Translate

ಬುಧವಾರ, ಜೂನ್ 20, 2012

ಅಲರ್ಜಿ ಮೂಲದ ಕಣ್ಣುಬೇನೆ II Allergic Cojuctivitis

  • ಡಾ| ವಿವೇಕಾನಂದ ಯು.,ಅಸೋಸಿಯೇಟ್‌ ಪ್ರೊಫೆಸರ್‌ ನೇತ್ರ ಚಿಕಿತ್ಸಾ ವಿಭಾಗ 
  •  














    ಅಲರ್ಜಿ ಮೂಲದ ಕಣ್ಣುಬೇನೆಗೆ conjunctivitis ಕಾರಣ , ಕಂಜಂಕ್ಟಿವಾದಲ್ಲಿ , ಅಂದರೆ ಕಣ್ಣಿನ  ರೆಪ್ಪೆಯ  ಒಳಪದರವನ್ನು ಕಣ್ಣುಗುಡ್ಡೆಯೊಂದಿಗೆ ಸೇರಿಸುವ  ಅಂಗಾಂಶದಲ್ಲಿ  ಆಗುವ ಉರಿಯೂತ. ಅಲರ್ಜಿಕಾರಕ ಅಂಶಗಳ  ಕಾರಣದಿಂದಾಗಿ ಈ ಉರಿಯೂತ ಕಾಣಿಸಿಕೊಳ್ಳುತ್ತದೆ. ಹೂವುಗಳ ಪರಾಗ, ಪ್ರಾಣಿಗಳ  ಹೆರುಪೆ, ಧೂಳಿನ  ಕಣಗಳು... ಇವೆಲ್ಲವೂ ಅಲರ್ಜಿಕಾರಕ ಅಂಶಗಳಾಗಿವೆ.  ಅಲರ್ಜಿಕಾರಕ ಅಂಶಗಳಿಗೆ  ಬಹಳ 
    ಸಂವೇದನಾಶೀಲರಾಗಿರುವವರಲ್ಲಿ , ಆಯಾ  ಋತುಮಾನಕ್ಕೆ ತಕ್ಕಂತೆ (ಸಾಮಾನ್ಯವಾಗಿ ಬೇಸಗೆಯಲ್ಲಿ ) ಈ  ರೀತಿಯಲ್ಲಿ ಕಣ್ಣಿನ  ಉರಿಯೂತಗಳ ಲಕ್ಷಣಗಳು  ಹೆಚ್ಚಾಗಿ ಕಂಡು  ಬರುತ್ತವೆ.


    ಒಂದು ಅಂದಾಜಿನ ಪ್ರಕಾರ, ವರ್ಷದಲ್ಲಿ  ಸುಮಾರು 20% ಜನರಿಗೆ  ಸಾಮಾನ್ಯವಾಗಿ ಈ  ಬೇನೆ ಬಾಧಿಸುತ್ತದೆ. ಇವರಲ್ಲಿ  ಅರ್ಧದಷ್ಟು ಜನರಿಗೆ, ಕಣ್ಣುಬೇನೆಯ ವೈಯಕ್ತಿಕ ಅಥವಾ ಕೌಟುಂಬಿಕ ಹಿನ್ನೆಲೆ ಇರುತ್ತದೆ.

    ವ್ಯಕ್ತಿಯ ದೇಹದ ಪ್ರತಿರೋಧಕ ವ್ಯವಸ್ಥೆಯು, ಅಲರ್ಜಿಕಾರಕಕ್ಕೆ ತೋರಿಸುವ ಅಲರ್ಜಿ ಪ್ರತಿಕ್ರಿಯೆ ಅಥವಾ  ಒಗ್ಗದಿರುವಿಕೆಯ ಕಾರಣದಿಂದಾಗಿ ಅಲರ್ಜಿ ಮೂಲದ ಕಣ್ಣುಬೇನೆ  ಉಂಟಾಗುತ್ತದೆ. ಅಲರ್ಜಿಯ  ಕಾರಣದಿಂದಾಗಿ ಇತರ ಕಾಯಿಲೆಗಳು  ಬಾಧಿಸುವ - ಅಂದರೆ ಹೇ ಜ್ವರ, ಆಸ್ತಮಾ ಹಾಗೂ ಎಕ್ಸಿಮಾ... ಇತ್ಯಾದಿ ಲಕ್ಷಣಗಳಿರುವವರಿಗೆ ಕಣ್ಣು ಬೇನೆ ಹೆಚ್ಚಾಗಿ ಕಂಡು ಬರುತ್ತದೆ. ಕಣ್ಣುಬೇನೆಗೆ  ಹೆಚ್ಚು ಕಾರಣವಾಗಬಲ್ಲ  ಅಂಶಗಳು ಅಂದರೆ, ಹೂವುಗಳ ಪರಾಗ , ಹುಲ್ಲು  ಹಾಗೂ ಅಲರ್ಜಿಕಾರಕ ಅಂಶ‌ಗಳಿರುವ ಗಿಡ-ಮರಗಳು, ಪ್ರಾಣಿಗಳ ಹೆರುಪೆ, ಸುಗಂಧ ದ್ರವ್ಯಗಳು, ಸೌಂದರ್ಯ ವರ್ಧಕಗಳು, ಚರ್ಮದ  ಔಷಧಿಗಳು, ಕಲುಷಿತ ಗಾಳಿ, ಹೊಗೆ, ಧೂಳಿನ ಕಣಗಳು, ಕಣ್ಣಿನ ಹನಿಗಳು... ಇತ್ಯಾದಿ.
    ವರ್ಷವಿಡೀ  ಬಾಧಿಸುವ ಕಣ್ಣುಬೇನೆ  ಮನೆಯೊಳಗಿನ ಧೂಳು ಇತ್ಯಾದಿಗಳ ಕಾರಣದಿಂದಾಗಿ ನಿರಂತರ ಬಾಧಿಸುತ್ತದೆ(ಸಾಧಾರಣವಾಗಿ ಎಲ್ಲ  ಮನೆಗಳಲ್ಲಿ ರುವ  ಸಣ್ಣ ಸೊಳ್ಳೆಯ  ರೀತಿಯ ಒಂದು ಕೀಟ ಕೂಡ  ಇದಕ್ಕೆ ಕಾರಣವಾಗಬಹುದು). ಹೆರುಪೆ ಇತ್ಯಾದಿಗಳ  ಅಲರ್ಜಿಯ ಕಾರಣದಿಂದಾಗಿ ಉಂಟಾಗುವ ಕಣ್ಣುಬೇನೆಗೆ  ಪ್ಯಾಪಿಲ್ಲರಿ ಕಣ್ಣುಬೇನೆ  ಎಂದು ಹೆಸರು. ಇದು ಬಹಳ  ತೀವ್ರ ಸ್ವರೂಪದ್ದು. ಆದರೆ ಈ ರೀತಿಯ ಕಣ್ಣು ಬೇನೆ  ಬಾಧಿಸುವುದು ಬಹಳ  ಅಪರೂಪ.

    ಲಕ್ಷಣಗಳು
    ಋತುಮಾನಕ್ಕೆ  ಸಂಬಂಧಿಸಿದಂತೆ  ಬರುವ ಕಣ್ಣುಬೇನೆಯಲ್ಲಿ  ಈ ಕೆಳಗಿನ ಲಕ್ಷಣಗಳು ಇರಬಹುದು-ಕಣ್ಣು ಕೆಂಪಗಾಗುವುದು, ಕಣ್ಣಿನ ಕಂಜಕ್ಟಿವಾ ಭಾಗದ, ಅಂದರೆ ಕಣ್ಣಿನ  ರೆಪ್ಪೆಯ  ಒಳಭಾಗದ ಪೊರೆಯನ್ನು  ಕಣ್ಣು ಗುಡ್ಡೆಗೆ ಜೋಡಿಸುವ ಭಾಗದಲ್ಲಿ ರಕ್ತ ನಾಳಗಳು  ಉಬ್ಬುವುದು, ಕಣ್ಣಿನಲ್ಲಿ ಉರಿಯುವಂತಹ  ಆಥವಾ ತುರಿಕೆಯ ಸಂವೇದನೆ, ಕಣ್ಣು ರೆಪ್ಪೆಗಳು ಊದಿಕೊಳ್ಳುವುದು, ಕಣ್ಣಿನಲ್ಲಿ  ನಿರಂತರ ನೀರು ಸುರಿಯುವುದು, ಕಣ್ಣಿನಲ್ಲಿ ಜಿಗುಟಾದ  ಹಿಕ್ಕು ದ್ರವ  ಒಸರುವುದು.
    ವರ್ಗೀಕರಣ / ವಿಧಗಳು

    ಅಲರ್ಜಿ ಮೂಲದ ಋತುಸಂಬಂಧಿ ಕಣ್ಣುಬೇನೆ (SAC)ಹಾಗೂ ಅಲರ್ಜಿ ಮೂಲದ ನಿರಂತರ  ಕಣ್ಣುಬೇನೆ ( PAC)

    ಇವೆರಡೂ  ಸಹ ತೀವ್ರ ಸ್ವರೂಪದ ಕಣ್ಣು ಬೇನೆಗಳಾಗಿವೆ. ಋತು ಸಂಬಂಧಿ ಕಣ್ಣುಬೇನೆ  ಎಂಬುದು  ಸಾಮಾನ್ಯವಾಗಿ ಕಂಡು ಬರುವ ಕಣ್ಣು ಬೇನೆಯಾಗಿದೆ. ಇವೆರಡರಲ್ಲೂ  ಕಣ್ಣು ತುರಿಕೆ , ಕಣ್ಣು ಗಲಾಬಿ ಬಣ್ಣದಿಂದ ಕೆಂಪು ಬಣ್ಣದವರೆಗೆ ಇರುವುದು... ಇತ್ಯಾದಿ  ಲಕ್ಷಣಗಳಿರುತ್ತವೆ.  ಈ  ಎರಡೂ  ವಿಧದ ಕಣ್ಣುಬೇನೆಗಳಲ್ಲಿ  ಮಾಸ್ಟ್‌ ಕೋಶಗಳ ಹಿನ್ನಲೆ ಇರುತ್ತದೆ.

    ವರ್ನಲ್‌ ಕೆರಾಟೊ ಕಣ್ಣು ಬೇನೆ (VKC)  ಹಾಗೂ ಅಟಾಪಿಕ್‌ ಕೆರಾಟೋ ಕಣ್ಣುಬೇನೆ (AKC)
    ಇವೆರಡೂ  ಸಹ ದೀರ್ಘ‌ಕಾಲಿಕ ಅಲರ್ಜಿ  ಮೂಲದ  ಖಾಯಿಲೆಗಳು.  ಅಥವಾ ವರ್ನಲ್‌  ಕೆರಾಟೊ ಕಣ್ಣುಬೇನೆ  ಎಂಬುದು ಬಾಲ್ಯದಲ್ಲಿ ಕಂಡು ಬರುವ ಕಾಯಿಲೆ, ಉಷ್ಣ ಪ್ರದೇಶಗಳಲ್ಲಿ  ವಾಸಿಸುವವರಲ್ಲಿ , 4-15 ವಯಸ್ಸಿನ ನಡುವೆ ಇದು  ಹೆಚ್ಚಾಗಿ  ಕಂಡು ಬರುತ್ತದೆ. ಎರಡೂ  ಕಣ್ಣುಗಳ ಮೇಲಿನ ಕಂಜಕ್ಟಿವಾದಲ್ಲಿ  ಈ ಕೆಳಗಿನ ಲಕ್ಷಣಗಳು ಗೋಚರಿಸುತ್ತವೆ- ಇದರ ಗಡ್ಡೆಗಳು ಸಾಮಾನ್ಯವಾಗಿ, ಗಟ್ಟಿಯಾದ, ಚಪ್ಪಟೆಯಾದ ಪಾಪಿಲ್ಲೆಗಳು ನಡೆಹಾದಿಯ ಕಲ್ಲುಗಳಂತೆ ರಚನೆಯಾಗಿರುತ್ತವೆ. ಇದಲ್ಲದೆ ಕಣ್ಣುಗುಡ್ಡೆಯ ಅಂಚಿನಲ್ಲಿ (ಲಿಂಬಸ್‌) ಅಂಟಾದ ದಪ್ಪದ ಅಂಗಾಂಶಗಳು ಕಾಣಿಸಿಕೊಳ್ಳುವುದಲ್ಲದೆ ಅಂಚಿನ ಆಸುಪಾಸಿನಲ್ಲಿ ಬಿಳಿಯಾದ ಉಬ್ಬು ಬಿಂದುಗಳು ಕಾಣಿಸಿಕೊಳ್ಳುತ್ತವೆ.

    ವರ್ನಲ್‌  ಕೆರಾಟೊ ಕಣ್ಣುಬೇನೆಯಲ್ಲಿ ಕಾರ್ನಿಯಾ ತೊಂದರೆಗೀಡಾಗುವುದು ಪ್ರಾಥಮಿಕವಾಗಿರಬಹುದು ಇಲ್ಲವೇ ಕಣ್ಣುಗುಡ್ಡೆಯ ಅಂಚಿನ ಗಡ್ಡೆಗಳಿಂದ ಹರಡಿದ ದ್ವಿತೀಯ ಹಂತದ್ದಾಗಿರಬಹುದು.
    ಅಟಾಪಿಕ್‌ ಕೆರಾಟೋ  ಕಣ್ಣುಬೇನೆ  ಅಥವಾ  ಅಓಇ,  ಇದು ಪುರುಷರಲ್ಲಿ  30  ರಿಂದ 50  ವಯಸ್ಸಿನ ನಡುವೆ  ಹೆಚ್ಚು  ಕಂಡು ಬರುತ್ತದೆ. 20-40% ಜನರಲ್ಲಿ ಚರ್ಮದ ಹೆರುಪೆಗಳ ಕಾರಣದಿಂದ ಹಾಗೂ 95% ಜನರಲ್ಲಿ  ಎಕ್ಸಿಮಾ... ಇತ್ಯಾದಿ ಅಂಟು ರೋಗಗಳ ಕಾರಣದಿಂದ  ಹಾಗೂ 87%  ಜನರಲ್ಲಿ  ಆಸ್ತಮಾದ ಮುನ್ಸೂಚನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಈ  ಕಣ್ಣು ಬೇನೆಯ ಲಕ್ಷಣಗಳು ಕಾಲಮಾನ ಅಥವಾ ಋತುಮಾನ ಬದಲಾದಂತೆ ವ್ಯತ್ಯಾಸಗೊಳ್ಳುವುದಿಲ್ಲ  ಅಥವಾ ಎಲ್ಲೊ ಸಣ್ಣ ಮಟ್ಟಿನ  ವ್ಯತ್ಯಾಸ ಗೋಚರಿಸಬಹುದು (ಇದಕ್ಕೆ ವ್ಯತಿರಿಕ್ತವಾಗಿ ವರ್ನಲ್‌ ಕಣ್ಣುಬೇನೆಯು  ಬೇಸಗೆಯಲ್ಲಿ  ಮಾತ್ರವೇ  ಕಂಡುಬರುತ್ತದೆ) , ಕಣ್ಣಿನಲ್ಲಿ  ತುರಿಕೆ,  ಕಣ್ಣಿನಲ್ಲಿ  ನಿರಂತರ ನೀರು ಸೋರುವುದು, ಜಿಗುಟಾದ ಹಿಕ್ಕು ದ್ರವ ಒಸರುವುದು, ಕಣ್ಣುರಿ, ಬೆಳಕನ್ನು  ಕಾಣಲು ಆಗದಿರುವುದು, ದೃಷ್ಟಿ ಮಂದವಾಗುವುದು... ಇತ್ಯಾದಿ ಲಕ್ಷಣಗಳು  ಇರುತ್ತವೆ.
    ಜಯಂಟ್‌ ಪ್ಯಾಪಿಲ್ಲರಿ
    ಕಂಜಂಕ್ಟಿವೈಟಿಸ್‌

    ಈ ರೀತಿಯ ಕಣ್ಣು ಬೇನೆಗೆ ಕಣ್ಣಿನ ಅಲರ್ಜಿ ಕಾರಣವಲ್ಲ . ಕಂಜಂಕ್ಟಿವಾಕ್ಕೆ  ಮತ್ತೆ ಮತ್ತೆ ಅಗುವ ಕಿರಿಕಿರಿಯ ಕಾರಣದಿಂದ ಈ ಕಣ್ಣು ಬೇನೆ  ಬಾಧಿಸುತ್ತದೆ. ಕಾಂಟಾಕ್ಟ್  ಲೆನ್ಸ್‌ ಉಪಯೋಗಿಸುವವರಲ್ಲಿ , ಕಂಜಂಕ್ಟಿವಾದ  ಮೇಲ್ಮೈಗೆ ಲೆನ್ಸ್‌ ನ  ಸಂಪರ್ಕದಿಂದಾಗುವ ಕಿರಿಕಿರಿಯಿಂದಾಗಿ  ಜಯಂಟ್‌  ಪ್ಯಾಪಿಲ್ಲರಿ ಕಂಜಂಕ್ಟಿವೈಟಿಸ್‌ (GPC)  ಬಾಧಿಸುತ್ತದೆ.
    ಫ್ಲೈಸ್ಟೆನ್ಯೂಲಾರ್‌ ಕೆರಾಟೋ ಕಣ್ಣು ಬೇನೆ : ಬ್ಯಾಕ್ಟೀರಿಯಾದ ಪ್ರತಿಕ್ರಿಯೆಗೆ ಕಣ್ಣಿನ ಅತಿಸಂವೇದನಾಶೀಲತೆ ಅಥವಾ ಉರಿಯೂತದ ಕಾರಣದಿಂದಾಗಿ ಈ ಕಣ್ಣು  ಬೇನೆ ಬಾಧಿಸುತ್ತದೆ. ಈ  ಕಾಯಿಲೆಗೆ ಸಾಮಾನ್ಯವಾಗಿ ಕಾರಣವಾಗುವ ರೋಗಾಣುಗಳು ಅಂದರೆ  ಸ್ಟಾಫೈಲೊಕಾಕಸ್‌ ಔರಿಯಸ್‌ ಮೈಕೋಬ್ಯಾಕ್ಟೀರಿಯಂ ಟ್ಯುಬಕ್ಯುìಲೋಸಿಸ್‌ಠಿ  ಕ್ಲೆಮೈಡಿಯಾ   ಹಾಗೂ ಕ್ಯಾಂಡಿಡ  ಚಿಕಿತ್ಸೆಗಳು.

    ಸದ್ಯ  ಇರುವ ಕಣ್ಣಿನ ರೋಗ ಲಕ್ಷಣಗಳು  ಅಲರ್ಜಿ ಮೂಲದವೋ ಅಥವಾ ವೈರಾಣುಗಳ ಮೂಲದವೋ  ಎಂಬುದನ್ನು ಪತ್ತೆ ಮಾಡಲು, ವೈದ್ಯರು ವಿವರವಾದ ಪರೀಕ್ಷೆಗಳನ್ನು  ನಡೆಸುತ್ತಾರೆ, ಕಂಜಂಕೈrವಲ್‌ ಸಾðಪಿಂಗ್‌ ಪರೀಕ್ಷೆಯ ಮೂಲಕ, ಅಲ್ಲಿ ಈಯಸಿನೊಫೀಲಿಯಾದ ಇರುವಿಕೆಯನ್ನು  ಗಮನಿಸುತ್ತಾರೆ.
    ಅಲರ್ಜಿಕಾರಕವನ್ನು ನಾಶಗೊಳಿಸಿದ ನಂತರ, ಸಣ್ಣದಾಗಿ ಇರುವ ಲಕ್ಷಣಗಳ ಉಪಶಮನಕ್ಕಾಗಿ ಕೋಲ್ಡ್‌   ಕಂಪ್ರಸ್‌ ಅನ್ನು  ಉಪಯೋಗಿಸುತ್ತಾರೆ. ಯಾವುದೇ ಔಷಧಿಗಳನ್ನು  ಉಪಯೋಗಿಸದೆಯೇ ರೋಗಲಕ್ಷಣಗಳಿಂದ ಮುಕ್ತವಾಗಲು ಇದು ಬಹಳ ತ್ವರಿತ ಹಾಗೂ ಸುಲಭ ವಿಧಾನವಾಗಿದೆ.
    ಕಣ್ಣಿನ ತುರಿಕೆ ಹಾಗೂ ಕಣ್ಣುರಿಯಂತಹ  ಲಕ್ಷಣಗಳ ನಿವಾರಣೆಗಾಗಿ, ಕೆಲವು ಸಲ ಆಂಟಿ ಹಿಸ್ಟಾಮೈನ್‌ ಔಷಧಿಗಳನ್ನೂ  ಸೂಚಿಸುತ್ತಾರೆ.

    ಕೋಲ್ಡ್‌ ಕಂಪೆೆÅಸ್‌ ವಿಧಾನದಲ್ಲಿ, ರೋಗಿಗೆ ತನ್ನ ರೋಗಲಕ್ಷಣಗಳಿಂದ ಉಪಶಮನ ದೊರಕಲು ಹೆಚ್ಚು  ಸಹಾಯವಾಗದೆ, ಚಿಕಿತ್ಸೆ ಪರಿಣಾಮಕಾರಿಯಾಗಿಲ್ಲದಿದ್ದರೆ, ಆಗ ಮಾಸ್ಟ್‌ ಸೆಲ್ಸ್‌  ಸ್ಟೆಬಿಲಾಯಿಸರನ್ನು  ಉಪಯೋಗಿಸಬಹುದು. ಇವುಗಳ  ಪರಿಣಾಮವು ಬಹಳ ನಿಧಾನವಾಗಿದ್ದು ,  ಅಲ್ಪ  ಪ್ರಮಾಣದ ಅಡ್ಡ  ಪರಿಣಾಮಗಳೂ ಇರಬಹುದು. ಈ ಮಾಸ್ಟ್‌ ಸೆಲ್‌  ಸ್ಟೆಬಿಲಾಯಿಸರ್‌ ಔಷಧಿಗಳು ಸ್ಟೀರಾಯ್ಡ  ರಹಿತ ನಿಯಂತ್ರಕ ವರ್ಗಕ್ಕೆ ಸೇರಿದ ಔಷಧಿಗಳಾಗಿವೆ. ರಾಸಾಯನಿಕಗಳ ಕಾರಣದಿಂದ ಉಂಟಾದ ಕಣ್ಣಿನ ಉರಿಯೂತವನ್ನು ಇವು ಕಡಿಮೆಗೊಳಿಸುತ್ತವೆ.

    ಡಿಕಂಜೆಸ್ಟೆಂಟ್‌ಗಳನ್ನು  ಸಹ ವೈದ್ಯರು ಕೆಲವೊಮ್ಮೆ ಸೂಚಿಸಬಹುದು. ಕೆಲವು  ಸಲ ಆಂಟಿ ಹಿಸ್ಟಾಮಿನ್‌ ಹಾಗೂ ಮಾಸ್ಟ್‌ ಸೆಲ್‌ ಸ್ಟೆಬಿಲಾಯಿಸಿಂಗ್‌ ಈ ಎರಡೂ ಪ್ರಕ್ರಿಯೆಗಳನ್ನು  ತೋರಿಸುವ ದ್ವಿ-ಚಟುವಟಿಕೆಯ ಔಷಧಿಗಳನ್ನು  ಸಹ ವೈದ್ಯರು ಸೂಚಿಸಬಹುದು.
    ಕಣ್ಣಿನ ಸ್ಟೀರಾಯ್ಡ  ಬಿಂದುಗಳು
    ಈ  ಬಿಂದುಗಳನ್ನು   ಉಪಯೋಗಿಸುವುದು  ಬಹಳ ಅಪರೂಪ. ಉರಿಯೂತದ ನಿವಾರಣೆಯಲ್ಲಿ  ಸ್ಟೀರಾಯ್ಡಗಳು ಬಹಳ ಪರಿಣಾಮಕಾರಿ ಆಗಿದ್ದರೂ ಸಹ, ಬೇರೆ ಔಷಧಿಗಳು ವಿಫ‌ಲವಾದಾಗ ಮಾತ್ರವೇ  ಈ  ಸ್ಟೀರಾಯ್ಡಗಳನ್ನು  ಉಪಯೋಗಿಸಬೇಕು. ಸೋಂಕು ಹಾಗೂ ಇನ್ನಿತರ ಕಾರಣಗಳಿಂದಾಗಿ  ಉರಿಯೂತದ ಕಾರಣದಿಂದಲ್ಲದ ಕಣ್ಣುಬೇನೆ ಎಂಬುದನ್ನು ಖಚಿತ ಪಡಿಸಿಕೊಂಡು, ನುರಿತ ಕಣ್ಣಿನ ತಜ್ಞರ ಸಲಹೆಯ ಮೇರೆಗೆ  ಈ ಔಷಧಿಯನ್ನು  ಉಪಯೋಗಿಸಬಹುದು. (ಸ್ಟೀರಾಯ್ಡ ಗಳ ಅಸರ್ಮಕ  ಅಥವಾ ಅನುಚಿತ ಉಪಯೋಗದಿಂದ ಕೆಲವು ರೀತಿಯ ಕಣ್ಣಿನ ತೊಂದರೆಗಳು ಬಿಗಡಾಯಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಎಚ್ಚರ ಅಗತ್ಯ.)

    ಕಣ್ಣುಗಳನ್ನು ಸ್ವತ್ಛ ಹಾಗೂ ಸುರಕ್ಷಿತವಾಗಿರಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಕೂಡ, ಕಣ್ಣುಬೇನೆ ಅಥವಾ ಕಂಜಂಕ್ಟಿವಿಟಿಸ್‌ ವಿರುದ್ಧ ರಕ್ಷಣೆ  ಪಡೆಯಬಹುದು, ಕಾಂಟಾಕ್ಟ್  ಲೆನ್ಸ್‌  ಉಪಯೋಗಿಸವವರು ಈ ಬಗ್ಗೆ  ವಿಶೇಷ ಕಾಳಜಿ ವಹಿಸಬೇಕು. ಪರಾಗ ಅಥ‌ವಾ  ಧೂಳುಗಳ ಅಲರ್ಜಿ ಇರುವವರು,  ಈ ಅಲರ್ಜಿಕಾರಕಗಳು ಹೆಚ್ಚಿನ ಮಟ್ಟದಲ್ಲಿರುವ  ಸಂದರ್ಭಗಳಲ್ಲಿ  ಅದಷ್ಟು ಮನೆಯ ಒಳಗಡೆಯೇ ಇದ್ದರೆ  ಉತ್ತಮ. ಈ ಸಂದ‌ರ್ಭಗಳಲ್ಲಿ  ಅಲರ್ಜಿ ಇರುವವರು ತಮ್ಮ  ಮನೆಯ ಕಿಟಿಕಿ, ಬಾಗಿಲುಗಳನ್ನು  ಮುಚ್ಚಿಕೊಂಡಿದ್ದರೆ ಅಥವಾ  ಬೇಸಗೆಯ ಸಂದರ್ಭದಲ್ಲಿ  ಎ.ಸಿ.  ಉಪಯೋಗಿಸಿದರೆ ಉಪಯುಕ್ತ. ಈ ಕ್ರಮಗಳಿಂದ ಅಲರ್ಜಿಕಾರಕಗಳನ್ನು  ದೂರವಿರಿಸಿ, ಅಲರ್ಜಿಮೂಲದ ಕಂಜಂಕ್ಟಿವೈಟಿಸ್‌ನಿಂದ  ರಕ್ಷಣೆ  ಪಡೆಯಬಹುದು.

    ಆಂಟಿ ಹಿಸ್ಟಾಮಿನ್‌ಗಳು, ಮಾಸ್ಟ್‌ ಸೆಲ್ಸ್‌  ಸ್ಟೆಬಿಲಾಯಿಸರ್‌ಗಳು ಹಾಗೂ ಸ್ಟೀರಾಯ್ಡ ರಹಿತ ಉರಿಯೂತ ನಿವಾರಕ ಔಷಧಿಗಳು ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಿಗಳಾಗಿವೆ, ಕೆಲವು ಅಡ್ಡಪರಿಣಾಮಗಳ ಸಾಧ್ಯತೆಗಳಿರುವ ಕಾರಣ ಕಾರ್ಟಿಕೋಸ್ಟೀರಾಯ್ಡ ಔಷಧಿಗಳನ್ನು  ತೀವ್ರ ಸಂದರ್ಭಗಳಲ್ಲಿ, ವೈದ್ಯರ  ಉಪಸ್ಥಿತಿಯಲ್ಲಿಯೇ ಉಪಯೋಗಿಸಬೇಕು. ಅಲರ್ಜಿಕಾರಕ ಪತ್ತೆಯಾದ ನಂತರ ರೋಗಿಯು ಅಂತಹ ಅಲರ್ಜಿಕಾರಕಗಳಿಂದ ಆದಷ್ಟು ದೂರವಿದ್ದರೆ ಉತ್ತಮ.

    ವೈದ್ಯರನ್ನು ಸಂಪರ್ಕಿಸುವ ಮೊದಲು ರೋಗಿಯು ಕಣ್ಣಿನಲ್ಲಿ  ಉಂಟಾದ ಅಲರ್ಜಿ ಅಥವಾ ರೋಗ ಲಕ್ಷಣಗಳನ್ನು  ಸ್ವತ್ಛಗೊಳಿಸುವುದಾಗಲಿ, ಕಣ್ಣುಗಳಿಗೆ  ಬಿಸಿ ನೀರನ್ನು ತಾಗಿಸುವುದಾಗಲೀ ಮಾಡಬಾರದು . ಕಣ್ಣುಗಳಿಗೆ ಯಾವುದೇ ರೀತಿಯ ಔಷಧಿಯನ್ನು  ಉಪಯೋಗಿಸುವುದಕ್ಕೆ ಮೊದಲು, ಕಣ್ಣಿನ ವೈದ್ಯರ ಸಲಹೆ-ಸೂಚನೆಯನ್ನು  ಪಡೆಯುವುದು ಅತ್ಯವಶ್ಯಕ.

    ಗಮನಿಸಿ: ನೀವು  ಗರ್ಭಿಣಿಯಾಗಿದ್ದರೆ ಅಥವಾ ಮಗುವಿಗೆ ಹಾಲೂಡಿಸುವ ತಾಯಿಯಾಗಿದ್ದರೆ, ಈ ಬಗ್ಗೆ ನಿಮ್ಮ ವೈದ್ಯರು ಆಥವಾ ಔಷಧಿಯ ಅಂಗಡಿಯವರಿಗೆ ತಿಳಿಸಿ. ಯಾಕೆಂದರೆ, ಕೆಲವು ಔಷಧಿ, ಚಿಕಿತ್ಸೆ ಹಾಗೂ ಕಣ್ಣಿನ  ಬಿಂದುಗಳನ್ನು ಗರ್ಭಿಣಿಯರು ಹಾಗೂ ಹಾಲೂಡಿಸುವ ತಾಯಂದಿರು ಉಪಯೋಗಿಸಬಾರದು.
    ಜಯಂಟ್ಸ್‌  ಪ್ಯಾಪಿಲ್ಲರಿ
    ಕಣ್ಣುಬೇನೆ ಚಿಕಿತ್ಸೆ

    ಈ ರೀತಿಯ ಕಣ್ಣು  ಬೇನೆಗೆ ಪ್ರಮುಖ ಕಾರಣ ಕಣ್ಣಿ¡ನ ಕಾಂಟ್ಯಾಕ್ಟ್ ಲೆನ್ಸ್‌ಗಳು. ಕಣ್ಣುಬೇನೆಯ ಲಕ್ಷಣಗಳು ಪೂರ್ತಿ ಕಡಿಮೆಯಾಗುವವರೆಗೆ ಕಾಂಟ್ಯಾಕ್ಟ್  ಲೆನ್ಸ್‌ಗಳನ್ನು ಬಳಸದೇ ಇರುವುದೇ ಇದಕ್ಕೆ ಚಿಕಿತ್ಸೆಯಾಗಿದೆ. ಲಕ್ಷಣಗಳು ಕಡಿಮೆಯಾಗಿ ಮತ್ತೂಮ್ಮೆ  ಈ ಲೆನ್ಸ್‌  ಆಥವಾ ಮಸೂರಗಳನ್ನು  ಉಪಯೋಗಿಸುವುದಿದ್ದರೆ,  ಆಗ ಉತ್ತಮ  ಗುಣಮಟ್ಟದ ಮಸೂರಗಳನ್ನೇ  ಉಪಯೋಗಿಸಿ. ಮಸೂರಗಳ ಸ್ವತ್ಛತೆ ಯುತ್ತ ಗಮನಹರಿಸಿ. ಈ ರೀತಿಯ ಕಣ್ಣು ಬೇನೆಗೆ ಆಂಟಿ ಹಿಸ್ಟಾಮಿನ್‌ ಕಣ್ಣಿನ  ಬಿಂದುಗಳು ಅಥವಾ ಮಾಸ್ಟ್‌ ಸೆಲ್ಸ್‌ ಸ್ಟೆಬಿಲಾಯಿಸರ್‌ (ಮೇಲೆ ಹೇಳಿದ)  ಕಣ್ಣಿನ  ಬಿಂದುಗಳನ್ನು  ಉಪಯೋಗಿಸಿ ರೋಗ ಲಕ್ಷಣಗಳನ್ನು  ಕಡಿಮೆ ಮಾಡಿಕೊಳ್ಳಬಹುದು.
    ಸಂಪರ್ಕದ  ಕಾರಣದಿಂದ
    ಬರುವ ಕಣ್ಣುಬೇನೆಗೆ ಚಿಕಿತ್ಸೆ


    ಯಾವುದು ಅಲರ್ಜಿ ಮೂಲದ ಕಣ್ಣುಬೇನೆ ಉಂಟು  ಮಾಡುತ್ತದೆಯೋ, ಅದರಿಂದ ತಪ್ಪಿಸಿಕೊಳ್ಳುವುದೇ ಅದಕ್ಕೆ ಚಿಕಿತ್ಸೆ. ಸೌಂದರ್ಯವರ್ಧಕದ  ಅಲರ್ಜಿಯಿಂದ ಕಣ್ಣುಬೇನೆ ಉಂಟಾಗಿದ್ದರೆ, ಅಲರ್ಜಿಯು ಸಂಪೂರ್ಣ ಗುಣವಾಗುವುದಕ್ಕೆ  ಮೊದಲು ಮತ್ತೂಂದು  ಬದಲೀ ಸೌಂದರ್ಯವರ್ಧಕವನ್ನು  ಉಪ ಯೋಗಿಸಬಾರದು, ಕಣ್ಣಿನ ಬೇರೆ ಯಾವುದೊ ವಿಧದ ಕಾಯಿಲೆಗಳಿಗೆ ಉಪಯೋಗಿಸುವ ಕಣ್ಣಿನ ಹನಿಗಳನ್ನು  ಈ ತೊಂದರೆಗೆ ಉಪ ಯೋಗಿಸಿದಾಗಲೂ ಕಣ್ಣಿನ ಅಲರ್ಜಿ ಬಾಧಿಸುತ್ತದೆ. ಸಾಮಾನ್ಯವಾಗಿ ಅಲರ್ಜಿಯ ಲಕ್ಷಣಗಳು ಕಡಿಮೆ ಅಗು ವವರೆಗೆ ಕಣ್ಣನ್ನು  ತಂಪಾಗಿರಿಸಲು  ಈ ಔಷಧಿಗಳನ್ನು  ಅರಂಭದಲ್ಲಿ  ಸೂಚಿ ಸುತ್ತಾರೆ. ಹಿಸ್ಟಾಮಿನ್‌ ಕಣ್ಣಿನ ಹನಿಗಳು ಆಥವಾ ಮಾಸ್ಟ್‌ ಸೆಲ್‌ ಸ್ಟೆಬಿಲಾಯಿಸರ್‌ ಕಣ್ಣಿನ ಹನಿಗಳಿಂದ ಈ ರೀತಿಯ ಕಣ್ಣು ಬೇನೆಗಳಿಗೆ  ಅಷ್ಟೊಂದು ಪ್ರಯೋ ಜನವಾಗದು. ಈ  ಸ್ಥಿತಿಯಲ್ಲಿ  ಯಾವ ರೀತಿಯ ಕಣ್ಣಿನ ಹನಿಗಳನ್ನು  ಉಪಯೋಗಿಸಿದರೆ ಉತ್ತಮ  ಎಂದು ತಿಳಿಯಲು  ತಜ್ಞರ ಸಲಹೆ ಆವಶ್ಯಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ