಯಯನಗಳ ವೈಫಲ್ಯಗಳ ಸಂಖ್ಯೆ, ಔಷಧಿ ಮಾನ್ಯತೆಗೆ ತಗಲುವ ಸಮಯ, ರೋಗಿಗಳು ಔಷಧಿಯನ್ನು ಸೇವಿಸಬೇಕಾದ ಅವಧಿ, ಪರಿಣಾಮಕಾರಿ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ಪ್ರಮಾಣ... ಇತ್ಯಾದಿ ವಿಷಯಗಳಲ್ಲಿ ಇಳಿಕೆಯಾಗುವುದು. ಅದೇ ರೀತಿಯಲ್ಲಿ, ರೋಗಗಳು ಆರಂಭದಲ್ಲೆ  ಪತ್ತೆಯಾಗುವ ಕಾರಣದಿಂದಾಗಿ, ರೋಗದಿಂದ ದೇಹದ ಮೇಲಾಗುವ ಪ್ರಭಾವ ಮತ್ತು  ಸಂಭಾವ್ಯ ಔಷಧಿ ಗುರಿಗಳ ವ್ಯಾಪ್ತಿಯಲ್ಲಿ  ಹೆಚ್ಚಳವಾಗುವುದು. ಈ  ಕಾರಣಗಳಿಂದಾಗಿ, ಮುಂದಿನ ದಿನಗಳಲ್ಲಿಆರೋಗ್ಯ ಆರೈಕೆಯ  ಒಟ್ಟು  ವೆಚ್ಚ  ಕಡಿತವಾಗಲಿದೆ.
ಫಾರ್ಮಕೋಜಿನೋಮಿಕ್ಸ್‌  ಇಂದು
ಬಳಕೆಯಲ್ಲಿದೆಯೇ  ?

ಪ್ರಸುತ್ತ ಕಾಲಮಾನದಲ್ಲಿ , ಅಭಿವೃದ್ಧಿ  ಹೊಂದಿರುವ ದೇಶಗಳು ವೈಯಕ್ತಿಕ ನೆಲೆಯ ಚಿಕಿತ್ಸಾ ಕ್ರಮಗಳನ್ನು  ಅಳವಡಿಸಿಕೊಳ್ಳುತ್ತಿವೆ. ಆದರೆ, ಈ ನಿಟ್ಟಿನಲ್ಲಿ  ಸಾಧನೆಯನ್ನು  ಮಾಡಿರುವ ಭಾರತೀಯ ಸಂಸ್ಥೆಗಳು ಅಥವಾ  ಕಂಪೆನಿಗಳು  ಕಡಿಮೆ ಎಂದು ಹೇಳಬಹುದು. ಅನೇಕ ಪಂಗಡಗಳಿರುವ, ಬೃಹತ್‌ ಸಾಮಾಜಿಕ -ಆರ್ಥಿಕ  ವರ್ಗ ವ್ಯತ್ಯಾಸಗಳಿರುವ, ಹೆಚ್ಚಿನ ವಿಲಕ್ಷಣ ಸಾಧ್ಯತೆಗಳಿರುವ ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ಅಡ್ಡ ಪರಿಣಾಮಗಳನ್ನು ,  ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ವ್ಯಕ್ತಿಗತ ನೆಲೆಯ ಚಿಕಿತ್ಸಾ  ವಿಧಾನವನ್ನು ಆಳವಡಿಸುವ ಅಗತ್ಯ ಬಹಳವಿದೆ. ಪ್ರಸ್ತುತ, ಮಣಿಪಾಲದಲ್ಲಿರುವ ಮಣಿಪಾಲ್‌ ಜೀವ ವಿಜ್ಞಾನ  ಕೇಂದ್ರದಲ್ಲಿ ಇತ್ಯಾದಿಗಳ ಜೀನ್‌ ವಿಧವನ್ನು ಗುರುತಿಸುವುದಕ್ಕಾಗಿ  ಮಾಲಿಕ್ಯೂಲಾರ್‌ ತಪಾಸಣೆಯನ್ನು  ನಡೆಸುತ್ತಿದ್ದಾರೆ . ಈ ತಂತ್ರಜ್ಞಾನಕ್ಕೆ ಅಗತ್ಯವಿರುವಂತಹ ಎಲ್ಲಾ ಸಲಕರಣೆಗಳು, ಅಂದರೆ ಫ್ಲೋ ಸೈಟೋಮೀಟರ್‌, ಕಇR ಯೂನಿಟ್‌ಗಳು, ಏಕಔಇ ಹಾಗೂ ಸ್ವಯಂಚಾಲಿತ  ಸ್ವೀಕ್ವೆನ್ಸರ್‌, ಮೈಕ್ರೂಅರ್ರೆ ಹಾಗೂ ಇನ್ನೂ ಅನೇಕ  ಸಾಧನಗಳು ಮಣಿಪಾಲ್‌ ಜೀವ ವಿಜ್ಞಾನ  ಕೇಂದ್ರದಲ್ಲಿ  ಲಭ್ಯ ಇವೆ.
ಫಾರ್ಮಕೋಜಿನೋಮಿಕ್ಸ್‌ 
ತಂತ್ರಜ್ಞಾನ ಅಭಿವೃದ್ಧಿಗೆ 
ಇರುವಂತಹ ಆಡಚಣೆಗಳು
ಯಾವುವು?

ಫಾರ್ಮಕೋಜಿನೋಮಿಕ್ಸ್‌ ಎಂಬುದು, ಇನ್ನೂ  ಶೈಶವದಲ್ಲಿರುವ, ಅಭಿವೃದ್ಧಿ ಹೊಂದುತ್ತಿರುವ ಸಂಶೋಧನಾ ಕ್ಷೇತ್ರ. ಈ ಕ್ಷೇತ್ರದ ಪ್ರಯೋಜನಗಳ ಅರಿವಿಗೆ ಬರತೊಡಗಬೇಕಾದರೆ, ಹಲವಾರು ಅಡಚಣೆಗಳನ್ನು  ಮೀರಿ ನಿಲ್ಲಬೇಕಾಗಿದೆ.
ಔಷಧಿಗಳ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರುವಂತಹ ಸಂಕೀರ್ಣ  ಜೀನ್‌ ವ್ಯತ್ಯಾಸಗಳು
ಸಿಂಗಲ್‌ ನ್ಯೂಕ್ಲಿಯೋಟೈಡ್‌ ಪಾಲಿಮಾರ್ಫಿಸಂ ಸರಣಿಗಳು, ಅವುಗಳ ಜೀನೋಮ್‌ ಸೀಕ್ವೆನ್ಸ್‌ನ ಒಂದು ನ್ಯೂಕ್ಲಿಯೋಟೈಡ್‌ಆಗುವ ವ್ಯತ್ಯಾಸವು, ಇಡೀ ಸರಣಿಯನ್ನು  ವ್ಯತ್ಯಾಸಗೊಳಿಸುತ್ತದೆ. ಮನುಷ್ಯನಲ್ಲಿರುವ  3.3 ಮಿಲಿಯನ್‌ ಜಿನೋಮ್‌ಗಳಲ್ಲಿ , ಪ್ರತೀ 100 ರಿಂದ 300 ಬೇಸ್‌ಗಳಲ್ಲಿ  ಇರುತ್ತವೆ. ಹಾಗಾಗಿ, ಔಷಧೀಯ ಪ್ರತಿಕ್ರಿಯೆಯಲ್ಲಿ ಪ್ರತೀ  ಪಾತ್ರ  ಏನು  ಎಂಬುದನ್ನು  ಕಂಡು ಕೊಳ್ಳಲು, ಮಿಲಿಯಗಟ್ಟಲೆ ಜಿನೋಮ್‌ಗಳನ್ನು  ಗುರುತಿಸಿ, ವಿಶ್ಲೇಷಿಸಬೇಕಾಗುತ್ತದೆ. ನಮ್ಮನ್ನು ಇನ್ನಷ್ಟು  ಸಂದಿಗ್ಧಗೊಳಿಸುವ ಪ್ರಕ್ರಿಯೆ ಎಂದರೆ, ಪ್ರತೀ ಔಷಧಿ ಪ್ರತಿಕ್ರಿಯೆಯಲ್ಲಿ  ಸಕ್ರಿಯವಾಗಿರುವ ಜೀನ್‌ ಯಾವುದು  ಎಂಬುದು ಅರಿವಾಗದೇ ಇರುವುದು. ಕೆಲವು ಜೀನ್‌ಗಳು ಒಂದೇ ರೀತಿಯ ಉತ್ತೇಜಕ  ಪ್ರತಿಕ್ರಿಯೆಯನ್ನು  ತೋರಬಹುದು. ಜೀನ್‌ ವ್ಯತ್ಯಾಸಗಳ ದೊಡ್ಡ  ಚಿತ್ರಣ ಅಥವಾ ಸಮಗ್ರ ವಿವರಗಳನ್ನು  ಪಡೆಯುವುದೆಂದರೆ, ಬಹಳ ಸಮಯ  ತೆಗೆದುಕೊಳ್ಳುವಂತಹದ್ದು , ಹಾಗೂ ಬಹಳ ಸಂಕೀರ್ಣವಾದಂತಹ  ಪ್ರಕ್ರಿಯೆ.
ಬದಲೀ ಔಷಧಿಗಳ  ಮಿತಿ

ಒಂದು  ವಿಶಿಷ್ಟ  ಪರಿಸ್ಥಿತಿಯ ಚಿಕಿತ್ಸೆಗಾಗಿ ಒಂದು ಅಥವಾ ಎರಡು ವಿಧದ ಔಷಧಿಗಳು ಲಭ್ಯವಾಗಬಹುದು. ರೋಗಿಯಲ್ಲಿನ ಜೀನ್‌ ವ್ಯತ್ಯಾಸಗಳು ಔಷಧಿಯ ಪರಿಣಾಮಕ್ಕೆ ಅಡ್ಡಿ ಪಡಿಸಿದರೆ, ರೋಗಿಗೆ ಇನ್ನಾವುದೇ  ಬದಲೀ ಚಿಕಿತ್ಸೆ ಸಿಗದೆ, ಹಾಗೆಯೇ  ಬಿಟ್ಟು  ಬಿಡಬೇಕಾಗಬಹುದು.

ಬಹು ಫಾರ್ಮಕೋಜಿನೋಮಿಕ್ಸ್‌  ಔಷಧಿಗಳ ತಯಾರಿಕೆಗೆ ಔಷಧಿ ಕಂಪೆ‌ನಿಗಳು  ನಿರುತ್ಸಾಹದಾಯಕ  ಪ್ರತಿಕ್ರಿಯೆಯನ್ನು ತೋರಬಹುದು

 ಅನೇಕರಿಗೆ ಹೊಂದುವ ಒಂದೇ  ಅಳತೆ ಎಂಬ ನೀತಿಯನ್ವಯ, ಅನೇಕ ಜನರಿಗೆ ಅಗತ್ಯವಿರುವ ಹಾಗೂ ಹೊಂದುವ ಔಷಧಿಗಳನ್ನು ಕಂಡುಕೊಳ್ಳುವ ಕಂಪೆನಿಗಳು ಯಶಸ್ವಿ ಅನ್ನಿಸಬಹುದು. ಈ ಔಷಧಿ ಅಭಿವೃದ್ಧಿಯ ನಿಟ್ಟಿನಲ್ಲಿ, ಅನೇಕ ಔಷಧಿಗಳನ್ನು  ಮಾರುಕಟ್ಟೆಗೆ ಬಿಡುಗಡೆ  ಮಾಡಬೇಕಾದರೆ, ಕೋಟಿಗಟ್ಟಲೆ ರೂಪಾಯಿಗಳು ವೆಚ್ಚವಾಗಬಹುದು. ಆದರೆ, ಕೆಲವೇ ಜನರನ್ನು  ತಲುಪಬಲ್ಲ  ಬದಲೀ ಫಾರ್ಮಕೊಜಿನೋಮಿಕ್ಸ್‌  ಔಷಧಿಗಳ ಅಭಿವೃದ್ಧಿಯಲ್ಲಿಯೂ ಈ ಕಂಪೆನಿಗಳು ಇದೇ ಉತ್ಸಾಹವನ್ನು ತೋರಿಸಿಯಾವು ಎಂದು ಹೇಳುವುದು ಕಷ್ಟ .
ಆರೋಗ್ಯ ಕಾರ್ಯಕರ್ತರಿಗೆ
ಅರಿವನ್ನು ಮೂಡಿಸುವುದು

ಬಹು ಫಾರ್ಮಕೋಜಿನೋಮಿಕ್ಸ್‌   ಔಷಧಿಗಳನ್ನು ಅಳವಡಿಸಿ, ಬೇರೆ ಬೇರೆ ಸಮುದಾಯದವರ, ಒಂದೇ ರೋಗ ಸ್ಥಿತಿ ಇರುವ ಅನೇಕ ಜನರಿಗೆ ಚಿಕಿತ್ಸೆಯನ್ನು  ನೀಡುವಾಗ, ಯಾವ ರೀತಿಯಲ್ಲಿ  ಔಷಧಿಗಳನ್ನು ಸೂಚಿಸಿಬೇಕು ಎಂಬ ಗೊಂದಲವು ಅನೇಕ  ವೈದ್ಯರು ಅಥವಾ ಆರೋಗ್ಯ ಕರ್ತರನ್ನು ಕಾಡಬಹುದು. ಇಲ್ಲಿ  ಪ್ರತೀ  ರೋಗಿಗೆ ಯಾವ ಔಷಧಿಯು ಸೂಕ್ತ ಎಂಬುದನ್ನು  ಕಂಡುಕೊಳ್ಳಲು,  ವೈದ್ಯರು ಒಂದು ಹೆಚ್ಚುವರಿ ಚಿಕಿತ್ಸಾ ಹಂತವನ್ನು  ರೂಪಿಸಬೇಕಾಗುತ್ತದೆ. ಚಿಕಿತ್ಸಾ ನಿಖರತೆಯನ್ನು  ಹೆಚ್ಚಿಸಲು ಹಾಗೂ  ಎಲ್ಲಾ ರೋಗಿಗಳಿಗೆ ಅತ್ಯುತ್ತಮ  ಔಷಧಿ -ಚಿಕಿತ್ಸೆಗಳನ್ನು  ಸೂಚಿಸುವ ನಿಟ್ಟಿನಲ್ಲಿ, ಎಲ್ಲ  ವೈದ್ಯರು, ತಜ್ಞರು ಜೆನೆಟಿಕ್ಸ್‌   ಬಗ್ಗೆ ಆಳವಾದ ಅರಿವನ್ನು  ಪಡೆಯಬೇಕಾಗುವುದು.
ಕೊನೆಯದಾಗಿ, ಮುಂದಿನ ಇಪ್ಪತ್ತೈದು ವರ್ಷಗಳ ಮಟ್ಟಿಗೆ, ಕೆಲವು ಔಷಧಿಗಳು, ಹಾಗೂ ಕೆಲವು ರೋಗಗಳ ಸ್ಥಿತಿಯಲ್ಲಿ  ಔಷಧಿಗಳ  ಪ್ರತಿಕ್ರಿಯೆ  ಏನು  ಎಂಬುದನ್ನು  ತಿಳಿಯುವುದು ಫಾರ್ಮಕೋಜಿನೋಮಿಕ್ಸ್‌ ನ  ಪ್ರಾಮಾಣಿಕ  ಪ್ರಯತ್ನ . ಡಯಾಬೆಟೆಸ್‌ ಮೆಲ್ಲಿಟಿಸ್‌, ಹೈಪರ್‌ ಟೆನ್‌ಷನ್‌, ಮಾನಸಿಕ ಕಾಯಿಲೆಗಳು ಹಾಗೂ ಇನ್ನಿತರ ಅನೇಕ ರೋಗ  ಸ್ಥಿತಿಗಳಿಗೆ , ಹೊಸದಾದ ಜೀನ್‌ ಆಧರಿತ   ಡಿಸೈನರ್‌ ಔಷಧಿಗಳು  ಮಾರುಕಟ್ಟೆಯಲ್ಲಿ  ಲಭ್ಯವಾಗಲಿವೆ. ಜೆನೆಟಿಕ್ಸ್‌ ನ ಅಭಿವೃದ್ಧಿಯ ಫಲವಾಗಿ, ಜೆನೆಟಿಕ್‌  ಆಧರಿತ  ರೋಗ  ಲಕ್ಷಣಗಳ, ಮಾಲಿಕ್ಯೂಲ್‌ಗ‌ಳ ಅನೇಕ  ಮಾಹಿತಿಗಳನ್ನು  ಮೊದಲೇ ಪಡೆದಿರುವುದರಿಂದ, ಕ್ಯಾನ್ಸರಿನ ತಪಾಸಣೆ  ಹಾಗೂ ಚಿಕಿತ್ಸೆ  ಬಹಳ ಸುಧಾರಣೆಯನ್ನು  ಕಾಣಲಿದೆ. 

2020 ರ ಹೊತ್ತಿಗೆ, ಎಲ್ಲಾ ಗಡ್ಡೆಗಳ ಖಚಿತ,  ಮಾಲಿಕ್ಯೂಲಾರ್‌  ವಿಶ್ಲೇಷಣೆಯಿಂದಾಗಿ, ನಿಯಂತ್ರಣ ತಪ್ಪಿ ಹೋಗಿರುವ ಜೀನ್‌ನ ನಿಖರ ಗುರುತಿಸುವಿಕೆ ಸಾಧ್ಯವಾಗಿ , ಚಿಕಿತ್ಸೆಯು ಬೆರಳಚ್ಚಿನ  ಮಾದರಿಯಲ್ಲಿ , ವ್ಯಕ್ತಿಗತ ಉದ್ದೇಶವಾಗಿರುತ್ತದೆ .

ಮಕ್ಕಳಲ್ಲಿ ಗೊರಕೆಗೆ ಕಾರಣಗಳು

ಡಾ| ಪಾಂಡುರಂಗ ಕಾಮತ್‌, ಪ್ರೊಫೆಸರ್‌, ಇ ಎನ್‌ ಟಿ ವಿಭಾಗ 

 
ಗೊರಕೆ (ಸ್ಟ್ರೈಡರ್‌) ಎಂಬುದು ಗಂಟಲಿನಿಂದ ಹೊರಡುವ ಒಂದು ವಿಧದ ಉಚ್ಚ ಸ್ಥಾಯಿಯ, ಅಸಹಜ  ಸ್ವರ. ಕಿರು ನಾಲಿಗೆ, ನಾಲಿಗೆ ಹಾಗೂ  ಶ್ವಾಸನಾಳಗಳಲ್ಲಿ ಗಾಳಿ ಸಂಚಾರಕ್ಕೆ ಭಾಗಶಃ  ಅಡಚಣೆಯಾಗಿ, ಅವು  ಪ್ರಕ್ಷುಬ್ಧಗೊಳ್ಳುವುದರಿಂದಾಗಿ, ಗೊರಕೆ ಉತ್ಪತ್ತಿಯಾಗುತ್ತದೆ.
ಗೊರಕೆ  ಎಂಬುದು ಒಂದು ರೋಗ ಲಕ್ಷಣವೇ ಹೊರತು, ರೋಗ ಕಾರಕ ಅಥವಾ ಕಾಯಿಲೆಯಲ್ಲ . ಗೊರಕೆ ಕಾಣಿಸಿಕೊಳ್ಳುವುದಕ್ಕೆ ಕಾರಣ ಏನೆಂಬುದನ್ನು ಇನ್ನಷ್ಟೇ ಕಂಡು ಹಿಡಿಯಬೇಕಾಗಿದೆ. ಉಚ್ಛಾಸದ ಅಥವಾ ನಿಶ್ವಾಸದ ಅಥವಾ ಎರಡೂ ಕಾರಣಗಳಿಂದಾಗಿ ಅಂದರೆ ದ್ವಿಮುಖ  ಹಿನ್ನೆಲೆಯಿಂದ ಗೊರಕೆ  ಉತ್ಪತ್ತಿಯಾಗಬಹುದು. ಉಸಿರಾಟದ ಚಕ್ರದಲ್ಲಿ (ಆವರ್ತದಲ್ಲಿ ) ಅದರ ಅವಧಿಯನ್ನು  ಆಧರಿಸಿಕೊಂಡು, ಯಾವ  ಕಾರಣದ ಗೊರಕೆ  ಕಾಣಿಸಿಕೊಂಡಿದೆ ಎಂಬುದನ್ನು  ನಿರ್ಧರಿಸಬಹುದು.  ಧ್ವನಿಪೆಟ್ಟಿಗೆಯ ಕುಹರದಲ್ಲಿ ಅಡಚಣೆಗಳಿಂದಾಗಿ, ಉಚ್ಛಾ$Ìಸದ ಅವಧಿಯ ಗೊರಕೆ ಉಂಟಾದರೆ, ಶ್ವಾಸನಾಳದ ಅಡಚರಣೆಗಳ ಕಾರಣದಿಂದಾಗಿ ನಿಶ್ವಾಸದ ಅವಧಿಯ ಗೊರಕೆ ಉಂಟಾಗ‌ಬಹುದು. ಕಿರುನಾಲಿಗೆ ಅಥವಾ ಗಂಟಲ ಕುಹರದಲ್ಲಿರಬಹುದಾದ ವೈಪರೀತ್ಯಗಳಿಂದಾಗಿಯೂ ಸಹ  ದ್ವಿಮುಖ  ಗೊರಕೆ ಉಂಟಾಗಬಹುದು. ಸಂಪೂರ್ಣ ಹಿನ್ನೆಲೆ, ದೈಹಿಕ ಪರೀಕ್ಷೆ  ಹಾಗೂ  ಇನ್ನಿತರ ಅಧ್ಯಯನಗಳ ಮೂಲಕ ಗೊರಕೆಗೆ ಸಾಧ್ಯತೆಗಳ ವಿಶ್ಲೇಷಣೆಯ ಅನಂತರ, ನಿಖರವಾಗಿ ರೋಗ ಸಾಧ್ಯತೆಗಳನ್ನು  ಕಂಡು ಹಿಡಿಯಲು ಸಾಧ್ಯ. ಅನೇಕ ಪ್ರಕರಣಗಳಲ್ಲಿ , ಅಗತ್ಯವಿರುವ ಬಾಗುವ ಅಥವಾ ಸ್ಥಿರವಾದ ಎಂಡೊಸ್ಕೋಪಿಯನ್ನು  ರೋಗಪತ್ತೆಗಾಗಿ ಉಪಯೋಗಿಸಬೇಕಾಗುತ್ತದೆ.       
  
ಮಕ್ಕಳಲ್ಲಿ ಕಂಡುಬರುವ ಗೊರಕೆಗೆ ಸಾಮಾನ್ಯ ಕಾರಣಗಳು ಆಂದರೆ :

ಎ) ಲಾರಿಂಗೋಮಲಾಸಿಯಾ

 ಎನ್ನುವುದನ್ನು , ಮಗುವು  ಉಸಿರನ್ನು ಒಳಗೆಳೆದುಕೊಳ್ಳುವಾಗ, ಅಂದರೆ ಉಚ್ಚಾಸದಲ್ಲಿ, ಧ್ವನಿ ಪೆಟ್ಟಿಗೆಯ  ಮೇಲಿನ ಭಾಗದಲ್ಲಿರುವ ಜೋತಾಡುವ ಅಂಗಾಂಶಗಳು ಶ್ವಾಸನಾಳದೊಳಕ್ಕೆ  ಹುದುಗಿಕೊಳ್ಳುವುದು ಎಂಬುದಾಗಿ  ವಿವರಿಸಬಹುದು.

1.ಅನೇಕ ಸಂಧರ್ಭಗಳಲ್ಲಿ, ನವಜಾತ ಶಿಶುಗಳ ಹಾಗೂ ಮಕ್ಕಳ ಸಶಬ್ಧ ಉಸಿರಾಟಕ್ಕೆ, ಇದು ಬಹಳ ಮುಖ್ಯ ಕಾರಣವಾಗಿರುತ್ತದೆ.

2. ಇದು ಬಹಳ ಸಾಮಾನ್ಯವಾಗಿ ಕಂಡುಬರುವ  ಧ್ವನಿಪೆಟ್ಟಿಗೆಯ (ಲಾರಿಂಕ್ಸ್‌ ) ಜನ್ಮಜಾತ ನ್ಯೂನತೆಯಾಗಿದೆ.
ಚಿಹ್ನೆಗಳು ಹಾಗೂ  ಲಕ್ಷಣಗಳು
 ಲಾರಿಂಗೋಮಲಾಸಿಯಾ ಅಸಹತೆ ಇರುವ ಮಕ್ಕಳು, ಸಶಬ್ಧವಾಗಿ ಉಸಿರನ್ನು  ಒಳಗೆಳೆದುಕೊಳ್ಳುತ್ತಾರೆ. ಮಕ್ಕಳು ಕ್ಷೋಭೆಗೊಂಡಿದ್ದಾಗ, ಅಳುವಾಗ, ಉತ್ತೇಜಿತರಾಗಿದ್ದಾಗ, ಆಹಾರ ಸೇವನೆಯ ವೇಳೆ  ಅಥವಾ ಬೆನ್ನು° ಮೇಲುಮುಖವಾಗಿರುವ ಭಂಗಿಯಲ್ಲಿ ಮಲಗಿರುವಾಗ ಸಶಬ್ಧ  ಉಸಿರಾಟದ ಲಕ್ಷಣಗಳು  ತೀವ್ರವಾಗಿರುತ್ತವೆ. ಹೆಚ್ಚಾಗಿ, ಹುಟ್ಟುವಾಗಲೇ ಕಾಣಿಸಿಕೊಳ್ಳುವ ಈ ಲಕ್ಷಣಗಳು, ಆ ಮೇಲಿನ ಹತ್ತು ದಿನಗಳಲ್ಲಿ ಸರಿಹೋಗುವುದಿದೆ. ಹಾಗಿದ್ದರೂ, ಕೆಲವು ಶಿಶುಗಳಲ್ಲಿ 1 ವರ್ಷ ಪ್ರಾಯದವರೆಗೂ ಈ ರೀತಿಯ ಸಶಬ್ಧ  ಉಸಿರಾಟ ಇರಬಹುದು.

ಸಾಮಾನ್ಯವಾಗಿ ತಪಾಸಣೆಯಾದ ಮೊದಲ ಕೆಲವು ತಿಂಗಳುಗಳಲ್ಲಿ, ಅಂದರೆ, ಮಗುವಿನ 4 ರಿಂದ 8 ತಿಂಗಳ ವಯಸ್ಸಿನ ನಡುವೆ, ಲಕ್ಷಣಗಳು  ತೀವ್ರವಾಗಬಹುದು. ಹೆಚ್ಚಿನ ಮಕ್ಕಳ ಸಶಬ್ಧ ಉಸಿರಾಟ ಅಥವಾ ಗೊರಕೆ, ಅವರ 12 ರಿಂದ 18 ತಿಂಗಳ  ಪ್ರಾಯದಲ್ಲಿ  ಇನ್ನೂ ಹೆಚ್ಚಾಗಬಹುದು.

ಸಂಬಂಧಿಸಿದ ಇತರ ಲಕ್ಷಣಗಳು

1.ತೂಕ ಕಡಿಮೆಯಾಗುವುದು.

2. ಆಹಾರ ಸೇವನೆ ಕಷ್ಟವಾಗುವುದು.

3.ವಾಂತಿ ಅಥವಾ ಉಗುಳುವುದು

 (ಬಾಯಿಗೆ ಬರುವುದು).

4. ಆಹಾರ ಸೇವಿಸುವಾಗ ಉಸಿರು
 ಕಟ್ಟುವುದು.

5.ಉಸಿರು ಕಟ್ಟುವುದು.

6. ಪ್ರತಿಯೊಂದು ಉಸಿರಾಟಕ್ಕೂ  ಎದೆ ಹಾಗೂ/ಅಥವಾ ಕುತ್ತಿಗೆ  ಪ್ರತಿಕ್ರಿಯಿಸುವ ರೀತಿಯಲ್ಲಿ ಚಲಿಸುವುದು ಅಥವಾ ಕುಸಿಯುವುದು .

7. ನೀಲಿಗಟ್ಟುವುದು.

8. ಜಠರ -ಅನ್ನನಾಳಗಳಲ್ಲಿ ಆಹಾರದ  ಹಿಮ್ಮುಖ ಚಲನೆಯ ಅಸಹಜತೆಗಳಿಂದಾಗಿ (ಗ್ಯಾಸ್ಟ್ರೊ ಈಸೋಫೇಜಿಯಲ್‌ ರೆಫÉಕ್ಸ್‌ )ಹೊಟ್ಟೆಯಿಂದ ಆಮ್ಲ ಹೊರಬರುವುದು.
ಪರೀಕ್ಷೆಗಳು
1.ಕುತ್ತಿಗೆ ಹಾಗೂ ಎದೆಯ  ಎಕ್ಸ್‌-ರೇ.

2.ಫ್ಲೆಕ್ಸಿಬಲ್‌  ಲಾರಿಂಜೋಸ್ಕೊಪಿ

3. ಮೈಕ್ರೋಲಾರಿಂಜೋಸ್ಕೊಪಿ
ಶಸ್ತ್ರಚಿಕಿತ್ಸೆ 
ಇದಕ್ಕೆ ಎರಡು ವಿಧದ ಶಸ್ತ್ರಚಿಕಿತ್ಸೆಗಳು  ಲಭ್ಯ ಇವೆ. ಸುಪ್ರಾಗ್ಲಾಟೋಪ್ಲಾಸ್ಟಿ   - ಇದು ಹೆಚ್ಚಾಗಿ ವೈದ್ಯರು ಸೂಚಿಸುವಂತಹ ಶಸ್ತ್ರಚಿಕಿತ್ಸೆ . ಇದರಲ್ಲಿ  ಶಸ್ತ್ರಚಿಕಿತ್ಸೆÕಯ ಕೊಠಡಿಯಲ್ಲಿ , ಜನರಲ್‌ ಅನಸ್ತೀಷಿಯಾ ಕೊಟ್ಟು , ಅಗತ್ಯವಿಲ್ಲದ, ಜೋತಾಡುವ ಅಂಗಾಂಶಗಳನ್ನು  ತೆಗೆದು ಹಾಕುತ್ತಾರೆ.
ಮತ್ತೂಂದು ವಿಧದ ಶಸ್ತ್ರಚಿಕಿತ್ಸೆ  ವಿಧಾನ ಅಂದರೆ -ಟ್ರಾಕಿಯೋಟಮಿ ನಳಿಕೆಯನ್ನು  ವ್ಯವಸ್ಥೆಗೊಳಿಸುವುದು ಅಂದರೆ, ಟ್ರಾಕಿಯೋಟಮಿ ನಳಿಕೆಯನ್ನು ಶ್ವಾಸನಾಳದಲ್ಲಿ ಇರಿಸಿ, ಧ್ವನಿಪೆಟ್ಟಿಗೆಯ ಜೋತಾಡುವ ಅಂಗಾಂಶಗಳನ್ನು  ದಾಟಿಕೊಂಡು ಬೈಪಾಸ್‌ ಉಸಿರು ಮುಂದಕ್ಕೆ ಹೋಗುವುದು. ಆದರೆ, ಲಾರಿಂಗೋಮಲಾಸಿಯಾಕ್ಕೆ , ಈ ಶಸ್ತ್ರಚಿಕಿತ್ಸೆಯನ್ನು  ಮಾಡುವುದು ಬಹಳ  ಆಪರೂಪ.
ಬಿ) ಲಾರಿಂಜಿಯಲ್‌  ವೆಬ್‌
ಲಾರಿಂಜಿಯಲ್‌  ವೆಬ್‌ ಅಂದರೆ, ಧ್ವನಿ ಮಡಿಕೆಗಳ  ನಡುವೆ ನಾರು ಅಂಗಾಂಶಗಳಿಂದ ರಚಿತವಾದ ಒಂದು ಅಸಹಜ ರಚನೆ.
ಕಾರಣಗಳು
ಭ್ರೂಣದ ಬೆಳವಣಿಗೆಯ ಹಂತದಲ್ಲಿ,  ಧ್ವನಿ ಮಡಿಕೆಗಳು ಬಿಡಿಸಿಕೊಳ್ಳದೆ, ಹಾಗೆಯೇ ಉಳಿದು ಹೋಗುತ್ತವೆ. ಕೆಲವು ಸಲ, ಇದರಿಂದ ಧ್ವನಿಯ ಗುಣಮಟ್ಟ ಅಥವಾ ಉಸಿರು ಒಳಗೆಳೆದುಕೊಳ್ಳುವ ಮತ್ತು ಹೊರಹಾಕುವ ಎರಡೂ ರೀತಿಯ ಉಸಿರಾಟಗಳಿಗೆ ಯಾವ ಪ್ರಭಾವವೂ ಆಗುವುದಿಲ್ಲ . ಸಣ್ಣದಾದ ಬಲೆಯು (ವೆಬ್‌) ರೋಗಲಕ್ಷಣ ರಹಿತವಾಗಿರಬಹುದು. ಆ ಕಾರಣದಿಂದ, ಹಾಗೂ ಧ್ವನಿಯ ಸ್ಥಾಯಿಯು ಸಕಾಲದಲ್ಲಿ ಕಡಿಮೆಯಾಗದೇ ಇರುವ ಕಾರಣದಿಂದ, ಪುರುಷರಲ್ಲಿ , ಅವರು  ಪ್ರೌಢರಾಗುವವರೆಗೂ, ಈ  ಅಸಹಜತೆ ಪತ್ತೆಯಾಗದೆಯೇ ಉಳಿದುಬಿಡಬಹುದು.
ಸಾಮಾನ್ಯ ಲಕ್ಷಣಗಳು
1. ಗೊರಕೆ.

2.ಡಿನ್ಪೋನಿಯಾ

3. ಅಪೋನಿಯಾ

4.ಉಸಿರಾಟ ಕಷ್ಟವಾಗುವುದು.

5. ನಿಶ್ಶಕ್ತ ಅಳು.

ಚಿಕಿತ್ಸೆ
ಒಂದು ವೇಳೆ ಗಾಳಿ ಸಂಚಾರವು ಸಂಕುಚನಗೊಂಡಿದ್ದರೆ ಮಾತ್ರವೇ, ಇದಕ್ಕೆ ಶಸ್ತ್ರಚಿಕಿತ್ಸೆ ವಿಧಾನವನ್ನು  ಸೂಚಿಸಬಹುದು. ಆದರೆ, ಧ್ವನಿಯ ಗುಣಮಟ್ಟ ಅಥವಾ ಉಸಿರಾಟದ ಗುಣಮಟ್ಟದ ಮೇಲೆ  ಬಲೆಗಳಿಂದ ಯಾವುದೇ ಪ್ರಭಾವ ಉಂಟಾಗದಿದ್ದರೆ, ಶಸ್ತ್ರಚಿಕಿತ್ಸೆಯ ಆವಶ್ಯಕತೆ ಇರುವುದಿಲ್ಲ . ಅಂಥವರಿಗೆ ಅದಕ್ಕೆ ಬದಲಾಗಿ,  ಧ್ವನಿ ಚಿಕಿತ್ಸೆಯನ್ನು  ಸೂಚಿಸಬಹುದು.
ಎ) ಸಬ್‌ಗ್ಲಾಟಿಕ್‌ ಸ್ಟೆನಾಸಿಸ್‌
ಸಬ್‌ಗ್ಲಾಟಿಕ್‌ ಸ್ಟೆನಾಸಿಸ್‌  ಎಂದರೆ, ಕ್ರಿಕಾಯ್ಡ ಕಾರ್ಟಿಲೇಜ್‌ನಲ್ಲಿರುವ, ಸಬ್‌ ಗ್ಲಾಟಿಕ್‌ನ ಶ್ವಾಸ ನಾಳವು  ಸಪುರವಾಗುವುದು. ಸಬ್‌ಗ್ಲಾಟಿಕ್‌ ಪ್ರದೇಶವು ಶ್ವಾಸನಾಳ ದಲ್ಲೇ ಅತ್ಯಂತ ಸಪುರವಾದ ಪ್ರದೇಶ ವಾಗಿದ್ದು, ಮೇಲಾºಗದ ಪೊರೆಯ ವಿಭಾಗದಲ್ಲಿರುವ ಶ್ವಾಸನಾಳ (ಟ್ರೆಕಿಯಾ) ಹಾಗೂ ಮೇಲಾºಗದ ಸ್ನಾಯು  ವಿಭಾಗದಲ್ಲಿರುವ ಲಾರಿಂಕ್ಸ್‌ನ ರೀತಿಯಲ್ಲದೆ, ಇದೊಂದು ಸಂಪೂರ್ಣವಾದ, ವಿಕಸನ ಸಾಧ್ಯವಿಲ್ಲದ ಹಾಗೂ ಬಾಗಿಸಲ ಸಾಧ್ಯವಾದ  ಉಂಗುರ. ಸಬ್‌ಗ್ಲಾಟಿಕ್‌ ಸ್ಟೆನಾಸಿಸ್‌ ಎಂಬುದರ ಅರ್ಥ, ಸಪುರವಾಗುವುದು  ಎಂಬುದಾಗಿದೆ. ಈ ಸಪುರವಾಗುವಿಕೆಯು ಜನ್ಮಜಾತ ಅಥವಾ ಆ ಮೇಲೆ ಗಳಿಸಿದ ಅಸಹಜತೆಯೂ ಆಗಿರಬಹುದು. ಕ್ರಿಕಾಯ್ಡ ರಿಂಗ್‌ನ ಜನ್ಮಜಾತ ರೋಗಲಕ್ಷಣಗಳು, ಹಾಗೂ ಆ ಮೇಲೆ ಗಳಸಿದ ಸಬ್‌ಗ್ಲಾಟಿಕ್‌ ಸ್ಟೆನಾಸಿಸ್‌ ಎಂಬ ಎರಡು ಅಂಶಗಳಿಗೂ ಈ ಶಬ್ಧವನ್ನು  ಅನ್ವಯಿಸಲಾಗುತ್ತದೆ.

ಸಬ್‌ಗ್ಲಾಟಿಕ್‌ ಸ್ಟೆನಾಸಿಸ್‌ ಕಾರಣದಿಂದ ಉಂಟಾಗುವ ಗೊರಕೆಯು,  ಸಾಮಾನ್ಯವಾಗಿ ಮರೆಯಾಗುತ್ತದೆ. ತೀವ್ರತೆಯನ್ನು  ಆಧರಿಸಿಕೊಂಡು, ಸಬ್‌ ಗ್ಲಾಟಿಕ್‌ ಸ್ಟೆನಾಸಿಸ್‌ ಕಾರಣದಿಂದ ರೋಗಿಯ ಸಬ್‌ಗ್ಲಾಟಿಕ್‌  ಪ್ರದೇಶದಲ್ಲಿ ಒತ್ತಡ  ಕಡಿಮೆಯಾಗಿ,  ಧ್ವನಿ ಗೊಗ್ಗರಾಗಬಹುದು ಅಥವಾ ಧ್ವನಿ ತೀರಾ ದುರ್ಬಲವಾಗಬಹುದು. ಗ್ಲಾಟಿಕ್‌  ಸ್ಟೆನಾಸಿಸ್‌ ಅಥವಾ  ಧ್ವನಿಪೆಟ್ಟಿಗೆಯ ಲಕ್ವಾದ ಕಾರಣದಿಂದಲೂ ಸಹ  ಧ್ವನಿ ಗೊಗ್ಗರಾಗುವುದು ಅಥವಾ ಧ್ವನಿಪೆಟ್ಟಿಗೆಯ ದುರ್ಬಲತೆಯಂತಹ ಲಕ್ಷಣಗಳು ಕಂಡು ಬರಬಹುದು.
ಸಾಧಾರಣ ಆಥವಾ ಬೀಜರೂಪದಲ್ಲಿರುವ  ಸ್ಟೆನಾಸಿಸ್‌ಗೆ,  ಸ್ಟೀರಾಯ್ಡ ಇಂಜೆಕ್ಷನ್‌ ಚುಚ್ಚಿ ಅಥವಾ ಚುಚ್ಚದೆಯೇ ಸೀರಿಯಲ್‌ ಎಂಡೊಸ್ಕೋಪಿಕ್‌ ಡಯಲೇಶನ್‌ ಮೂಲಕ ಯಶಸ್ಸೀ ಚಿಕಿತ್ಸೆ  ಸಾಧ್ಯವಿದೆ. ಸಾಫ್ಟ್‌ ಸರ್‌ಕಂಫರೆನ್ಶಿಯಲ್‌ ಸಬ್‌ಗ್ಲಾಟಿಕ್‌ ಸ್ಟೆನಾಸಿಸ್‌ಗೆ ಕಾರ್ಬನ್‌ ಡೈಆಕ್ಸೈಡ್‌ ಲೇಸರ್‌ ಉತ್ತಮ ಚಿಕಿತ್ಸಾ   ವಿಧಾನವಾಗಿದೆ.
ಡಿ. ಲಾರಿಂಜಿಯಲ್‌ ಸಿಸ್ಟ್‌

ಮಕ್ಕಳಲ್ಲಿ ಲಾರಿಂಜಿಯಲ್‌ ಸಿಸ್ಟ್‌  ಎಂಬುದು  ಜನ್ಮಜಾತವಾಗಿ  ಬಂದಿರಬಹುದು, ಅಥವಾ, ಆ ಮೇಲೆ ಗಳಿಸಿದ ಅಸಹಜತೆಯಾಗಿರಬಹುದು. ಆದರೆ  ಲಾರಿಂಜಿಯಲ್‌ ಸಿಸ್ಟ್‌  ಎಂಬುದು ಬಹಳ ಅಪರೂಪದ ಅಸಹಜತೆಯಾಗಿದೆ. ಜನಿಸುವ 1,00,000 ಶಿಶುಗಳಲ್ಲಿ  , ಸುಮಾರು 1.87 ಮಕ್ಕಳಲ್ಲಿ ಇಂತಹ  ಪ್ರಕರಣಗಳು ಕಂಡು ಬರಬಹುದು. ಇಂತಹ ಮಕ್ಕಳು ಜನಿಸಿದ ಮೊದಲ ದಿನವೇ ರೋಗಲಕ್ಷಣಗಳನ್ನು  ತೋರಿಸಲು ಆರಂಭಿಸುತ್ತವೆ. ಈ ಮಕ್ಕಳ  ಎಪಿಗ್ಲಾಟಿಕ್‌ ಸ್ಥಳವು ಬಹಳ ಒತ್ತೂತ್ತಾಗಿರುತ್ತದೆ.
ಸಿಸ್ಟ್‌ಗಳ ಗಾತ್ರ ಹಾಗೂ ಅವು ಇರುವ ಜಾಗಗಳನ್ನು ಅವಲಂಬಿ ಸಿಕೊಂಡು, ರೋಗ ಲಕ್ಷಣಗಳಲ್ಲಿ  ವ್ಯತ್ಯಾಸಗಳಿರುತ್ತವೆ. ಸಿಸ್ಟ್‌ಗಳು ಬಹಳ ದೊಡ್ಡವಾಗಿದ್ದರೆ, ಡಿಸ್ಟೋನಿಯಾ ಅಥವಾ ಗೊರಕೆ ಉಂಟು ಮಾಡ ಬಹುದು. ಇರಬಹುದಾದಂತಹ ಇನ್ನಿತರ ಲಕ್ಷಣಗಳು ಅಂದರೆ, ಉಸಿರಾಡುವಾಗ ಗೊರ ಗೊರ ಸದ್ದು ಹೊರಡುವುದು, ಡಿನ್ಪೊನಿಯಾ, ಆಹಾರ ಸೇವನೆಯ ತೊಂದರೆಗಳು, ಕೋಶಿಕೆಯಂತಿರುವ ಸಿಸ್ಟ್‌ಗಳು  ಪ್ರಸವಾನಂತರ ಮಗುವಿನಲ್ಲಿ ಶ್ವಾಸನಾಳದ ಅಡಚಣೆಯಂತಹ ತೊಂದರೆಗಳನ್ನು  ಉಂಟು ಮಾಡ ಬಹುದು. ಆದರೆ, ಇಂತಹ ಲಕ್ಷಣಗಳು ಮಗು ಹುಟ್ಟಿದ ಮೊದಲ ದಿನವೇ ಪತ್ತೆಯಾಗುತ್ತದೆ. ಲಾರಿಂಗೋಸೀಲ್ಸ್‌ನಲ್ಲಿ  ಕೋಶಿಕೆಯಂತಹ ಸಿಸ್ಟ್‌ಗಳಿರುವಾಗಿನ ಲಕ್ಷಣಗಳೇ ಕಂಡು ಬರುತ್ತವೆ, ಆದರೆ, ಅಳುವಾಗ ಅಥವಾ ಬೊಬ್ಬೆ ಹಾಕುವಾಗ  ರೋಗಲಕ್ಷಣಗಳು  ತೀವ್ರಗೊಳ್ಳುತ್ತವೆ. ಶ್ವಾಸನಾಳದಲ್ಲಿ ಗಾಳಿಯ  ಒತ್ತಡ ಹೆಚ್ಚುವುದರಿಂದ ಈ ರೀತಿ ಆಗುತ್ತದೆ.

ಡೈರೆಕ್ಟ್  ಲಾರಿಂಜೊಸ್ಕೋಪಿಯ  ಮೂಲಕ ಲ್ಯಾರಿಂಜಿಯಲ್‌ ಸಿಸ್ಟ್‌ ತಪಾಸಣೆ ಸ್ಪಷ್ಟವಾಗುತ್ತದೆ. ಡೈರೆಕ್ಟೋಸೋಪಿಗೆ ಮೊದಲು, ಹೆಚ್ಚುವರಿ ಪರಿಶೋಧನೆಗಳಾದ ಕುತ್ತಿಗೆ, ಎದೆ, ಅನ್ನನಾಳಗಳ (ಪಾರ್ಶ್ವದ) ರೇಡಿಯಾಲಾಜಿಕಲ್‌ ಎಕ್ಸಾಮಿನೇಷನ್‌, ಲಾರಿಂಕ್ಸ್‌ ಹಾಗೂ ಕುತ್ತಿಗೆಯ ಅಲ್ಟ್ರಾಸೊನೋಗ್ರಫಿ, ಕುತ್ತಿಗೆಯ ಸ್ಕ್ಯಾನಿಂಗ್‌ಗಳನ್ನು  ಮಾಡಲಾಗುವುದು .

ಒಂದು ಸಲ ತಪಾಸಣೆಯಲ್ಲಿ ಪತ್ತೆಯಾದ ಬಳಿಕ, ಶಸ್ತ್ರಚಿಕಿತೆಯ ಮೂಲಕ, ಲಾರಿಂಜಿಯಲ್‌ ಸಿಸ್ಟ್‌ನ್ನು  ತೆಗೆದು ಹಾಕುತ್ತಾರೆ. ಎಂಡೊಸ್ಕೋಪಿಕ್‌ ತಂತ್ರಜ್ಞಾನದ ಮೂಲಕ ಈ ಶಸ್ತ್ರಚಿಕಿತ್ಸೆಯನ್ನು  ನಿರ್ವಹಿಸಬೇಕಾಗುತ್ತದೆ. ಎಂಡೊಸ್ಕೋಪಿಕ್‌ ತಂತ್ರಜ್ಞಾನಗಳು ಅಂದರೆ, ಸಾಂಪ್ರದಾಯಿಕವಾಗಿ ನಡೆಸಲಾಗುವ ಮೈಕ್ರೋಸರ್ಜರಿ ಅಥವಾ  ಲೇಸರ್‌. ಒಂದೆರಡು ಎಂಡೊಸ್ಕೋಪಿಕ್‌ ವಿಧಾನಗಳಿಂದ ಸಿಸ್ಟ್‌ಗಳು ಮತ್ತೆ ಕಾಣಿಸಿಕೊಂಡರೆ, ಬಾಹ್ಯವಿಧಾನಗಳಿಂದ ಸಿಸ್ಟ್‌ಗಳನ್ನು  ಕತ್ತರಿಸಿ ಹೊರತೆಗೆಯುತ್ತಾರೆ. ಬಹಳ ಆಳ ಹಾಗೂ ವ್ಯಾಪಕ ರೂಪದಲ್ಲಿರುವ ಸಿಸ್ಟ್‌ಗಳು, ಎಂಡೊಸ್ಕೋಪಿಕ್‌ ವಿಧಾನದ ಯಶಸ್ಸಿಗೆ ಅಡ್ಡಿಪಡಿಸುತ್ತವೆ.

ದೀರ್ಘಾಯುಸ್ಸಿಗಾಗಿ ಏನನ್ನು ಸೇವಿಸಬೇಕು ?

ಶ್ರೀಮತಿ ಅರುಣಾ ಮಲ್ಯ,ಡಯಟೀಷಿಯನ್‌, ಪಥ್ಯಾಹಾರ ವಿಭಾಗ 

 
1. ಪ್ರತಿ ದಿನ ಒಂದು ನಿಗದಿತ ಪ್ರಮಾಣದಲ್ಲಿ ಒಮೇಗಾ -3ಯನ್ನು ಸೇವಿಸಿ :
    ನಿಮ್ಮ   ಕೊಲೆಸ್ಟ್ರಾಲ್‌ನ್ನು  ತಗ್ಗಿಸಲು,  ಜೀವಕೋಶಗಳ ಚಟುವಟಿಕೆಯನ್ನು  ಉತ್ತಮಗೊಳಿಸಲು ಹಾಗೂ ಹೃದಯಾಘಾತ, ಕ್ಯಾನ್ಸರ್‌ ಹಾಗೂ ಲಕ್ವಾಗಳ ಅಪಾಯಗಳನ್ನು  ಕಡಿಮೆಗೊಳಿಸಲು, ನಿತ್ಯವೂ ಒಂದು ನಿಯಮಿತ ಹಾಗೂ ಆವಶ್ಯಕ ಪ್ರಮಾಣದಲ್ಲಿ  ಒಮೇಗಾ -3 ಯನ್ನು  ಸೇವಿಸಿ. ಒಮೇಗಾ-3 ಇರುವ ಅತ್ಯುತ್ತಮ ಮೂಲಗಳು ಎಂದರೆ -ವಾಲ್‌ನಟ್‌, ಅಗಸೆಬೀಜ. ಸೆ¾„ನಾಚ್‌ನಂತಹ ಸೊಪ್ಪು ತರಕಾರಿಗಳು ಹಾಗೂ ಸಮುದ್ರಾಹಾರಗಳು.
2. ಅಂಟಾಕ್ಸಿಡೆಂಟ್‌ಗಳು ವಯಸ್ಸಾಗುವ ಪ್ರಕ್ರಿಯೆಯನ್ನು  ನಿಧಾನಗೊಳಿಸುತ್ತವೆ ಹಾಗೂ ಹಾನಿಕಾರಕ ಫ್ರೀ ರಾಡಿಕ‌ಲ್‌ ಅಂಶಗಳಿಂದ ದೇಹಕ್ಕೆ  ರಕ್ಷಣೆಯನ್ನು  ಒದಗಿಸುತ್ತವೆ. ಸಾಮಾನ್ಯವಾಗಿ ಈ ಆಂಟಾಕ್ಸಿಡೆಂಟ್‌ಗಳು  ನಮ್ಮ ದೇಹದಲ್ಲಿ 46 ಗಂಟೆಗಳಷ್ಟು  ಸಮಯ  ಮಾತ್ರವೇ  ಇರುವುದರಿಂದ ಆಂಟಾಕ್ಸಿಡೆಂಟ್‌ಯುಕ್ತ ಆಹಾರಗಳನ್ನು  ನಾವು ನಿಯಮಿತ ಸಮಯದಲ್ಲಿ  ಸೇವಿಸುವುದು  ಅತ್ಯಾವಶ್ಯಕ. ದಟ್ಟ ಬಣ್ಣದ ತರಕಾರಿಗಳು ಹಾಗೂ ಹಣ್ಣುಗಳು ಆಂಟಾಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುತ್ತವೆ.
3.ನಿಮ್ಮ ಆಹಾರದಲ್ಲಿ ನಾರಿನಂಶವಿರುವ ಆಹಾರವನ್ನು  ದುಪ್ಪಟ್ಟು  ಸೇವಿಸಿ :
ಆಹಾರದಲ್ಲಿರುವ ನಾರಿನಂಶವು ನಿಮಗೆ ಕ್ಯಾನ್ಸರ್‌ ವಿರುದ್ಧ ರಕ್ಷಣೆಯನ್ನು  ಒದಗಿಸಿ, ನಿಮ್ಮ  ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು  ನಿಯಂತ್ರಣದಲ್ಲಿ  ಇರಿಸುತ್ತದೆ. ಮಾತ್ರವಲ್ಲದೆ, ಆಹಾರದ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌  ಮಟ್ಟವನ್ನು  ತಗ್ಗಿಸಲು ನಾರಿನಂಶವು  ಸಹಕಾರಿ. ರಕ್ತದ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವು ತಗ್ಗಿದರೆ, ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ. ಪ್ರತೀ ದಿನ ಕನಿಷ್ಠ 25ರಿಂದ 35 ಗ್ರಾಂ ನಾರಿನಂಶವನ್ನು  ಸೇವಿಸಿ. ಧಾನ್ಯಗಳು, ಕಡಲೆ, ಸೇಬು ಹಾಗೂ ಬಾರ್ಲಿಗಳನ್ನು  ಹೆಚ್ಚು ಹೆಚ್ಚು  ಸೇವಿಸಿ. ನಿಮ್ಮ ಆಹಾರದಲ್ಲಿ ಸಲಾಡ್‌, ಸೊಪ್ಪು-ತರಕಾರಿಗಳು ಸಮೃದ್ಧವಾಗಿರಲಿ.
4. ಹೊಟ್ಟೆ  ಬಿರಿಯುವಂತೆ ತಿನ್ನಬೇಡಿ :
75% ಹೊಟ್ಟೆ  ತುಂಬುವಷ್ಟು  ಮಾತ್ರವೇ ತಿನ್ನಿ. ಹಸಿವಿಲ್ಲದೇ ಇದ್ದರೆ  ತಿನ್ನಬೇಡಿ. ಹೊಟ್ಟೆಗೆ ಹಸಿವಿಲ್ಲದೆಯೂ, ಅನಗತ್ಯವಾಗಿ ಆಹಾರವನ್ನು  ತುರುಕಿಸಬೇಡಿ. ಆಹಾರವನ್ನು  ಚೆನ್ನಾಗಿ ಜಗಿಯಿರಿ ಹಾಗೂ ನಿಧಾನವಾಗಿ ಸೇವಿಸಿ. ಆಹಾರವನ್ನು  ನಿಧಾನವಾಗಿ  ಸೇವಿಸುವವರು, ವೇಗವಾಗಿ ಆಹಾರ ಸೇವಿಸುವವರಿಗಿಂತ ಕಡಿಮೆ ಕ್ಯಾಲೊರಿಯನ್ನು  ಪಡೆಯುತ್ತಾರೆ.
5. ಕೊಬ್ಬುಯುಕ್ತ  ಆಹಾರಗಳಿಂದ 25% ನಷ್ಟು ಕ್ಯಾಲೊರಿ ಬರುತ್ತದೆ.
ಒಳ್ಳೆಯ ಗುಣಮಟ್ಟದ ಎಣ್ಣೆಯನ್ನೇ ಸೇವಿಸಿ. ಮೋನೊಸ್ಯಾಚುರೇಟೆಡ್‌ ಫ್ಯಾಟಿ ಆಸಿಡ್‌ ಇರುವ ಎಣ್ಣೆಗಳು ರಕ್ತದ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು  ತಗ್ಗಿಸಲು ಸಹಕಾರಿ. ಆಹಾರದಲ್ಲಿ ಒಣ ಹಣ್ಣುಗಳಾದ ವಾಲ್‌ನಟ್‌. ಪಿಸ್ತಾ , ಆಲಿವ್‌ ಎಣ್ಣೆ  ಹಾಗೂ ಅವೊಕಾಡೋಗಳನ್ನು  ಹೆಚ್ಚು ಹೆಚ್ಚು  ಸೇವಿಸಿ.
6.ಪ್ರತಿ ಊಟದಲ್ಲಿ  ಪ್ರೊಟೀನ್‌ ಸೇರಿಸಲು ಮರೆಯದಿರಿ :

ಪ್ರೊಟೀನ್‌ಗಳು ನಮ್ಮ ದೇಹದ ಬಂಧಕ ಅಂಶಗಳಾಗಿವೆ. ಕಾಲ ಕಾಲಕ್ಕೆ ಜೀವಕೋಶಗಳು ಹಾಗೂ ಅಂಗಾಂಶಗಳನ್ನು  ಪುನರ್ರಚಿಸಲು, ಈ ಪ್ರೊಟೀನ್‌ಗಳು  ಸಹಕಾರಿ. ಹಾಗಾಗಿ, ನಿತ್ಯದ ಆಹಾರದಲ್ಲಿ 30% ನಷ್ಟಾದರೂ ಪ್ರೊಟೀನ್‌ ಕ್ಯಾಲೊರಿಗಳು ಇರುವಂತೆ ನೋಡಿಕೊಳ್ಳಿ . ಪ್ರೊಟೀನ್‌ನ ಉತ್ತಮ ಮೂಲಗಳು  ಎಂದರೆ ಬಿಳಿಯ  ಮೀನು, ಕೋಳಿ ಮಾಂಸ, ಕೊಬ್ಬು  ರಹಿತ ಹಾಲು, ಮೊಟ್ಟೆಯ ಬಿಳಿಭಾಗ, ಅವರೆಕಾಳು, ಬೀಜಗಳು ಹಾಗೂ ಧಾನ್ಯಗಳು.

ನಿಮ್ಮ  ನಿತ್ಯದ ಆಹಾರದಲ್ಲಿ  ಈ ಸಣ್ಣ ಬದಲಾವಣೆಗಳನ್ನು  ಮಾಡಿಕೊಳ್ಳಿ ಹಾಗೂ ಜೀವನವನ್ನು  ಆರೋಗ್ಯಕರವಾಗಿಸಿಕೊಳ್ಳಿ .

ಉದರ ದರ್ಶಕ ಶಸ್ತ್ರ ಚಿಕಿತ್ಸೆ - ಪ್ರಾಥಮಿಕ ತರಬೇತಿ

ಡಾ| ಶಿವಾನಂದ ಪ್ರಭು,ಪ್ರಾಧ್ಯಾಪಕರು, ಶಸ್ತ್ರ ಚಿಕಿತ್ಸಾ ವಿಭಾಗ 

 
ಉದರ ದರ್ಶಕ  ಶಸ್ತ್ರಚಿಕಿತ್ಸೆ ಎಂಬುದು ಹಲವಾರು ದಶಕಗಳಿಂದಲೂ ಬಳಕೆಯಲ್ಲಿದೆಯಾದರೂ, ವ್ಯಾಪಕವಾಗಿ ಬಳಕೆಗೆ ಬಂದದ್ದು  ಹತ್ತಿಪ್ಪತ್ತು ವರ್ಷಗಳಿಂದೀಚೆಗೆ;  ಅದರಲ್ಲೂ  ಈಚೀಚೆಗೆ  ಉದರದರ್ಶಕ ಶಸ್ತ್ರ ಚಿಕಿತ್ಸೆಯಲ್ಲಿ  ಪರಿಣತಿ ಇಲ್ಲದಿದ್ದಲ್ಲಿ , ಶಸ್ತ್ರ ಚಿಕಿತ್ಸಾ ತಜ್ಞನಾಗಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ.

ಜನಸಾಮಾನ್ಯರಲ್ಲೂ ಕೂಡ ಉದರದರ್ಶಕದ ಮೂಲಕ ಮಾಡಲಾಗುವ ಎಲ್ಲಾ  ಶಸ್ತ್ರ ಚಿಕಿತ್ಸೆಗಳು ಸಾಮಾನ್ಯ ಶಸ್ತ್ರಚಿಕಿತ್ಸೆಗಿಂತ ಶ್ರೇಷ್ಠ ಎಂಬ ಸರಳೀಕೃತ ಭಾವನೆ ಮನೆ ಮಾಡಿದೆ. ಹಾಗಾಗಿ,  ಹಲವಾರು ಬಾರಿ ರೋಗಿಗಳು  ಕೀ ಹೋಲ್‌ ಸರ್ಜರಿ  ಮಾಡಿ  ಡಾಕ್ಟ್ರೇ  ಎಂದು ದುಂಬಾಲು ಬೀಳುವುದುಂಟು. ಈ ರೀತಿಯ ಬೇಡಿಕೆ  ಬಂದಾಗ, ಕೆಲವೊಮ್ಮೆ  ತಜ್ಞರೂ ಕೂಡ ದ್ವಂದ್ವಕ್ಕೆ ಸಿಲುಕುತ್ತಾರೆ. ರೋಗಿಯ ಆರೋಗ್ಯ ರಕ್ಷಣೆಗೆ  ಎಷ್ಟು ಬೇಕೋ ಅಷ್ಟನ್ನೇ ಮಾಡಬೇಕೋ, ಅಥವಾ ಆತನ ಎಲ್ಲಾ  ಬೇಡಿಕೆಗಳನ್ನು   ಪೂರೈಸಬೇಕೋ ಎಂಬುದು ಮೇಲ್ನೋಟಕ್ಕೆ  ಸರಳ ಪ್ರಶ್ನೆಯಾದರೂ,  ಸರಳ ಉತ್ತರ ಸಿಗದು. ಆದ್ದರಿಂದಲೇ, ಉದರದರ್ಶಕ  ಶಸ್ತ್ರ ಚಿಕಿತ್ಸೆಯ ಬಗೆಗಿನ  ಮಾಹಿತಿ ಇಂದು ಶಸ್ತ್ರಚಿಕಿತ್ಸಾ ರಂಗದಲ್ಲಿ  ಅನಿವಾರ್ಯವಾಗಿದೆ.

ವಸ್ತು ಸ್ಥಿತಿ ಹೀಗಿದ್ದಾಗ್ಯೂ,  ನಮ್ಮ ದೇಶದ ಬಹುತೇಕ ವೈದಕೀಯ  ಕಾಲೇಜುಗಳಲ್ಲಿ ಉದರದರ್ಶಕ ಶಸ್ತ್ರಚಿಕಿತ್ಸೆಯ ಬಗ್ಗೆ ವಿದ್ಯಾರ್ಥಿಗಳಿಗೆ  ಮಾರ್ಗದರ್ಶನವಾಗಲೀ, ಪ್ರಾಥಮಿಕ ತರಬೇತಿಯಾಗಲೀ ಇಲ್ಲದೇ ಇರುವುದು  ವಿಷಾದನೀಯ. ವೈದ್ಯಕೀಯ ಪದವಿ ವಿದ್ಯಾರ್ಥಿಗಳಿಗೆ ಹಾಗಿರಲಿ, ಶಸ್ತ್ರಚಿಕಿತ್ಸೆಯಲ್ಲಿ  ಸ್ನಾತಕೋತರ  ಪದವಿ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಉದರದರ್ಶಕ  ಶಸ್ತÅಚಿಕಿತ್ಸೆ  ಎಂದರೆ, ದೂರದ ಬೆಟ್ಟವೇ  ಆಗಿದೆ ಎಂದರೆ  - ಜನಸಾಮಾನ್ಯರು ನಂಬುವುದು ಕಷ್ಟ. ಉದರದರ್ಶಕ ಶಸ್ತ್ರ ಚಿಕಿತ್ಸೆಯಲ್ಲಿ  ಬಳಸಲಾಗುವ ಉಪಕರಣಗಳು ಎಷ್ಟು  ದುಬಾರಿ ಎಂದರೆ, ಒಂದೊಂದಕ್ಕೂ  ಹತ್ತು ಸಾವಿರ ರೂಪಾಯಿಗಳಿಗೂ ಮಿಕ್ಕಿದ  ಬೆಲೆಯಿದೆ. ಹಾಗೆಂದೇ ಅವು ವಿದ್ಯಾರ್ಥಿಗಳಿಗೆ ಮುಟ್ಟಲೂ ಸಿಗುವುದು ಕಷ್ಟ.  ಪರಿಸ್ಥಿತಿ ಹೀಗಿರುವಾಗ ಅವರಿಗೆ ತರಬೇತಿ ಪಡೆಯುವ ಅವಕಾಶ ಎಲ್ಲಿ ಉಳಿಯಿತು?
  ಈ ಎಲ್ಲಾ  ಸಂಕೀರ್ಣತೆಗಳನ್ನು  ಮನ ಗಂಡು, ಮಂಗಳೂರಿನ  ಕೆ.ಎಂ.ಸಿ. ವೈದ್ಯ ಕೀಯ ವಿದ್ಯಾ ಸಂಸ್ಥೆಯು  ತನ್ನ ವೈದ್ಯಕೀಯ ವಿದ್ಯಾರ್ಥಿಗಳಿಗೆ  ಉದರದರ್ಶಕ  ಶಸ್ತ್ರಚಿಕಿತ್ಸೆ ಯಲ್ಲಿ ಪ್ರಾಥಮಿಕ ತರಬೇತಿಗಾಗಿ  ಉದರ ದರ್ಶಕ  ಶಸ್ತ್ರಚಿಕಿತ್ಸಾ  ತಂತ್ರಜ್ಞಾನ ತರಬೇತಿ ಕೇಂದ್ರವನ್ನು  ಇತ್ತೀಚೆಗೆ  ತೆರೆದಿದೆ. ಇಲ್ಲಿ  ಆಧುನಿಕ  ತಂತ್ರಜ್ಞಾನವನ್ನು  ಬಳಸಿ, ರೋಗಿಗಳ ಭಾಗವಹಿಸುವಿಕೆ ಇಲ್ಲದೆಯೇ ಉದರದರ್ಶಕ ಶಸ್ತ್ರಕ್ರಿಯೆ ಕಲಿಸಲಾಗುತ್ತದೆ.

ಟಿ.ವಿ. ಪರದೆಯ ಮೇಲೆ ಕಾಣುವ ಚಿತ್ರಗಳನ್ನು  ನೋಡುತ್ತಾ ಉದರದೊಳಗೆ ಶಸ್ತ್ರಕ್ರಿಯೆ ನಡೆಸುವುದು ಮೊದಮೊದಲಿಗೆ ಒಂದು ಸಾಹಸವೇ ಎಂಬಂತೆ  ಭಾಸವಾಗುತ್ತದೆ. ಈ  ಸಾಹಸವನ್ನು  ರೋಗಿಯ ಮೇಲೆ ನಡೆಸದೇ, ತಂತ್ರಜ್ಞಾನದ  ಮೂಲಕ ಕಲಿಯುವುದರಿಂದ, ರೋಗಿಯ  ಶ್ರೇಯಸ್ಸನ್ನೂ  ಸಾಧಿಸಿದಂತಾಗುತ್ತದೆ, ಮುಂದಕ್ಕೆ  ಸಾಮಾನ್ಯ ಶಸ್ತ್ರಕ್ರಿಯೆಯಲ್ಲಿ  ಪರಿಣತಿ ಸಾಧಿಸಿ ನಿಜವಾದ  ರೋಗಿಗಳ ಶುಶ್ರೂಷೆ ಮಾಡುವಷ್ಟರ ಮಟ್ಟಿಗೆ  ತಜ್ಞತೆ ಬಂದಾಗ, ಉದರ ದರ್ಶಕ ಶಸ್ತ್ರಕ್ರಿಯೆಯನ್ನು  ಪ್ರತ್ಯೇಕವಾಗಿ  ಕಲಿಯಲು ಹೆಣಗಾಡುವುದು ಇದರಿಂದ ತಪ್ಪುತ್ತದೆ.

ಇಲ್ಲಿಯವರೆಗೆ, ಶಸ್ತ್ರ ಚಿಕಿತ್ಸಾ ಶಾಸ್ತ್ರದಲ್ಲಿನ  ಸ್ನಾತಕೋತ್ತರ ವಿದ್ಯಾರ್ಥಿಗಳು, ತಮ್ಮ  ಎಂ.ಎಸ್‌. ಪದವಿ ಮುಗಿದ ನಂತರ, ಅಮೂಲ್ಯ  ಸಮಯವನ್ನು  ಹಾಳುಗೆಡವಿಕೊಂಡು  ಹತ್ತಾರು ಸಾವಿರ (ಕೆಲವೊಮ್ಮೆ ಲಕ್ಷಕ್ಕೆ  ಮೇಲ್ಪಟ್ಟ) ಶುಲ್ಕ ತೆತ್ತು, ಖಾಸಗಿಯಾಗಿ ಉದರದರ್ಶಕ ಶಸ್ತ್ರ ಚಿಕಿತ್ಸೆ ಕಲಿಯುವ ಅನಿವಾರ್ಯತೆ  ಇತ್ತು. ಇದೀಗ,  ವೈದಕೀಯ ಕಾಲೇಜಿನಲ್ಲಿಯೇ,  ಹೆಚ್ಚಿನ ಶುಲ್ಕ ಇಲ್ಲದಯೇ ಈ ರೀತಿಯ ತರಬೇತಿಗೆ  ಅವಕಾಶ ಕಲ್ಪಿಸಲಾಗಿರುವುದು  ಸ್ತುತ್ಯರ್ಹ ಕ್ರಮವಾಗಿದೆ. ಈ ಮೇಲ್ಪಂಕ್ತಿಯನ್ನು  ಎಲ್ಲ ವೈದ್ಯಕೀಯ ಶಿಕ್ಷಣ ಸಂಸ್ಥೆಗಳವರೂ ಪಾಲಿಸುವಂತಾದರೆ, ವೈದ್ಯ ವಿದ್ಯಾರ್ಥಿಗಳ ಜೊತೆಗೆ ಸಮಾಜಕ್ಕೂ ಉತ್ತಮತರದ  ಸೇವೆ ಲಭ್ಯವಾಗುವುದು ನಿಸ್ಸಂಶಯ.

ಅದೇನಿದ್ದರೂ ಒಂದು ಮಾತು - ಉಪಕರಣಗಳ ಅತ್ಯಾಧುನಿಕತೆ  ಅಥವಾ ದುಬಾರಿತನದಿಂದಲೇ ರೋಗಿಯ ಒಳಿತನ್ನು  ಸಾಧಿಸಲಾಗುವುದಿಲ್ಲ. ಈ ರೀತಿ  ಕೆಲವೊಮ್ಮೆ ವೈದ್ಯ  ನುರಿತವನಾದರೂ, ಆಧುನಿಕ ಸೌಲಭ್ಯಗಳ ಕೊರತೆಯಿಂದ  ಸಮರ್ಪಕ ಚಿಕಿತ್ಸೆ ಅಸಾಧ್ಯವಾಗುತ್ತದೆ. ವೈದ್ಯಶಾಸ್ತ್ರದ ತಿಳಿವಳಿಕೆಯಲ್ಲಿ  ತಜ್ಞತೆ ಹಾಗೂ ರೋಗಿಯ ಬಗೆಗಿನ ಕಾಳಜಿಯ ಜೊತೆಗೆ ಆಧುನಿಕ ಚಿಕಿತ್ಸಾ ಸೌಲಭ್ಯಗಳು ಸೇರಿಕೊಂಡಾಗ ಮಾತ್ರ ಉತ್ತಮ ಚಿಕಿತ್ಸೆ ಸಾಧ್ಯವಾಗುತ್ತದೆ.

ಬೆನ್ನು ಮೂಳೆಯ (ಕು)ರೂಪ

ಡಾ| ಬಿ. ಸೀತಾರಾಮ ರಾವ್‌, ಮೂಳೆ ವಿಭಾಗ 

 
ಬಾಲ್ಯದಲ್ಲಿ, ಪ್ರೌಢ ಶಾಲೆಯಲ್ಲಿ  ವ್ಯಾಸಂಗ ನಡೆಸುತ್ತಿದ್ದಾಗ, ಸಹೋದರರ ಜೊತೆಯಲ್ಲಿ “The hunchback of Notre dame”  ಎಂಬ  ಆಂಗ್ಲಭಾಷೆಯ ಚಲನಚಿತ್ರ ವೀಕ್ಷಿಸಿ ಆನಂದ ಪಟ್ಟಿದ್ದೆ . ಗೂನು ಬೆನ್ನಿನ ದಢೂತಿ ಗಾತ್ರದ ಕುರೂಪಿ ನಾಯಕನನ್ನು  ನೋಡಿ ಬೆಚ್ಚಿಬಿದ್ದಿದ್ದೆ . ಆ ದಿನಗಳಲ್ಲಿ ಗೂನುಬೆನ್ನಿಗೆ ಕಾರಣ ಏನಿದ್ದಿರಬಹುದೆಂಬ ಶಂಕೆ ಹಾಗೂ ಕುತೂಹಲ ಮನದಲ್ಲಿ  ಮೂಡಿಬಂದಿತ್ತು. ಬಳಿಕ, ವೈದ್ಯಕೀಯ ಕ್ಷೇತ್ರದಲ್ಲಿ ತರಬೇತಿ ಪಡೆದಾಗ, ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಲಭಿಸಿತು.

ಮಂಗನಿಂದ ಮಾನವನ ಸಿದ್ಧಾಂತವನ್ನು  ಪಾಲಿಸಿಕೊಂಡು, ನೇರ ಬೆನ್ನು ಮೂಳೆಯ ಸಹಾಯದಿಂದ ಸಮಾಜದಲ್ಲಿ ತಲೆ ಎತ್ತಿ ಓಡಾಡುವ ಸೌಲಭ್ಯ ಮಾನವನಿಗೆ ಮಾತ್ರ ಸಾಧ್ಯ ಎಂಬ ವಿಚಾರ ತಿಳಿದು ಬರುತ್ತದೆ. ಈ ಸೌಲಭ್ಯಕ್ಕೆ ತೆರಬೇಕಾದ ಬೆಲೆ ಎಂದರೆ, ಬೆನ್ನು ನೋವು ಹಾಗೂ ವಿವಿಧ ಬಗೆಯ ನ್ಯೂನತೆಗಳು. ಬಾಲ್ಯದಿಂದ ವೃದ್ಧಾಪ್ಯದವರೆಗೆ ಬೆನ್ನು ಮೂಳೆ ಹಲವು ರೋಗಗಳಿಗೆ ತುತ್ತಾಗಬಹುದು.
ಏನಿದು ಬೆನ್ನಿನ ವಿಕಾರ ರೂಪ ?

ವ್ಯಕ್ತಿಯ ಬೆನ್ನು  ಮುಂದಕ್ಕೆ ಬಾಗಿರಬಹುದು. ಇದಕ್ಕೆ ಗೂನುಬೆನ್ನು  ಎಂದು ಹೆಸರು. ಮೊದಲು  ತಿಳಿಸಿದ ಆಂಗ್ಲ ಭಾಷೆಯ ಚಲನಚಿತ್ರದ  ನಾಯಕ, ಇದೇ ರೀತಿಯ ಬೆನ್ನಿನ ಸ್ವರೂಪ (ಕುರೂಪ ) ಹೊಂದಿದ್ದನು. ಅಪರೂಪವಾಗಿ ಜನ್ಮ ತಳೆದ ಮಗು ಗೂನು ಬೆನ್ನನ್ನು  ಹೊತ್ತುಕೊಂಡೇ  ಈ ಪ್ರಪಂಚಕ್ಕೆ ಕಾಲಿಡಬಹುದು . ಇದಕ್ಕೆ ವೈದ್ಯಕೀಯ ಜಗತ್ತಿನಲ್ಲಿ  Congenital Kyphosis”  ಎಂಬ  ಹೆಸರಿದೆ. ಸಮಾಜದಲ್ಲಿ  ಹಿರಿಯ ನಾಗರಿಕರು ಸಾಮಾನ್ಯವಾಗಿ  ಈ ಬಗೆಯ ಬೆನ್ನನ್ನು  ಹೊತ್ತು ನಡೆದಾಡುವುದನ್ನು ನಾವು ಈಗ ಕಾಣುತ್ತೇವೆ.  ವ್ಯಕ್ತಿ 60 ವರ್ಷ ವಯಸ್ಸು  ದಾಟುತ್ತಿದ್ದಂತೆಯೇ,  ದೇಹದ ಮಂಡಿಗಳು ಸವೆಯುವ ಹಾಗೆಯೇ, ಮೂಳೆಗಳ ಬಲ-ಸಾಮರ್ಥ್ಯಗಳು  ಕುಂಠಿತಗೊಳ್ಳುತ್ತವೆ. ಇದಕ್ಕೆ  ಆಸ್ಟಿಯೊಪೊರೊಸಿಸ್‌ (Osteoporosis)  ಎಂದು ಹೆಸರು. ಈ ತೊಂದರೆ ಇರುವರಲ್ಲಿ, ಮುಖ್ಯವಾಗಿ,  ಬೆನ್ನುಮೂಳೆ ಮೆದುಗೊಂಡು  ಜಗ್ಗುತ್ತದೆ. ಹಾಗಾಗಿ, ವಯಸ್ಸಾದ ವ್ಯಕ್ತಿಯ ಬೆನ್ನು  ಗೂನುಗೊಂಡು, ಆತನ ದೇಹದ ಎತ್ತರ ಹಾಗೂ ತೂಕ ಕಮ್ಮಿಯಾಗುವುದು ಸಹಜ. ಬಲಹೀನಗೊಂಡ ಬೆನ್ನಿನ ಮೂಳೆಗಳು ಮುರಿಯುವ ಸಂಭವ ಜಾಸ್ತಿಯಾಗುತ್ತದೆ.

ಹಾಗೆಯೇ, ಬೆನ್ನಿನ ಮೂಳೆ ಮುಂದಕ್ಕೆ ಬಾಗುವ ಬದಲಿಗೆ ಒಂದು ಬದಿಗೆ ಬಾಗಿರಬಹುದು. ಇದುವೇ ಸ್ಕೋಲಿಯೊಸಿಸ್‌  (scoliosis)  ಎಂಬ ಹೆಸರಿನ ಬೆನ್ನುಮೂಳೆಯ ವಿಕಾರ ರೂಪ.ಇದಕ್ಕೂ ಹಲವಾರು ಕಾರಣಗಳು ಇವೆ.

ಆಂತೆಯೇ, ಹಲವು ರೋಗಗಳಲ್ಲಿ  ಬೆನ್ನು ಮುಂದಕ್ಕೆಯೂ ಹಾಗೂ ಬದಿಗೂ ವಾಲಿರಬಹುದು.  ಇದನ್ನು  ನಾವು ಕೈಫೂಸ್ಕೋಲಿಯೊಸಿಸ್‌(Kyphoscoliosis )  ಎಂದು ಕರೆಯುತ್ತೇವೆ.
ಕಾರಣಗಳನ್ನು  ತಿಳಿದುಕೊಳ್ಳೋಣ

ನವಜಾತ ಶಿಶುವಿನಲ್ಲಿ  ಗೂನುಬೆನ್ನು ಅಥವಾ  ವಕ್ರರೂಪದ ಬೆನ್ನನ್ನು  ವಿರಳವಾಗಿ ಕಾಣಬಹುದು. ಸಣ್ಣ ಮಕ್ಕಳಲ್ಲಿ, ಬೆಳೆಯುತ್ತಿರುವ ಮೂಳೆಗಳ ರಕ್ತ ಸಂಚಲನೆಯಲ್ಲಿ  ಏರುಪೇರಾಗಿ,  ಗೂನು ಬೆನ್ನಿನ ಲಕ್ಷಣಗಳು ಕಾಣಸಿಗಬಹುದು. ಹಾಗೆಯೇ,  ವಿಟಮಿನ್‌  ಡಿ ಹಾಗೂ  ಇತರ ಪೌಷ್ಟಿಕಾಂಶಗಳ ಕೊರತೆಯ ತೊಂದರೆ ಇರುವವರಲ್ಲಿ  ಬೆನ್ನಿನ ಸ್ವರೂಪ ಬದಲಾಗಬಹುದು. ಯುವಕರಲ್ಲಿ ಕಾಣಲು ಸಿಗುವ ಅಪರೂಪದ  ಆಂಕೈಲೋಸಿಂಗ್‌ ಸ್ಪಾಂಡಿಲೈಟಿಸ್‌ (Ankylosing Spondylitis ) ಎಂಬ ರೋಗದಲ್ಲಿ ಬೆನ್ನು  ತೀವ್ರವಾಗಿ ಬಗ್ಗಬಹುದು.

ಅಪಘಾತಕ್ಕೆ ಬಲಿಯಾದ ಬೆನ್ನಿನ ಹಲವು ಮೂಳೆಗಳು, ಟಿ.ಬಿ. ಹಾಗೂ ಇತರ ಸೋಂಕು ರೋಗಗಳು ಬೆನ್ನಿನ ಮೂಲರೂಪವನ್ನು  ಕೆಡಿಸಬಹುದು.

ವೃದ್ಧರಲ್ಲಿ ಸಹಜವಾಗಿ ಕಂಡು ಬರುವ ಗೂನುಬೆನ್ನಿಗೆ ಹಲವೊಮ್ಮೆ ಮಾರಕ ರೋಗಗಳಾದ ಮಲ್ಟಿಪಲ್‌ ಮಯೆಲೋಮಾ (multiple myeloma)ಹಾಗೂ ಮೂಳೆಗೆ ಪಸರಿಸಿದ ಅಬುìದ ರೋಗ (metastatic bone disease) ಇವು ಮೂಲಕಾರಣಗಳಾಗಿರಬಹುದು.
ರೋಗಗಳ ಲಕ್ಷಣಗಳು

ವಿಕಾರಗೊಂಡ ಬೆನ್ನು ಮೂಳೆ ಹೊತ್ತ ವ್ಯಕ್ತಿ, ಬೆನ್ನು ನೋವಿನಿಂದ ಬಳಲಬಹುದು. ಸೋಂಕು ರೋಗ ಹಾಗೂ ಅಬುìದ ಕಾಯಿಲೆಗಳಲ್ಲಿ , ಬಲಹೀನತೆ, ಕುಂಠಿತಗೊಂಡ ಹಸಿವು, ಆಗಾಗ ಕಾಣಿಸಿಕೊಳ್ಳುವ  ಜ್ವರ, ಕೆಮ್ಮು, ದೇಹದ ತೂಕದಲ್ಲಿ  ಕುಸಿತ -ಹೀಗೆ ಹಲವಾರು ಲಕ್ಷಣಗಳು ಕಾಣಸಿಗುತ್ತವೆ. ಆಂಕೈಲೋಸಿಂಗ್‌ ಸ್ಪಾಂಡಿಲೈಟಿಸ್‌(Ankylosing Spondylitis)   ಕಾಯಿಲೆಯ ತರುಣ ರೋಗಿ, ತೀವ್ರ ರೀತಿಯ ಬೆನ್ನಿನ ವಿಕಾರಗಳೊಂದಿಗೆ, ಬೆನ್ನಿನ ಚಲನವಲನಗಳನ್ನು ಕೂಡ ಕಳೆದುಕೊಳ್ಳುತ್ತಾನೆ. ಜೊತೆಗೆ, ದೇಹದ ಕೆಲವು ಮಂಡಿಗಳಲ್ಲಿಯೂ ನೋವು  ಆನುಭವಿಸಬಹುದು.

ಪತ್ತೆಹಚ್ಚುವ ವಿಧಾನ
ಬೆನ್ನು ಮೂಳೆಗಳ ವಿಕಾರ ರೂಪಕ್ಕೆ ಕಾರಣಗಳನ್ನು ಕಂಡುಹಿಡಿಯಲು, ನುರಿತ ಮೂಳೆತಜ್ಞ  ವೈದ್ಯರು ಪತ್ತೆದಾರ ಶರ್ಲಾಕ್‌ ಹೋಮ್ಸ್‌ ನಂತೆ  ಜಾಣ್ಮೆಯ ಜ್ಞಾನ ಬುದ್ಧಿಯನ್ನು  ಅಳವಡಿಸಿಕೊಳ್ಳಬೇಕಾಗುತ್ತದೆ. ರೋಗದ  ಲಕ್ಷಣಗಳು, ವೈದ್ಯಕೀಯ  ತಪಾಸಣೆಯ ವೇಳೆಯಲ್ಲಿ ಕಂಡುಬರುವ ಚಿಹ್ನೆಗಳು, ರೋಗ ತಪಾಸಣೆಯ ವಿಧಾನಗಳು ... ಇವೆಲ್ಲವನ್ನು  ವಿಮರ್ಶಿಸಿ, ರೋಗದ ಮೂಲ ಕಾರಣ ಪತ್ತೆಹಚ್ಚಬಹುದು. ರಕ್ತ ಪರೀಕ್ಷೆ , ಕ್ಷ-ಕಿರಣ ಹಾಗೂ ವಿವಿಧ ರೀತಿಯ ಸ್ಕ್ಯಾನ್‌ಗಳು ( CT scan, MRI scan,  Isotope Bone Scan), , ಮೂಳೆಯ ಸಣ್ಣ ತುಂಡಿನ ಪರೀಕ್ಷೆ (bone biopsy)... ಇತ್ಯಾದಿ ಪರೀಕ್ಷಾ ವಿಧಾನಗಳ ಅಗತ್ಯ ಕಂಡು ಬರಬಹುದು.
ಪರಿಹಾರ ಹಾಗೂ ಚಿಕಿತ್ಸಾ
ವಿಧಾನಗಳು


ವಿಕೃತಗೊಂಡ ಬೆನ್ನಿಗೆ ಮೂಲಕಾರಣ, ವ್ಯಕ್ತಿಯ ವಯಸ್ಸು , ರೋಗ ಪತ್ತೆಯಾದ ಹಂತ, ಈ ಹಿಂದೆ  ಪಡೆದ ಚಿಕಿತ್ಸೆಗಳು. ಇವುಗಳನ್ನು  ಅವಲಂಬಿಸಿ, ತಜ್ಞ  ವೈದ್ಯರು ಪರಿಹಾರ ಸೂಚಿಸುತ್ತಾರೆ . ನುರಿತ ಮೂಳೆ ತಜ್ಞ , ಪರಿಣಿತ ಬೆನ್ನ ಮೂಳೆಯ ಶಸ್ತ್ರಚಿಕಿತ್ಸಾ ತಜ್ಞ, ಅಬುìದ ರೋಗ ನಿಯಂತ್ರಣ ತಜ್ಞ  , ದೈಹಿಕ ವ್ಯಾಯಾಮ ತರಬೇತಿ ತಜ್ಞ  ಹಾಗೂ ಹಲವು ವೈದ್ಯರುಗಳು ಸಮಾಲೋಚನೆ  ನಡೆಸಿ, ರೋಗಿಗೆ ಚಿಕಿತ್ಸೆಯ ವಿಧಾನವನ್ನು  ಗೊತ್ತುಪಡಿಸುತ್ತಾರೆ.

ಬಾಲ್ಯದಲ್ಲಿ  ಕಂಡುಬರುವ ಹಾಗೂ ಶೀಘ್ರಗತಿಯಲ್ಲಿ  ವಿಕಾರಗೊಳ್ಳುತ್ತಿರುವ  ಬೆನ್ನನ್ನು  ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಬೇಕಾಗುತ್ತದೆ. ಪೌಷ್ಟಿಕಾಂಶಗಳ ಜೊತೆಗೆ  ವಿಟಮಿನ್‌   ಡಿ  ಔಷಧ  ರಿಕೆಟ್‌   (Rickete)  ಹಾಗೂ ಆಸ್ಟಿಯೊಮಲಾಸಿಯಾ (osteomalacia)  ಎಂಬ ಕಾಯಿಲೆಗಳಿಗೆ ಸಹಕಾರಿ. ಆಂಕೈಲೋಸಿಂಗ್‌ ಸ್ಪಾಂಡಿಲೈಟಿಸ್‌ಕಾಯಿಲೆಯನ್ನು  ಆರಂಭಿಕ ಹಂತದಲ್ಲಿ  ಪತ್ತೆಹಚ್ಚಿದಲ್ಲಿ, ನೋವು  ನಿವಾರಕ  ಔಷಧಿಗಳು, ವ್ಯಾಯಾಮ ಹಾಗೂ ಬೆನ್ನು ಆಧಾರ ಪಟ್ಟಿ  ಅಳವಡಿಸುವ ಮೂಲಕ  ಅದನ್ನು ನಿಯಂತ್ರಣದಲ್ಲಿಡಬಹುದು. ತೀವ್ರವಾಗಿ ಮುಂದಕ್ಕೆ  ಅಥವಾ ಬದಿಗೆ ವಾಲಿಹೋದ ಬೆನ್ನನ್ನು ಶಸ್ತ್ರಚಿಕಿತ್ಸೆಯ  ಮೂಲಕ  ನೇರಗೊಳಿಸಬಹುದು.

ಸೋಂಕು ರೋಗಗಳನ್ನು  ಹತೋಟಿಯಲ್ಲಿಡುವ ಔಷಧಿಗಳು,  ಕ್ಷಯರೋಗಕ್ಕೆ ಸಂಬಂಧಪಟ್ಟ
ಔಷಧಗಳ ಬಳಕೆಯ ಸಂದ‌ರ್ಭ ಇರಬಹುದು.

ಹಿರಿಯ ವ್ಯಕ್ತಿಗಳಲ್ಲಿ  ಮೂಳೆಗಳ  ಬಲವನ್ನು ವೃದ್ಧಿಪಡಿಸಲು, ಹಾಲು, ಹಾಲಿನ ಉತ್ಪನ್ನಗಳು, ಹಸಿರು  ತರಕಾರಿಗಳು, ಮೀನು ... ಇವುಗಳನ್ನು ನಿಯಮಿತ ರೂಪದಲ್ಲಿ ಸೇವಿಸುವುದು ಸಹಕಾರಿ. ಕ್ಯಾಲ್ಸಿಯಂ ಮಾತ್ರೆಗಳು, ವಿಟಮಿನ್‌ ಡಿ  ಔಷಧಿ, ಮೂಳೆಯ ನೋವು ಉಪಶಮನಕಾರಿ ಹಾಗೂ ಬಲ ಹೆಚ್ಚಿಸುವ ಔಷಧಿಗಳು ಈಗ ಬಳಕೆಯಲ್ಲಿವೆ.

ದೇಹದ ಇತರ ಭಾಗಗಳಿಂದ ಬೆನ್ನಮೂಳೆಗೆ ಪಸರಿಸಿದ ಅಬುìದ ರೋಗ ಹೊಂದಿರುವ ದುದೈರ್ವಿ ರೋಗಿಗಳಿಗೆ  ಚಿಕಿತ್ಸೆಯಲ್ಲಿ ವಿಶ್ರಾಂತಿ, ನೋವು ನಿಯಂತ್ರಣ, ಪರಿಣತ ವೈದ್ಯರ ಸಲಹೆಗಳು ಪ್ರಮುಖ ಪಾತ್ರ ವಹಿಸುತ್ತವೆ.

ಕಿವಿನುಡಿ

ಇಂಗ್ಲಂಡ್‌ ದೇಶದ ಇತಿಹಾಸದಲ್ಲಿ  Mr. Alderman ಎಂಬ ವ್ಯಕ್ತಿ ಕರ ಆದಾಯ ಸುಲಿಗೆ ಮಾಡುವ ವೃತ್ತಿಯಲ್ಲಿದ್ದು , ಅತೀ ಜಂಭದಿಂದ ನೇರ ನೆಟ್ಟಗೆ ಬೆನ್ನನ್ನು  ಹೊತ್ತು  ತಿರುಗಾಡುತ್ತಿದ್ದರು. ವಿಕಾರಗೊಂಡ ಬೆನ್ನಿನ ಮೂಲಕಾರಣವನ್ನು  ಅತೀ ಶೀಘ್ರವಾಗಿ, ಆರಂಭಿಕ ಹಂತದಲ್ಲಿಯೇ  ಪತ್ತೆ ಹಚ್ಚಿ , ಸೂಕ್ತ ಚಿಕಿತ್ಸೆಯನ್ನು  ತಜ್ಞ  ವೈದ್ಯರಿಂದ ಪಡೆದುಕೊಳ್ಳುವ ಮೂಲಕ, ರೋಗಿ  ಮತ್ತೂಮ್ಮೆ ನೇರಗೊಂಡು ಅlಛಛಿrಞಚnನ ರೀತಿ ನಡೆದಾಡಲಿ ಎಂಬುದೇ  ಲೇಖಕನ ಆಶಯ ! ಪುಸ್ತಕದ ಮೂಟೆಯ ಭಾರವನ್ನು  ಕಮ್ಮಿಗೊಳಿಸಿ ಅಥವಾ ಆರೋಗ್ಯವಂತ ಬೆನ್ನನ್ನು  ಕಾಪಾಡುವ ಸರಳ ವಿಧಾನವನ್ನು  ಸಣ್ಣ ವಯಸ್ಸಿನಲ್ಲಿಯೇ ಪಾಲಿಸುವುದು ಸಾಧ್ಯವಾದರೆ, ಮುಂದಿನ ಜೀವನ ಸುಖಮಯವಾಗುವುದರಲ್ಲಿ ಸಂಶಯವಿಲ್ಲ .

ಶನಿವಾರ, ಆಗಸ್ಟ್ 18, 2012

ಅಮಿಯೋಟ್ರೋಪಿಕ್‌ ಲ್ಯಾಟರಲ್‌ ಸ್ಕ್ಲೆರೋಸಿಸ್

ಡಾ| ಶಿವಾನಂದ ಪೈ, ತಜ್ಞರು, ನರರೋಗಗಳ ಚಿಕಿತ್ಸಾ ವಿಭಾಗ. 
 
ಅಮಿಯೋಟ್ರೋಪಿಕ್‌  ಲ್ಯಾಟರಲ್‌  ಸ್ಕ್ಲೆರೋಸಿಸ್ (Amyotrophic lateral sclerosis - motor neuron disease) ಅಥವಾ  (ALS) ಎಂಬುದು ಸ್ನಾಯುಗಳ ಅನೈಚ್ಛಿಕ ಚಲನೆಯನ್ನು ನಿಯಂತ್ರಿಸುವ ಮೆದುಳಿನ ನರಕೋಶಗಳಲ್ಲಿ  ಹಾಗೂ ಮೂಳೆಗಳಲ್ಲಿ ಕಂಡು ಬರುವ ಒಂದು ರೀತಿಯ ಕಾಯಿಲೆ.
ALS ಕಾಯಿಲೆಗೆ ಲೊ ಗೆರ್ರಿಗ್ಸ್‌ ಕಾಯಿಲೆ (Lou Gehrig’s disease) ಎಂಬ ಹೆಸರೂ ಇದೆ.
ಕಾರಣಗಳು, ಸಂದರ್ಭಗಳು ಹಾಗೂ
ಅಪಾಯ ಪೂರಕ ಅಂಶಗಳು

ಸುಮಾರು 10% ಸಂದರ್ಭಗಳಲ್ಲಿ ಈ  ALSಕಾಯಿಲೆಗೆ ವಂಶವಾಹಿನಿಗಳು ಅಥವಾ ಆನುವಂಶಿಕತೆಯು ಕಾರಣವಾಗಿರುತ್ತದೆ. ಉಳಿದ ಸಂದರ್ಭಗಳಲ್ಲಿ ಈ ಕಾಯಿಲೆಯನ್ನು  ಉಂಟು ಮಾಡುವ ಕಾರಣಗಳು ಏನೆಂಬುದು ಇನ್ನಷ್ಟೇ  ತಿಳಿಯಬೇಕಾಗಿದೆ.

ಈ ಕಾಯಿಲೆ ಇರುವವರಲ್ಲಿ ನರಕೋಶಗಳು ಅಂದರೆ ನ್ಯೂರಾನ್‌ಗಳು ಹಾನಿಗೊಳಗಾಗುತ್ತವೆ ಅಥವಾ ಸಾಯುತ್ತವೆ. ಈ ನರಕೋಶಗಳು ಸ್ನಾಯುಗಳಿಗೆ ಸಂದೇಶಗಳನ್ನು  ತಲುಪಿಸಲು ವಿಫಲವಾಗುತ್ತವೆ. ಇದರಿಂದಾಗಿ, ಕ್ರಮೇಣ ಸ್ನಾಯುಗಳು ದುರ್ಬಲವಾಗುತ್ತವೆೆ, ಸೆಟೆದು ಕೊಳ್ಳುತ್ತವೆ, ಕೈ-ಕಾಲು ಹಾಗೂ ದೇಹದ ಇತರ ಅಂಗಾಂಶಗಳು  ಅತ್ತಿತ್ತ ಚಲಿಸಲು  ಕಷ್ಟವಾಗುತ್ತದೆ. ಸ್ನಾಯುಗಳ  ಈ ವೈಕಲ್ಯವು ನಿಧಾನವಾಗಿ ಉಲ್ಬಣಿಸುತ್ತಾ ಹೋಗುತ್ತದೆ. ಎದೆಯ ಭಾಗದ ಸ್ನಾಯುವು ಕೆಲಸ ಮಾಡುವುದನ್ನು  ನಿಲ್ಲಿಸಿದರೆ, ಅಥವಾ ಪೂರ್ತಿ ವಿಕಲಗೊಂಡರೆ, ವ್ಯಕ್ತಿಯು ಉಸಿರಾಡಲು ಕಷ್ಟವಾಗುತ್ತದೆ ಅಥವಾ ಸ್ವತ ಉಸಿರಾಡುವುದೇ ಅಸಾಧ್ಯವೆನಿಸುತ್ತದೆ.

ಜಗತ್ತಿನಲ್ಲಿರುವ ಪ್ರತೀ 1,00,000 ಜನರಲ್ಲಿ ಸುಮಾರು 5 ಜನರಿಗೆ ಅಔಖ ಕಾಯಿಲೆ ಬರಬಹುದು.
ಆನುವಂಶಿಕತೆಯನ್ನು  ಬಿಟ್ಟರೆ ಈ ಕಾಯಿಲೆ ಬರಲು ಕಾರಣವಾಗಿರುವ ಇನ್ನಿತರ ಅಪಾಯಕಾರಿ ಅಂಶಗಳು ಯಾವುವೂ ಇದುವರೆಗೂ ಬೆಳಕಿಗೆ ಬಂದಿಲ್ಲ .
ಲಕ್ಷಣಗಳು
ವ್ಯಕ್ತಿಯ ಯುವ ವಯಸ್ಸಿನಲ್ಲೇ ಈ ಕಾಯಿಲೆಯ  ಲಕ್ಷಣಗಳು ಆರಂಭವಾಗಿದ್ದರೂ ಸಹ, ವ್ಯಕ್ತಿಯು 50 ವಯಸ್ಸನ್ನು  ದಾಟುವ ವರೆಗೂ ಇದರ ಲಕ್ಷಣಗಳು ಕಾಣಿಸಿಕೊಳ್ಳುವುದು ಅಥವಾ ಬೆಳೆಯುವುದು  ಬಹಳ ಅಪರೂಪ. ALS ಕಾಯಿಲೆ ಇರುವ ವ್ಯಕ್ತಿಯ ಸ್ನಾಯುಗಳ ಸಾಮರ್ಥ್ಯ ಹಾಗೂ ಸಂಯೋಜನೆಯು ಬಹಳ ದುರ್ಬಲವಾಗಿರುತ್ತದೆ. ಈ ದೌರ್ಬಲ್ಯವು ಕ್ರಮೇಣ ಹೆಚ್ಚಾಗುತ್ತಾ ಹೋಗಿ, ವ್ಯಕ್ತಿಯು ತನ್ನ ದೈನಂದಿನ ಕೆಲಸ ಕಾರ್ಯಗಳಾದ ಮೆಟ್ಟಿಲುಗಳನ್ನು ಹತ್ತುವುದು, ಕುರ್ಚಿಯಿಂದ ಮೇಲೇಳುವುದು ಅಥವಾ ಆಹಾರ ನುಂಗುವುದು... ಇತ್ಯಾದಿ ಕೆಲಸಗಳನ್ನು  ಮಾಡಲೂ ಸಹ ಅಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಈ ಕಾಯಿಲೆಯಿಂದಾಗಿ ಉಸಿರಾಟ ಹಾಗೂ ಆಹಾರ ನುಂಗಲು ಸಹಕರಿಸುವ ಸ್ನಾಯುಗಳು ಮೊದಲು ಹಾನಿಗೊಳಗಾಗಿ, ಆಮೇಲೆ ಕಾಯಿಲೆಯು ಹೆಚ್ಚುತ್ತಾ ಹೋದಂತೆ, ಉಳಿದ ಸ್ನಾಯುಗಳಲ್ಲಿ  ದೌರ್ಬಲ್ಯವು ಕಾಣಿಸಿಕೊಳ್ಳುತ್ತದೆ.

ಆದರೆ ಸಂವೇದನಾ ಅಂಗಗಳಾದ ಕಣ್ಣು, ಮೂಗು, ಬಾಯಿ, ಕಿವಿ ಹಾಗೂ ಚರ್ಮದ ಸ್ನಾಯುಗಳನ್ನು ಈ
ಕಾಯಿಲೆಯು ಬಾಧಿಸುವುದಿಲ್ಲ . ಅಪರೂಪಕ್ಕೆ ಕೆಲವು ಸಲ ಮೂತ್ರಚೀಲ ಅಥವಾ ವಿಸರ್ಜನಾಂಗಗಳ ಕಾರ್ಯಚಟುವಟಿಕೆಗಳಲ್ಲಿ ಈ ಕಾಯಿಲೆಯ ಪರಿಣಾಮ ಕಂಡುಬರಬಹುದು. ಅದೇ ರೀತಿ, ಕೆಲವು ಜನರ ಯೋಚನೆ ಹಾಗೂ ಕರ್ತೃತ್ವದ ಸಾಮರ್ಥ್ಯಗಳ ಮೇಲೂ ಈ ಕಾಯಿಲೆಯ ಪ್ರಭಾವ ಕಾಣಿಸಿಕೊಳ್ಳಬಹುದು.

ಕಂಡುಬರಬಹುದಾದ  ಲಕ್ಷಣಗಳು
ಉಸಿರಾಡಲು ಕಷ್ಟವಾಗುವುದು.

ಆಹಾರ ನುಂಗಲು ಕಷ್ಟವಾಗುವುದು.

ಉಸಿರುಕಟ್ಟುವುದು.

ಜೊಲ್ಲು ಸುರಿಸುವುದು.

ಗಂಟಲು ಕಟ್ಟುವುದು.

ಸ್ನಾಯುಗಳ ದೌರ್ಬಲ್ಯದಿಂದಾಗಿ ತಲೆ ವಾಲುವುದು.

ಸ್ನಾಯು ಸೆಳೆತ.

ಸ್ನಾಯುಗಳು ಗಂಟುಕಟ್ಟಿದಂತೆ (fasciculations) ಸಂಕುಚನಗೊಳ್ಳುವುದು.

ನಿಧಾನವಾಗಿ ತೀವ್ರಗೊಳ್ಳುವ ಸ್ನಾಯು ದೌರ್ಬಲ್ಯಗಳು.

ಸಾಮಾನ್ಯವಾಗಿ ದೇಹದ ಒಂದು
 ಭಾಗದಲ್ಲಿ ದೌರ್ಬಲ್ಯವಿರುತ್ತದೆ; ಕೈ ಅಥವಾ
 ಕಾಲು... ಇತ್ಯಾದಿ.

ಕ್ರಮೇಣವಾಗಿ ಇದರಿಂದ ಭಾರ ಎತ್ತಲು,
 ಮೆಟ್ಟಲು ಏರಲು ಹಾಗೂ ನಡೆದಾಡಲು
 ಕಷ್ಟವಾಗುತ್ತದೆ.

ಲಕ್ವಾ ಅಥವಾ ಪಕ್ಷವಾತ .

ಮಾತನಾಡಲು ತೊಂದರೆಯಾಗುವುದು.
 ಅಂದರೆ, ಮಾತು ನಿಧಾನಗೊಳ್ಳುವುದು
 ಅಥವಾ ಮಾತನಾಡುವ ವಿಧಾನದಲ್ಲಿ
 ಅಸಹಜಗೊಳ್ಳುವಿಕೆ.

ಧ್ವನಿ ಬದಲಾಗುವುದು ಅಥವಾ
 ಗೊಗ್ಗರಾಗುವುದು.

ತೂಕ ಕಡಿಮೆಯಾಗುವುದು
ಚಿಹ್ನೆಗಳು ಹಾಗೂ ಪರೀಕ್ಷೆಗಳು

ವ್ಯಕ್ತಿಯ ಸಾಮರ್ಥ್ಯ ಹಾಗೂ ಸಹಿಷ್ಣುತೆಗೆ ಸಂಬಂಧಿಸಿದಂತೆ ವೈದ್ಯರು ರೋಗಿಯ ದೈಹಿಕ ಸಾಮರ್ಥ್ಯದ ಹಾಗೂ ಆರೋಗ್ಯದ ಮಾಹಿತಿಗಳನ್ನು ಪಡೆಯುತ್ತಾರೆ.

ಹೆಚ್ಚಾಗಿ ದೇಹದ ಒಂದು ಭಾಗದಲ್ಲಿ ಆರಂಭವಾಗಿರುವ ನಿಶ್ಶಕ್ತಿ ಅಥವಾ ದೌರ್ಬಲ್ಯವು, ವ್ಯಕ್ತಿಯ ಸಾಮರ್ಥ್ಯವನ್ನು  ಪರೀಕ್ಷಿಸುವ ದೈಹಿಕ ಪರೀಕ್ಷೆಯ ಸಂದ‌ರ್ಭದಲ್ಲಿ   ಬೆಳಕಿಗೆ  ಬರುತ್ತದೆ. ಆ ಭಾಗದಲ್ಲಿ  ಸ್ನಾಯುಗಳು ಸೆಟೆದುಕೊಳ್ಳುವುದು, ತಿರುಚಿರುವುದು, ಸ್ನಾಯುಗಳಲ್ಲಿ ಸೆಳೆತ ಅಥವಾ ಸ್ನಾಯುಗಳ ಅಂಗಾಂಶಗಳು ಹಾನಿಗೊಂಡಿರುವುದು (atrophy) ತಿಳಿದು ಬರುತ್ತದೆ. ನಾಲಗೆಯ ಸ್ನಾಯು ಹಾನಿಗೊಂಡಿರುವುದು ಅಥವಾ ಸೆಟೆದಿರುವುದು - ಇದು ಸಾಮಾನ್ಯವಾಗಿ ಕಂಡುಬರುವ  ಲಕ್ಷಣವಾಗಿದೆ.
ವ್ಯಕ್ತಿಯ ನಡಿಗೆಯು ಸಮರ್ಪಕ ವಾಗಿರುವುದಿಲ್ಲ. ಅನೈಚ್ಛಿಕ ಕ್ರಿಯೆಗಳು ಅಸಹಜಗೊಳ್ಳುತ್ತವೆ. ದೇಹದ ಸಂಧಿಗಳಲ್ಲಿ ಆನೈಚ್ಛಿಕ  ಪ್ರತಿಕ್ರಿಯೆಯು ಹೆಚ್ಚಾದರೆ, ಗಂಟಲಿನ  ಸ್ನಾಯುಗಳ ಅನೈಚ್ಛಿಕ ಪ್ರತಿಕ್ರಿಯೆಯು ಕಡಿಮೆಯಾಗುತ್ತದೆ. ಕೆಲವರಿಗೆ ಅಳು ಹಾಗೂ ನಗುವನ್ನು  ನಿಯಂತ್ರಿಸಲು ಆಗದೇ ಇರಬಹುದು. ಇದನ್ನು ಭಾವನಾತ್ಮಕ ಅನಿಯಂತ್ರಣ ಎಂದು ಕರೆಯುತ್ತಾರೆ.
ಮಾಡಬಹುದಾದ ಪರೀಕ್ಷೆಗಳು ಆಂದರೆ
ಬೇರೆ ರೋಗ ಕಾರಣಗಳು ಅಲ್ಲ ಎಂಬುದನ್ನು ದೃಢ ಪಡಿಸಿಕೊಳ್ಳಲು ರಕ್ತ ಪರೀಕ್ಷೆ.

ಶ್ವಾಸಕೋಶದ ಸ್ನಾಯುಗಳಿಗೆ ಹಾನಿಯಾಗಿದೆಯೇ ಎಂದು ಪರೀಕ್ಷಿಸಲು ಉಸಿರಾಟದ ಪರೀಕ್ಷೆ.

ಕೊರಳು ಅಥವಾ ಕತ್ತಿನಲ್ಲಿ ALSನ್ನೇ ಹೋಲುವ ಬೇರೆ ಕಾಯಿಲೆಗಳು ಅಥವಾ ಏಟುಗಳು ಇವೆಯೇ ಎಂದು ಪತ್ತೆ ಮಾಡಲು ಕುತ್ತಿಗೆಯ  ಮೂಳೆಯ ಸಿ.ಟಿ. (CT or MRI)and MRI

ಯಾವ ನರವು ಸರಿಯಾಗಿ ಕೆಲಸ ಮಾಡುತ್ತಿಲ್ಲ  ಎಂಬುದನ್ನು ಪತ್ತೆ ಮಾಡಲು ಎಲೆಕ್ಟ್ರೋಮಿಯೋಗ್ರಫಿ (Electromyography)

ALSನ ಕೌಟುಂಬಿಕ ಹಿನ್ನೆಲೆ ಇದೆಯೇ ಎಂದು ಪತ್ತೆ ಮಾಡಲು ವಂಶವಾಹಿಗಳ ಪರೀಕ್ಷೆ.

ಇತರ ರೋಗಗಳು ಕಾರಣವ‌ಲ್ಲ  ಎಂದು ಖಚಿತಪಡಿಸಿಕೊಳ್ಳಲು ತಲೆಯ ಕೆಲವು ತಪಾಸಣೆಗಳು.

ನರಗಳ ವಾಹಕತೆಯ ಪರೀಕ್ಷೆ .

ನುಂಗುವಿಕೆಯ ಪರೀಕ್ಷೆ .

ಸ್ಪೈನಲ್‌ ಟ್ಯಾಪ್‌ (ಲಂಬರ್‌ ಪಂಕ್ಚರ್‌)
ಚಿಕಿತ್ಸೆ
ALSಗೆ ಯಾವುದೇ ಚಿಕಿತ್ಸೆ ಸದ್ಯಕ್ಕೆ  ಲಭ್ಯ ಇಲ್ಲ . ಕಾಯಿಲೆಗೆ ನೀಡಬಹುದಾದ ಮೊದಲ ಔಷಧೀಯ ಚಿಕಿತ್ಸೆ ಅಂದರೆ ರಿಲ್ಯುಝೋಲ್‌. ಈ ರಿಲ್ಯುಝೋಲ್‌ ಔಷಧಿಯು ಕಾಯಿಲೆಯು ಉಲ್ಬಣಿಸುವುದನ್ನು ನಿಧಾನಗೊಳಿಸುತ್ತದೆ.

ಲಕ್ಷಣಗಳನ್ನು ನಿಯಂತ್ರಿಸುವ ಚಿಕಿತ್ಸೆಗಳಿಂದಲೂ  ಸಹ ಸಹಾಯವಾಗಬಹುದು.

ಬ್ಯಾಕ್‌ಲೋಫೆನ್‌ (Bacclofen)  ಅಥವಾ ಡಯಾಝಪ್ಯಾಮ್‌ (diazepam).

ಲಾಲಾರಸ ನುಂಗುವ ತೊಂದರೆ ಇರುವವರು ಟ್ರೈಹೆಕ್ಸಿಫೆನಿಡಿಲ್‌ (Trihexyphenydyl) ಅಥವಾ ಅಮಿಟ್ರಿಪ್ಟಿಲಿನ್‌ (amitryptiline) ಔಷಧಿಗಳನ್ನು ತೆಗೆದುಕೊಳ್ಳಲು ಸೂಚಿಸಬಹುದು.

ದೈಹಿಕ ಚಿಕಿತ್ಸೆ , ಪುನಶ್ಚೇತನ ಚಿಕಿತ್ಸೆ , ಬ್ರೇಸಸ್‌ ಅಥವಾ ಗಾಲಿಕುರ್ಚಿಗಳ ಬಳಕೆ ಅಥವಾ ಇನ್ನಿತರ ಸಹಾಯಕ ಸಲಕರಣೆಗಳ ಮೂಲಕ ಸ್ನಾಯುಗಳ ಚಟುವಟಿಕೆ, ಸಾಮರ್ಥ್ಯ ಹಾಗೂ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬಹುದು. ಈ ಕಾಯಿಲೆ ಇರುವವರಲ್ಲಿ  ಉಸಿರುಕಟ್ಟುವಿಕೆಯು ಹೆಚ್ಚಾಗಿ ಕಂಡು ಬರುತ್ತದೆ. ರೋಗಿಗೆ ನಳಿಕೆಯ ಮೂಲಕ ಹೊಟ್ಟೆಗೆ ಆಹಾರ ಸೇರಿಸುವ  ಬಗ್ಗೆ  ಯೋಚಿಸಬಹುದು. ಇದಕ್ಕೆ  ಗ್ಯಾಸ್ಟ್ರೊಸ್ಟೊಮಿ (gastrostomy)  ಎಂದು ಹೆಸರು.

ಈ ರೋಗಿಗಳಿಗೆ ತೂಕ ಕಡಿಮೆ ಯಾಗುವ ಆಪಾಯ ಹೆಚ್ಚು ಇರುವ ಕಾರಣ, ಇವರಿಗೆ ಆಹಾರ ತಜ್ಞರ ಬೆಂಬಲ ಅತಿ ಅಗತ್ಯ. ಈ ಕಾಯಿಲೆಯೇ ಆಹಾರ  ಹಾಗೂ ಕ್ಯಾಲೋರಿಗಳ ಆವಶ್ಯಕತೆಯನ್ನು ಹೆಚ್ಚಿಸುತ್ತದೆ. ಅದೇ ಸಂದರ್ಭದಲ್ಲಿ , ಕಾಯಿಲೆಯಿಂದಾಗಿ ವ್ಯಕ್ತಿಗೆ ಆಹಾರ ನುಂಗಲು ಬಹಳ  ಕಷ್ಟವಾಗುತ್ತದೆ. ಕೃತಕ ಉಸಿರಾಟದ ಸಾಧನಗಳನ್ನು  ರಾತ್ರಿ ಹೊತ್ತಲ್ಲಷ್ಟೇ  ನಿರಂತರವಾಗಿ ಉಪಯೋಗಿಸಬೇಕಾಗುತ್ತದೆ .  ಕೃತಕ ಉಸಿರಾಟದ ಸಾಧನವನ್ನು ಒದಗಿಸುವ ಬಗ್ಗೆ ರೋಗಿಯು  ತನ್ನ  ಅಭಿಪ್ರಾಯವನ್ನು  ಕುಟುಂಬದ ಸದಸ್ಯರು ಹಾಗೂ ವೈದ್ಯರಲ್ಲಿ ತಿಳಿಸಬಹುದು.
ಮೂನ್ಸೂಚನೆಗಳು
ಕಾಲಕ್ರಮೇಣ  ರೋಗಿಗಳ  ಎಲ್ಲಾ ಚಟುವಟಿಕೆಗಳು ಕ್ಷಿಪ್ರವಾಗಿ ಸ್ಥಗಿತಗೊಳ್ಳುತ್ತವೆ. ಹೆಚ್ಚಾಗಿ, ತಪಾಸಣೆಯಾದ 3-5 ವರ್ಷಗಳ ನಂತರ ಮರಣ ಸಂಭವಿಸಬಹುದು. ಸುಮಾರು 25% ದಷ್ಟು ಜನರು ತಪಾಸಣೆಯ ನಂತರವೂ ಐದು ವರ್ಷಗಳ ಕಾಲ ಬದುಕಬಹುದು.

ಸಂಕೀರ್ಣ ತೊಂದರೆಗಳು
ಆಹಾರ, ಪಾನೀಯಗಳು ಶ್ವಾಸನಾಳದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ.

ತನ್ನನೇ ತಾನು ರಕಿ‌Òಸಿಕೊಳ್ಳಲು ರೋಗಿಗೆ ಆಗದೇ ಇರಬಹುದು.

ಶ್ವಾಸಕೋಶ ವೈಫಲ್ಯ.

ನ್ಯುಮೋನಿಯಾ.

ಹಾಸಿಗೆ ಹುಣ್ಣುಗಳು ಅಥವಾ ಒತ್ತಡದ ಹುಣ್ಣುಗಳು.

ತೂಕ ಕಡಿಮೆಯಾಗುವುದು.
ತಡೆಗಟ್ಟುವಿಕೆ
ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ALS ಕಾಯಿಲೆ ಇದ್ದರೆ , ಆಗ ಮುಂಜಾಗ್ರತಾ ಕ್ರಮವಾಗಿ ನೀವು ಅನುವಂಶಿಕ  ಸಲಹಾ ತಜ್ಞರ   ಸಲಹೆಯನ್ನು  ಪಡೆಯಬಹುದು.

ಶುಕ್ರವಾರ, ಜುಲೈ 13, 2012

ಆಹಾರದಲ್ಲಿ ಕಬ್ಬಿಣ ಸತ್ವದ ಪ್ರಾಮುಖ್ಯತೆ

  • ಡಾ| ಅರುಣಾ ಮಯ್ಯ ಡಯಟೀಷಿಯನ್‌ 
  •  
    ಅನೀಮಿಯಾ ಅಥವಾ ಕಬ್ಬಿಣದ ಸತ್ವ ದ ನ್ಯೂನತೆಯನ್ನು  ಕಡಿಮೆ ಮಾಡಲು ಕಬ್ಬಿಣದ ಅಂಶವು ಹೇರಳವಾಗಿರುವ ಅಹಾರಗಳ ಪಟ್ಟಿ ಮಾಡಲಾಗಿದೆ. ನಿಮಗೆ ಅನೀಮಿಯಾ  ಇದ್ದಲ್ಲಿ,  ಸೂಚಿಸಿರುವ ಈ  ಆಹಾರಗಳಲ್ಲಿ   ಕಬ್ಬಿಣದ ಅಂಶವು ಹೇರಳವಿರುವ ಆಹಾರವನ್ನು  ಸೇವಿಸಿ. ದೇಹದಲ್ಲಿ  ಕಬ್ಬಿಣದ ಕಡಿಮೆಯಾಗುವ ಕಾರಣದಿಂದ ಅನೀಮಿಯಾ ಅಥವಾ ಹೆಮೊಗ್ಲೋಬಿನ್‌ ಕೊರತೆ ಬಾಧಿಸುತ್ತದೆ.

    ಕಬ್ಬಿಣದ ಸತ್ವವಿರುವ ಅಹಾರಗಳು

    ಕೆಳಗೆ  ಸೂಚಿಸಿರುವ  100 ಗ್ರಾಂ ಅಹಾರಗಳಲ್ಲಿ, 8ಗ್ರಾಂ ಅಥವಾ ಅದಕ್ಕಿಂತಲೂ  ಹೆಚ್ಚಿನ  ಪ್ರಮಾಣದಲ್ಲಿ ಕಬ್ಬಿಣದ ಸತ್ವವಿರುತ್ತದೆ.

    1. ಧಾನ್ಯಗಳು ಹಾಗೂ ಕಾಳುಗಳು: ಬಾರ್ಲಿ, ಅಕ್ಕಿಯ ತರಿ.

    2. ಬೇಳೆಗಳು ಹಾಗೂ ಬೀನ್ಸ್‌ :  ಹುರುಳಿ, ಅವರೆ, ಕೋಡುಗಳು, ಸೋಯಾಬೀನ್ಸ್‌, ಕೋಸು.
      ಇವು ಕಬ್ಬಿಣದ ಸತ್ವವು ಹೇರಳವಾಗಿರುವ ಅಹಾರ. ಈ ಆಹಾರಗಳಲ್ಲಿ  ಕಬ್ಬಿಣದ ಸತ್ವ ಮಾತ್ರವಲ್ಲದೆ ವಿಟಮಿನ್‌ ಸಿ ಸಹ  ಹೇರಳವಾಗಿದ್ದು , ಕಬ್ಬಿಣದ  ಸತ್ವದ ಹೀರುವಿಕೆಗೆ  ನೆರವಾಗುತ್ತದೆ.

    3. ಸಮುದ್ರದ ತರಕಾರಿಗಳಲ್ಲಿಯೂ ಕಬ್ಬಿಣದ ಸತ್ವವು  ಹೇರಳವಾಗಿರುತ್ತದೆ.

    4. ಹಣ್ಣುಗಳು :  ಒಣ ಖರ್ಜೂರ , ಕಲ್ಲಂಗಡಿ,  ಒಣದ್ರಾಕ್ಷಿ.

    5. ಮೀನು ಹಾಗೂ ಕೆಂಪು  ಮಾಂಸ

    6. ಪ್ರಾಣಿಜನ್ಯ  ಮಾಂಸಾಹಾರದಲ್ಲಿ (ಹೇಯಿಮ್‌ ಕಬ್ಬಿಣದ ಸತ್ವವು ಹೇರಳವಾಗಿರುತ್ತದೆ.)
    ಸಸ್ಯಾಹಾರವನ್ನೇ ಸೇವಿಸಿ ದೇಹಕ್ಕೆ ಅಗತ್ಯ ವಿರುವ  ದೈನಂದಿನ ಕಬ್ಬಿಣದ ಸತ್ವವನ್ನು ಪೂರೈಸಿಕೊಳ್ಳಬಹುದು. ಉದಾಹರಣೆಗೆ , 1 ಕಪ್‌  ಬೆಂದ  ಸ್ಪಿನಾಚ್‌ ಅಥವಾ ಬಸಳೆ ಜಾತಿಯ  ತರಕಾರಿಯಲ್ಲಿ  3 ಮಿ.ಗ್ರಾಂ, 1 ಕಪ್‌ ಟೋಪು  ಅಥವಾ ಸೋಯಾ ಪನೀರ್‌ನಲ್ಲಿ  13.2  ಮಿ.ಗ್ರಾಂ ಹಾಗೂ  1ಕಪ್‌ ಬೆಂದ ಅವರೆ ಕಾಳಿನಲ್ಲಿ 6.4  ಮಿ.ಗ್ರಾಂ . ಕಬ್ಬಿಣದ ಅಂಶ ಇರುತ್ತದೆ.
    ಕಬ್ಬಿಣದ ಅಂಶವು 
    ದೇಹಗತವಾಗುವ ಪ್ರಕ್ರಿಯೆ


    ಕಬ್ಬಿಣದ ಸತ್ವವು ಹೇರಳವಾಗಿರುವ ಆಹಾರವನ್ನು  ಸೇವಿಸಿದ ಕೂಡಲೇ ಅ ಅಂಶವು ದೇಹಗತವಾಗುವುದಿಲ್ಲ  ಎಂಬುದು  ನಮಗೆ ಅರಿವಿರಬೇಕು. ಅದರ ದೇಹಗತವಾಗುವಿಕೆಯು ಅದು ಯಾವ ರೀತಿಯ  ಕಬ್ಬಿಣದ  ಸತ್ವ ಎಂಬುದನ್ನು ಅವಲಂಬಿಸಿದೆ.  ಪ್ರಾಣಿ ಜನ್ಯ  ಕಬ್ಬಿಣದ ಸತ್ವವು (ಹೇಯಿಮ್‌ ಕಬ್ಬಿಣದ ಸತ್ವ) ಬಹಳ ಸುಲಭವಾಗಿ ದೇಹಗತವಾಗುತ್ತದೆ. ಆದರೆ ತರಕಾರಿಗಳಲ್ಲಿ  ಇರುವಂತಹ ಹೇಯಿಮ್‌ ರಹಿತ ಕಬ್ಬಿಣದ ಸತ್ವವು  ದೇಹಗತವಾಗುವುದು  ಬಹಳ ನಿಧಾನ. ಸಸ್ಯಜನ್ಯ ಆಹಾರದಿಂದ  1-10% ಕಬ್ಬಿಣವು ದೇಹಗತವಾದರೆ, ಪ್ರಾಣಿಜನ್ಯ ಆಹಾರದಿಂದ 10-20%  ಕಬ್ಬಿಣವು ದೇಹಗತವಾಗುತ್ತದೆ.
    ಕಬ್ಬಿಣದ ಸತ್ವವು  ದೇಹಗತವಾಗಲು
    ಉತ್ತೇಜಕ‌ ಅಂಶಗಳು

    ಬೇಯಿಸದ  ಅಥವಾ ಕಚ್ಚಾ  ಆಹಾರಗಳಲ್ಲಿರುವ ಕಬ್ಬಿಣದ ಸತ್ವವು ಬಹಳ ಚೆನ್ನಾಗಿ ದೇಹಗತವಾಗುತ್ತದೆ.  ವಿಟಮಿನ್‌ ಸಿ ಹೇರಳವಾಗಿರುವ ಟೊಮ್ಯಾಟೋ ಅಥವಾ  ಸಿಟ್ರಸ್‌ಯುಕ್ತ ಅಹಾರಗಳು ಕಬ್ಬಿಣದ ಅಂಶವು ದೇಹಗತವಾಗಲು ಬಹಳ ಸಹಕರಿಸುತ್ತವೆ.

    ಬೀನ್ಸ್‌  ಜೊತೆ ಟೊಮ್ಯಾಟೋ  ಅಥವಾ ಟೋಪು ಜೊತೆ ಕೋಸು ಇತ್ಯಾದಿಯಾಗಿ ಆಹಾರಗಳನ್ನು  ಮಿಶ್ರಣ ಮಾಡಿ  ಸೇವಿಸುವುದರಿಂದ, ದೇಹವು ಕಬ್ಬಿಣದ ಅಂಶವನ್ನು ಬಹಳ ಚೆನ್ನಾಗಿ  ಹೀರಿಕೊಳ್ಳುತ್ತದೆ. ತರಾಕಾರಿಗಳಲ್ಲಿ ಸಾಮಾನ್ಯವಾಗಿ  ಹೂ ಕೋಸು, ಕ್ಯಾಬೇಜ್‌, ಕ್ಯಾಪ್ಸಿಕಮ್‌, ಬಟಾಟೆ, ಟೊಮ್ಯಾಟೋ, ಹಣ್ಣುಗಳಲ್ಲಿ  ದ್ರಾಕ್ಷಿ , ಸ್ಟ್ರಾಬೆರ್ರಿ, ಕಿತ್ತಲೆ... ಇತ್ಯಾದಿಗಳು ಕಬ್ಬಿಣದ ಅಂಶವು  ದೇಹಗತವಾಗಲು ನೆರವಾಗುತ್ತವೆ.
    ಕಬ್ಬಿಣದ  ಸತ್ವವು ದೇಹಗತವಾಗು ವುದನ್ನು  ನಿರೋಧಿಸುವ ಆಹಾರಗಳು
    ಚಹಾ, ಕಾಫಿ, ಚಾರ್ಡ್‌ (ಒಂದು ಬಗೆಯ ಗೆಡ್ಡೆ )... ಇತ್ಯಾದಿಗಳು  ಕಬ್ಬಿಣದ ಸತ್ವವು ದೇಹಗತವಾಗುವುದನ್ನು  ತಡೆಯುತ್ತವೆ. ಹಾಗಾಗಿ,  ಈ ಆಹಾರಗಳನ್ನು  ಕಬ್ಬಿಣದ ಸತ್ವವು ಹೇರಳವಾಗಿರುವ ಆಹಾರದ ಜೊತೆಗೆ ಸೇವಿಸಬಾರದು.
    ಉತ್ತಮ ಗುಣಮಟ್ಟದ ಕಬ್ಬಿಣದ ಸತ್ವವಿರುವ ಅಹಾರಗಳು
    ಹೊಟ್ಟು , ಓಟ್‌  ಹಾಗೂ ಅಕ್ಕಿ, ಗೋಧಿ ತರಿಗಳು. ಸಮುದ್ರ ತರಕಾರಿಗಳಲ್ಲಿ ಕಬ್ಬಿಣದ  ಸತ್ವವು ಹೇರಳವಾಗಿರುತ್ತದೆ. ಅಂದರೆ, ಅರ್ಧ ಕಪ್‌ ಈ ಅಹಾರದಲ್ಲಿ  42 ಮಿ.ಗ್ರಾಂ ಕಬ್ಬಿಣದ  ಸತ್ವವಿರುತ್ತದೆ.
    ಕಡಲೆ, ಸೋಯಾಬಿನ್‌ ಹಾಗೂ ಟೋಪು ಇತ್ಯಾದಿಗಳಲ್ಲಿ  ಕಬ್ಬಿಣದ ಸತ್ವವು ಅಧಿಕ ಪ್ರಮಾಣದಲ್ಲಿ ಇರುತ್ತದೆ.

    ಗರ್ಭಧಾರಣಾ ಅವಧಿಗಾಗಿ ಕಬ್ಬಿಣಯುಕ್ತ ಆಹಾರಗಳು

    ಭ್ರೂಣದಲ್ಲಿ  ಬೆಳೆಯುತ್ತಿರುವ ಮಗುವಿನ ಉತ್ತಮ  ಬೆಳವಣಿಗೆಗಾಗಿ ಒಬ್ಬ ಗರ್ಭಿಣಿ ಮಹಿಳೆಗೆ ಅಧಿಕ ಕಬ್ಬಿಣದ ಸತ್ವದ  ಅಗತ್ಯವಿದೆ. ಅಕೆ ತನ್ನ  ನಿತ್ಯದ ಆಹಾರದಲ್ಲಿ  ಅಧಿಕ ಕಬ್ಬಿಣದ ಅಂಶವಿರುವ ಆಹಾರವನ್ನು ಸೇವಿಸಬೇಕು. ಗರ್ಭಧಾರಣೆಯ ಅವಧಿಯಲ್ಲಿ  ಆಕೆಗೆ ಅನೀಮಿಯಾ  ಅಥವಾ ಕಬ್ಬಿಣದ ಸತ್ವದ ಕೊರತೆಯು  ಬಾಧಿಸುವುದನ್ನು ತಡೆಯಲಿಕ್ಕಾಗಿ, ಆಕೆಯ ವೈದ್ಯರು  ಗರ್ಭಧಾರಣೆಯಾದ 20ನೆಯ ವಾರದ ನಂತರ , ಆಕೆಗೆ 30 ರಿಂದ 50 ಮಿ.ಗ್ರಾಂ ನಷ್ಟು  ಕಬ್ಬಿಣದ  ಸತ್ವದ ಪೂರಣವನ್ನು  ಸೇವಿಸಲು  ಸೂಚಿಸಬಹುದು.  ವಿಟಮಿನ್‌  ಸಿ ಇರುವ  ಆಹಾರಗಳಾದ ಕಿತ್ತಲೆ ಅಥವಾ ಟೊಮ್ಯಾಟೋ  ರಸದ ಜೊತೆಗೆಯೇ ಈ ಪೂರಣಗಳನ್ನು  ತೆಗೆದುಕೊಳ್ಳಬೇಕು. ಯಾಕೆಂದರೆ, ಇವು ಅಧಿಕ ಪ್ರಮಾಣದಲ್ಲಿ  ಕಬ್ಬಿಣದ ಸತ್ವವು  ದೇಹಗತವಾಗಲು ನೆರವಾಗುತ್ತವೆ.

    ನೀವು ಗರ್ಭಿಣಿಯಾಗಿದ್ದ ಲ್ಲಿ , ಅಧಿಕ ಪ್ರಮಾಣದಲ್ಲಿ  ಈ  ಕೆಳಗಿನ ಆಹಾರಗಳನ್ನು ಸೇವಿಸಿ, ನಿಮ್ಮ   ದೇಹಕ್ಕೆ  ಅಗತ್ಯವಿರುವ  ಕಬ್ಬಿಣದ ಸತ್ವವನ್ನು  ಪೂರೈಸಿಕೊಳ್ಳಬಹುದು. ಬೆಂದ ಕಾಳುಗಳು, ಓಟ್‌, ಸೋಯಾಬಿನ್‌, ಬಾರ್ಲಿ, ಕುಂಬಳಕಾಯಿ ಬೀಜ, ಒಣದ್ರಾಕ್ಷಿ, ಬಾದಾಮಿ,  ಖರ್ಜೂರ, ಪೀಚ್‌ ಇತ್ಯಾದಿ ಒಣಹಣ್ಣುಗಳು. ತರಕಾರಿಗಳಾದ  ಸ್ಪೈನಾಚ್‌, ಸಮುದ್ರಕಳೆ, ಕಾಕಂಬಿ...  ಇತ್ಯಾದಿಗಳು, ಪ್ರಾಣಿ ಜನ್ಯ ಹೇಯಿಮ್‌ ಕಬ್ಬಿಣದ ಸತ್ವವಿರುವ  ಬೀಫ್, ಬಾತುಕೋಳಿಯ ಮಾಂಸ, ಸಾಡೈìನ್‌, ಬೇಯಿಸಿದ ಚಿಪ್ಪು ಮೀನು,  ಆಯಿಸ್ಟರ್‌, ಕ್ಲಾಮ್ಸ್‌ , ಸಿಗಡಿ...ಇತ್ಯಾದಿಗಳು.

ಪ್ರಥಮ ಚಿಕಿತ್ಸೆ II First Aid

  • ಡಾ| ಮಧುಸೂದನ ಉಪಾಧ್ಯ ಮೆಡಿಕಲ್‌ ಸೂಪರಿಂಟೆಂಡೆಂಟ್‌
  •  
    ನಿತ್ಯ ಜೀವನದಲ್ಲಿ  ಸ್ವತಃ ನಮಗೆ ಅಥವಾ ಇನ್ನೊಬ್ಬರಿಗೆ, ನಮ್ಮ ಮನೆಯಲ್ಲಿ ಅಥವಾ ಹೊರಗಡೆ, ಸಣ್ಣ-ಪುಟ್ಟ ನೋವು, ಹೊಡೆತ, ಜಖಂ, ಅವಘಡಗಳು ಆಗುವುದನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಈ ಅವಘಡಗಳು ಸಣ್ಣ ಪುಟ್ಟ ಗಾಯಗಳ ರೂಪದಲ್ಲಿ  ಇರಬಹುದು, ಅಥವಾ ದೊಡ್ಡ ರೀತಿಯ ಜಖಂ, ಸುಟ್ಟ ಗಾಯ, ಬಿಸಿ ನೀರು, ಬಿಸಿ ಗಾಳಿ, ವಿದ್ಯುತ್‌ ಅಥವಾ ರಾಸಾಯನಿಕಗಳು, ಮುರಿತಗಳಿಂದ ಆಗುವ ಗಾಯಗಳು, ಪ್ರಾಣಿಗಳ ಇರಿತ, ಕಡಿತ ಅಥವಾ ವಿಷದಿಂದಲೇ ಆಗಿದ್ದಿರಬಹುದು. ಈ ಎಲ್ಲಾ ಅವಘಡಗಳ ಸಂದರ್ಭಗಳಲ್ಲಿ  ಆಗಬಹುದಾದ ಶಾಶ್ವತ ವೈಕಲ್ಯಗಳು ಅಥವಾ ಮರಣದಂತಹ ಪರಿಣಾಮಗಳನ್ನು ತಡೆಯಲು, ಸಂದರ್ಭಗಳನ್ನು ತಕ್ಷಣವೇ ಸರಿಯಾಗಿ ಹಾಗೂ ಸುಸೂತ್ರವಾಗಿ ನಿಭಾಯಿಸುವುದು ಅತ್ಯವಶ್ಯಕ. ಹೆಚ್ಚಾಗಿ ಮರಣಾಂತಿಕವಾದ ಈ ಎಲ್ಲಾ ಸಂದರ್ಭಗಳಲ್ಲಿ, ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವುದು ಸ್ವಲ್ಪ  ಸಮಯ ತೆಗೆದುಕೊಳ್ಳುತ್ತದೆ. ರೋಗಿ ಘಟನಾ ಸ್ಥಳದಿಂದ ಆಸ್ಪತ್ರೆಗೆ ವರ್ಗಾವಣೆಗೊಳ್ಳುವ ಮಧ್ಯದ ಕಾಲಾವ—ಯಲ್ಲಿ  ಗಾಯಾಳುವಿಗೆ ಒದಗಿಸಬಹುದಾದ ತುರ್ತು ಸೇವೆಯ ಬಗ್ಗೆ, ಅಂದರೆ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರೂ ತರಬೇತಿ ಪಡೆಯಬೇಕಾದುದು, ಅಥವಾ ಎಲ್ಲರಿಗೂ ಅದರ ಬಗ್ಗೆ ಅರಿವಿರಬೇಕಾದುದು ಅತ್ಯವಶ್ಯಕ.

    ಪ್ರಥಮ ಚಿಕಿತ್ಸೆ  ಎಂದರೆ,  ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ ಎಂಬುದಾಗಿ ವ್ಯಾಖ್ಯಾನಿಸಬಹುದು. ಸಾಮಾನ್ಯವಾಗಿ, ಈ ಆರೈಕೆಯನ್ನು ತಜ್ಞರಲ್ಲದ, ಆದರೆ ತರಬೇತಾದ ವೃತ್ತಿಪರ ವ್ಯಕ್ತಿಗಳು ರೋಗಿಗೆ ಅಥವಾ ಗಾಯಾಳಿಗೆ, ಸರಿಯಾದ ವೈದ್ಯಕೀಯ ಚಿಕಿತ್ಸೆ  ದೊರೆಯುವವರೆಗೆ ಒದಗಿಸುತ್ತಾರೆ. ಪ್ರಥಮ ಚಿಕಿತ್ಸೆ  ಎಂಬುದು ಕೆಲವು ಸಂದರ್ಭಗಳಲ್ಲಿ  ಸರಳ ಚಿಕಿತ್ಸೆಗಳ ಸರಣಿಯಾಗಿದ್ದರೆ, ಇನ್ನು ಕೆಲವು ಸಂದರ್ಭಗಳಲ್ಲಿ  ಮಹತ್ವದ ಜೀವರಕ್ಷಕ ತಂತ್ರವಾಗಿರುತ್ತದೆ. ತರಬೇತಾದ ಒಬ್ಬ ವ್ಯಕ್ತಿಯು, ಲಭ್ಯವಿರುವ ಕೆಲವು ಉಪಕರಣಗಳ ಮೂಲಕ ಈ ಚಿಕಿತ್ಸೆಯನ್ನು ರೋಗಿ ಅಥವಾ ಗಾಯಾಳುವಿಗೆ ಒದಗಿಸಿ, ಆ ಅಮೂಲ್ಯ ಜೀವವನ್ನು ರಕ್ಷಿಸಬಲ್ಲ.

    ಪ್ರಥಮ ಚಿಕಿತ್ಸೆಯ ವಿಧಾನವು 1859ರಲ್ಲಿ  ಆರಂಭವಾಯಿತು. ಯುದ್ಧ ಭೂಮಿಯ ಭಯಾನಕತೆಯನ್ನು ಕಂಡು ಹೆನ್ರಿ ಡ್ಯುನಾಂಟ್‌ ಎಂಬವರು ರೆಡ್‌ಕ್ರಾಸ್‌ ಸಂಸ್ಥೆಯನ್ನು ಆರಂಭಿಸಿದಾಗ, ಪ್ರಥಮ ಚಿಕಿತ್ಸೆಯ ಪ್ರಕ್ರಿಯೆಯೂ ಸಹ ಅದರೊಂದಿಗೇ ಆರಂಭಗೊಂಡಿತು. ವೈದ್ಯಕೀಯ ಅರಿವಿನ ಅಭಿವೃದ್ಧಿ ಆದಂತೆಲ್ಲಾ, ಜಗತ್ತಿನ ಅನೇಕ ಕಡೆಗಳಲ್ಲಿ  ಪ್ರಥಮ ಚಿಕಿತ್ಸೆಯ ತರಬೇತಿಯು ದೊರಕುವಂತಾಯಿತು.
    ಪ್ರಥಮ ಚಿಕಿತ್ಸೆ ಯ ಮೂರು  ಪ್ರಮುಖ ಉದ್ಧೇಶಗಳು ಅಂದರೆ:

    1. ಜೀವವನ್ನು ಉಳಿಸುವುದು ಹಾಗೂ ಕಾಪಾಡುವುದು.

    2. ಅವಘಡಕ್ಕೆ ಕಾರಣವಾಗಿರುವ ಪರಿಸ್ಥಿತಿಯಿಂದ ಗಾಯಾಳನ್ನು ಸಂರಕ್ಷಿಸುವುದು ಅಥವಾ ದೂರವಿರಿಸುವುದು, ಆಗಿರುವ ಅವಘಡವು ತೀವ್ರವಾಗದಂತೆ  ತಡೆಯುವುದು, ಅಂದರೆ ಉದಾಹರಣೆಗೆ ಗಾಯವಾಗಿ ತೀವ್ರ ರಕ್ತ ಸ್ರಾವವಾಗುತ್ತಿದ್ದರೆ, ರಕ್ತಸ್ರಾವವನ್ನು ತಡೆಯುವ ಚಿಕಿತ್ಸೆ ನೀಡುವುದು.

    3. ಉಪಶಮನ ಕಾರ್ಯ ಕೈಗೊಳ್ಳುವುದು, ಅಂದರೆ ಗಾಯಗಳಿಗೆ ಬ್ಯಾಂಡೇಜ್‌ ಸುತ್ತುವುದು, ಮೂಳೆ ಮುರಿತವಾಗಿದ್ದರೆ ಆಧಾರವಾಗಿ ಅದಕ್ಕೆ ದಬ್ಬೆ ಕಟ್ಟುವುದು... ಇತ್ಯಾದಿ.

    ಪ್ರಥಮ ಚಿಕಿತ್ಸೆಯ ಪ್ರಮುಖ ಕೌಶಲ್ಯಗಳಿಗೆ ಎಂದು ಹೆಸರು. ಇವು ಜೀವ ರಕ್ಷಕ ತಂತ್ರಗಳಾಗಿದ್ದು, ವ್ಯಕ್ತಿಗೆ ಆರೈಕೆಯನ್ನು ನೀಡುವ ಮೊದಲು, ಕಡಿಮೆ ಗಂಭೀರ ಗಾಯಗಳಾಗಿರುವ ವ್ಯಕ್ತಿಯನ್ನು ಜೀವ ಸಹಿತ ಕಾಪಾಡುವುದು ಇದರ ಉದ್ಧೇಶ. ವಿಶೇಷವಾಗಿ, ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ನಾವು ಹೀಗೆ ಮಾಡಬಹುದು:

    1. ನಾಡಿಬಡಿತವನ್ನು ಪರೀಕ್ಷಿಸಿ, ಒಂದು ವೇಳೆ ರಕ್ತ ಪರಿಚಲನೆ ನಿಂತು ಹೋಗಿದ್ದರೆ, ಹೃದಯದಿಂದ ರಕ್ತವು ಹೊರಹೋಗಲು ಅನುಕೂಲವಾಗುವಂತೆ, ಕೂಡಲೇ ಎದೆಯನ್ನು ದಬ್ಬಿ, ಒಂದು ವೇಳೆ ಆಘಾತಕ್ಕೊಳಗಾದ ವ್ಯಕ್ತಿಯು ಉಸಿರಾಡುತ್ತಿಲ್ಲವಾದರೆ, ತಕ್ಷಣವೇ ಎದೆಯನ್ನು ದಬ್ಬಲು ಆರಂಭಿಸಬೇಕು.

    2. ಶ್ವಾಸನಾಳವನ್ನು ತೆರವುಗೊಳಿಸಿ, ನಾಲಗೆ, ರಕ್ತಸ್ರಾವ, ಲಾಲಾರಸ... ಇತ್ಯಾದಿಗಳಿಂದಾಗಿ ಶ್ವಾಸನಾಳದಲ್ಲಿ  ಅಡಚಣೆ ಉಂಟಾಗಿ, ಉಸಿರುಗಟ್ಟುವುದನ್ನು ತಪ್ಪಿಸಿ. ಬಿದ್ದು ಏಟಾಗಿದ್ದರೆ ಅಥವಾ ರಸ್ತೆ ಅಪಘಾತವಾಗಿದ್ದರೆ, ವ್ಯಕ್ತಿಯ ಕತ್ತಿನ ಮೂಳೆ ಮುರಿದಿಲ್ಲ  ಎಂಬುದನ್ನು ಖಚಿತಪಡಿಸಿಕೊಂಡು, ಶ್ವಾಸನಾಳವನ್ನು ತೆರವುಗೊಳಿಸಲು, ಆತನ ದವಡೆಯನ್ನು ಮೇಲಕ್ಕೆ ಎಳೆಯಿರಿ.

    3. ಸಾಕಷ್ಟು  ಪ್ರಮಾಣದ ಉಸಿರಾಟ ಇದೆಯೇ ಗಮನಿಸಿ. ಅಗತ್ಯವಿದ್ದರೆ,  ಸಂರಕ್ಷಕ ಉಸಿರಾಟವನ್ನು ಒದಗಿಸಿ.

    ಅದೇ ಸಮಯದಲ್ಲಿ , ವೈದ್ಯಕೀಯ ಸೇವೆಯನ್ನು ಪಡೆಯಲು ಹತ್ತಿರದ ಆಸ್ಪತ್ರೆಯಿಂದ ಅಂಬ್ಯುಲೆನ್ಸ್‌ ತರಿಸಲು, ಫೋನ್‌ ಮಾಡುವಂತೆ ಯಾರಲ್ಲಾದರೂ ಹೇಳಿ. ಆಘಾತಗೊಂಡ ವ್ಯಕ್ತಿಯ ನಾಡಿಬಡಿತ, ಉಸಿರಾಟ ಹಾಗೂ ಪ್ರತಿಕ್ರಿಯೆಗಳು ಮತ್ತೆ ಆರಂಭಗೊಂಡರೆ, ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಿ.
    ವಿಶೇಷ ಸಂದರ್ಭಗಳಲ್ಲಿ  ಪ್ರಥಮ
    ಚಿಕಿತ್ಸೆ ಗಾಯಗಳು :

    ಗಾಯಗಳಾದಾಗ ಒತ್ತಡ ಕ್ರಮದ ಮೂಲಕ ರಕ್ತ ಸ್ರಾವವನ್ನು ತಡೆಯಿರಿ. ಆಮೇಲೆಯೂ ರಕ್ತ ಸ್ರಾವ ನಿಲ್ಲದಿದ್ದರೆ, ಗಾಯವನ್ನು ಹೃದಯದ ಮಟ್ಟಕ್ಕಿಂತಲೂ ಎತ್ತರಿಸಿ. ಒಂದು ಸಲ ರಕ್ತ ಸ್ರಾವ ನಿಂತ ಬಳಿಕ, ಗಾಯವನ್ನು ಸೋಪು ಹಾಗೂ ನೀರಿನಲ್ಲಿ  ಅಥವಾ ಬರೀ ನೀರಿನಲ್ಲಿ  ಹದವಾಗಿ ತೊಳೆಯಿರಿ. ಈ ಸಂದರ್ಭದಲ್ಲಿ  ಗಾಯವು ರೋಗಾಣು ಹಾಗೂ ಕೊಳೆಯಿಂದ ಮುಕ್ತವಾಗುವುದು ಆವಶ್ಯಕ. ಶುದ್ಧವಾದ ಬಟ್ಟೆ  ಅಥವಾ ಬ್ಯಾಂಡೇಜ್‌ನಿಂದ ಗಾಯವನ್ನು  ಸುತ್ತಿ, ಆದರೆ ಬಿಗಿಯಾಗಿ ಸುತ್ತಬೇಡಿ, ಮಧ್ಯೆ ರಕ್ತ ಪರಿಚಲನೆಗೆ ಅವಕಾಶವಿರಲಿ.
    ಸುಟ್ಟ ಗಾಯಗಳು :
    ವ್ಯಕ್ತಿಯ ಮೈಮೇಲೆ ಬೆಂಕಿ ಉರಿಯುತ್ತಿದ್ದರೆ ಅದನ್ನು ನಂದಿಸಿ. ಗಾಯಾಳುವನ್ನು ಬೆಂಕಿಯ ಜ್ವಾಲೆಗಳಿರುವಲ್ಲಿಂದ ಅಥವಾ ಬೆಂಕಿಗೆ ಕಾರಣವಾದ ವಸ್ತು ಅಥವಾ ಸ್ಥಳದಿಂದ ಈಚೆಗೆ ತನ್ನಿ. ಸುಟ್ಟ ಗಾಯದ ಉರಿಯನ್ನು ಶಮನಗೊಳಿಸಲು, ಗಾಯದ ಮೇಲೆ ಯಥೇತ್ಛವಾಗಿ ನೀರನ್ನು ಹಾಯಿಸಿ. ಆದರೆ, ಯಾವತ್ತೂ ಮಂಜುಗಡ್ಡೆಯನ್ನು ಉಪಯೋಗಿಸಬಾರದು. ಆ ಮೇಲೆ ಗಾಯಕ್ಕೆ ಸೋಂಕು ಆಗುವುದನ್ನು ತಡೆಯಲು ಹಾಗೂ ನೋವನ್ನು ತಗ್ಗಿಸಲು, ಸುಟ್ಟ ಗಾಯವನ್ನು ಒಣ ಬಟ್ಟೆಯಿಂದ ಸಡಿಲವಾಗಿ ಸುತ್ತಿ. ಈ ಸಂದರ್ಭದಲ್ಲಿ  ಯಾವುದೇ ರೀತಿಯ ಔಷ—ಗಳು ಅಥವಾ ಮನೆ ಮದ್ದನ್ನು ಸುಟ್ಟ ಗಾಯಕ್ಕೆ ಹಚ್ಚಬಾರದು. ಸುಟ್ಟ ಗಾಯದ ಗುಳ್ಳೆಗಳನ್ನು ಒಡೆಯಬಾರದು. ಸುಟ್ಟ ಗಾಯಗಳು ಬಹಳ ಗಂಭೀರ ರೂಪದಲ್ಲಿದ್ದರೆ, ಗಾಯಾಳಿಗೆ ಉಸಿರಾಡಲು ತೊಂದರೆಯಾಗುತ್ತಿದ್ದರೆ, ಆತ ಅಥವಾ ಆಕೆಯನ್ನು ನೆಲದ ಮೇಲೆ ಮಲಗಿಸಿ. ನಂತರ ವ್ಯಕ್ತಿಗೆ ತುರ್ತಾಗಿ ವೈದ್ಯಕೀಯ ಆರೈಕೆಯನ್ನು ಒದಗಿಸಿ.

    ರಾಸಾಯನಿಕಗಳ ಕಾರಣದಿಂದಾಗಿ ಸುಟ್ಟ ಗಾಯಗಳಾಗಿದ್ದರೆ, ಯಥೇತ್ಛವಾಗಿ ನೀರನ್ನು ಹಾಯಿಸಿ, ವ್ಯಕ್ತಿಯ ಮೈ-ಕೈ ಅಥವಾ ಕಣ್ಣಿನಲ್ಲಿರುವ ರಾಸಾಯನಿಕಗಳನ್ನು ನಿವಾರಿಸಿ. ಗಾಯಾಳುವಿನ ಮೈಮೇಲೆ ಇರುವ ರಾಸಾಯನಿಕವಿರುವ ಬಟ್ಟೆಯನ್ನು ತೆಗೆದು ಹಾಕಿ. ರಾಸಾಯನಿಕವು ದೇಹದ ಇತರ ಭಾಗಗಳಿಗೆ ಅಥವಾ ಸ್ವತಃ ನಿಮಗೆ ತಗಲದಂತೆ ಎಚ್ಚರಿಕೆ ವಹಿಸಿ.

    ವಿದ್ಯುತ್‌ ಆಘಾತವಾಗಿದ್ದರೆ, ವಿದ್ಯುತ್‌ ಪ್ರವಾಹವು ನಿಂತು ಹೋಗಿರುವುದು ಖಚಿತವಾಗು ವವರೆಗೂ, ಆಘಾತವಾಗಿರುವ ವ್ಯಕ್ತಿಯ ಹತ್ತಿರ ಹೋಗಬಾರದು. ಆಘಾತವಾಗಿರುವ ವ್ಯಕ್ತಿಯು ಪ್ರಜ್ಞಾಹೀನನಾಗಿದ್ದರೆ, ಆತನ ಉಸಿರಾಟ ಹಾಗೂ ನಾಡಿಬಡಿತವನ್ನು ಪರೀಕ್ಷಿಸಿ. ಬೇರೆ ಯಾವುದಾದರೂ ಗಾಯಗಳಾಗಿವೆಯೇ ಎಂದು ಪರೀಕ್ಷಿಸಿ. ಆತನ ಬೆನ್ನೆಲುಬಿಗೆ ಏಟಾಗಿರುವ ಸಾಧ್ಯತೆಗಳಿರುವುದರಿಂದ, ವ್ಯಕ್ತಿಯನ್ನು ಅತ್ತಿತ್ತ ಅಲುಗಾಡಿಸದಿರಿ. ವಿದ್ಯುತ್‌ ಆಘಾತದಿಂದ ಆದ ಸುಟ್ಟ ಗಾಯವನ್ನು ಒಣ, ಕ್ರಿಮಿಮುಕ್ತ (ಛry, sಠಿಛಿrಜಿlಛಿ ಛrಛಿssಜಿnಜ) ಬಟ್ಟೆಯಿಂದ ಸುತ್ತಿ. ಗಾಯದ ಮೇಲೆ ಮಂಜುಗಡ್ಡೆ  ಇರಿಸಬೇಡಿ. ವ್ಯಕ್ತಿಗೆ ಥಂಡಿಯಾಗದಂತೆ ನೋಡಿಕೊಳ್ಳಿ. ಆ ವ್ಯಕ್ತಿಯ ಮೈಮೇಲೆ ಒಂದು ಕಡೆ ವಿದ್ಯುತ್‌ ಆಘಾತವಾಗಿರುವ ಹಾಗೂ ಮತ್ತೂಂದು ಕಡೆಯಲ್ಲಿ  ದೇಹದಿಂದ ವಿದ್ಯುತ್‌ ಹೊರಬಂದಿರುವ, ಹೀಗೆ ಎರಡು ಗಾಯಗಳಿರುವ ಸಾಧ್ಯತೆಗಳಿವೆ. ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ.
    ಮುರಿತಗಳು
    ತೀವ್ರ ಮೂಳೆ ಮುರಿತವಾಗಿರುವ ಸಂದರ್ಭಗಳಲ್ಲಿ , ಅನಗತ್ಯವಾಗಿ ವ್ಯಕ್ತಿಯನ್ನು ಅತ್ತಿತ್ತ ಅಲುಗಾಡಿಸಬಾರದು. ಮುರಿದಿರುವ ಮೂಳೆಯ ಎರಡೂ ಬದಿಗಳಿಗೆ ಮಡಚಿದ ಪತ್ರಿಕೆ, ಕಾರ್ಡ್‌ಬೋರ್ಡ್‌, ಕರವಸ್ತ್ರŒ ಅಥವಾ ಲೋಹದ ತಂತಿಗಳನ್ನು ಉಪಯೋಗಿಸಿಕೊಂಡು ಆಧಾರ ದಬ್ಬೆಯನ್ನು ಕಟ್ಟಿ ಅಥವಾ ದಬ್ಬೆಯು ಹಾನಿಯಾದ ಕೈಯ ಭಾಗಗಳಿಗೆ ಆಧಾರವನ್ನು ನೀಡುವಂತೆ ತ್ರಿಕೋನಾಕೃತಿಯ ಬ್ಯಾಂಡೇಜ್‌ ಅನ್ನು ಕಟ್ಟಿ. ದಬ್ಬೆಯನ್ನು ತೀರಾ ಬಿಗಿಯಾಗಿರದಂತೆ, ಸುರಕ್ಷಿತವಾಗಿ ಕಟ್ಟಿ.

    ಸಾಕಷ್ಟು  ವಿಶ್ರಾಂತಿ ತೆಗೆದುಕೊಳ್ಳುವುದು, ಮುರಿದ ಜಾಗದಲ್ಲಿ  ಮಂಜುಗಡ್ಡೆ ಇರಿಸುವುದು ಹಾಗೂ ಆ ಭಾಗವನ್ನು ಎತ್ತರಿಸಿ ಇರಿಸುವುದು, ಇವು ಮೂಳೆ ಮುರಿತವಾದಾಗ ಮಾಡಬಹುದಾದ ಪ್ರಮುಖ ಆರೈಕೆಗಳು. ವ್ಯಕ್ತಿಯನ್ನು ಸಾಧ್ಯವಾದಷ್ಟು  ಆರಾಮದಾಯಕ ಸ್ಥಿತಿಯಲ್ಲಿ ಇರಿಸಿ. ನೋವು ಹಾಗೂ ಬಾವನ್ನು ತಗ್ಗಿಸಲು, ಏಟು ಬಿದ್ದಿರುವ ಜಾಗಕ್ಕೆ ಮಂಜುಗಡ್ಡೆಯನ್ನು ಇರಿಸಬೇಕು. ಏಟಾಗಿರುವ ಭಾಗವನ್ನು ಸಾಧ್ಯವಾದಷ್ಟು  ಅತ್ತಿತ್ತ ಅಲುಗಾಡಿಸದೆ ಇರಬೇಕು, ಆ ಭಾಗದ ಕೆಳಗಡೆ ಆಧಾರಕ್ಕೆ ತಲೆದಿಂಬನ್ನು ಇರಿಸಬಹುದು.
    ಉಸಿರುಗಟ್ಟುವಿಕೆ
    ವ್ಯಕ್ತಿಯು ತನ್ನ ಎರಡೂ ಅಂಗೈಗಳಿಂದ ಗಂಟಲಿನ ಭಾಗವನ್ನು ಹಿಡಿದುಕೊಂಡಿದ್ದರೆ, ಆ ವ್ಯಕ್ತಿಯು ಉಸಿರುಗಟ್ಟಿರುವುದನ್ನು ಸೂಚಿಸುತ್ತಿದ್ದಾನೆ ಎಂದು ತಿಳಿದುಕೊಳ್ಳಬೇಕು. ಇದು ಉಸಿರುಗಟ್ಟಿರುವುದನ್ನು ತೋರಿಸುವ ಒಂದು ಸಾಮಾನ್ಯ ಸನ್ನೆ. ವ್ಯಕ್ತಿಯು ಕೆಮ್ಮುತ್ತಿದ್ದರೆ ಅಥವಾ ಮಾತನಾಡುತ್ತಿದ್ದರೆ, ಆತನನ್ನು ಕೆಮ್ಮುತ್ತಾ ಇರಲು ಉತ್ತೇಜಿಸಿ. ವ್ಯಕ್ತಿ ಕೆಮ್ಮುವುದನ್ನು ನಿಲ್ಲಿಸಿದಾಗ, ಆತನ ಶ್ವಾಸನಾಳದ ಅಡಚಣೆಯನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ನೀವು ಆರಂಭಿಸಬಹುದು. ಇದಕ್ಕೆ   ಏಛಿಜಿಞlಜಿcಜ ಞಚnಛಿuvಛಿr, ಅಥವಾ ಹೊಟ್ಟೆಯನ್ನು ಒಳಕ್ಕೆ ತಳ್ಳುವ ಕಾರ್ಯಾಚರಣೆ ಎಂದು ಹೇಳುತ್ತಾರೆ. ಉಸಿರುಗಟ್ಟಿರುವ, ಪ್ರಜ್ಞಾವಸ್ಥೆಯಲ್ಲಿರುವ, ವಯಸ್ಕ ವ್ಯಕ್ತಿಯ ಹಿಂಭಾಗದಲ್ಲಿ  ನಿಂತು, ಆತನ ಎದೆಯ ಸುತ್ತಲೂ ನಿಮ್ಮ  ಕೈಗಳನ್ನು ಸುತ್ತಿಕೊಳ್ಳಿ. ಒಂದು ಕೈಯನ್ನು ಮುಷ್ಟಿ  ಹಿಡಿಯಿರಿ. ಮುಷ್ಟಿಯನ್ನು ಉಸಿರುಗಟ್ಟಿರುವ ವ್ಯಕ್ತಿಯ ಹೊಟ್ಟೆಯ ಹಿಂಭಾಗದಲ್ಲಿ , ಅಂದರೆ ಹೊಕ್ಕುಳು ಹಾಗೂ ಎದೆಗೂಡಿನ ಮಧ್ಯೆ ಭಾಗದಲ್ಲಿ  ಹಿಡಿಯಿರಿ, ಮತ್ತೂಂದು ಕೈಯನ್ನು ಮುಷ್ಟಿಯ ಮೇಲ್ಭಾಗದಲ್ಲಿ  ಇಟ್ಟು, ಕೂಡಲೇ ವ್ಯಕ್ತಿಯ ಹೊಟ್ಟೆಯನ್ನು  ಮೇಲ್ಮುಖವಾಗಿ ತಳ್ಳಿ. ಶ್ವಾಸನಾಳದಲ್ಲಿ  ಅಡಚಣೆ ಉಂಟು ಮಾಡುತ್ತಿರುವ ವಸ್ತು ಅಥವಾ ಅಂಶವು ತೆರವಾಗುವವರೆಗೆ ಅಥವಾ ವ್ಯಕ್ತಿಯು ಪ್ರಜ್ಞಾಹೀನನಾಗುವವರೆಗೆ ನಿರಂತರವಾಗಿ ಹೀಗೆಯೇ ಮಾಡುತ್ತಿರಬೇಕು. ಇದಕ್ಕೆ ವ್ಯಕ್ತಿಯು ಪ್ರತಿಕ್ರಿಯಿಸದಿದ್ದರೆ, “ಇಅಆs’’ ಅನ್ನು ಅನುಸರಿಸಬೇಕು.
    ವಿಷಸೇವನೆ

    ವ್ಯಕ್ತಿಯ ಉಸಿರಾಟ ಹಾಗೂ ರಕ್ತ ಪರಿಚಲನೆಗಳು ಸರಿಯಾಗಿವೆ ಎಂದು ಗೊತ್ತುಪಡಿಸಿಕೊಂಡು, ವಿಷ ಸೇವಿಸಿದ ವ್ಯಕ್ತಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕು. ವ್ಯಕ್ತಿ ಸೇವಿಸಿರುವ ವಿಷದ ಪಾತ್ರೆ, ಬಾಟಲಿ ಇತ್ಯಾದಿಗಳೇನಾದರೂ ಸಿಕ್ಕಿದ್ದರೆ, ಅದನ್ನೂ ಸಹ ಜೊತೆಗೇ ಒಯ್ಯಬೇಕು. ವಿಷದ ಹಾವು ಹಾಗೂ ಇನ್ನಿತರ ಪ್ರಾಣಿಗಳು ಕಚ್ಚಿದಾಗಲೂ ಸಹ ಇದೇ ಕ್ರಮವನ್ನು ಅನುಸರಿಸಬೇಕು.
    ವ್ಯಕ್ತಿಯನ್ನು ತುರ್ತಾಗಿ ಆಸ್ಪತ್ರೆಗೆ
    ಸಾಗಿಸಬೇಕಾದ ಸಂದರ್ಭಗಳು

     ಗಾಯಾಳು ಪ್ರತಿಕ್ರಿಯಿಸದಿದ್ದರೆ,

     ತಲೆ, ಕುತ್ತಿಗೆ ಹಾಗೂ ಬೆನ್ನಿನಲ್ಲಿ  ತೀವ್ರ ಗಾಯಗಳಾಗಿದ್ದರೆ,

     ಉಸಿರಾಡಲು ಕಷ್ಟವಾಗುತ್ತಿದ್ದರೆ,

     ಗಾಯವಾದ ಭಾಗವನ್ನು ಉಪಯೋಗಿಸಲು ನೋವಾಗುತ್ತಿದ್ದರೆ ಅಥವಾ ಅತ್ತಿತ್ತ ಚಲಿಸುವಾಗ ನೋವು ಇದ್ದರೆ,

     ತೀವ್ರ ಮೂಳೆ ಮುರಿತದ ರೀತಿಯ ಗಾಯವಾಗಿದ್ದರೆ.
    ಪ್ರಥಮ ಚಿಕಿತ್ಸೆಯ ಸರ್ಟಿಫಿಕೇಟ್‌ ಕೋರ್ಸ್‌ನಲ್ಲಿ  ಭಾಗವಹಿಸಿ, ಪ್ರಥಮ ಚಿಕಿತ್ಸಾ ತರಬೇತಿಯನ್ನು ಪಡೆಯಬಹುದು. ವಿಧಾನ ಹಾಗೂ ನಿಯಮಾವಳಿಗಳು ಬದಲಾಗುತ್ತಿರುವ ಕಾರಣದಿಂದಾಗಿ, ಪ್ರಸಕ್ತ ಸಂದರ್ಭಗಳಿಗೆ ಅನುಗುಣವಾಗುವಂತೆ, ಕೌಶಲಗಳನ್ನು ಕಾಪಾಡಿಕೊಳ್ಳಲು ಪುನಃಶ್ಚೇತನಾ ಕೋರ್ಸ್‌ಗಳಿಗೆ ಸೇರುವುದು ಅಥವಾ ಮರು ತರಬೇತಿಯನ್ನು ಪಡೆಯುವುದು ಆವಶ್ಯಕ. ರೆಡ್‌ಕ್ರಾಸ್‌ ಹಾಗೂ ಸೈಂಟ್‌ ಜಾನ್ಸ್‌ ಅಂಬುಲೆನ್ಸ್‌  ಸಂಸ್ಥೆಯ ಮೂಲಕ ಪ್ರಥಮ ಚಿಕಿತ್ಸಾ ತರಬೇತಿಯನ್ನು ಪಡೆಯಬಹುದು ಅಥವಾ ಕೆಲವು ವಾಣಿಜ್ಯ ಸಂಸ್ಥೆಗಳು ಶುಲ್ಕವನ್ನು ಪಡೆದು, ಜನರಿಗೆ ಈ ಪ್ರಥಮ ಚಿಕಿತ್ಸಾ ತರಬೇತಿಯನ್ನು ನೀಡುತ್ತವೆ.

    ಪ್ರಥಮ ಚಿಕಿತ್ಸೆ  ಎಂಬ ಈ ಕೌಶಲವು ಯಾರಿಗಾದರೂ, ಎಲ್ಲಿಯಾದರೂ ಅಗತ್ಯ ಬೀಳಬಹುದು. ಸರಿಯಾಗಿ ಉಪಯೋಗಿಸಿಕೊಂಡಲ್ಲಿ , ಇದರಿಂದ ಮನುಷ್ಯ ಜೀವವನ್ನು ರಕ್ಷಿಸಬಹುದು. ಹಾಗಾಗಿ, ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸಾ ತರಬೇತಿಯನ್ನು ಪಡೆಯಬೇಕು ಎನ್ನುವುದು ನಮ್ಮ ಸಲಹೆ.

ಯೋನಿಯ ಅಕ್ಕಪಕ್ಕದ ಸ್ನಾಯುಗಳು II Pelvic Floor and Physiotherapy

  • ಡಾ| ಭಾಮಿನೀ ಕೆ. ರಾವ್‌ಅಸೋಸಿಯೇಟ್‌ ಪ್ರೊಫೆಸರ್‌,ಫಿಸಿಯೋ ತೆರಪಿ ವಿಭಾಗ. 
  • ಶುಭಾ ಆರ್‌.  ನಾಯಕ್‌,
    ಅಸಿಸ್ಟಂಟ್‌ ಲೆಕ್ಚರರ್‌,
    ಫಿಸಿಯೋ ತೆರಪಿ  ವಿಭಾಗ.

    ಸಹನಾ ಎಸ್‌.,
    ಸೀನಿಯರ್‌ ರಿಸರ್ಚ್‌ ಫೆಲೋ,
    ಫಿಸಿಯೋ ತೆರಪಿ ವಿಭಾಗ,
    ಮಣಿಪಾಲ ವಿಶ್ವವಿದ್ಯಾನಿಲಯ, ಮಣಿಪಾಲ.

    ಯೋನಿಯ ಅಕ್ಕಪಕ್ಕದ ಸ್ನಾಯುಗಳು ಮಹಿಳೆಯರಲ್ಲಿ ಮುಖ್ಯವಾದ ಪಾತ್ರವನ್ನು  ವಹಿಸುತ್ತವೆೆ. ಈ ಮಾಂಸಖಂಡಗಳು ಜನನಾಂಗದ ಹತ್ತಿರವಿರುವ ಇತರ ಅಂಗಗಳಿಗೆ (ಮೂತ್ರಕೋಶ, ಗರ್ಭಕೋಶ , ಗುದದ್ವಾರ) ಆಧಾರವನ್ನು ನೀಡುತ್ತವೆ. ಮೂತ್ರ ಮತ್ತು ಮಲ ವಿಸರ್ಜಿಸುವಾಗ ಬಿಟ್ಟು ಉಳಿದೆಲ್ಲ  ಸಮಯಗಳಲ್ಲಿ ಈ ಸ್ನಾಯುಗಳು ಸಕ್ರಿಯವಾಗಿ ಕೆಲಸ ಮಾಡುತ್ತಿರುತ್ತವೆ.

    ಹೆರಿಗೆಯ ಸಮಯದಲ್ಲಿ  ಮಗುವನ್ನು  ಗರ್ಭಕೋಶದಿಂದ ಹೊರದೂಡುವಲ್ಲಿ, ಈ ಸ್ನಾಯುಗಳ ಪಾತ್ರ  ಬಹಳ ಮುಖ್ಯವಾದದ್ದು . ಈ ಸ್ನಾಯುಗಳಿಗೆ ಯಾವುದೇ ಹಾನಿ ಅಥವಾ  ದುರ್ಬಲತೆ ಇದ್ದರೆ, ಅದು ಪೆಲ್ವಿಕ್‌ ತಳದ ನ್ಯೂನತೆ (ಪೆಲ್ವಿಕ್‌ ಫ್ಲೋರ್‌ ಡಿಸ್‌ಫ‌ಂಕ್ಷನ್‌)ಗೆ ಕಾರಣವಾಗುತ್ತದೆ.

    ಪೆಲ್ವಿಕ್‌ ಫ್ಲೋರ್‌  ಡಿಸ್‌ಫ‌ಂಕ್ಷನ್‌ ಮುಖ್ಯವಾಗಿ ಮಹಿಳೆಯರಲ್ಲಿ  ಕಂಡು ಬರುವ ಒಂದು ಸಾಮಾನ್ಯ ತೊಂದರೆ. ವಿಶ್ವದೆಲ್ಲೆಡೆ ಶೇಕಡಾ 25 ರಿಂದ 45 ಮಹಿಳೆಯರು ಈ ತೊಂದರೆಯಿಂದ ಬಳಲುತ್ತಿದ್ದಾರೆ. ಇದು ಎಲ್ಲಾ ವಯಸ್ಸಿನ ಮಹಿಳೆಯರಲ್ಲಿ ಕನಿಷ್ಠ 1/3 ಮಂದಿಯಲ್ಲಿ ಜೀವನದ ಗುಣಮಟ್ಟದ  ಸ್ಥೆ  çರ್ಯವನ್ನು  ಕುಗ್ಗಿಸುತ್ತದೆ. ಪೆಲ್ವಿಕ್‌ ಫ್ಲೋರ್‌ ಡಿಸ್‌ಫ‌ಂಕ್ಷನ್‌ ವಿವಿಧ ತರಹದ ತೊಂದರೆಗಳನ್ನು ಒಳಗೊಂಡಿದೆ. ಅವು  ಯಾವುವೆಂದರೆ: ಅಕಸ್ಮಿಕ ಮೂತ್ರಸೋರಿಕೆ ಅಂದರೆ ಮೂತ್ರ ವಿಸರ್ಜನೆಯ ಮೇಲೆ ನಿಯಂತ್ರಣ ಇಲ್ಲದಿರುವುದು; ಆಕ್ಮಸಿಕ ಮಲ ವಿಸರ್ಜನೆ ಅಂದರೆ ಮಲ ವಿಸರ್ಜನೆಯ ಮೇಲೆ ನಿಯಂತ್ರಣ ಇಲ್ಲದಿರುವುದು; ಗರ್ಭಕೋಶ, ಮೂತ್ರನಾಳ , ಗುದನಾಳಗಳ ಜಾರುವಿಕೆ ಮತ್ತು ಇತರ ಜನನಾಂಗದ ತೊಂದರೆಗಳು.
    ಪೆಲ್ವಿಕ್‌ ಫ್ಲೋರ್‌ ಡಿಸ್‌ಫ‌ಂಕ್ಷನ್‌ಗೆ
    ಪೂರಕವಾಗುವ ಅಂಶಗಳು ಹೀಗಿವೆ :


    1. ಯೋನಿದ್ವಾರದ ಮೂಲಕ ಸಹಜ ಹೆರಿಗೆ.

    2. 4 ರಿಂದ ಹೆಚ್ಚು ಮಕ್ಕ ಳು.

    3. ಬೊಜ್ಜು / ಸ್ಥೂಲ ಕಾಯ.

    4. ಮಲ ಬದ್ಧತೆ.

    5. ದೀರ್ಘ‌ಕಾಲೀನ ಶ್ವಾಸಕೋಶದ
     ಕಾಯಿಲೆಗಳು.

    6.ಉಸಿರು ಹಿಡಿದು ಕೊಳ್ಳುವ ಚಟುವಟಿಕೆ,
     ಮಲ ವಿಸರ್ಜಿಸುವಾಗ ಬಲ
     ಹಾಕುವುದು/ ಬಿಕ್ಕುವುದು.
    ಮೂತ್ರ ಸೋರಿಕೆಯ (ಇನ್‌
    ಕಾಂಟೆನೆನ್ಸ್‌ ) ವಿಧಗಳು  ಹೀಗಿವೆ:

    1. ಅನಿಯಂತ್ರಿಕ ಮೂತ್ರ ಸೋರಿಕೆಯ ಜೊತೆ ಮೂತ್ರ ಮಾಡುವ ಅನಿಸಿಕೆ ಬಂದಾಕ್ಷಣ ಮೂತ್ರ ಮಾಡಲೇಬೇಕಾಗುವ ನಿಯಂತ್ರಣ ಇಲ್ಲದಿರುವಿಕೆ-

    2. ಒತ್ತಡದ ಸಮಯದಲ್ಲಿ, ಅಂದರೆ ಕಿಬ್ಬೊಟ್ಟೆಯ ಒಳಗಿನ ಒತ್ತಡ ಹೆಚ್ಚಾಗುವ ಚಟುವಟಿಕೆಗಳಾದ ಕೆಮ್ಮುವಾಗ , ಸೀನುವಾಗ, ಭಾರ ಎತ್ತುವಾಗ ಅನಿಯಂತ್ರಿತ ಮೂತ್ರ ಸೋರುವಿಕೆ - ಸ್ಟ್ರೆಸ್‌ ಇನ್‌ಕಾಂಟೆನೆನ್ಸ್‌ .

    3. ಮೂತ್ರ  ವಿಸರ್ಜನೆಯ ವೇಳೆ ಹೊರತುಪಡಿಸಿ ಇತರ ಸಂದರ್ಭಗಳಲ್ಲಿ ಮೂತ್ರ ಜಿನುಗುವಿಕೆ.

    4. ನಿದ್ರೆಯಲ್ಲಿ ಅನಿಯಂತ್ರಿತ ಮೂತ್ರ ಸೋರುವಿಕೆ -ನಾಕ್ಚರ್ನಲ್‌ ಎನ್ಯೂರೆಸಿಸ್‌ .

    5. ಹುಡುಗಿಯರು ಜೋರಾಗಿ ನಗುವಾಗ ಅನಿಯಂತ್ರಿತ ಮೂತ್ರ ಸೋರುವಿಕೆ-ಗಿಗಲ್‌ ಇನ್‌ಕಾಂಟಿನೆಸ್‌Õ 

    6. ಸಂಭೋಗದ ಸಮಯದಲ್ಲಿ  ಅಥವಾ ನಂತರ ಜೋರಾಗಿ ಮೂತ್ರ ಮಾಡುವ ಅನಿಸಿಕೆ -ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ ಇನ್‌ ಕಾಂಟಿನೆನ್ಸ್‌ .
    ಜಾರುವಿಕೆ / ಪ್ರೊಲ್ಯಾಪ್ಸ್‌:

    1.ಸಿಸ್ಟೋಸೀಲ್‌ -ಮೂತ್ರ ಕೋಶ ಜಾರುವಿಕೆ.

    2.ಯುರೆತ್ರೋಸೀಲ್‌  -ಮೂತ್ರ ವಿಸರ್ಜನಾ ನಾಳದ ಜಾರುವಿಕೆ.

    3.ಸಿಸ್ಟೋಯುರೆತ್ರೋಸೀಲ್‌  - ಮೂತ್ರಕೋಶ ಮತ್ತು ಮೂತ್ರ ವಿಸರ್ಜನಾ ನಾಳಗಳ‌ ಜಾರುವಿಕೆ

    4. ರೆಕ್ಟೊಸೀಲ್‌- ಗುದನಾಳದ  ಜಾರುವಿಕೆ.

    5. ಗರ್ಭಕೋಶದ ಜಾರುವಿಕೆ -ಇದರಲ್ಲಿ  ವಿವಿಧ ಹಂತಗಳಿವೆ.

    (1) 1sಠಿ ಡಿಗ್ರಿ -ಗರ್ಭಕೋಶದ ಕತ್ತು / ಸರ್ವಿಕ್ಸ್‌  ಯೋನಿಯ ಒಳಗೇ ಇರುತ್ತದೆ.
    (2)2nಛ ಡಿಗ್ರಿ -ಗರ್ಭಕೋಶದ ಕತ್ತು / ಸರ್ವಿ ಕ್ಸ್‌  ಪೆರಿನಿಯಂನಲ್ಲಿ  (ಟಛಿrಜಿnಜಿuಞ) ಕಾಣಿಸಿಕೊಳ್ಳುತ್ತದೆ, ಅಥವಾ ಬಲ ಹಾಕುವಾಗ ಹೊರಗೆ ಬರುತ್ತದೆ.

    (3)3rಛ ಡಿಗ್ರಿ -ಗರ್ಭಕೋಶ ಸಂಪೂರ್ಣವಾಗಿ ದೇಹದ ಹೊರಗೆ ಕಾಣಿಸಿಕೊಳ್ಳುತ್ತದೆ.
    ಫಿಸಿಯೋತೆರಪಿ ಚಿಕಿತ್ಸೆ

    1. ಜನನಾಂಗದ ಅಕ್ಕಪಕ್ಕದ ಸ್ನಾಯುಗಳ ವ್ಯಾಯಾಮ.

    2.ಬಯೋಫೀಡ್‌ ಬ್ಯಾಕ್‌

    3.ನರ-ಸ್ನಾಯುಗಳ ಇಲೆಕ್ಟ್ರಿ ಕಲ್‌ ಸ್ಟಿಮುಲೇಶನ್‌.

    4. ಜೀವನ ಶೈಲಿ ಬದಲಾವಣೆ.

    5, ದಿನನಿತ್ಯ ಆಹಾರ ಮತ್ತು ದ್ರವ್ಯ (ಉದಾ: ನೀರು/ಹಾಲು/ಹಣ್ಣಿ¡ನರಸ)

    ಯೋನಿಯ ಅಕ್ಕಪಕ್ಕದ ಸ್ನಾಯುಗಳ
    ವ್ಯಾಯಾಮ:

    ಇದರಲ್ಲಿ  ಯೋನಿಯ ಅಕ್ಕಪಕ್ಕದ ಸ್ನಾಯುಗಳನ್ನು  ಬಿಗಿ ಹಿಡಿಯುವುದು ಮತ್ತು  ಬಿಡುವುದನ್ನು  ಮಾಡಲಾಗುತ್ತದೆ. ಈ ವ್ಯಾಯಾಮವನ್ನು  ಯಾವುದೇ ಭಂಗಿಯಲ್ಲಿ ಮಾಡಬಹುದು.
    ಉದಾಹರಣೆ: ಮರದ ಕುರ್ಚಿಯ ಮೇಲೆ ಕುಳಿತುಕೊಂಡು, ಮುಂದಕ್ಕೆ ಭಾಗಿ, ಮಂಡಿಯ ಮೇಲೆ ಮುಂಗೈಗಳನ್ನು ಆಧಾರವಾಗಿ ಇರಿಸಿ.

    ತೊಡೆಗಳನ್ನು  ಮತ್ತು ಪಾದಗಳನ್ನು  ಸ್ವಲ್ಪ ದೂರದಲ್ಲಿ ಇರಿಸುವುದು.  ಸ್ನಾಯು ಗಟ್ಟಿ ಮಾಡುವಿಕೆಯನ್ನು  ವೇಗವಾಗಿ ಅಥವಾ ನಿಧಾನವಾಗಿ ಮಾಡಬಹುದು. ದಿನದಲ್ಲಿ ಆಗ್ಗಾಗೆ  ಈ ಗಟ್ಟಿ ಮಾಡುವಿಕೆಯನ್ನು  ಮಾಡಬಹುದು. ಪ್ರತಿ ಸಲ ಒಂದು ಗಟ್ಟಿಮಾಡುವಿಕೆಯನ್ನು    ಎಷ್ಟು ಕಾಲ ಹಿಡಿಯಲು ಸಾಧ್ಯವಿದೆಯೋ ಅಷ್ಟು ಹಿಡಿದು, ನಂತರ 3-4 ಬಾರಿ ವೇಗವಾಗಿ ಗಟ್ಟಿ ಮಾಡುವಿಕೆಯನ್ನು  ಮಾಡಬೇಕು. ಈ ವ್ಯಾಯಾಮವನ್ನು  ಕಲಿತ ಮೇಲೆ ಅದನ್ನು  ವಿವಿಧ ಭಂಗಿಗಳಲ್ಲಿ  ಮಾಡಬೇಕು  ಮತ್ತು ಇನ್‌ಕಾಂಟಿನೆನ್ಸ್‌ಗೆ ಕಾರಣವಾದ ಚಟುವಟಿಕೆಗಳಲ್ಲಿ  ಮಾಡಬೇಕು. 

    ಫಿಸಿಯೋತೆರಪಿ ತಜ್ಞರ ಮೇಲ್ವಿಚಾರಣೆಯಲ್ಲಿ  ಮಾಡುವಂತಹ ಚಿಕಿತ್ಸೆ ಹೀಗಿವೆ :
    ಬಯೋಫೀಡ್‌ಬ್ಯಾಕ್‌ :

    ಇದು ಗಟ್ಟಿ ಮಾಡುವಿಕೆಯ  ಗುಣಮಟ್ಟವನ್ನು  ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಮೌಖೀಕ ಪ್ರತಿಕ್ರಿಯೆಯು ಒಂದು ಸರಳವಾದ ಬಯೋಫೀಡ್‌ಬ್ಯಾಕ್‌. ಬೆರಳು ತಲುಪಿಸಿ ನಡೆಸಲಾಗುವ (ಡಿಜಿಟಲ್‌) ಪರೀಕ್ಷೆಯ ಸಮಯದಲ್ಲಿ ವಿವಿಧ ತರಹದ ಉಪಕರಣಗಳನ್ನು  ಮ್ಯಾನೋಮೀಟರ್‌ 
    ಎಲೆಕ್ಟ್ರೋಮಯೋಗ್ರಫಿ ಪೆರಿನಿಯೋಮೀಟರ್‌ ... ಇತ್ಯಾದಿಗಳನ್ನು ಬಯೋಫೀಡ್‌ ಬ್ಯಾಕ್‌ ಆಗಿ ಉಪಯೋಗಿಸಬಹುದು.
    ಪೆರಿನಿಯೋಮೀಟರ್‌ -ಇದರಲ್ಲಿ ಕುಗ್ಗಿಸಬಹುದಾದ ಗಾಳಿ ತುಂಬಿದ ರಬ್ಬರ್‌ ಭಾಗವನ್ನು  ಯೋನಿಯೊಳಗೆ ಇರಿಸಲಾಗುವುದು. ಈ ರಬ್ಬರ್‌ ಭಾಗವನ್ನು ರಬ್ಬರ್‌ ಟ್ಯೂಬಿನ ಮೂಲಕ ಮ್ಯಾನೋಮೀಟರ್‌ಗೆ ಜೋಡಿಸಲಾಗುವುದು. ಇದು ಯೋನಿಯ ಅಕ್ಕಪಕ್ಕದ ಸ್ನಾಯುಗಳ ಬಲ ಎಷ್ಟು  ಇದೆ  ಎಂದು ತೋರಿಸುತ್ತದೆ.
    ನರ ಸ್ನಾಯುಗಳ  ಇಲೆಕ್ಟ್ರಿಕಲ್‌ ಸ್ಟಿಮುಲೇಶನ್‌ (ಫಿಸಿಯೋತೆರಪಿಯ ಉಪಕರಣ) :
    ವಿದ್ಯುತ್ತಿನಿಂದ ಉಂಟಾಗುವ ಪ್ರಚೋದನೆಯಿಂದ ಯೋನಿಯ ಅಕ್ಕಪಕ್ಕದ ಸ್ನಾಯುಗಳ ಶಕ್ತಿ ಮತ್ತು ಕಾರ್ಯಕ್ಷಮತೆಗಳನ್ನು  ಉತ್ತಮ ಗೊಳಿಸಬಹುದು. ಇದು ದುರ್ಬಲ ಸ್ನಾಯುಗಳಿಗೆ ಉಪಯುಕ್ತ. ಯೋನಿ ವಿದ್ಯುದ್ವಾರಗಳನ್ನು  (ವೆಜೈನಲ್‌ ಇಲೆಕ್ಟ್ರೋಡ್‌) ಯೋನಿಗೆ ಅಳವಡಿಸಿ ಇದಕ್ಕಾಗಿ ಬಳಸಲಾಗುತ್ತದೆ. ಈ  ಚಿಕಿತ್ಸೆಯನ್ನು 20 ನಿಮಿಷಗಳವರೆಗೆ  ಕೊಡಬಹುದು. ಇದನ್ನು  ಪ್ರತಿದಿನ ಅಥವಾ ದಿನಕ್ಕೆ ಎರಡು  ಬಾರಿ ನೀಡಲಾಗುವುದು.

    ಯೋನಿ ತೂಕದ ಕೋನ್ಸ್‌ಗಳು 

    ಇದು 5 ರಿಂದ 9ರ ತನಕ ಸಣ್ಣದರಿಂದ ದೊಡ್ಡ ತೂಕದ ಕೋನ್ಸ್‌ ಗಳ ಸರಣಿಯನ್ನು  ಒಳಗೊಂಡಿದ್ದು, 10 ರಿಂದ 100 ಗ್ರಾಂ ತನಕದ ತೂಕವನ್ನು  ಹೊಂದಿರುತ್ತವೆೆ. ಈ ಕೋನ್ಸ್‌ನು° ಯೋನಿಯೊಳಗೆ   ಅಳವಡಿಸಲಾಗುತ್ತದೆ. ಈ ಕೋನ್ಸ್‌ನು° ಸಾಧ್ಯವಾದಷ್ಟು ಕಾಲ ಯೋನಿಯ ಒಳಗೆ ಉಳಿಸಿಕೊಳ್ಳಬೇಕು.
    ಜೀವನ ಶೈಲಿಯಲ್ಲಿ  ಬದಲಾವಣೆ

    1. ಮಲ ಬದ್ಧತೆಗೆ ಚಿಕಿತ್ಸೆ  ಮತ್ತು ಮಲ ವಿಸರ್ಜಿಸುವಾಗ ಬಲವನ್ನು  (ಬಿಕ್ಕುವುದು) ಹಾಕಬಾರದೆಂಬ ಸಲಹೆ.

    2. ಸಮತೋಲನದ ಆಹಾರ
    ಮತ್ತು  ಆರೋಗ್ಯಕರವಾದ ತೂಕದ ನಿರ್ವಹಣೆ.

    3. ಪೆಲ್ವಿಕ್‌ ಫ್ಲೋರ್‌ ಡಿಸ್‌ಫ‌ಂಕ್ಷನ್‌ಗೆ ಕಾರಣವಾದ ಚಟುವಟಿಕೆಗಳನ್ನು  ಮಾಡುವ ರೀತಿಯಲ್ಲಿ ಬದಲಾವಣೆ.
    ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸ್ತ್ರೀರೋಗ ತಜ್ಞರು  ಅಥವಾ ವಿಮೆನ್ಸ್‌ ಹೆಲ್ತ್‌ ಫಿಸಿಯೋತೆರಪಿ ತಜ್ಞರನ್ನು ಸಂಪರ್ಕಿಸಿ.

ಸೋಮವಾರ, ಜೂನ್ 25, 2012

ಸಿಗರೇಟು ಸೇದುವಿಕೆ ಹಾಗೂ ಕ್ಯಾನ್ಸರ್‌

  • ಡಾ| ಕೆ. ಕಮಲಾಕ್ಷ ಶೆಣೈ ರೇಡಿಯೋತೆರಪಿ ಮತ್ತು ಆಂಕಾಲಜಿ ವಿಭಾಗ
  •  
    ವರ್ಷದಲ್ಲಿ  ಸಂಭವಿಸುವ ಸುಮಾರು 30 % ನಷ್ಟು   ಎಲ್ಲಾ ಕ್ಯಾನ್ಸರ್‌ ಮೂಲದ ಮರಣಗಳಿಗೆ ಕಾರಣವಾಗಿರುವುದು ಧೂಮಪಾನ. ಧೂಮಪಾನವನ್ನು  ತ್ಯಜಿಸುವುದೇ  ಕ್ಯಾನ್ಸರ್‌ ಮೂಲದ ಮರಣಗಳನ್ನು  ಮುಂದೂಡಲು ಇರುವ  ಎಕೈಕ  ಉಪಾಯವಾಗಿದೆ. ಧೂಮಪಾನದಿಂದಾಗಿ ಶ್ವಾಸಕೋಶದ ದೀರ್ಘ‌ಕಾಲಿಕ ಕಾಯಿಲೆಗಳು ( ಎಂಫೈಸಿಮಾ  ಹಾಗೂ ಶ್ವಾಸಕೋಶದ ಉರಿಯೂತ), ಹೃದಯದ ರಕ್ತನಾಳಗಳ ಕಾಯಿಲೆ, ಲಕ್ವ,  ಹಾಗೂ ಕಣ್ಣಿನ ಪೊರೆ... ಇತ್ಯಾದಿ ಕಾಯಿಲೆಗಳು ಬಾಧಿಸುತ್ತವೆ. ಗರ್ಭಿಣಿಯರು ಧೂಮಪಾನ ಮಾಡುವುದರಿಂದ, ಕಡಿಮೆ ತೂಕ ಇರುವ ಮಗು ಜನಿಸಬಹುದು, ನವಜಾತ ಶಿಶುವಿನಲ್ಲಿ  ಅಕಸ್ಮತ್ತಾಗಿ ಮರಣದ ಲಕ್ಷಣಗಳು ( ಇನಾ#éಂಟ್‌ ಡೆತ್‌ ಸಿಂಡ್ರೋಮ್‌ ) ಹಾಗೂ ಜಡವಾಗಿರುವ  ಮಗುವು  ಜನಿಸುವುದು... ಇತ್ಯಾದಿ ಅನೇಕ ರೀತಿಯ ತೊಂದರೆಗಳು‌ ಕಾಣಿಸಿಕೊಳ್ಳಬಹುದು.

    ಧೂಮಪಾನದಿಂದಾಗಿ ಶ್ವಾಸ ಕೋಶದ ಕ್ಯಾನ್ಸರ್‌  ಅಲ್ಲದೆ, ಧೂಮ ಸೇದುವಿಕೆಗೆ ಸಂಬಂಧಿಸಿದ ಇನ್ನಿತರ ಕ್ಯಾನ್ಸರ್‌ಗಳಾದ ಗಂಟಲು ಧ್ವನಿಪೆಟ್ಟಿಗೆ, ಗಂಟಲಿನ ಕುಳಿ ಹಾಗೂ ಮೂತ್ರಚೀಲದ ಕ್ಯಾನ್ಸರ್‌ಗಳು ಕಾಣಿಸಿಕೊಳ್ಳುತ್ತವೆ.ಇಷ್ಟು  ಮಾತ್ರವಲ್ಲದೆ ಧೂಪಪಾನದಿಂದಾಗಿ, ಮೂತ್ರಪಿಂಡ, ಮೇದೋಜೀರಕ ಗ್ರಂಥಿ, ಗರ್ಭಕೋಶದ ಕತ್ತು ಹಾಗೂ ಹೊಟ್ಟೆಯ ಕ್ಯಾನ್ಸರ್‌ಗಳೂ ಸಹ ಬಾಧಿಸಬಹುದು. ಇವುಗಳ ಜೊತೆಗೆ ತೀವ್ರ ರಕ್ತದ ಕ್ಯಾನ್ಸರ್‌ (ಅಕ್ಯೂಟ್‌ ಮೈಲಾಯಿಡ್‌ ಲ್ಯುಕೇಮಿಯಾ) ಸಹ ಬಾಧಿಸುವ ಸಾಧ್ಯತೆಗಳಿವೆ.
    ಧೂಮಪಾನವನ್ನು  ಬಿಟ್ಟು ಬಿಡುವುದರಿಂದ, ಮೇಲೆ ಹೇಳಿದ  ಕ್ಯಾನ್ಸರ್‌ ಕಾಯಿಲೆಗಳ ಅಪಾಯಗಳ ಸಾಧ್ಯತೆ ಬಹಳ ಮಟ್ಟಿಗೆ  ಕಡಿಮೆಯಾಗುತ್ತದೆ. ಮಾತ್ರವಲ್ಲ , ಬೆಳೆಯುತ್ತಿರುವ ಮಗುವಿನ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳೂ ಸಹ ಬಹುಮಟ್ಟಿಗೆ ಕಡಿಮೆಯಾಗುತ್ತವೆ. ಧೂಮಪಾನ ಮಾಡುತ್ತಿರುವ ಪುರುಷ  ಅಥವಾ  ಮಹಿಳೆ - ಅವರು ಯಾವುದೇ ವಯಸ್ಸಿನವರಾಗಿದ್ದರೂ  ಸಹ - ಅವರು ಧೂಮಪಾನವನ್ನು  ಬಿಟ್ಟು  ಬಿಟ್ಟರೆ, ಅದರ ಆರೋಗ್ಯಕರ  ಪ್ರಯೋಜನಗಳು  ಅವರಿಗೆ ಆ ಕೂಡಲೇ ದೊರೆಯುತ್ತವೆ. ಧೂಮಪಾನವನ್ನು  ಬಿಟ್ಟು  ಬಿಡುವುದರಿಂದ, ಶ್ವಾಸಕೋಶ ಹಾಗೂ ಇತರ ಕ್ಯಾನ್ಸರ್‌ಗಳ ಅಪಾಯ, ಹೃದಯಾಘಾತದ ಅಪಾಯ, ಲಕ್ವಾ ಆಗಬಹುದಾದ  ಆಪಾಯ, ಶ್ವಾಸಕೋಶದ ದೀರ್ಘ‌ಕಾಲಿಕ  ಕಾಯಿಲೆಗಳುಂಟಾಗುವ ಅಪಾಯಗಳು... ಇತ್ಯಾದಿ ಕಡಿಮೆಯಾಗುತ್ತವೆ. ವ್ಯಕ್ತಿಯು  ಎಷ್ಟು ಬೇಗ  ಧೂಮಪಾನವನ್ನು  ಬಿಟ್ಟು ಬಿಡುತ್ತಾನೋ, ಅವನಿಗೆ ಅಷ್ಟು ಉಪಯುಕ್ತ, ಆರೋಗ್ಯಕರ  ಪ್ರಯೋಜನಗಳು ದೊರಕುತ್ತವೆ. ಸಂಶೋಧನೆಗಳು ಹೇಳುವ ಉದಾಹರಣೆಗಳ ಪ್ರಕಾರ, ಈಗಲೂ ಧೂಮಪಾನವನ್ನು  ಮುಂದುವರಿಸಿರುವವರಿಗಿಂತಲೂ, ತಮ್ಮ 50ನೇ ವಯಸ್ಸಿಗಿಂತ  ಮೊದಲು ಧೂಮಪಾನವನ್ನು  ಬಿಟ್ಟವರಿಗೆ, ಮುಂದಿನ 15 ವರ್ಷಗಳಲ್ಲಿ ಮರಣ ಹೊಂದಬಹುದಾದ ಅಪಾಯವು ಅರ್ಧದಷ್ಟು  ಕಡಿಮೆಯಾಗುತ್ತದೆ. ಹಾಗೆಯೇ,  ಕಡಿಮೆ  ಅಪಾಯಕಾರಿಯಾದ ಸಿಗರೇಟು ಹಾಗೂ ಅತ್ಯಧಿಕ ಟಾರ್‌ ಹಾಗೂ ನಿಕೋಟಿನ್‌ಯುಕ್ತ ಸಿಗರೇಟ್‌ ಇವುಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಯೋಜನಗಳು ಖಂಡಿತ ಇಲ್ಲ .

    ಆರೋಗ್ಯಕ್ಕೆ  ಸಂಬಂಧಿಸಿದಂತೆ ಧೂಮಪಾನದ ಅಪಾಯಗಳು ಬರೀ ಧೂಮಪಾನ ಮಾಡುವವರಿಗಷ್ಟೇ  ಸೀಮಿತವಾಗಿಲ್ಲ , ಪರೋಕ್ಷ ಧೂಮಪಾನ ಮಾಡುವವರಿಗೂ ಸಹ ಇದರ ಅಪಾಯ ಇದ್ದೇ ಇದೆ. ಅಂದರೆ, ಇನ್ನೊಬ್ಬರು ಸೇದಿದ ಹೊಗೆಯನ್ನು  ನಾವು ಸೇದುವುದು, ಅಥವಾ ಪರಿಸರದಲ್ಲಿನ ತಂಬಾಕು ಹೊಗೆಯನ್ನು  ಸೇದುವುದು... ಇಂತಹ ಪರೋಕ್ಷ ಧೂಮಪಾನಗಳು, ಧೂಮಪಾನಿಗಳಲ್ಲದವರಲ್ಲೂ , ಸಣ್ಣ ಮಕ್ಕಳಲ್ಲೂ  ಶ್ವಾಸಕೋಶದ ಕ್ಯಾನ್ಸರ್‌ ಹಾಗೂ  ಹೃದಯದ ಕಾಯಿಲೆಯ ಅಪಾಯಗಳನ್ನು°  ಹಾಗೂ ಅನೇಕ ರೀತಿಯ ಶ್ವಾಸ ಸಂಬಂಧೀ ಕಾಯಿಲೆಗಳ  ಅಪಾಯವನ್ನು  ಗಮನಾರ್ಹವಾಗಿ ಹೆಚ್ಚಿಸುತ್ತದೆ. ಸಿಗರೇಟು ಉರಿಯುವಾಗ  ಬರುವ ಹೊಗೆ  ಹಾಗೂ ಸಿಗರೇಟು ಸೇದಿದ ವ್ಯಕ್ತಿಯು ಒಳಗೆಳೆದು ಹೊರ ಬಿಟ್ಟ ಹೊಗೆ ಇವನ್ನು  ಧೂಮಪಾನಿಯಲ್ಲದ  ಒಬ್ಬ ವ್ಯಕ್ತಿ ಸೇವಿಸಿದರೆ, ಅಥವಾ ಉಸಿರಿನ ಮೂಲಕ  ಒಳಗೆಳೆದುಕೊಂಡರೆ ಅದು ಪರೋಕ್ಷ ಧೂಮಪಾನ.

    ಸಿಗರೇಟಿನ ಹೊಗೆಯಲ್ಲಿ  ಸುಮಾರು, 4,000 ವಿಧದ ರಾಸಾಯನಿಕಗಳಿದ್ದು , ಇವುಗಳಲ್ಲಿ  ಸುಮಾರು 60 ರಾಸಾಯನಿಕಗಳು ಕ್ಯಾನ್ಸರ್‌  ಕಾರಕಗಳಾಗಿವೆ. ಇಷ್ಟು  ಮಾತ್ರವಲ್ಲದೆ, ಇದರಲ್ಲಿರುವ  ಅನೇಕ ಅಂಶಗಳು - ಅಂದರೆ ಕಾರ್ಬನ್‌ಮೋನಾಕ್ಸೈಡ್‌, ಟಾರ್‌, ಆರ್ಸೆನಿಕ್‌ ಹಾಗೂ ಸೀಸ... ಇವು ವಿಷಕಾರಿಗಳು ಮಾತ್ರವಲ್ಲ  ಮಾನವನ ದೇಹಕ್ಕೆ  ಇವು ನಂಜುಕಾರಕಗಳು. ನಿಕೋಟಿನ್‌ ಎಂಬುದು ನೈಸರ್ಗಿಕವಾಗಿ ತಂಬಾಕಿನ ಎಲೆಯಲ್ಲಿರುವ ಒಂದು ಅಂಶ. ಮನುಷ್ಯನು ಸಿಗರೇಟೂ ಸೇರಿದಂತೆ ತಂಬಾಕು ಉತ್ಪನ್ನಗಳ ಚಟವನ್ನು  ಬೆಳೆ‌ಸಿಕೊಳ್ಳುವಲ್ಲಿ , ಈ ನಿಕೋಟಿನ್‌ ಅಂಶವು ಬಹಳ ಪ್ರಮುಖ ಪಾತ್ರವನ್ನು  ವಹಿಸುತ್ತದೆ, ಸಿಗರೇಟು ಸೇದಿದ ತತ್‌ಕ್ಷಣವೇ, ಅದರಲ್ಲಿರುವ ನಿಕೋಟಿನ್‌ ಅಂಶವು ರಕ್ತಪರಿಚಲನೆಯ  ಮೂಲಕ ಮೆದುಳನ್ನು ಸೇರಿ, ಮೆದುಳನ್ನು  ಪ್ರಚೋದಿಸುತ್ತದೆ. ಸಿಗರೇಟಿನಲ್ಲಿರುವ ನಿಕೋಟಿನ್‌ ಅಂಶವು ವ್ಯಕ್ತಿಗೆ ಸಿಗರೇಟಿನ ಚಟವು ಅಂಟಿಕೊಳ್ಳಲು ಕಾರಣವಾದರೆ, ಇನ್ನಿತರ ಮಾದಕ ವಸ್ತುಗಳಲ್ಲಿರುವ ಹೆರೋಯಿನ್‌ ಹಾಗೂ ಕೋಕೈನ್‌ಗಳು ಆ ಪದಾರ್ಥಗಳ ಚಟಗಳು ಬೆಳೆಯಲು ಕಾರಣ.

    ಧೂಮಪಾನದಿಂದ ದೇಹದ ಅನೇಕ ಪ್ರಮುಖ ಅಂಶಗಳಿಗೆ ಹಾನಿ ಉಂಟಾಗುತ್ತದೆ. ಧೂಮಪಾನಕ್ಕೆ ಸಂಬಂಧಿಸಿದ ಕಾಯಿಲೆಗಳಾದ ಶ್ವಾಸಕೋಶ ಹಾಗೂ ಇನ್ನಿತರ ಕ್ಯಾನ್ಸರ್‌ಗಳು , ಲಕ್ವಾ ಹಾಗೂ ಶ್ವಾಸ ಸಂಬಂಧೀ ಕಾಯಿಲೆಗಳು ಆಗುವ ಅಪಾಯವು, ಜೀವಮಾನದಲ್ಲಿ  ಸಿಗರೇಟಿನ ಹೊಗೆಗೆ  ಒಡ್ಡಿಕೊಂಡಷ್ಟೆ à ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಅಂದರೆ ಅದು, ಒಬ್ಬ  ವ್ಯಕ್ತಿಯು ದಿನದಲ್ಲಿ  ಎಷ್ಟು  ಸಿಗರೇಟು ಸೇದುತ್ತಾನೆ, ಯಾವ ಪ್ರಮಾಣದಲ್ಲಿ  ಸೇದುತ್ತಾನೆ (ಅಂದರೆ ಸಿಗರೇಟಿನ ಗಾತ್ರ ಹಾಗೂ ಒಳಗೆಳೆದುಕೊಳ್ಳುವ ಹೊಗೆಯ  ಪ್ರಮಾಣ) ಯಾವ ವಯಸ್ಸಿನಲ್ಲಿ  ಆತ ಸಿಗರೇಟು  ಸೇದುವುದನ್ನು  ಆರಂಭಿಸಿದ, ಎಷ್ಟು  ವರ್ಷ ಸಿಗರೇಟು ಸೇದಿದ ಹಾಗೂ ಪರೋಕ್ಷ ಧೂಮಪಾನಕ್ಕೆ ಆತನ ಒಡ್ಡಿಕೊಳ್ಳು ವಿಕೆ... ಈ  ಎಲ್ಲಾ ಅಂಶಗಳನ್ನು  ಒಳಗೊಂಡಿದೆ.

ಆಹಾರ ಹಾಗೂ ಮಾನಸಿಕ ಒತ್ತಡ

ಶ್ರೀಮತಿ ಮನೀಷಾ ಮೋಹನ್‌ ಕುಮಾರ್‌,ಡಯಟೀಷಿಯನ್‌
 
ಮಾನಸಿಕ ಒತ್ತಡದ ಕಾರಣದಿಂದಾಗಿ ಮನುಷ್ಯನಿಗೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂಬ ವಿಚಾರವು ಇದೀಗ ಅಧ್ಯಯನಗಳಿಂದ ದೃಢಪಟ್ಟಿದೆ. ಆರೋಗ್ಯಕ್ಕೆ ಸಮಸ್ಯೆಯನ್ನು ಉಂಟುಮಾಡುವ ಈ ಮಾನಸಿಕ ಒತ್ತಡದಿಂದ ಹೊರಬರಲು, ಪೋಷಕಾಂಶಗಳಿಂದ ಕೂಡಿದ ಸಂತುಲಿತ ಆಹಾರ ಹಾಗೂ ಆಳ ಉಸಿರಾಟದ ವ್ಯಾಯಾಮಗಳು ಬಹಳ ಉತ್ತಮ ಹಾಗೂ ಸರಳ ಉಪಾಯಗಳೆನಿಸಿವೆ.
ಇವು ಅಗ್ಗ, ಸುಲಭ ಸಾಧ್ಯ ಹಾಗೂ ಯಾವುದೇ ಅಡ್ಡ ಪರಿಣಾಮಗಳಿರದ ವಿಧಾನಗಳು. ಮಾನಸಿಕ ಒತ್ತಡವನ್ನು ನಿಭಾಯಿಸುವಲ್ಲಿ  ಆಹಾರದಲ್ಲಿರುವ ವಿಟಾಮಿನ್‌ ಹಾಗೂ ಖನಿಜಾಂಶಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಆಹಾರ ಹಾಗೂ ಮಾನಸಿಕ ಒತ್ತಡ
ನಿವಾರಣೆ:

ಮಾನಸಿಕ ಒತ್ತಡದ ಜೊತೆಗೆ ಆಗುವ ದೈಹಿಕ ಬದಲಾವಣೆಗಳು ಅಂದರೆ,

 ಅಡ್ರೀನಲಿನ್‌ ಹಾಗೂ ಕಾರ್ಟಿಸೋಲ್‌ ಒತ್ತಡದ ಹಾರ್ಮೋನ್‌ಗಳ ಹೆಚ್ಚಳ.

 ರಕ್ತದಲ್ಲಿ  ಸಕ್ಕರೆ ಹಾಗೂ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಳ.

 ಹೃದಯ ಬಡಿತ ಹಾಗೂ ರಕ್ತದ ಒತ್ತಡದ ದರ ಹೆಚ್ಚಳ.

 ಉಸಿರಾಟದ ವೇಗದಲ್ಲಿ  ಹೆಚ್ಚಳ.

 ದೇಹದಲ್ಲಿ  ಕಾರ್ಬನ್‌ನಂತಹ ವಿಷ ಸಂಗ್ರಹಣೆ.

 ಮೆದುಳಿನಲ್ಲಿ ರಾಸಾಯನಿಕ ವ್ಯತ್ಯಾಸಗಳಿಂದಾಗಿ, ಭಾವನಾತ್ಮಕ ಬದಲಾವಣೆಗಳಾಗುವುದು.

 ಜಠರ, ಕರುಳಿನ ಅಸಹಜತೆಗಳು ವಿಸರ್ಜನಾಂಗಗಳ ಕಾಯಿಲೆಯ ರೂಪದಲ್ಲಿ  ಕಾಣಿಸಿಕೊಳ್ಳಬಹುದು.

 ದೇಹದ ರೋಗ ಪ್ರತಿರೋಧಕ ಶಕ್ತಿ ಕುಂಠಿತವಾಗುವುದು.

ಈ ಎಲ್ಲಾ  ಬದಲಾವಣೆಗಳನ್ನು ಮತ್ತೆ ಮೊದಲಿನ ರೂಪಕ್ಕೆ ತರುವುದು ಒತ್ತಡ ನಿರ್ವಹಣಾ ಕಾರ್ಯಕ್ರಮದ ಪ್ರಮುಖ ಉದ್ದೇಶ.

ಈಗಾಗಲೇ ಹೆಚ್ಚಿರುವ ಹಾರ್ಮೋನ್‌ ಪ್ರಮಾಣವನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು ಸ್ವಲ್ಪ ಕಷ್ಟದಾಯಕ. ಆದರೆ, ಹಾರ್ಮೋನ್‌ಗಳ ಪ್ರಚೋದಕಗಳನ್ನು, ಅಂದರೆ ಹಾರ್ಮೋನ್‌ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಿರುವ ಅಂಶಗಳನ್ನು ನಿಯಂತ್ರಿಸಬಹುದು.

ಆಹಾರದಲ್ಲಿ  ಬದಲಾವಣೆ ಮಾಡಿಕೊಳ್ಳುವ ಸರಳ ಉಪಾಯಗಳ ಮೂಲಕ, ಆಗಿರುವ ಇನ್ನಿತರ ಎಲ್ಲಾ  ವ್ಯತ್ಯಾಸಗಳನ್ನು ಮತ್ತೆ ಸರಿಪಡಿಸಬಹುದು.
ಆಹಾರ - ಪದಾರ್ಥಗಳ ಪಾತ್ರ
ಒತ್ತಡ ನಿರ್ವಹಣಾ ಕಾರ್ಯದಲ್ಲಿ  ಆಹಾರ - ಪದಾರ್ಥಗಳ ಪಾತ್ರವೇನು ಎಂಬ ಬಗ್ಗೆ ಕೆಳಗೆ ಚರ್ಚಿಸಲಾಗಿದೆ.

 ಮಾನಸಿಕ ಒತ್ತಡವನ್ನು ತಗ್ಗಿಸುವ ಆಹಾರ ಪದಾರ್ಥಗಳನ್ನು ಆಹಾರ ಕ್ರಮದಲ್ಲಿ  ಸೇರಿಸುವುದು ಅಗತ್ಯ .

 ಮಾನಸಿಕ ಒತ್ತಡವನ್ನು ಹೆಚ್ಚಿಸುವ ಆಹಾರ ಪದಾರ್ಥಗಳನ್ನು ತ್ಯಜಿಸುವುದು ಅಗತ್ಯ
ತ್ಯಜಿಸಬೇಕಾದ ಆಹಾರ
ಪದಾರ್ಥಗಳು:

 ಚಹಾ, ಕಾಫಿ, ಕೋಲಾ.

 ದಿಢೀರ್‌ ಆಹಾರ ಪದಾರ್ಥಗಳು ಹಾಗೂ ಕಳಪೆ (ಜಂಕ್‌ ಫುಡ್‌) ಆಹಾರಗಳು .

 ಬೆಣ್ಣೆ , ತುಪ್ಪ , ಮಾಂಸಾಹಾರ.

 ಗೋಡಂಬಿ, ಬಾದಾಮಿ ಹಾಗೂ ಇನ್ನಿತರ ಬೀಜಗಳು.

 ಲಘುಪಾನೀಯಗಳು: ಸೋಡಾ, ಚಾಕೋಲೇಟ್‌ ಪೇಯ ಹಾಗೂ ಲಘಪಾನೀಯ.

 ಸಕ್ಕರೆ ಹಾಗೂ ಅಧಿಕ ಸಿಹಿ ಪದಾರ್ಥಗಳು.

 ಚಾಕೋಲೇಟ್‌ ಪಾನೀಯಗಳಲ್ಲಿ  ಕೆಫೀನ್‌ ಹಾಗೂ ಲಿಯೋಬ್ರೋಮಿನ್‌ನಂತಹ ನ್ಯೂರೋಸ್ಟಿಮ್ಯುಲೇಟರ್ಸ್‌ ಅಥವಾ ನರ ಉತ್ತೇಜಕಗಳಿದ್ದು, ಇವನ್ನು ಸೇವಿಸಿದಾಗ ವ್ಯಕ್ತಿ ಒಂದು ಸಲಕ್ಕೆ ಉತ್ಸಾಹವನ್ನು ಪಡೆಯುತ್ತಾನೆ, ಆದರೆ ಮಾನಸಿಕ ಒತ್ತಡದ ಸಂದರ್ಭದಲ್ಲಿ  ಈ ಪದಾರ್ಥಗಳನ್ನು ಸೇವಿಸದಿದ್ದರೆ ಒಳ್ಳೆಯದು. ಮಾನಸಿಕ ಒತ್ತಡದಿಂದಾಗಿ ಈಗಾಗಲೇ ಆತಂಕದಲ್ಲಿರುವ ವ್ಯಕ್ತಿಯು, ಉತ್ತೇಜಕಗಳ ಸೇವನೆಯಿಂದಾಗಿ ಮತ್ತಷ್ಟು ಆತಂಕಗೊಳ್ಳುವ ಸಾಧ್ಯತೆಗಳಿರುತ್ತವೆ. ಜೊತೆಗೆ, ತೀವ್ರ ನಿದ್ರಾಹೀನತೆಯೂ ಸಹ ಆತನನ್ನು ಬಾಧಿಸಬಹುದು. ಇಷ್ಟು  ಮಾತ್ರವಲ್ಲದೆ, ಚಹಾ ಹಾಗೂ ಕಾಫಿ ಸೇವನೆಯು, ಮಾನಸಿಕ ಒತ್ತಡದಿಂದಾಗಿ ಬರುವ ಜಠರದ ಹುಣ್ಣಿನ ಬಾಧೆಯನ್ನು ತೀವ್ರಗೊಳಿಸಬಹುದು. ಆದರೆ, ಇದಕ್ಕೆ ತದ್ವಿರುದ್ಧವಾಗಿ, ಚಾಕೋಲೇಟ್‌ನಲ್ಲಿರುವ ಹೆಚ್ಚಿನ ಪ್ರಮಾಣದ ಮೆಗ್ನೇಷಿಯಂ ಅಂಶವು, ಒತ್ತಡದಿಂದಾಗಿ ಉತ್ತೇಜಿತನಾದ ವ್ಯಕ್ತಿಯ ಆತಂಕವನ್ನು ಕಡಿಮೆಗೊಳಿಸಬಲ್ಲದು. ಮೊಟ್ಟೆಯ ಹಳದಿ ಭಾಗದಲ್ಲಿ  ಕೊಲೆಸ್ಟ್ರಾಲ್‌ ಪ್ರಮಾಣವು ಹೆಚ್ಚಾಗಿರುವ ಕಾರಣ, ಮಾನಸಿಕ ಒತ್ತಡದ ಸಂದರ್ಭದಲ್ಲಿ ಈ  ಆಹಾರವನ್ನು ಸೇವಿಸಿದರೆ, ಕೊಲೆಸ್ಟ್ರಾಲ್‌ ತನ್ನಷ್ಟಕ್ಕೇ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಇದೇ ಕಾರಣಕ್ಕಾಗಿ ಬೆಣ್ಣೆ, ಚೀಸ್‌, ಗೋಡಂಬಿ, ಬಾದಾಮಿ ಹಾಗೂ ಮಾಂಸಾಹಾರಗಳನ್ನೂ ಸಹ ಮಾನಸಿಕ ಒತ್ತಡದ ಸಂದರ್ಭದಲ್ಲಿ ಸೇವಿಸದೇ  ಇರುವುದು ಒಳ್ಳೆಯದು.
ಜಂಕ್‌ ಫುಡ್‌ ಅಥವಾ ಕಳಪೆ ಆಹಾರಗಳು ಹಾಗೂ ದಿಢೀರ್‌ ಆಹಾರಗಳು ಬಹಳ ಸ್ವಾದಿಷ್ಟ  ಆಹಾರಗಳೇನೂ ಅಲ್ಲ. ಅದೇ ರೀತಿಯಲ್ಲಿ , ಅವು ಸಂತುಲಿತ ಆಹಾರಗಳೂ ಅಲ್ಲ. ಈ ಆಹಾರಗಳಲ್ಲಿ  ಕೊಬ್ಬು ಹಾಗೂ ಕಾಬೋìಹೈಡ್ರೇಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ, ಮಾತ್ರವಲ್ಲ ಆರೋಗ್ಯಕ್ಕೆ ಅಗತ್ಯವಿರುವ ವಿಟಾಮಿನ್‌ ಹಾಗೂ ಖನಿಜಾಂಶಗಳು ಇರುವುದಿಲ್ಲ. ಮಾನಸಿಕ ಒತ್ತಡ ನಿಭಾಯಿಸಲು ಅಧಿಕ ಶಕ್ತಿ, ವಿಟಾಮಿನ್‌ ಹಾಗೂ ಖನಿಜಾಂಶಗಳು ಅತ್ಯಗತ್ಯ. ಆದರೆ, ಅವು ಸಂತುಲಿತ ಪ್ರಮಾಣದಲ್ಲಿರಬೇಕಾದುದು ಕೂಡ ಅಷ್ಟೇ ಆವಶ್ಯಕ.

ಸೋಡಾ ಹಾಗೂ ಲಘು ಪಾನೀಯಗಳಂತಹ ಪೇಯಗಳಲ್ಲಿ  ಶೂನ್ಯ ಕ್ಯಾಲೊರಿಗಳಿದ್ದು , ಇವುಗಳಲ್ಲಿ  ಯಾವುದೇ ವಿಟಾಮಿನ್‌ ಹಾಗೂ ಖನಿಜಾಂಶಗಳೂ ಇರುವುದಿಲ್ಲ . ಹಾಗಾಗಿ, ಇವು ನಿಷ್ಪ್ರಯೋಜಕ ಆಹಾರಗಳೆನಿಸಿವೆ. ಮಾನಸಿಕ ಒತ್ತಡದ ಸಂದರ್ಭದಲ್ಲಿ , ದೇಹದೊಳಗೆ ಕಾರ್ಬನ್‌ ಡೈ ಆಕ್ಸೆ„ಡ್‌ ಹಾಗೂ ಲ್ಯಾಕ್ಟೇಟ್ಸ್‌ ಸಂಗ್ರಹಗೊಂಡು ಉಂಟಾಗುವ ಸ್ಥಿತಿಗೆ ಅಸಿಡೊಸಿಸ್‌ ಎಂದು ಹೆಸರು. ಈ ಸ್ಥಿತಿ ಆರೋಗ್ಯಕ್ಕೆ  ಬಹಳ ಅಪಾಯಕಾರಿಯಾದುದು. ಲಘುಪಾನೀಯಗಳಲ್ಲಿರುವ ಅಧಿಕ ಪ್ರಮಾಣದ ಕಾರ್ಬನ್‌ ಡೈ ಆಕ್ಸೆ„ಡ್‌, ಅಸಿಡೊಸಿಸ್‌ ಸ್ಥಿತಿಯನ್ನು ಕೆರಳಿಸುತ್ತದೆ. ಲಘುಪಾನೀಯಗಳಲ್ಲಿ  ಸೋಡಿಯಂ ಬೆನ್ಸೋಯೇಟ್‌ ಸಹ ಅಧಿಕ ಪ್ರಮಾಣದಲ್ಲಿರುವ ಕಾರಣ, ಮಾನಸಿಕ ಒತ್ತಡದ ಜೊತೆಗೆ ಅಧಿಕ ರಕ್ತದ ಒತ್ತಡ ಕೂಡ ಇರುವವರು ಇದನ್ನು ಸೇವಿಸಬಾರದು. ಈಗಾಗಲೇ ರಕ್ತದಲ್ಲಿ  ಗುÉಕೋಸ್‌ ಪ್ರಮಾಣ ಹೆಚ್ಚಿರುವವರು, ಸಕ್ಕರೆಯನ್ನು ಸೇವಿಸುವುದರಿಂದ ಡಯಾಬಿಟೀಸ್‌ ಆಗುವ ಅಧಿಕ ಅಪಾಯವಿರುವ ಕಾರಣ, ಇಂತಹವರು ಸಕ್ಕರೆಯನ್ನು ಸೇವಿಸಬಾರದು.

ಮದ್ಯಪಾನವು ಮನಸ್ಸನ್ನು  ನಿಷ್ಕ್ರಿಯಗೊಳಿಸುವ ಕಾರಣ, ಮಾನಸಿಕ ಒತ್ತಡವಿರುವಾಗ ಮದ್ಯಪಾನ ಸೇವನೆ ಒಳ್ಳೆಯದಲ್ಲ. ಅಧಿಕ ಪ್ರಮಾಣದ ಮದ್ಯಪಾನದಿಂದಾಗಿ, ನಿದ್ರಾಹೀನತೆ ಉಂಟಾಗಿ, ದೇಹದ ಎಲ್ಲಾ  ಚಟುವಟಿಕೆಗಳು ಅಸ್ತವ್ಯಸ್ತವಾಗಬಹುದು.
ಮಾನಸಿಕ ಒತ್ತಡವನ್ನು ತಗ್ಗಿಸುವ
ಆಹಾರಗಳು


ಕೆಲವು ಆಹಾರ ಪದಾರ್ಥಗಳು ಒತ್ತಡವನ್ನು ನಿಯಂತ್ರಿಸಲು ಸಹಕರಿಸುತ್ತವೆ. ಅಡುಗೆಯ ವಿಧಾನವೂ ಸಹ ಆ ಆಹಾರಗಳನ್ನು ಆರೋಗ್ಯಕರವಾಗಿಸುವಲ್ಲಿ  ಪಾತ್ರವಹಿಸುತ್ತದೆ. ಉದಾಹರಣೆಗೆ, ಅಧಿಕ ಪ್ರಮಾಣದ ಉಪ್ಪನ್ನು ಬಳಸಿ, ಅಧಿಕ ತಾಪಮಾನದಲ್ಲಿ  ಆಹಾರವನ್ನು ಬೇಯಿಸುವುದು ( ಎಣ್ಣೆಯಲ್ಲಿ  ಕರಿಯುವುದು ), ಆಹಾರಕ್ಕೆ ಕೃತಕ ಬಣ್ಣ  ಹಾಗೂ ಸಂರಕ್ಷಕ ಅಂಶಗಳನ್ನು ಸೇರಿಸುವುದು, ಈ ಎಲ್ಲಾ  ಪ್ರಕ್ರಿಯೆಗಳು ಆಹಾರದ ಸಹಜ ಹಾಗೂ ಆರೋಗ್ಯಕರ ಗುಣಮಟ್ಟವನ್ನು ಕೆಡಿಸುತ್ತವೆ.

ಮಾನಸಿಕ ಒತ್ತಡದ ಸಂದರ್ಭದಲ್ಲಿ  ಸಹಾಯಕವಾಗಬಲ್ಲಂಥ ಕೆಲವು ಆಹಾರಗಳ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ.
ಪ್ರೊಟೀನ್‌ಗಳು
ಪ್ರೊಟೀನ್‌ಗಳು ದೇಹದ ಸ್ನಾಯುಗಳಿಗೆ ಶಕ್ತಿಯನ್ನು ತುಂಬಿ, ಅವನ್ನು  ಸಂರಕ್ಷಿಸುತ್ತವೆ ಹಾಗೂ ಸುದೀರ್ಘ‌ ಕಾಲ ಮಾನಸಿಕ ಒತ್ತಡದ ವಿರುದ್ಧ ಹೋರಾಡಲು ಸಾಮರ್ಥ್ಯವನ್ನು ಒದಗಿಸುತ್ತವೆ.
ಉದಾ: ಲೀನ್‌ ಮೀಟ್‌, ಚಿಕನ್‌, ಮೀನು ಹಾಗೂ ಸೋಯಾ.
ಕಾಬೋìಹೈಡ್ರೇಟ್‌ಗಳು
ಸಂಸ್ಕರಿತವಾಗಿಲ್ಲದ ರೂಪದಲ್ಲಿ  ಕಾಬೋìಹೈಡ್ರೇಟ್‌ ಅನ್ನು ತೆಗೆದುಕೊಳ್ಳುವುದರಿಂದ, ದೇಹದಲ್ಲಿ  ಅದು ಸಕಾರಾತ್ಮಕ ಶಕ್ತಿಯನ್ನು ತುಂಬಿ, ಒತ್ತಡವನ್ನು ನಿಭಾಯಿಸಲು ಸಹಕರಿಸುತ್ತದೆ.
ಉದಾ: ಇಡೀಯ ಧಾನ್ಯಗಳ ಬ್ರೆಡ್‌, ಕುಚ್ಚಲಕ್ಕಿ, ಹಣ್ಣು, ತರಕಾರಿಗಳು.
ಪೊಟ್ಯಾಷಿಯಂ
ರಕ್ತದ ಒತ್ತಡವನ್ನು ತಡೆಯಲು ಪೊಟ್ಯಾಷಿಯಂ ಯುಕ್ತ ಆಹಾರ ಬಹಳ ಉಪಯುಕ್ತ.

ಉದಾ: ಜೋಳ, ಆಲೂಗಡ್ಡೆ, ಮೀನು, ಯೋಗರ್ಟ್‌ ಹಾಗೂ ಬಾಳೆಹಣ್ಣು.
ಕಬ್ಬಿಣ
ರಕ್ತ ಪರಿಚಲನೆಯ ಮೂಲಕ ದೇಹದ ಭಾಗಗಳಿಗೆ ಆಮ್ಲಜನಕ ಪೂರೈಕೆ ಆಗಲು ಕಬ್ಬಿಣದ ಸತ್ವವು ಸಹಾಯಕ. ಕಬ್ಬಿಣದ ಸತ್ವದ ಕೊರತೆಯಿಂದಾಗಿ ದೇಹದ ಆಂತರಿಕ ಸಾಮರ್ಥ್ಯವು ಕುಂದಿ, ದೇಹವು ಶಕ್ತಿ ಹೀನವಾಗುತ್ತದೆ, ಹಾಗೂ ಒತ್ತಡವು ಹೆಚ್ಚುತ್ತದೆ.

ಉದಾ: ಒಣ ಹಣ್ಣುಗಳು, ಇಡೀ ಧಾನ್ಯಗಳು, ಬಟಾಣಿ ಹಾಗೂ ಆಲೂಗಡ್ಡೆ.
ಝಿಂಕ್‌ ಹಾಗೂ ಕಾಪರ್‌
ಝಿಂಕ್‌ ಪ್ರೊಟೀನ್‌ನ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಲು ಸಹಕರಿಸುತ್ತದೆ. ಇದು ಪ್ರೊಟೀನ್‌ ಕೊಬ್ಟಾಗಿ ಮಾರ್ಪಡುವುದನ್ನು ತಡೆಯುತ್ತದೆ. ಕಾಪರ್‌ ದೇಹದಲ್ಲಿರುವುದು ಹಾನಿಕರ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಚಿಕನ್‌, ಲಿವರ್‌, ಬಾಳೆಹಣ್ಣು, ಅಕ್ಕಿ, ಬೀನ್‌, ಪಿಯರ್ಸ್‌ ಹಾಗೂ ಸೋಯಾ ಇತ್ಯಾದಿ ಆಹಾರಗಳಲ್ಲಿ  ಈ ಖನಿಜ ಸತ್ವಗಳಿವೆ.
ಆಹಾರ ಹಾಗೂ ಮಾನಸಿಕ
ಒತ್ತಡ ನಿವಾರಣೆ

1. ಯಥೇತ್ಛವಾಗಿ ನೀರನ್ನು ಸೇವಿಸುವುದು ಚರ್ಮಕ್ಕೆ ಒಳ್ಳೆಯದು. ನೀರು ದೇಹದಲ್ಲಿರುವ ವಿಷ ಪದಾರ್ಥಗಳನ್ನು ಹೊರ ಹಾಕಿ, ನಿಮ್ಮ ದೇಹ ಹಾಗೂ ಮೂತ್ರಪಿಂಡಗಳನ್ನು ಸುಸೂತ್ರವಾಗಿರಿಸುತ್ತದೆ. ಹಾಗಾಗಿ ಅಧಿಕ ಪ್ರಮಾಣದಲ್ಲಿ  ನೀರನ್ನು ಸೇವಿಸುವುದು ಆವಶ್ಯಕ.

2. ಆಗಾಗ ಸ್ವಲ್ಪ  ಸ್ವಲ್ಪವೇ ತಿನ್ನಿ ( ನೀವು ಯಾವ ಪ್ರಮಾಣದಲ್ಲಿ  ಆಹಾರ ಸೇವಿಸುತ್ತೀರಿ ಎಂಬುದನ್ನು ಆಧರಿಸಿಕೊಂಡು, ದಿನದಲ್ಲಿ  ಕನಿಷ್ಠ 6 ಸಲ ).

3. ಚಹಾ, ಕಾಫಿಗಳನ್ನು ಆದಷ್ಟು  ಕಡಿಮೆ ಸೇವಿಸಬೇಕು.

4. ಮಿತಿಮೀರಿದ ಮದ್ಯಪಾನ ಒಳ್ಳೆಯದಲ್ಲ. ಅದು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ ಹಾಗೂ ದೇಹದ ಮಾನಸಿಕ ಒತ್ತಡ, ಆಂತಕಗಳನ್ನು ಹೆಚ್ಚಿಸುತ್ತದೆ.

5. ಅಧಿಕ ಪ್ರಮಾಣದಲ್ಲಿ  ಉಪ್ಪಿನ ಸೇವನೆ ಸಲ್ಲದು.

ನಿಮ್ಮ ಆಹಾರ ಕ್ರಮವನ್ನು ಬದಲಾಯಿಸಿಕೊಂಡರೆ, ಮಾನಸಿಕ ಒತ್ತಡವನ್ನು ಸುಲಭವಾಗಿ ನಿಭಾಯಿಸಬಹುದು. ಆದರೆ, ಹಲವಾರು ಜನರು ತಮ್ಮ  ಆಹಾರ ಕ್ರಮವನ್ನು ಬದಲಾಯಿಸಲು ಕಷ್ಟವಾಗುತ್ತದೆ, ಆಹಾರ ಕ್ರಮವನ್ನು ಬದಲಾಯಿಸದೆಯೇ, ಅನ್ಯ ಕ್ರಮಗಳ ಮೂಲಕ ಮಾನಸಿಕ ಒತ್ತಡವನ್ನು ನಿಭಾಯಿಸಲು ಸಾಧ್ಯವಿದೆ ಎಂದು ಭಾವಿಸುತ್ತಾರೆ. ಆದರೆ ಇನ್ನಿತರ ವಿಧಾನಗಳು ಒತ್ತಡವನ್ನು ಕಡಿಮೆಗೊಳಿಸುವುದಕ್ಕೆ ಬದಲಾಗಿ ಅದನ್ನು ಇನ್ನಷ್ಟು  ಹೆಚ್ಚಿಸಬಹುದು. ಕಳಪೆ ಆಹಾರ ಹಾಗೂ ಇನ್ನಿತರ ಅನಗತ್ಯ ಆಹಾರ ಪದಾರ್ಥಗಳ ಸೇವನೆಯನ್ನು ಬಿಟ್ಟುಬಿಟ್ಟರೆ, ನಿಮ್ಮ ಮಾನಸಿಕ ಒತ್ತಡ ನಿವಾರಣೆ ಆಗುವುದಷ್ಟೇ ಅಲ್ಲದೆ, ಒಟ್ಟಾರೆ ಆರೋಗ್ಯವೂ ಸುಧಾರಿಸಿ, ನೀವು ಉತ್ತಮ ಹಾಗೂ ಆರೋಗ್ಯಶಾಲಿ ಜೀವನವನ್ನು ನಡೆಸಲು ಸಾಧ್ಯವಿದೆ.ಆರೋಗ್ಯವೇ  ಐಶ್ವರ್ಯ.

ದೇಹ ತೂಕ ಗಳಿಕೆ

ಮುಖ್ಯಸ್ಥರು ಪಥ್ಯಾಹಾರ ವಿಭಾಗ 
 
ನೀವು ಸಹಜವಾಗಿ ಸಪೂರ  ಶರೀರದವರಾಗಿದ್ದರೆ, ಆಗ  ನಿಮ್ಮ  ದೇಹದ ತೂಕವನ್ನು  ಹೆಚ್ಚಿಸಿಕೊಳ್ಳುವುದೆಂದರೆ - ದಪ್ಪ  ಶರೀರಗಳಿರುವವರು ದೇಹದ ತೂಕವನ್ನು  ಕಡಿಮೆ ಮಾಡಿಕೊಂಡಷೇr ತ್ರಾಸದಾಯಕ ಕೆಲಸ. ದೇಹ ತೂಕವನ್ನು  ಹೆಚ್ಚಿಸಿಕೊಳ್ಳುವುದು ಬಹಳಷ್ಟು ಜನರಿಗೆ ಸಮಸ್ಯೆಯಾಗಿರುತ್ತದೆ. ಏನೇ  ಮಾಡಿದರೂ  ತಮ್ಮ  ದೇಹದ ತೂಕ ಹೆಚ್ಚುತ್ತಿಲ್ಲ  ಎಂದು ಅವರು ದೂರುತ್ತಿರುತ್ತಾರೆ.
ನಿಮ್ಮ  ದೇಹದ  ತೂಕವನ್ನು  ಅಗತ್ಯವಿದ್ದಲ್ಲಿ ಹೆಚ್ಚಿಸಿಕೊಳ್ಳಲು ಕೆಲವು ಸೂಚನೆಗಳನ್ನು  ಈ ಲೇಖನದಲ್ಲಿ ನೀಡಲಾಗಿದೆ. ದೇಹದ ತೂಕವನ್ನು  ಹೆಚ್ಚಿಸಿಕೊಳ್ಳಲು ನೀವು ಸ್ವಲ್ಪ ಸಮಯ ಕಾಯಬೇಕಾಗಬಹುದು; ತಾಳ್ಮೆ ಇರಲಿ.

1. ಸದ್ಯ ನೀವು ಸೇವಿಸುತ್ತಿರುವ  ಅಹಾರಕ್ಕಿಂತ ಹೆಚ್ಚಿನ ಪ್ರಮಾಣದ ಕ್ಯಾಲೊರಿಯುಳ್ಳ ಆಹಾರವನ್ನು  ಸೇವಿಸಿ. ಕ್ಯಾಲೊರಿ ಹೆಚ್ಚಿಸಿಕೊಳ್ಳಲು ಆರೋಗ್ಯಕರ ಆಹಾರಗಳನ್ನು  ಆರಿಸಿಕೊಳ್ಳಿ . ಮಾವಿನ ಹಣ್ಣಿನಲ್ಲಿ  ಕ್ಯಾಲೊರಿ ಹಾಗೂ ಕಾಬೋìಹೈಡ್ರೇಟ್‌ಗಳು ಹೇರಳವಾಗಿವೆೆ. ನಿಮ್ಮ  ಆಹಾರದಲ್ಲಿ  ಮಾವಿನಹಣ್ಣುಗಳನ್ನು   ಸೇರಿಸಿಕೊಳ್ಳಿ .

2.ನಿಯಮಿತವಾಗಿ ಆರೋಗ್ಯಕರ ಆಹಾರ ವನ್ನು ಸೇವಿಸುತ್ತಾ ಇರಿ. ಪರ್ಯಾಯವಾಗಿ,  3ಸಲ  ಆಧಿಕ  ಪ್ರಮಾಣದ  ಊಟ, ಹಾಗೆಯೇ 3 ಸಲ ಸಣ್ಣ ಪ್ರಮಾಣದ  ಆಹಾರಗಳ‌ನ್ನು  ಸೇವಿಸಿ - ಹೀಗೆ  ದಿನಕ್ಕೆ 5 -6 ಬಾರಿ ಆಹಾರವನ್ನು  ಸೇವಿಸಿ. ಪ್ರತೀ ಆಹಾರದ  ನಡುವೆ ಕನಿಷ್ಠ  3 ಗಂಟೆಗಳ  ಅಂತರವಿರಲಿ. ಅಗ ನೀವು   ತಿಂದ ಆಹಾರ ಚೆನ್ನಾಗಿ  ಜೀರ್ಣವಾಗಿ,  ಸುಲಭವಾಗಿ  ದೇಹಗತವಾಗುತ್ತದೆ. ಒಂದು ಸಲ ಅಧಿಕ ಪ್ರಮಾಣದಲ್ಲಿ  ಊಟವನ್ನು ಸೇವಿಸಿದ  ಬಳಿಕ, 5-6  ಗಂಟೆಗಳ ಕಾಲ  ಏನನ್ನೂ   ತಿನ್ನದೆ ಇರಬೇಡಿ.

3. ಸಂತುಲಿತ  ಆಹಾರವನ್ನು  ಸೇವಿಸಿ.

4. ಆರೋಗ್ಯಕರ ದೇಹ ತೂಕವನ್ನು  ಪಡೆಯಲು, ನಿತ್ಯವೂ ವ್ಯಾಯಾಮ ಮಾಡಿ. ಕೆಲವು ಸಪೂರ  ಶರೀರದ  ವ್ಯಕ್ತಿಗಳು, ವ್ಯಾಯಾಮ  ತಮಗೆ  ಒಳ್ಳೆಯದಲ್ಲ   ಎಂದು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ . ವ್ಯಾಯಾಮವು ದೇಹದ  ಚಯಾಪಚಯ   ಪ್ರಕ್ರಿಯೆಯನ್ನು  ಉತ್ತೇಜಿಸುತ್ತದೆ. ನೆನಪಿಡಿ, ಆಹಾರವನ್ನು  ಸೇವಿಸಿದರಷ್ಟೇ ಸಾಲದು. ನಿಮ್ಮ  ದೇಹಕ್ಕೆ  ಕೊಬ್ಬು ಬರಬಾರದು -ಆದರೆ ದೇಹದ ತೂಕ ಹೆಚ್ಚಬೇಕು. ಅದಕ್ಕಾಗಿ, ವ್ಯಾಯಾಮ ಅತ್ಯಗತ್ಯ. ಪ್ರತಿರೋಧಕ ತರಬೇತಿಯ ವ್ಯಾಯಾಮಗಳು - ಅಂದರೆ  ರೆಸಿಸ್ಟೆಂಟ್‌  ಟ್ರೈನಿಂಗ್‌ ವ್ಯಾಯಾಮಗಳಿಂದ ನಿಮ್ಮ  ಸ್ನಾಯುಗಳ ಸಾಂದ್ರತೆಯನ್ನು   ಹೆಚ್ಚಿಸಿಕೊಳ್ಳಬಹುದು, ಇದರಿಂದಲೂ  ಚಯಾಪಚಯ  ಪ್ರಕ್ರಿಯೆ ವೃದ್ಧಿಸುತ್ತದೆ.

ತೂಕವನ್ನು  ಕಳೆದುಕೊಳ್ಳಲು    ಮಾಡುವ    ವ್ಯಾಮಾಮಗಳು  ಹಾಗೂ  ತೂಕವನ್ನು  ಗಳಿಸಲು  ಮಾಡುವ  ವ್ಯಾಯಾಮಗಳ  ನಡುವಿನ ವ್ಯತ್ಯಾಸವನ್ನು  ಅರಿಯಿರಿ. ನೀವು  ವ್ಯಾಯಾಮ ಮಾಡುತ್ತಿರವಾಗ ತಕ್ಕಷ್ಟು  ಪ್ರಮಾಣದಲ್ಲಿ  ಅಮೈನೋ ಅಸಿಡ್‌ಯುಕ್ತ  ಆಹಾರಗಳಿಂದ ಅಮೈನೋ  ಅಸಿಡ್‌ ದೊರಕುತ್ತದೆ.  ಹಾಗಾಗಿ, ವ್ಯಾಯಾಮದ ನಂತರ ನೀವು ಪ್ರೊಟೀನ್‌ ಸಮೃದ್ಧ ಆಹಾರವನ್ನು ಸೇವಿಸಬೇಕು.

5. ದೇಹದ ಸ್ನಾಯುಗಳ  ಸಾಂದ್ರತೆಗೆ  ಪ್ರೊಟೀನ್‌  ಅತ್ಯವಶ್ಯಕ. ಬರಿಯ ಪ್ರೊಟೀನ್‌ ಸೇವನೆಯಿಂದಷ್ಟೇ  ಸ್ನಾಯುಗಳು   ಬೆಳೆಯುವುದಿಲ್ಲ . ತೂಕ ಗಳಿಸಲು  ಅಮೈನೋ ಆಸಿಡ್‌  ಸಹ  ಆವಶ್ಯಕ. ಇದು  ಪ್ರೊಟೀನ್‌ ನಿಂದ ಸಿಗುತ್ತದೆ. ಪ್ರತಿನಿತ್ಯವೂ ನೀವು  ನಿಮ್ಮ  ತೂಕದ  ಪ್ರತೀ  1  ಕಿ.ಗ್ರಾಂ ಗೆ , 2.2 ಗ್ರಾಂ ಪ್ರೊಟೀನ್‌  ಸೇವಿಸಬೇಕು ( 1 ಪೌಂಡ್‌  ಗೆ 1 ಗ್ರಾಂ ). ಉದಾಹರಣೆ: ನಿಮ್ಮ  ತೂಕ 50 ಕಿ.ಗ್ರಾಂ  ಎಂದಾದರೆ (110 ಪೌಂಡು), ಅಗ  ನೀವು  50 ಗಿ 2.2 =111 ಗ್ರಾಂ ಪ್ರೊಟೀನ್‌  ಅನ್ನು  ದಿನದ 5-6  ಬಾರಿ ಆಹಾರಗಳ‌ ಸೇವನೆಯ ಮೂಲಕ  ದೇಹಕ್ಕೆ  ಸೇರಿಸಬೇಕು. ಹಾಗಾಗಿ, ನಿಮ್ಮ  ಆಹಾರದಲ್ಲಿ  ಪ್ರೊಟೀನ್‌ ಸಮೃದ್ಧವಾಗಿರಲಿ. ಪೂರಣಗಳ ಮೂಲಕ ತೆಗೆದುಕೊಳ್ಳುವುದಕ್ಕಿಂತಲೂ, ಆಹಾರದ ಮೂಲಕವೇ ಹೆಚ್ಚು ಪ್ರೊಟೀನ್‌ ಅನ್ನು  ಸೇವಿಸಿದರೆ ಒಳ್ಳೆಯದು.

6.ಪ್ರೊಟೀನ್‌  ಸಮೃದ್ಧ ಆಹಾರ ಮೂಲಗಳು: ಗಜಛಿy ಅಥವಾ ಹಾಲೊಡಕು-ಅಂದರೆ ಹಾಲನ್ನು ಒಡೆದು ಗಿಣ್ಣಾಗಿಸಿದ ಬಳಿಕ ದೊರಕುವ ನೀರು, ಮೀನು, ಹಾಲಿನ ಉತ್ಪನ್ನಗಳು (ಕಡಿಮೆ  ಕೊಬ್ಬಿನ  ವಿಧಗಳು), ಮಾಂಸ, ಕಾಳು ಹಾಗೂ ಬೀಜಗಳು (ಬಾದಾಮಿ, ಪೀನಟ್‌, ಕುಂಬಳಕಾಯಿ ಬೀಜ, ಸಾಸಿವೆ, ಸೂರ್ಯ ಕಾಂತಿ ಬೀಜ ಇತ್ಯಾದಿ).

7.ಹಾಲು ಸ್ನಾಯುಗಳ ಬೆಳವಣಿಗೆಗೆ ಬಹಳ ಉತ್ತಮವಾದ ಆಹಾರ. ಹಾಲಿನಲ್ಲಿ  ಎರಡು ವಿಧದ ಉತ್ಕೃಷ್ಟ  ಪ್ರೊಟೀನ್‌ಗಳಿವೆ. ಅಂದರೆ ಹಾಲಿನಲ್ಲಿ 80 % ನಷ್ಟು  ಹಾಲೊಡಕು ಇದ್ದರೆ, 20 %  ಕೇಸಿನ್‌ ಇದೆ, ಹಾಲೊಡಕು ಅಮೈನೋ ಅಸಿಡ್‌ನ್ನು  ಕ್ಷಿಪ್ರವಾಗಿ ಒಡೆಯುತ್ತದೆ. ವ್ಯಾಯಾಮದ  ಬಳಿಕ ಹಾಲೊಡಕನ್ನು  ಸೇವಿಸುವುದು ಬಹಳ ಒಳ್ಳೆಯದು. ಕೇಸಿನ್‌  ಬಹಳ  ನಿಧಾನವಾಗಿ  ಜೀರ್ಣವಾಗಿ,  ದೇಹಕ್ಕೆ ದೀರ್ಘ‌ ಕಾಲ, ನಿರಂತರ ಪ್ರೊಟೀನ್‌ನ್ನು  ಪೂರೈಸುತ್ತದೆ.
8. ಆರೋಗ್ಯಕರ ಕೊಬ್ಬುಗಳು: ಕೊಬ್ಬು ಇರುವ ಆಹಾರವನ್ನು ಆದಷ್ಟು ಕಡಿಮೆ  ಸೇವಿಸಿ. ಭಾರತದಲ್ಲಿ ಅನೇಕ ತಾಯಂದಿರು ಮಕ್ಕಳಿಗೆ ಹೇರಳವಾಗಿ ಬೆಣ್ಣೆ, ತುಪ್ಪಗಳನ್ನು  ತಿನ್ನಿಸುತ್ತಾರೆ. ಇವುಗಳಿಂದ ಮಕ್ಕಳ ತೂಕ ಹೆಚ್ಚುತ್ತದೆ ಎಂದು ಭಾವಿಸುತ್ತಾರೆ. ಆದರೆ, ತುಪ್ಪವು  ಸ್ಯಾಚುರೇಟೆಡ್‌ ಕೊಬ್ಬು ಆಗಿದ್ದು , ಇದು ಆರೋಗ್ಯಕರ ಕೊಬ್ಬು  ಅಲ್ಲ. ಮೋನೊಸ್ಯಾಚುರೇಟೆಡ್‌, ಪಾಲಿಸ್ಯಾಚುರೇಟೆಡ್‌  ಹಾಗೂ ಒಮೇಗಾ -3 ಫ್ಯಾಟಿ ಅಸಿಡ್‌ಗಳು  ಆರೋಗ್ಯಕರ ಕೊಬ್ಬುಗಳಾಗಿವೆ.
9. ಒಳ್ಳೆಯ ಕೊಬ್ಬುಗಳು: (ಕೋಲ್ಡ್‌ ಪ್ರಸ್‌ ) ಶೀತಲ ಗಾಣದ ಎಣ್ಣೆಗಳು (ಅಲಿವ್‌, ಸೂರ್ಯಕಾಂತಿ, ಅಗಸೆ, ಕ್ಯಾನೋಲ ಎಣ್ಣೆಗಳು ಇತ್ಯಾದಿ. )
10. ಸಂಕೀರ್ಣ ಕಾಬೋìಹೈಡ್ರೇಟ್‌ಗಳೂ ಸಹ ದೇಹದ ತೂಕ ಹೆಚ್ಚಿಸಲು ಅತ್ಯವಶ್ಯಕ.
11. ಬಿಯರ್‌ ಸೇವನೆಯು ತೂಕವನ್ನು  ಹೆಚ್ಚಿಸುತ್ತದೆ ಎಂಬುದು ಕೆಲವು ಜನರ ನಂಬಿಕೆ. ಆದರೆ, ಇದು ನಿಜವಲ್ಲ . ಬಿಯರ್‌  ನಿಮ್ಮ ಹೊಟ್ಟೆಯಲ್ಲಿ   ಕೊಬ್ಬು ಸಂಗ್ರಹವಾಗುವಂತೆ ಮಾಡುತ್ತದೆ.

12. ಪ್ರೊಟೀನ್‌  ಪೂರಣಗಳನ್ನು  ತೆಗೆದುಕೊಳ್ಳುತ್ತೀರಾದರೆ, ವೈದ್ಯರ ಸಲಹೆಯ  ಮೇರೆಗೆ  ತೆಗೆದುಕೊಳ್ಳಿ . ಆರೋಗ್ಯಕರ  ವಿಧಾನದಲ್ಲಿ  ದೇಹದ ತೂಕವನ್ನು  ಹೆಚ್ಚಿಸಿಕೊಳ್ಳಲು, ಒಬ್ಬ ಉತ್ತಮ ಆಹಾರ ತಜ್ಞರ ಅಥವಾ ವೈದ್ಯರ ಸಲಹೆಯನ್ನು ಪಡೆಯಿರಿ.

ಬುಧವಾರ, ಜೂನ್ 20, 2012

ಅಲರ್ಜಿ ಮೂಲದ ಕಣ್ಣುಬೇನೆ II Allergic Cojuctivitis

  • ಡಾ| ವಿವೇಕಾನಂದ ಯು.,ಅಸೋಸಿಯೇಟ್‌ ಪ್ರೊಫೆಸರ್‌ ನೇತ್ರ ಚಿಕಿತ್ಸಾ ವಿಭಾಗ 
  •  














    ಅಲರ್ಜಿ ಮೂಲದ ಕಣ್ಣುಬೇನೆಗೆ conjunctivitis ಕಾರಣ , ಕಂಜಂಕ್ಟಿವಾದಲ್ಲಿ , ಅಂದರೆ ಕಣ್ಣಿನ  ರೆಪ್ಪೆಯ  ಒಳಪದರವನ್ನು ಕಣ್ಣುಗುಡ್ಡೆಯೊಂದಿಗೆ ಸೇರಿಸುವ  ಅಂಗಾಂಶದಲ್ಲಿ  ಆಗುವ ಉರಿಯೂತ. ಅಲರ್ಜಿಕಾರಕ ಅಂಶಗಳ  ಕಾರಣದಿಂದಾಗಿ ಈ ಉರಿಯೂತ ಕಾಣಿಸಿಕೊಳ್ಳುತ್ತದೆ. ಹೂವುಗಳ ಪರಾಗ, ಪ್ರಾಣಿಗಳ  ಹೆರುಪೆ, ಧೂಳಿನ  ಕಣಗಳು... ಇವೆಲ್ಲವೂ ಅಲರ್ಜಿಕಾರಕ ಅಂಶಗಳಾಗಿವೆ.  ಅಲರ್ಜಿಕಾರಕ ಅಂಶಗಳಿಗೆ  ಬಹಳ 
    ಸಂವೇದನಾಶೀಲರಾಗಿರುವವರಲ್ಲಿ , ಆಯಾ  ಋತುಮಾನಕ್ಕೆ ತಕ್ಕಂತೆ (ಸಾಮಾನ್ಯವಾಗಿ ಬೇಸಗೆಯಲ್ಲಿ ) ಈ  ರೀತಿಯಲ್ಲಿ ಕಣ್ಣಿನ  ಉರಿಯೂತಗಳ ಲಕ್ಷಣಗಳು  ಹೆಚ್ಚಾಗಿ ಕಂಡು  ಬರುತ್ತವೆ.


    ಒಂದು ಅಂದಾಜಿನ ಪ್ರಕಾರ, ವರ್ಷದಲ್ಲಿ  ಸುಮಾರು 20% ಜನರಿಗೆ  ಸಾಮಾನ್ಯವಾಗಿ ಈ  ಬೇನೆ ಬಾಧಿಸುತ್ತದೆ. ಇವರಲ್ಲಿ  ಅರ್ಧದಷ್ಟು ಜನರಿಗೆ, ಕಣ್ಣುಬೇನೆಯ ವೈಯಕ್ತಿಕ ಅಥವಾ ಕೌಟುಂಬಿಕ ಹಿನ್ನೆಲೆ ಇರುತ್ತದೆ.

    ವ್ಯಕ್ತಿಯ ದೇಹದ ಪ್ರತಿರೋಧಕ ವ್ಯವಸ್ಥೆಯು, ಅಲರ್ಜಿಕಾರಕಕ್ಕೆ ತೋರಿಸುವ ಅಲರ್ಜಿ ಪ್ರತಿಕ್ರಿಯೆ ಅಥವಾ  ಒಗ್ಗದಿರುವಿಕೆಯ ಕಾರಣದಿಂದಾಗಿ ಅಲರ್ಜಿ ಮೂಲದ ಕಣ್ಣುಬೇನೆ  ಉಂಟಾಗುತ್ತದೆ. ಅಲರ್ಜಿಯ  ಕಾರಣದಿಂದಾಗಿ ಇತರ ಕಾಯಿಲೆಗಳು  ಬಾಧಿಸುವ - ಅಂದರೆ ಹೇ ಜ್ವರ, ಆಸ್ತಮಾ ಹಾಗೂ ಎಕ್ಸಿಮಾ... ಇತ್ಯಾದಿ ಲಕ್ಷಣಗಳಿರುವವರಿಗೆ ಕಣ್ಣು ಬೇನೆ ಹೆಚ್ಚಾಗಿ ಕಂಡು ಬರುತ್ತದೆ. ಕಣ್ಣುಬೇನೆಗೆ  ಹೆಚ್ಚು ಕಾರಣವಾಗಬಲ್ಲ  ಅಂಶಗಳು ಅಂದರೆ, ಹೂವುಗಳ ಪರಾಗ , ಹುಲ್ಲು  ಹಾಗೂ ಅಲರ್ಜಿಕಾರಕ ಅಂಶ‌ಗಳಿರುವ ಗಿಡ-ಮರಗಳು, ಪ್ರಾಣಿಗಳ ಹೆರುಪೆ, ಸುಗಂಧ ದ್ರವ್ಯಗಳು, ಸೌಂದರ್ಯ ವರ್ಧಕಗಳು, ಚರ್ಮದ  ಔಷಧಿಗಳು, ಕಲುಷಿತ ಗಾಳಿ, ಹೊಗೆ, ಧೂಳಿನ ಕಣಗಳು, ಕಣ್ಣಿನ ಹನಿಗಳು... ಇತ್ಯಾದಿ.
    ವರ್ಷವಿಡೀ  ಬಾಧಿಸುವ ಕಣ್ಣುಬೇನೆ  ಮನೆಯೊಳಗಿನ ಧೂಳು ಇತ್ಯಾದಿಗಳ ಕಾರಣದಿಂದಾಗಿ ನಿರಂತರ ಬಾಧಿಸುತ್ತದೆ(ಸಾಧಾರಣವಾಗಿ ಎಲ್ಲ  ಮನೆಗಳಲ್ಲಿ ರುವ  ಸಣ್ಣ ಸೊಳ್ಳೆಯ  ರೀತಿಯ ಒಂದು ಕೀಟ ಕೂಡ  ಇದಕ್ಕೆ ಕಾರಣವಾಗಬಹುದು). ಹೆರುಪೆ ಇತ್ಯಾದಿಗಳ  ಅಲರ್ಜಿಯ ಕಾರಣದಿಂದಾಗಿ ಉಂಟಾಗುವ ಕಣ್ಣುಬೇನೆಗೆ  ಪ್ಯಾಪಿಲ್ಲರಿ ಕಣ್ಣುಬೇನೆ  ಎಂದು ಹೆಸರು. ಇದು ಬಹಳ  ತೀವ್ರ ಸ್ವರೂಪದ್ದು. ಆದರೆ ಈ ರೀತಿಯ ಕಣ್ಣು ಬೇನೆ  ಬಾಧಿಸುವುದು ಬಹಳ  ಅಪರೂಪ.

    ಲಕ್ಷಣಗಳು
    ಋತುಮಾನಕ್ಕೆ  ಸಂಬಂಧಿಸಿದಂತೆ  ಬರುವ ಕಣ್ಣುಬೇನೆಯಲ್ಲಿ  ಈ ಕೆಳಗಿನ ಲಕ್ಷಣಗಳು ಇರಬಹುದು-ಕಣ್ಣು ಕೆಂಪಗಾಗುವುದು, ಕಣ್ಣಿನ ಕಂಜಕ್ಟಿವಾ ಭಾಗದ, ಅಂದರೆ ಕಣ್ಣಿನ  ರೆಪ್ಪೆಯ  ಒಳಭಾಗದ ಪೊರೆಯನ್ನು  ಕಣ್ಣು ಗುಡ್ಡೆಗೆ ಜೋಡಿಸುವ ಭಾಗದಲ್ಲಿ ರಕ್ತ ನಾಳಗಳು  ಉಬ್ಬುವುದು, ಕಣ್ಣಿನಲ್ಲಿ ಉರಿಯುವಂತಹ  ಆಥವಾ ತುರಿಕೆಯ ಸಂವೇದನೆ, ಕಣ್ಣು ರೆಪ್ಪೆಗಳು ಊದಿಕೊಳ್ಳುವುದು, ಕಣ್ಣಿನಲ್ಲಿ  ನಿರಂತರ ನೀರು ಸುರಿಯುವುದು, ಕಣ್ಣಿನಲ್ಲಿ ಜಿಗುಟಾದ  ಹಿಕ್ಕು ದ್ರವ  ಒಸರುವುದು.
    ವರ್ಗೀಕರಣ / ವಿಧಗಳು

    ಅಲರ್ಜಿ ಮೂಲದ ಋತುಸಂಬಂಧಿ ಕಣ್ಣುಬೇನೆ (SAC)ಹಾಗೂ ಅಲರ್ಜಿ ಮೂಲದ ನಿರಂತರ  ಕಣ್ಣುಬೇನೆ ( PAC)

    ಇವೆರಡೂ  ಸಹ ತೀವ್ರ ಸ್ವರೂಪದ ಕಣ್ಣು ಬೇನೆಗಳಾಗಿವೆ. ಋತು ಸಂಬಂಧಿ ಕಣ್ಣುಬೇನೆ  ಎಂಬುದು  ಸಾಮಾನ್ಯವಾಗಿ ಕಂಡು ಬರುವ ಕಣ್ಣು ಬೇನೆಯಾಗಿದೆ. ಇವೆರಡರಲ್ಲೂ  ಕಣ್ಣು ತುರಿಕೆ , ಕಣ್ಣು ಗಲಾಬಿ ಬಣ್ಣದಿಂದ ಕೆಂಪು ಬಣ್ಣದವರೆಗೆ ಇರುವುದು... ಇತ್ಯಾದಿ  ಲಕ್ಷಣಗಳಿರುತ್ತವೆ.  ಈ  ಎರಡೂ  ವಿಧದ ಕಣ್ಣುಬೇನೆಗಳಲ್ಲಿ  ಮಾಸ್ಟ್‌ ಕೋಶಗಳ ಹಿನ್ನಲೆ ಇರುತ್ತದೆ.

    ವರ್ನಲ್‌ ಕೆರಾಟೊ ಕಣ್ಣು ಬೇನೆ (VKC)  ಹಾಗೂ ಅಟಾಪಿಕ್‌ ಕೆರಾಟೋ ಕಣ್ಣುಬೇನೆ (AKC)
    ಇವೆರಡೂ  ಸಹ ದೀರ್ಘ‌ಕಾಲಿಕ ಅಲರ್ಜಿ  ಮೂಲದ  ಖಾಯಿಲೆಗಳು.  ಅಥವಾ ವರ್ನಲ್‌  ಕೆರಾಟೊ ಕಣ್ಣುಬೇನೆ  ಎಂಬುದು ಬಾಲ್ಯದಲ್ಲಿ ಕಂಡು ಬರುವ ಕಾಯಿಲೆ, ಉಷ್ಣ ಪ್ರದೇಶಗಳಲ್ಲಿ  ವಾಸಿಸುವವರಲ್ಲಿ , 4-15 ವಯಸ್ಸಿನ ನಡುವೆ ಇದು  ಹೆಚ್ಚಾಗಿ  ಕಂಡು ಬರುತ್ತದೆ. ಎರಡೂ  ಕಣ್ಣುಗಳ ಮೇಲಿನ ಕಂಜಕ್ಟಿವಾದಲ್ಲಿ  ಈ ಕೆಳಗಿನ ಲಕ್ಷಣಗಳು ಗೋಚರಿಸುತ್ತವೆ- ಇದರ ಗಡ್ಡೆಗಳು ಸಾಮಾನ್ಯವಾಗಿ, ಗಟ್ಟಿಯಾದ, ಚಪ್ಪಟೆಯಾದ ಪಾಪಿಲ್ಲೆಗಳು ನಡೆಹಾದಿಯ ಕಲ್ಲುಗಳಂತೆ ರಚನೆಯಾಗಿರುತ್ತವೆ. ಇದಲ್ಲದೆ ಕಣ್ಣುಗುಡ್ಡೆಯ ಅಂಚಿನಲ್ಲಿ (ಲಿಂಬಸ್‌) ಅಂಟಾದ ದಪ್ಪದ ಅಂಗಾಂಶಗಳು ಕಾಣಿಸಿಕೊಳ್ಳುವುದಲ್ಲದೆ ಅಂಚಿನ ಆಸುಪಾಸಿನಲ್ಲಿ ಬಿಳಿಯಾದ ಉಬ್ಬು ಬಿಂದುಗಳು ಕಾಣಿಸಿಕೊಳ್ಳುತ್ತವೆ.

    ವರ್ನಲ್‌  ಕೆರಾಟೊ ಕಣ್ಣುಬೇನೆಯಲ್ಲಿ ಕಾರ್ನಿಯಾ ತೊಂದರೆಗೀಡಾಗುವುದು ಪ್ರಾಥಮಿಕವಾಗಿರಬಹುದು ಇಲ್ಲವೇ ಕಣ್ಣುಗುಡ್ಡೆಯ ಅಂಚಿನ ಗಡ್ಡೆಗಳಿಂದ ಹರಡಿದ ದ್ವಿತೀಯ ಹಂತದ್ದಾಗಿರಬಹುದು.
    ಅಟಾಪಿಕ್‌ ಕೆರಾಟೋ  ಕಣ್ಣುಬೇನೆ  ಅಥವಾ  ಅಓಇ,  ಇದು ಪುರುಷರಲ್ಲಿ  30  ರಿಂದ 50  ವಯಸ್ಸಿನ ನಡುವೆ  ಹೆಚ್ಚು  ಕಂಡು ಬರುತ್ತದೆ. 20-40% ಜನರಲ್ಲಿ ಚರ್ಮದ ಹೆರುಪೆಗಳ ಕಾರಣದಿಂದ ಹಾಗೂ 95% ಜನರಲ್ಲಿ  ಎಕ್ಸಿಮಾ... ಇತ್ಯಾದಿ ಅಂಟು ರೋಗಗಳ ಕಾರಣದಿಂದ  ಹಾಗೂ 87%  ಜನರಲ್ಲಿ  ಆಸ್ತಮಾದ ಮುನ್ಸೂಚನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಈ  ಕಣ್ಣು ಬೇನೆಯ ಲಕ್ಷಣಗಳು ಕಾಲಮಾನ ಅಥವಾ ಋತುಮಾನ ಬದಲಾದಂತೆ ವ್ಯತ್ಯಾಸಗೊಳ್ಳುವುದಿಲ್ಲ  ಅಥವಾ ಎಲ್ಲೊ ಸಣ್ಣ ಮಟ್ಟಿನ  ವ್ಯತ್ಯಾಸ ಗೋಚರಿಸಬಹುದು (ಇದಕ್ಕೆ ವ್ಯತಿರಿಕ್ತವಾಗಿ ವರ್ನಲ್‌ ಕಣ್ಣುಬೇನೆಯು  ಬೇಸಗೆಯಲ್ಲಿ  ಮಾತ್ರವೇ  ಕಂಡುಬರುತ್ತದೆ) , ಕಣ್ಣಿನಲ್ಲಿ  ತುರಿಕೆ,  ಕಣ್ಣಿನಲ್ಲಿ  ನಿರಂತರ ನೀರು ಸೋರುವುದು, ಜಿಗುಟಾದ ಹಿಕ್ಕು ದ್ರವ ಒಸರುವುದು, ಕಣ್ಣುರಿ, ಬೆಳಕನ್ನು  ಕಾಣಲು ಆಗದಿರುವುದು, ದೃಷ್ಟಿ ಮಂದವಾಗುವುದು... ಇತ್ಯಾದಿ ಲಕ್ಷಣಗಳು  ಇರುತ್ತವೆ.
    ಜಯಂಟ್‌ ಪ್ಯಾಪಿಲ್ಲರಿ
    ಕಂಜಂಕ್ಟಿವೈಟಿಸ್‌

    ಈ ರೀತಿಯ ಕಣ್ಣು ಬೇನೆಗೆ ಕಣ್ಣಿನ ಅಲರ್ಜಿ ಕಾರಣವಲ್ಲ . ಕಂಜಂಕ್ಟಿವಾಕ್ಕೆ  ಮತ್ತೆ ಮತ್ತೆ ಅಗುವ ಕಿರಿಕಿರಿಯ ಕಾರಣದಿಂದ ಈ ಕಣ್ಣು ಬೇನೆ  ಬಾಧಿಸುತ್ತದೆ. ಕಾಂಟಾಕ್ಟ್  ಲೆನ್ಸ್‌ ಉಪಯೋಗಿಸುವವರಲ್ಲಿ , ಕಂಜಂಕ್ಟಿವಾದ  ಮೇಲ್ಮೈಗೆ ಲೆನ್ಸ್‌ ನ  ಸಂಪರ್ಕದಿಂದಾಗುವ ಕಿರಿಕಿರಿಯಿಂದಾಗಿ  ಜಯಂಟ್‌  ಪ್ಯಾಪಿಲ್ಲರಿ ಕಂಜಂಕ್ಟಿವೈಟಿಸ್‌ (GPC)  ಬಾಧಿಸುತ್ತದೆ.
    ಫ್ಲೈಸ್ಟೆನ್ಯೂಲಾರ್‌ ಕೆರಾಟೋ ಕಣ್ಣು ಬೇನೆ : ಬ್ಯಾಕ್ಟೀರಿಯಾದ ಪ್ರತಿಕ್ರಿಯೆಗೆ ಕಣ್ಣಿನ ಅತಿಸಂವೇದನಾಶೀಲತೆ ಅಥವಾ ಉರಿಯೂತದ ಕಾರಣದಿಂದಾಗಿ ಈ ಕಣ್ಣು  ಬೇನೆ ಬಾಧಿಸುತ್ತದೆ. ಈ  ಕಾಯಿಲೆಗೆ ಸಾಮಾನ್ಯವಾಗಿ ಕಾರಣವಾಗುವ ರೋಗಾಣುಗಳು ಅಂದರೆ  ಸ್ಟಾಫೈಲೊಕಾಕಸ್‌ ಔರಿಯಸ್‌ ಮೈಕೋಬ್ಯಾಕ್ಟೀರಿಯಂ ಟ್ಯುಬಕ್ಯುìಲೋಸಿಸ್‌ಠಿ  ಕ್ಲೆಮೈಡಿಯಾ   ಹಾಗೂ ಕ್ಯಾಂಡಿಡ  ಚಿಕಿತ್ಸೆಗಳು.

    ಸದ್ಯ  ಇರುವ ಕಣ್ಣಿನ ರೋಗ ಲಕ್ಷಣಗಳು  ಅಲರ್ಜಿ ಮೂಲದವೋ ಅಥವಾ ವೈರಾಣುಗಳ ಮೂಲದವೋ  ಎಂಬುದನ್ನು ಪತ್ತೆ ಮಾಡಲು, ವೈದ್ಯರು ವಿವರವಾದ ಪರೀಕ್ಷೆಗಳನ್ನು  ನಡೆಸುತ್ತಾರೆ, ಕಂಜಂಕೈrವಲ್‌ ಸಾðಪಿಂಗ್‌ ಪರೀಕ್ಷೆಯ ಮೂಲಕ, ಅಲ್ಲಿ ಈಯಸಿನೊಫೀಲಿಯಾದ ಇರುವಿಕೆಯನ್ನು  ಗಮನಿಸುತ್ತಾರೆ.
    ಅಲರ್ಜಿಕಾರಕವನ್ನು ನಾಶಗೊಳಿಸಿದ ನಂತರ, ಸಣ್ಣದಾಗಿ ಇರುವ ಲಕ್ಷಣಗಳ ಉಪಶಮನಕ್ಕಾಗಿ ಕೋಲ್ಡ್‌   ಕಂಪ್ರಸ್‌ ಅನ್ನು  ಉಪಯೋಗಿಸುತ್ತಾರೆ. ಯಾವುದೇ ಔಷಧಿಗಳನ್ನು  ಉಪಯೋಗಿಸದೆಯೇ ರೋಗಲಕ್ಷಣಗಳಿಂದ ಮುಕ್ತವಾಗಲು ಇದು ಬಹಳ ತ್ವರಿತ ಹಾಗೂ ಸುಲಭ ವಿಧಾನವಾಗಿದೆ.
    ಕಣ್ಣಿನ ತುರಿಕೆ ಹಾಗೂ ಕಣ್ಣುರಿಯಂತಹ  ಲಕ್ಷಣಗಳ ನಿವಾರಣೆಗಾಗಿ, ಕೆಲವು ಸಲ ಆಂಟಿ ಹಿಸ್ಟಾಮೈನ್‌ ಔಷಧಿಗಳನ್ನೂ  ಸೂಚಿಸುತ್ತಾರೆ.

    ಕೋಲ್ಡ್‌ ಕಂಪೆೆÅಸ್‌ ವಿಧಾನದಲ್ಲಿ, ರೋಗಿಗೆ ತನ್ನ ರೋಗಲಕ್ಷಣಗಳಿಂದ ಉಪಶಮನ ದೊರಕಲು ಹೆಚ್ಚು  ಸಹಾಯವಾಗದೆ, ಚಿಕಿತ್ಸೆ ಪರಿಣಾಮಕಾರಿಯಾಗಿಲ್ಲದಿದ್ದರೆ, ಆಗ ಮಾಸ್ಟ್‌ ಸೆಲ್ಸ್‌  ಸ್ಟೆಬಿಲಾಯಿಸರನ್ನು  ಉಪಯೋಗಿಸಬಹುದು. ಇವುಗಳ  ಪರಿಣಾಮವು ಬಹಳ ನಿಧಾನವಾಗಿದ್ದು ,  ಅಲ್ಪ  ಪ್ರಮಾಣದ ಅಡ್ಡ  ಪರಿಣಾಮಗಳೂ ಇರಬಹುದು. ಈ ಮಾಸ್ಟ್‌ ಸೆಲ್‌  ಸ್ಟೆಬಿಲಾಯಿಸರ್‌ ಔಷಧಿಗಳು ಸ್ಟೀರಾಯ್ಡ  ರಹಿತ ನಿಯಂತ್ರಕ ವರ್ಗಕ್ಕೆ ಸೇರಿದ ಔಷಧಿಗಳಾಗಿವೆ. ರಾಸಾಯನಿಕಗಳ ಕಾರಣದಿಂದ ಉಂಟಾದ ಕಣ್ಣಿನ ಉರಿಯೂತವನ್ನು ಇವು ಕಡಿಮೆಗೊಳಿಸುತ್ತವೆ.

    ಡಿಕಂಜೆಸ್ಟೆಂಟ್‌ಗಳನ್ನು  ಸಹ ವೈದ್ಯರು ಕೆಲವೊಮ್ಮೆ ಸೂಚಿಸಬಹುದು. ಕೆಲವು  ಸಲ ಆಂಟಿ ಹಿಸ್ಟಾಮಿನ್‌ ಹಾಗೂ ಮಾಸ್ಟ್‌ ಸೆಲ್‌ ಸ್ಟೆಬಿಲಾಯಿಸಿಂಗ್‌ ಈ ಎರಡೂ ಪ್ರಕ್ರಿಯೆಗಳನ್ನು  ತೋರಿಸುವ ದ್ವಿ-ಚಟುವಟಿಕೆಯ ಔಷಧಿಗಳನ್ನು  ಸಹ ವೈದ್ಯರು ಸೂಚಿಸಬಹುದು.
    ಕಣ್ಣಿನ ಸ್ಟೀರಾಯ್ಡ  ಬಿಂದುಗಳು
    ಈ  ಬಿಂದುಗಳನ್ನು   ಉಪಯೋಗಿಸುವುದು  ಬಹಳ ಅಪರೂಪ. ಉರಿಯೂತದ ನಿವಾರಣೆಯಲ್ಲಿ  ಸ್ಟೀರಾಯ್ಡಗಳು ಬಹಳ ಪರಿಣಾಮಕಾರಿ ಆಗಿದ್ದರೂ ಸಹ, ಬೇರೆ ಔಷಧಿಗಳು ವಿಫ‌ಲವಾದಾಗ ಮಾತ್ರವೇ  ಈ  ಸ್ಟೀರಾಯ್ಡಗಳನ್ನು  ಉಪಯೋಗಿಸಬೇಕು. ಸೋಂಕು ಹಾಗೂ ಇನ್ನಿತರ ಕಾರಣಗಳಿಂದಾಗಿ  ಉರಿಯೂತದ ಕಾರಣದಿಂದಲ್ಲದ ಕಣ್ಣುಬೇನೆ ಎಂಬುದನ್ನು ಖಚಿತ ಪಡಿಸಿಕೊಂಡು, ನುರಿತ ಕಣ್ಣಿನ ತಜ್ಞರ ಸಲಹೆಯ ಮೇರೆಗೆ  ಈ ಔಷಧಿಯನ್ನು  ಉಪಯೋಗಿಸಬಹುದು. (ಸ್ಟೀರಾಯ್ಡ ಗಳ ಅಸರ್ಮಕ  ಅಥವಾ ಅನುಚಿತ ಉಪಯೋಗದಿಂದ ಕೆಲವು ರೀತಿಯ ಕಣ್ಣಿನ ತೊಂದರೆಗಳು ಬಿಗಡಾಯಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಎಚ್ಚರ ಅಗತ್ಯ.)

    ಕಣ್ಣುಗಳನ್ನು ಸ್ವತ್ಛ ಹಾಗೂ ಸುರಕ್ಷಿತವಾಗಿರಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಕೂಡ, ಕಣ್ಣುಬೇನೆ ಅಥವಾ ಕಂಜಂಕ್ಟಿವಿಟಿಸ್‌ ವಿರುದ್ಧ ರಕ್ಷಣೆ  ಪಡೆಯಬಹುದು, ಕಾಂಟಾಕ್ಟ್  ಲೆನ್ಸ್‌  ಉಪಯೋಗಿಸವವರು ಈ ಬಗ್ಗೆ  ವಿಶೇಷ ಕಾಳಜಿ ವಹಿಸಬೇಕು. ಪರಾಗ ಅಥ‌ವಾ  ಧೂಳುಗಳ ಅಲರ್ಜಿ ಇರುವವರು,  ಈ ಅಲರ್ಜಿಕಾರಕಗಳು ಹೆಚ್ಚಿನ ಮಟ್ಟದಲ್ಲಿರುವ  ಸಂದರ್ಭಗಳಲ್ಲಿ  ಅದಷ್ಟು ಮನೆಯ ಒಳಗಡೆಯೇ ಇದ್ದರೆ  ಉತ್ತಮ. ಈ ಸಂದ‌ರ್ಭಗಳಲ್ಲಿ  ಅಲರ್ಜಿ ಇರುವವರು ತಮ್ಮ  ಮನೆಯ ಕಿಟಿಕಿ, ಬಾಗಿಲುಗಳನ್ನು  ಮುಚ್ಚಿಕೊಂಡಿದ್ದರೆ ಅಥವಾ  ಬೇಸಗೆಯ ಸಂದರ್ಭದಲ್ಲಿ  ಎ.ಸಿ.  ಉಪಯೋಗಿಸಿದರೆ ಉಪಯುಕ್ತ. ಈ ಕ್ರಮಗಳಿಂದ ಅಲರ್ಜಿಕಾರಕಗಳನ್ನು  ದೂರವಿರಿಸಿ, ಅಲರ್ಜಿಮೂಲದ ಕಂಜಂಕ್ಟಿವೈಟಿಸ್‌ನಿಂದ  ರಕ್ಷಣೆ  ಪಡೆಯಬಹುದು.

    ಆಂಟಿ ಹಿಸ್ಟಾಮಿನ್‌ಗಳು, ಮಾಸ್ಟ್‌ ಸೆಲ್ಸ್‌  ಸ್ಟೆಬಿಲಾಯಿಸರ್‌ಗಳು ಹಾಗೂ ಸ್ಟೀರಾಯ್ಡ ರಹಿತ ಉರಿಯೂತ ನಿವಾರಕ ಔಷಧಿಗಳು ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಿಗಳಾಗಿವೆ, ಕೆಲವು ಅಡ್ಡಪರಿಣಾಮಗಳ ಸಾಧ್ಯತೆಗಳಿರುವ ಕಾರಣ ಕಾರ್ಟಿಕೋಸ್ಟೀರಾಯ್ಡ ಔಷಧಿಗಳನ್ನು  ತೀವ್ರ ಸಂದರ್ಭಗಳಲ್ಲಿ, ವೈದ್ಯರ  ಉಪಸ್ಥಿತಿಯಲ್ಲಿಯೇ ಉಪಯೋಗಿಸಬೇಕು. ಅಲರ್ಜಿಕಾರಕ ಪತ್ತೆಯಾದ ನಂತರ ರೋಗಿಯು ಅಂತಹ ಅಲರ್ಜಿಕಾರಕಗಳಿಂದ ಆದಷ್ಟು ದೂರವಿದ್ದರೆ ಉತ್ತಮ.

    ವೈದ್ಯರನ್ನು ಸಂಪರ್ಕಿಸುವ ಮೊದಲು ರೋಗಿಯು ಕಣ್ಣಿನಲ್ಲಿ  ಉಂಟಾದ ಅಲರ್ಜಿ ಅಥವಾ ರೋಗ ಲಕ್ಷಣಗಳನ್ನು  ಸ್ವತ್ಛಗೊಳಿಸುವುದಾಗಲಿ, ಕಣ್ಣುಗಳಿಗೆ  ಬಿಸಿ ನೀರನ್ನು ತಾಗಿಸುವುದಾಗಲೀ ಮಾಡಬಾರದು . ಕಣ್ಣುಗಳಿಗೆ ಯಾವುದೇ ರೀತಿಯ ಔಷಧಿಯನ್ನು  ಉಪಯೋಗಿಸುವುದಕ್ಕೆ ಮೊದಲು, ಕಣ್ಣಿನ ವೈದ್ಯರ ಸಲಹೆ-ಸೂಚನೆಯನ್ನು  ಪಡೆಯುವುದು ಅತ್ಯವಶ್ಯಕ.

    ಗಮನಿಸಿ: ನೀವು  ಗರ್ಭಿಣಿಯಾಗಿದ್ದರೆ ಅಥವಾ ಮಗುವಿಗೆ ಹಾಲೂಡಿಸುವ ತಾಯಿಯಾಗಿದ್ದರೆ, ಈ ಬಗ್ಗೆ ನಿಮ್ಮ ವೈದ್ಯರು ಆಥವಾ ಔಷಧಿಯ ಅಂಗಡಿಯವರಿಗೆ ತಿಳಿಸಿ. ಯಾಕೆಂದರೆ, ಕೆಲವು ಔಷಧಿ, ಚಿಕಿತ್ಸೆ ಹಾಗೂ ಕಣ್ಣಿನ  ಬಿಂದುಗಳನ್ನು ಗರ್ಭಿಣಿಯರು ಹಾಗೂ ಹಾಲೂಡಿಸುವ ತಾಯಂದಿರು ಉಪಯೋಗಿಸಬಾರದು.
    ಜಯಂಟ್ಸ್‌  ಪ್ಯಾಪಿಲ್ಲರಿ
    ಕಣ್ಣುಬೇನೆ ಚಿಕಿತ್ಸೆ

    ಈ ರೀತಿಯ ಕಣ್ಣು  ಬೇನೆಗೆ ಪ್ರಮುಖ ಕಾರಣ ಕಣ್ಣಿ¡ನ ಕಾಂಟ್ಯಾಕ್ಟ್ ಲೆನ್ಸ್‌ಗಳು. ಕಣ್ಣುಬೇನೆಯ ಲಕ್ಷಣಗಳು ಪೂರ್ತಿ ಕಡಿಮೆಯಾಗುವವರೆಗೆ ಕಾಂಟ್ಯಾಕ್ಟ್  ಲೆನ್ಸ್‌ಗಳನ್ನು ಬಳಸದೇ ಇರುವುದೇ ಇದಕ್ಕೆ ಚಿಕಿತ್ಸೆಯಾಗಿದೆ. ಲಕ್ಷಣಗಳು ಕಡಿಮೆಯಾಗಿ ಮತ್ತೂಮ್ಮೆ  ಈ ಲೆನ್ಸ್‌  ಆಥವಾ ಮಸೂರಗಳನ್ನು  ಉಪಯೋಗಿಸುವುದಿದ್ದರೆ,  ಆಗ ಉತ್ತಮ  ಗುಣಮಟ್ಟದ ಮಸೂರಗಳನ್ನೇ  ಉಪಯೋಗಿಸಿ. ಮಸೂರಗಳ ಸ್ವತ್ಛತೆ ಯುತ್ತ ಗಮನಹರಿಸಿ. ಈ ರೀತಿಯ ಕಣ್ಣು ಬೇನೆಗೆ ಆಂಟಿ ಹಿಸ್ಟಾಮಿನ್‌ ಕಣ್ಣಿನ  ಬಿಂದುಗಳು ಅಥವಾ ಮಾಸ್ಟ್‌ ಸೆಲ್ಸ್‌ ಸ್ಟೆಬಿಲಾಯಿಸರ್‌ (ಮೇಲೆ ಹೇಳಿದ)  ಕಣ್ಣಿನ  ಬಿಂದುಗಳನ್ನು  ಉಪಯೋಗಿಸಿ ರೋಗ ಲಕ್ಷಣಗಳನ್ನು  ಕಡಿಮೆ ಮಾಡಿಕೊಳ್ಳಬಹುದು.
    ಸಂಪರ್ಕದ  ಕಾರಣದಿಂದ
    ಬರುವ ಕಣ್ಣುಬೇನೆಗೆ ಚಿಕಿತ್ಸೆ


    ಯಾವುದು ಅಲರ್ಜಿ ಮೂಲದ ಕಣ್ಣುಬೇನೆ ಉಂಟು  ಮಾಡುತ್ತದೆಯೋ, ಅದರಿಂದ ತಪ್ಪಿಸಿಕೊಳ್ಳುವುದೇ ಅದಕ್ಕೆ ಚಿಕಿತ್ಸೆ. ಸೌಂದರ್ಯವರ್ಧಕದ  ಅಲರ್ಜಿಯಿಂದ ಕಣ್ಣುಬೇನೆ ಉಂಟಾಗಿದ್ದರೆ, ಅಲರ್ಜಿಯು ಸಂಪೂರ್ಣ ಗುಣವಾಗುವುದಕ್ಕೆ  ಮೊದಲು ಮತ್ತೂಂದು  ಬದಲೀ ಸೌಂದರ್ಯವರ್ಧಕವನ್ನು  ಉಪ ಯೋಗಿಸಬಾರದು, ಕಣ್ಣಿನ ಬೇರೆ ಯಾವುದೊ ವಿಧದ ಕಾಯಿಲೆಗಳಿಗೆ ಉಪಯೋಗಿಸುವ ಕಣ್ಣಿನ ಹನಿಗಳನ್ನು  ಈ ತೊಂದರೆಗೆ ಉಪ ಯೋಗಿಸಿದಾಗಲೂ ಕಣ್ಣಿನ ಅಲರ್ಜಿ ಬಾಧಿಸುತ್ತದೆ. ಸಾಮಾನ್ಯವಾಗಿ ಅಲರ್ಜಿಯ ಲಕ್ಷಣಗಳು ಕಡಿಮೆ ಅಗು ವವರೆಗೆ ಕಣ್ಣನ್ನು  ತಂಪಾಗಿರಿಸಲು  ಈ ಔಷಧಿಗಳನ್ನು  ಅರಂಭದಲ್ಲಿ  ಸೂಚಿ ಸುತ್ತಾರೆ. ಹಿಸ್ಟಾಮಿನ್‌ ಕಣ್ಣಿನ ಹನಿಗಳು ಆಥವಾ ಮಾಸ್ಟ್‌ ಸೆಲ್‌ ಸ್ಟೆಬಿಲಾಯಿಸರ್‌ ಕಣ್ಣಿನ ಹನಿಗಳಿಂದ ಈ ರೀತಿಯ ಕಣ್ಣು ಬೇನೆಗಳಿಗೆ  ಅಷ್ಟೊಂದು ಪ್ರಯೋ ಜನವಾಗದು. ಈ  ಸ್ಥಿತಿಯಲ್ಲಿ  ಯಾವ ರೀತಿಯ ಕಣ್ಣಿನ ಹನಿಗಳನ್ನು  ಉಪಯೋಗಿಸಿದರೆ ಉತ್ತಮ  ಎಂದು ತಿಳಿಯಲು  ತಜ್ಞರ ಸಲಹೆ ಆವಶ್ಯಕ.