Translate

ಬುಧವಾರ, ಸೆಪ್ಟೆಂಬರ್ 21, 2011

ಕತ್ತಿನ ಆಳದ ಸೋಂಕು ರೋಗಗಳು

ಡಾ| ಎಂ. ಪಾಂಡುರಂಗ ಕಾಮತ್‌, ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಇ.ಎನ್‌.ಟಿ. ವಿಭಾಗ,ಕೆ.ಎಂ.ಸಿ, ಅತ್ತಾ¤ವರ, ಮಂಗಳೂರು. 
ಕುತ್ತಿಗೆ ಬಹಳ ಸಂಕೀರ್ಣವಾದ ಅಂಗ. ಅನಾದಿ ಕಾಲದಿಂದಲೂ ಈ ಸಂಕೀರ್ಣ ಭಾಗದಲ್ಲಿ ಸಂಭವಿಸುವ ಸೋಂಕುಗಳು ವೈದ್ಯರಿಗೆ ಸವಾಲುಗಳಾಗಿಯೇ ಉಳಿದಿವೆ. ಸಂಕೀರ್ಣವಾದ ಅಂಗಭಾಗಗಳು ಇರುವ ಈ ಪ್ರದೇಶದಲ್ಲಿ ಸೋಂಕಿನ ಪತ್ತೆ  ಮತ್ತು ಚಿಕಿತ್ಸೆ ಬಹಳ ಜಟಿಲ.

ಆದರೆ ಇಂದು ಆಧುನಿಕ ತಂತ್ರಜ್ಞಾನಗಳು, ಔಷಧಿಗಳು ಮತ‌ು¤ ವೈದ್ಯಕೀಯ ಕೌಶಲಗಳು ಈ ಸವಾಲುಗಳನ್ನೂ ಮೀರಿ ಬೆಳೆಯುವುದು ಸಾಧ್ಯವಾಗಿದೆ.

ಕತ್ತಿನ ಆಳದಲ್ಲಿ ಸಂಭವಿಸಬಹುದಾದ ಸೋಂಕುಗಳಿಗೆ ಕಾರಣಗಳು ಹಲವು. ಅಂತಹ ಕೆಲವು ಕಾರಣಗಳು ಇಲ್ಲಿವೆ.

*ಟಾನ್ಸಿಲ್‌ ಅಥವಾ ಗಂಟಲಿನ ಸೋಂಕುಗಳು.

*ಹಲ್ಲಿನ ಸೋಂಕುಗಳು ಮತ‌ು¤ ಗುಳ್ಳೆಗಳು.

*ಬಾಯಿಯ ಶಸ್ತ್ರಕ್ರಿಯೆಗಳು.

*ಲಾಲಾರಸ  ಗ್ರಂಥಿಗಳಲ್ಲಿ ಸೋಂಕು ಅಥವಾ ಅಡ್ಡಿ.

*ಗಂಟಲು ಅಥವಾ ಬಾಯಿಯ ಕುಳಿಗೆ ಜಖಂ (ಬಂದೂಕಿನ ಗುಂಡಿನೇಟು, ಗಂಟಲಿನ ಗಾಯ, ಮೀನಿನ ಮುಳ್ಳು ಅಥವಾ ಮೂಳೆಗಳಂತಹ ಹರಿತ ಪದಾರ್ಥಗಳಿಂದ ಅನ್ನನಾಳ ಹರಿದಿರುವುದು... ಇತ್ಯಾದಿ.)

*ಅನ್ನನಾಳದ ಎಂಡೊಸ್ಕೋಪಿ ಅಥವಾ ಶ್ವಾಸಕೋಶದ ಎಂಡೊಸ್ಕೋಪಿ.

* ಪರಕೀಯ ವಸ್ತುಗಳ ಪ್ರವೇಶ.

*ಸೆರ್ವೈಕಲ್‌ ದುಗ್ಧಗ್ರಂಥಿಗಳ ಉರಿಯೂತ.
* ಶ್ವಾಸಕೋಶದಲ್ಲಿ ಸೀಳಿನಂತ‌ಹ ನ್ಯೂನತೆಗಳು.

* ಥೈರೊಗ್ಲಾಸಲ್‌ ಕಾಲುವೆಯಲ್ಲಿ ಸಿಸ್ಟ್‌ಗಳು.

* ಥೈರಾಯ್ಡ ಉರಿಯೂತ.

* ದವಡೆಯ ಮೂಳೆಗಳ ಉರಿಯೂತ‌ (ತುದಿಯಲ್ಲಿ ಕಲ್ಲುಗಟ್ಟಿರುವ ಮತ‌ು¤ ಕೀವು ತುಂಬಿರುವ  ಸ್ಥಿತಿ.)

* ಧ್ವನಿ ಪೆಟ್ಟಿಗೆಯಲ್ಲಿ ದ್ರವ ತುಂಬಿದ ಗಡ್ಡೆ ಬೆಳೆದಿರುವ ಸ್ಥಿತಿ.

* ರಕ್ತನಾಳಕ್ಕೆ ಚುಚ್ಚಿಕೊಳ್ಳುವ ಮಾದಕ ದ್ರವ್ಯಗಳ ಬಳಕೆ.
ನೂರಕ್ಕೆ 20-50ರಷ್ಟು ಕತ್ತಿನಾಳದ ಸೋಂಕು ರೋಗಗಳಲ್ಲಿ ಸೋಂಕಿಗೆ ಖಚಿತವಾದ ಕಾರಣವನ್ನು ಗುರುತಿಸುವುದು ಬಹಳ ಕಷ್ಟ. ಎಚ್‌ಐವಿ ಸೋಂಕಿನಿಂದಾಗಿ ದೇಹದ ರೋಗ ನಿರೋಧಕ ವ್ಯವಸ್ಥೆ ಹಾನಿಗೀಡಾಗಿರುವವರು, ಕೀಮೊತೆರಪಿಗೆ ಒಳಗಾಗಿರುವರು ಅಥವಾ ಅಂಗಾಂಗ ಕಸಿಗಾಗಿ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಔಷಧಿಯನ್ನು ಸೇವಿಸಿದವರು... ಕತ್ತಿನಾಳದ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆಗಳಿರುತ‌¤ವೆ.
ರೋಗದ ಸ್ವರೂಪ

ಕತ್ತಿನಾಳದ ಸೋಂಕಿಗೆ ಕಾರಣಗಳು ಹಲವಿದ್ದರೂ, ಒಮ್ಮೆ ಸೋಂಕು ತಗುಲಿದಾಗ ಅದು ಈ ಕೆಳಗಿನ ಯಾವುದಾದರೊಂದು ಹಾದಿಯ ಮೂಲಕ ಕುತ್ತಿಗೆಯ ಆಳವನ್ನು ತ‌ಲುಪುತ್ತದೆ.

* ಬಾಯಿಯ ಕುಳಿ-ಮುಖ ಅಥವಾ ಕುತ್ತಿಗೆಯ ಹೊರಭಾಗಕ್ಕೆ ತ‌ಗುಲಿದ ಸೋಂಕು ದುಗ್ಧ‌­ಗ್ರಂಥಿಗಳ ವ್ಯವಸ್ಥೆಯ ಮೂಲಕ ಕತ್ತಿನ ಆಳಕ್ಕೆ ತ‌ಲುಪಬಹುದು.

* ದುಗ್ಧ‌­ಗ್ರಂಥಿಗಳ ರೋಗಗಳಿಂದಾಗಿ ಕೀವು ತುಂಬಿ, ಕತ್ತಿನಾಳಕ್ಕೆ ತಲುಪಬಹುದು.

* ಕತ್ತಿನಲ್ಲಿರುವ ತೆರೆದ ಸ್ಥಳಗಳ ನಡುವಿನ ಸಂಪರ್ಕದ ಹಾದಿಗಳ ಮೂಲಕ ಸೋಂಕು ಕತ್ತಿನಾಳವನ್ನು ತಲುಪಬಹುದು.

* ಪರಕೀಯ ವಸ್ತುಗಳು ಚುಚ್ಚಿ, ಕತ್ತಿನಾಳಕ್ಕೆ ನೇರವಾಗಿ ಸೋಂಕು ತಗುಲಬಹುದು.

ಈ ಕೆಳಗಿನ ಕಾರಣಗಳಿಂದಾಗಿ ಕತ್ತಿನಾಳದ ಸೋಂಕುಗುಳ್ಳೆಗಳು ರೋಗಲಕ್ಷಣಗಳನ್ನು ತೋರ್ಪಡಿಸತೊಡಗುತ್ತವೆ.
* ಉರಿಯೂತಕ್ಕೊಳಗಾದ ಅಂಗಾಂಶ ಅಥವಾ ಗುಳ್ಳೆಗಳಿಂದ ಆಸುಪಾಸಿನ ಭಾಗಗಳ ಮೇಲೆ ಬೀಳುವ ಒ
ತ್ತಡ.

* ಸೋಂಕಿನ ಪ್ರಕ್ರಿಯೆಯಲ್ಲಿ ಆಸುಪಾಸಿನ ಭಾಗಗಳು ನೇರವಾಗಿ ಒಳಗೊಳ್ಳುವುದು.

ಸಾಮಾನ್ಯವಾಗಿ ಕತ್ತಿನಾಳಕ್ಕೆ ತಲುಪುವ ರೋಗಾಣುಗಳು ಬಾಯಿಯಲ್ಲಿ ಹೆಚ್ಚಾಗಿ ವಾಸವಾಗಿರುವ ಆಮ್ಲಜನಕ ಬಳಸುವ ಅಥವಾ ಬಳಸದ  ಜೀವಾಣುಗಳಾಗಿರುತ್ತವೆ.
ರೋಗಲಕ್ಷಣಗಳುಸಾಮಾನ್ಯವಾಗಿ ಕತ್ತಿನ ಆಳದಲ್ಲಿ ಸೋಂಕುಗಳನ್ನು ಹೊಂದಿರುವ ರೋಗಿಗಳ ತಪಾಸಣೆಯ ವೇಳೆ ಈ ಕೆಳಗಿನ ಲಕ್ಷಣಗಳನ್ನು ಗಮನಿಸಲಾಗುತ್ತದೆ.

*ನೋವು.

* ಇತ್ತೀಚೆಗೆ ಹಲ್ಲಿನ ಚಿಕಿತ್ಸೆ ನಡೆದಿರುವುದು.

* ಮೇಲಿನ ಶ್ವಾಸಾಂಗ ವ್ಯೂಹದ ಸೋಂಕು.

* ಕತ್ತು ಅಥವಾ ಬಾಯಿಯ ಕುಳಿಗೆ ಜಖಂ.

*ಉಸಿರಾಟಕ್ಕೆ ಕಷ್ಟವಾಗುವುದು.

* ಆಹಾರ ನುಂಗಲು ಕಷ್ಟವಾಗುವುದು.

* ರೋಗನಿರೋಧಕ ವ್ಯವಸ್ಥೆ ಕುಸಿದಿರುವುದು ಅಥವಾ ಹಾನಿಗೊಂಡಿರುವುದು.

* ತೊಂದರೆ ಕಾಣಿಸಿಕೊಳ್ಳುವ ಆವರ್ತನ.

* ಒಮ್ಮೆ ಕಾಣಿಸಿಕೊಂಡ ರೋಗಲಕ್ಷಣ ಎಷ್ಟು ಅವಧಿಗೆ ಉಳಿದಿರುತ್ತದೆ ಎಂಬ ವಿಚಾರ.

ರೋಗಿಯ ದೈಹಿಕ ತಪಾಸಣೆಯ ವೇಳೆ ಸೋಂಕು ತ‌ಗುಲಿರುವ ಭಾಗವನ್ನು ಗುರುತಿಸಲು ಪ್ರಯತ್ನಿಸಲಾಗುತ್ತದೆ. ಅದಲ್ಲದೆ ಸೋಂಕಿನಿಂದ ಕಾಣಿಸಿಕೊಳ್ಳಬಲ್ಲ ಸಂಕೀರ್ಣ ತೊಂದರೆಗಳನ್ನು ಗುರುತಿಸಲಾಗುತ್ತದೆ. ರೋಗಿಯ ಕುತ್ತಿಗೆ ಮತ್ತು ತಲೆಗಳ ಕೂಲಂಕಷ ತಪಾಸಣೆ ಈ ಹಿನ್ನೆಲೆಯಲ್ಲಿ ಅಗತ್ಯವಿರುತ್ತದೆ. ಜೊತೆಗೆ, ಹಲ್ಲುಗಳು ಮತ್ತು ಟಾನ್ಸಿಲ್‌ಗ‌ಳನ್ನೂ ತಪಾಸಣೆಗೆ ಒಳಪಡಿಸಲಾಗುತ್ತದೆ.

ಕತ್ತಿನ ಆಳದ ಸೋಂಕುಗಳ ಸಾಮಾನ್ಯರೋಗ ಲಕ್ಷಣಗಳೆಂದರೆ ಜ್ವರ, ಬಿಳಿ ರಕ್ತ ಕಣದ ಪ್ರಮಾಣದಲ್ಲಿ ಏರಿಕೆ ಮತ್ತು ಬಾವು. ಉಳಿದಂತೆ ಸೋಂಕು ಕಾಣಿಸಿಕೊಂಡ ಭಾಗವನ್ನವಲಂಬಿಸಿ, ಕೆಲವು ರೋಗಲಕ್ಷಣಗಳು ಈ ಕೆಳಗಿನಂತೆ ತಲೆದೋರಬಹುದು.

*ನೂರಕ್ಕೆ 70ರಷ್ಟು ಸಣ್ಣಮಕ್ಕಳ ಗಂಟಲ ಹಿಂಬದಿಯ ಸೋಂಕುಗಳಲ್ಲಿ ಕುತ್ತಿಗೆ ಅಸಹಜ ಏರು ತ‌ಗ್ಗುಗಳಿಂದ ಕೂಡಿರುತ್ತದೆ, ಗಡ್ಡೆಗಳು ಅಥವಾ ದುಗ್ಧಗ್ರಂಥಿಗಳು  ರೋಗಗ್ರಸ್ಥವಾಗಿರುವುದು ಕಂಡುಬರುತ್ತದೆ.

*ಗಂಟಲಿನ ಆಸುಪಾಸಿನ ಭಾಗಗಳು ಸೋಂಕಿಗೆ ಒಳಗಾಗಿರುವವರಲ್ಲಿ ಗಂಟಲಿನ ಒಳಗೋಡೆ ಅಸಹಜವಾಗಿರುತ್ತದೆ ಮತ್ತು ಟಾನ್ಸಿಲ್‌ಗ‌ಳ ಸಹಿತ  ಸ್ಥಾನಾಂತರಗೊಂಡಿರುವುದು ಗೋಚರಿಸುತ್ತದೆ.

*ಬಾಯಿಯ ರೆಕ್ಕೆಯಾಕಾರದ ಸ್ನಾಯುಗಳ ಉರಿಯೂತಕ್ಕಾಗಿ ಬಾಯಿಯ ಚಲನೆ ಸ್ಥಗಿತಗೊಂಡಿರುವ ಸ್ಥಿತಿ (trismus)

* ಬೆನ್ನು ಹುರಿಯ ಆಸುಪಾಸಿನ ಸ್ನಾಯುಗಳು ಉರಿಯೂತ‌ಕ್ಕೀಡಾಗುವುದರಿಂದ ಕುತ್ತಿಗೆಯ ಚಲನೆ ಮಿತ‌ಗೊಳ್ಳುವುದು ಮತ‌ು¤ ಕುತ್ತಿಗೆ ತಿರುಚಿ ವಿಕೃತಗೊಳ್ಳುವುದು (torticollis).

* ತಲೆ ಮತ‌ು¤ ಕುತ್ತಿಗೆಯಿಂದ ಮೆದುಳನ್ನು ತಲುಪುವ ನರಗಳಿಗೆ ಹಾನಿ ಉಂಟಾಗಿ ಧ್ವನಿ ಕರ್ಕಷಗೊಂಡಿರುವುದು ಮತ್ತಿತರ ತೊಂದರೆಗಳು ಹಾಗೂ ಸೆರ್ವೈಕಲ್‌ ಸಿಂಪೆಥೆಟಿಕ್‌ ನರಗಳಿಗೆ ಹಾನಿಯುಂಟಾಗಿ ಹೋರ್ನರ್‌ ರೋಗ ಕಾಣಿಸಿಕೊಳ್ಳುವುದು

* ಪದೇ ಪದೇ ಜ್ವರ ಕಾಣಿಸಿಕೊಳ್ಳುತ್ತಿರುವುದು. (ಇದಕ್ಕೆ ಕುತ್ತಿಗೆಯ ಆಳದಲ್ಲಿರುವ ಜಗುಲಾರ್‌ ಅಶುದ್ಧ ರಕ್ತ ನಾಳಗಳ ಉರಿಯೂತದಿಂದಾಗಿ ರಕ್ತಹೆಪ್ಪುಗಟ್ಟಿರುವುದು ಅಥವಾ ಕೀವು ತುಂಬಿ ಅಡ್ಡಿಗಳಾಗಿರುವುದು ಕಾರಣವಾಗಿರುತ್ತದೆ.)

* ಉಸಿರಾಟ ಕಷ್ಟವಾಗುವುದು. ಇದು ಶ್ವಾಸಕೋಶದಲ್ಲಿ ಸಂಕೀರ್ಣ ತೊಂದರೆಗಳನ್ನು ಸೂಚಿಸುತ್ತಿರಬಹುದು.
ಕುತ್ತಿಗೆಯ ಸಂರಚನೆ
ಮುಖದ ವಿವಿಧ ಪದರಗಳಿಂದಾಗಿ ಕುತ್ತಿಗೆಯಲ್ಲಿ ಹಲವಾರು ವಾಸ್ತವಿಕ ಮತ್ತು ಸಂಭಾವ್ಯ ಅವಕಾಶಗಳು (ಖಾಲಿ ಜಾಗಗಳು) ಸೃಷ್ಟಿಯಾಗಿರುತ್ತವೆ.
* ಕುತ್ತಿಗೆಯ ಉದ್ದಕ್ಕೂ ಇರುವ ಅವಕಾಶಗಳು.

*ಗಂಟಲಿನ ಸುತ್ತಲಿನಲ್ಲಿರುವ ಅವಕಾಶ.

* ಅಪಾಯದ ಅವಕಾಶ.

* ದೇಹದಕುಳಿಯ ರಕ್ತನಾಳಗಳ ಅವಕಾಶ.

* ಬೆನ್ನುಹುರಿಯ ಆರಂಭದ ಭಾಗದಲ್ಲಿರುವ ಅವಕಾಶ .

* ಕುತ್ತಿಗೆಯ ಮುಂಭಾಗದಲ್ಲಿರುವ ಹೈಯಾಯ್ಡ ಮೂಳೆಯ ಮೇಲುಭಾಗದ ಅವಕಾಶಗಳು.

* ಗಂಟಲಿನ ಸಮೀಪದ ಅವಕಾಶ .

* ಮೇಲುದವಡೆಯ ಅಡಿಯ ಅವಕಾಶ.

* ಕಿವಿಯ ಆಸುಪಾಸಿನ ಅವಕಾಶ.

* ಕಿವಿಯ ಆಸುಪಾಸಿನ ಅವಕಾಶ.

* ಕೆಳದವಡೆಯ ಅಡಿಯ ಅವಕಾಶ.

* ಟಾನ್ಸಿಲ್‌ಗ‌ಳ ಮೇಲ್ಭಾಗದ ಅವಕಾಶ.

* ಹೈಯಾಯ್ಡ ಮೂಳೆಯ ಕೆಳಭಾಗದ ಅವಕಾಶಗಳು.

* ದೇಹದ ಕುಳಿಗಳ ಮುಂಭಾಗದ ಅವಕಾಶ.
ಕತ್ತಿನಾಳದ ಅವಕಾಶಗಳು
ಮುಖದ ಸ್ನಾಯುಪದರಗಳ ಪ್ರತಿಒತ್ತಡದಲ್ಲಿರುವ ಏರಿಳಿತ‌ಗಳ ಫಲವಾಗಿ ಕತ್ತಿನ ಆಳದಲ್ಲಿ ಸುಮಾರು 11 ಅವಕಾಶಗಳು (ಖಾಲಿ ಜಾಗಗಳು) ಸೃಷ್ಟಿಯಾಗಿರುತ್ತವೆ. ಇವು ವಾಸ್ತವ ಅವಕಾಶಗಳಾಗಿರಬಹುದು ಅಥವಾ ಸಂಭಾವ್ಯ ಅವಕಾಶಗಳಾಗಿದ್ದು, ಮುಖದ ಪದರಗಳ ನಡುವೆ ಕೀವು ತುಂಬಿದಾಗ ಸೃಷ್ಟಿಗೊಳ್ಳಬಹುದು. ಈ ಅವಕಾಶಗಳ ನಡುವೆ ಸಂಪರ್ಕ ಜಾಲವಿದ್ದು, ಒಂದೆಡೆ ತಗುಲಿದ ಸೋಂಕು ಇನ್ನೊಂದು ಅವಕಾಶಕ್ಕೆ ಹರಡಿಕೊಳ್ಳುವ ಅಪಾಯ ಇರುತ್ತದೆ. ಈ ಅವಕಾಶಗಳ ಬಗ್ಗೆ ವಿವರವಾಗಿ ತಿಳಿಯೋಣ.
ಗಂಟಲಿನ ಸಮೀಪದ ಅವಕಾಶ (parapharyngeal space)
ಇದು ಮುಖದ ವ್ಯವಸ್ಥೆಯ ಹಲವಾರು ಅಂಗಾಂಗಗಳ ಅಸ್ಥಿತ್ವದಿಂದ ಉಂಟಾಗಿರುವ ತಿರುವು ಮುರುವಾಗದ ಪಿರಾಮಿಡ್‌ ಆಕೃತಿಯ ಅವಕಾಶ. ಇದು ಕುತ್ತಿಗೆಯ ಮುಂಭಾಗದಲ್ಲಿರುವ ಹೈಲಾಯ್ಡ ಮೂಳೆಯ ಮೇಲು ಭಾಗದಲ್ಲಿರುತ್ತದೆ.

ಟಾನ್ಸಿಲ್‌ಗ‌ಳು, ಗಂಟಲು, ಹಲ್ಲು, ಲಾಲಾರಸ ಗ್ರಂಥಿಗಳು, ಮೂಗಿನ ಸೋಂಕುಗಳು ಅಥವಾ ದವಡೆಯ ಗುಳ್ಳೆಗಳು  ಈ ಅವಕಾಶಕ್ಕೆ ಸೋಂಕನ್ನು ಹರಡಬಲ್ಲವು. ಈ ಭಾಗಕ್ಕೆ ಸೋಂಕು ತಗುಲಿದವರಿಗೆ ಗಂಟಲಿನ ಗೋಡೆ ಮತ್ತು ಟಾನ್ಸಿಲ್‌ಗ‌ಳು ಸ್ಥಳಾಂತರಿತಗೊಂಡು ಕಾಣಿಸುವುದು ಬಹುಮುಖ್ಯ ಲಕ್ಷಣವಾಗಿದ್ದು, ಜೊತೆಗೆ ಬಾಯಿಯ ಚಲನೆ ಸ್ಥಗಿತಗೊಂಡಿರುವುದು,  ಜೊಲ್ಲು ಸುರಿಯುವುದು, ಆಹಾರ ನುಂಗಲು ಕಷ್ಟವಾಗುವುದು, ಆಹಾರ ನುಂಗುವಾಗ ನೋವು... ಮತ್ತಿತ‌ರ ಲಕ್ಷಣಗಳು ಕಾಣಿಸಿಕೊಂಡಿರುತ್ತವೆ.
ಗಂಟಲಿನ ಸುತ್ತಲಿನ ಅವಕಾಶ (retropharyngeal space)
ತಲೆಬುರುಡೆಯ ತಳದಿಂದ ಶ್ವಾಸನಾಳದ ಕವಲಿನ ತನಕ ಗಂಟಲಿನ ಸುತ್ತಲೂ ಕಂಡುಬರುವ ಈ ಅವಕಾಶದಲ್ಲಿ ದುಗ್ಧಗ್ರಂಥಿಗಳು ಇರುತ್ತವೆ. ಈ ಭಾಗಕ್ಕೆ ಸೋಂಕು ಗಂಟಲು ಅಥವಾ ಅನ್ನನಾಳಕ್ಕೆ ಜಖಂ ಆದಾಗ ನೇರವಾಗಿ ಅಥವಾ ಬೇರೆ ಅವಕಾಶಗಳಿಂದ  ಪರೋಕ್ಷವಾಗಿ ಪ್ರವೇಶಿಸಬಹುದು.

ಮಕ್ಕಳಲ್ಲಿ ಹೆಚ್ಚಾಗಿ ಈ ಸೋಂಕಿಗೆ ಮೇಲಿನ ಶ್ವಾಸನಾಳದ ಸೋಂಕು ಕಾರಣವಾಗಿದ್ದರೆ, ದೊಡ್ಡವರಲ್ಲಿ ಪರಕೀಯ ವಸ್ತುಗಳು ಅಥವಾ ಜಖಂ ನಿಂದ ಕಾಣಿಸಿಕೊಂಡಿರುತ್ತವೆ. ಮೂಗು, ಅಡೆನಾಯ್ಡಗಳು, ಸೈನಸ್‌ಗಳಿಂದಲೂ ಅಲ್ಲಿಗೆ ಸೋಂಕು ತ‌ಗುಲಬಹುದು.

ಈ ಭಾಗದಲ್ಲಿರುವ ಸೋಂಕು ಬೆನ್ನುಹುರಿಯ ಮೊದಲು ಇರುವ ಅವಕಾಶ  ಮತ್ತು ಅಲ್ಲಿಂದ ಎದೆಗೂ ಹರಡಬಹುದು. ಇಲ್ಲಿ ಎದ್ದ ಗುಳ್ಳೆಗಳು ಉಬ್ಬಿ ಗಂಟಲಿನ ಮಟ್ಟದಲ್ಲಿ ಗ್ರಂಥಿಗಳು ಐದು ವರ್ಷ ಪ್ರಾಯ ದಾಟಿದ ಬಳಿಕ ಕುಗ್ಗುವುದರಿಂದಾಗಿ, ಅಲ್ಲಿ ಸೋಂಕು ತಗಲುವ ಸಾಧ್ಯತೆಗಳು ಅತ್ಯಧಿಕ.
ಬೆನ್ನುಹುರಿಯ ಆರಂಭದ ಭಾಗದಲ್ಲಿರುವ ಅವಕಾಶ (prevertebral space)
ಡೇಂಜರ್‌ ಸ್ಪೇಸ್‌ನ ಮುಂಭಾಗದಲ್ಲಿರುವ ಈ ಅವಕಾಶ ತಲೆಬುರುಡೆಯ ತಳದಿಂದ ಬೆನ್ನು ಹುರಿಯ ತಳಭಾಗದ  ಮೂಳೆಯ ತ‌ನಕ ಹಬ್ಬಿದೆ.

ಇಲ್ಲಿ ಸೋಂಕಿಗೆ ಬೇರೆ ಭಾಗಗಳಿಂದ ಸೋಂಕು ತಗಲುವುದು, ಆಘಾತ‌ (ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಚಿಕಿತ್ಸಾ ಪರಿಕರಗಳು) ಮತ್ತಿತ‌ರ ಕಾರಣಗಳಿರುತ್ತವೆ. ಸೋಂಕು ಬೆನ್ನು ಹುರಿಗೆ ತಗುಲಿದರೆ ಬೆನ್ನು ಹುರಿ ದುರ್ಬಲಗೊಳ್ಳುವ ಅಥವಾ ಮೂಳೆ-ಅಸ್ಥಿಮಜ್ಜೆಗಳ ಉರಿಯೂತಕ್ಕೆ ಕಾರಣವಾಗಬಹುದು.
ಅಪಾಯದ ಅವಕಾಶ (Danger space)
ಇದು ಗಂಟಲಿನ ಸುತ್ತಲಿನ ಅವಕಾಶ ಮತ್ತು ಬೆನ್ನುಹುರಿಯ ಆರಂಭದ ಭಾಗದಲ್ಲಿರುವ ಅವಕಾಶಗಳ ನಡುವಿನ ಅವಕಾಶವಾಗಿದ್ದು, ತಲೆಬುರುಡೆಯ ತಳದಿಂದ ದವಡೆಯ ತ‌ನಕ ಹಬ್ಬಿದೆ.

ಬೇರೆ ಅವಕಾಶಗಳಿಂದ ಈ ಅವಕಾಶಕ್ಕೆ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಈ ಭಾಗದಲ್ಲಿ ತೆಳ್ಳಗೆ ಹರಡಿರುವ ಮೆದು ಅಂಗಾಂಶಗಳು ಸೋಂಕು ಬೇಗನೆ ಹರಡುವಂತೆ ಮಾಡುತ್ತದೆ. ಇಲ್ಲಿ ಹರಡಿದ ಸೋಂಕು ಎದೆಯ ಗೂಡಿನ ಉರಿಯೂತ , ಎದೆಗೂಡಿನಲ್ಲಿ ಗಾಳಿಯ ಒತ್ತಡ, ಕೀವು ತ‌ುಂಬಿ ಕೊಳೆಯುವಿಕೆ ಮತ್ತಿತರ ಮರಣಾಂತಿಕ ಅಪಾಯಗಳು ಕಂಡುಬರಲು ಕಾರಣ ಆಗಬಹುದು.
ಕೆಳದವಡೆಯ ಅಡಿಭಾಗದ ಅವಕಾಶ (masticator space)
ಬಾಯಿಯ ರೆಕ್ಕೆಯಾಕಾರದ ಸ್ನಾಯುಗಳ ನಾರು ಅಂಗಾಂಶ ಮತ್ತು ಕೆಳದವಡೆಯ ಸ್ನಾಯುಗಳ ನಡುವೆ ಇರುವ ಅವಕಾಶ ಇದು.

ಗಂಟಲಿನ ಸಮೀಪದ ಅವಕಾಶಗಳು, ಕಿವಿಯ ಆಸುಪಾಸು ಅಥವಾ ಕೆನ್ನೆಯ ಅವಕಾಶ ಗಳಿಂದ ಇಲ್ಲಿಗೆ ಸೋಂಕು ಹರಿದು ಬರಬಹುದು. ವಿಶೇಷವಾಗಿ ಹಲ್ಲಿನ ಸೋಂಕುಗಳು, ಮುಖದ ಮೂಳೆಮುರಿತಗಳ ಚಿಕಿತ್ಸೆಯ ಬಳಿಕ ಈ ಸೋಂಕು ತಲೆದೋರಬಹುದು.
ಮೇಲುದವಡೆಯ ಅಡಿಭಾಗದ ಅವಕಾಶ (submandibular space)
ನಾಲಿಗೆಯ ಅಡಿ ಮತ್ತು ಮೇಲುದವಡೆಯ ಅಡಿಭಾಗಗಳಲ್ಲಿ ಎರಡು ವಿಭಾಗಗಳನ್ನು ಹೊಂದಿರುವ ಅವಕಾಶ ಇದು. ಬಾಯಿಯ ಜಖಂ, ಹಲ್ಲಿನ ಗುಳ್ಳೆಗಳು ಅಥವಾ ಲಾಲಾಗ್ರಂಥಿಗಳ ಉರಿಯೂತಗಳ ಕಾರಣದಿಂದಾಗಿ ದ್ವಿತಿಯ ಹಂತ‌ದ ಸೋಂಕು ಇಲ್ಲಿ ಕಾಣಿಸಿಕೊಳ್ಳಬಹುದು.

ಈ ಸೋಂಕು ತಗುಲಿರುವವರಲ್ಲಿ ಜೊಲ್ಲು ಸುರಿಯುವಿಕೆ, ಬಾಯಿ ತೆೆರೆಯಲು ಕಷ್ಟವಾಗುವುದು, ನೋವು, ಆಹಾರ ನುಂಗಲು ಕಷ್ಟವಾಗುವುದು, ದವಡೆಯ ಅಡಿಭಾಗದಲ್ಲಿ ಬಾವು, ಉಸಿರಾಟ ಕಷ್ಟವಾಗುವುದು, ನಾಲಿಗೆ ಸ್ಥಳಾಂತರಿತಗೊಂಡು ತಿರುಚಿರುವುದು ಕಂಡುಬರಬಹುದು. ತುತ‌ುìಚಿಕಿತ್ಸೆ ದೊರೆಯದಿದ್ದರೆ ಪ್ರಾಣಕ್ಕೆ ಅಪಾಯ ತರಬಲ್ಲ ಸ್ಥಿತಿ ಇದು.
ಕುತ್ತಿಗೆಯ ಬಳಿಯ ಅವಕಾಶ
ಕುತ್ತಿಗೆಯ ಆಸುಪಾಸಿನ ಭಾಗಗಳಲ್ಲಿರುವ ವಿವಿಧ ರಕ್ತನಾಳಗಳು, ನರಗಳು ಮತ್ತು ನಾರು ಅಂಗಾಂಶಗಳ ನಡುವಿನ ಸಂಭಾವ್ಯ ಅವಕಾಶ ಇದು.

ಬೇರೆ ಭಾಗಕ್ಕೆ ತಗುಲಿದ ಸೋಂಕುಗಳು ಇಲ್ಲಿಗೆ ಹರಡಬಹುದು ಅಥವಾ ರಕ್ತನಾಳಕ್ಕೆ ಮಾದಕ ದ್ರವ್ಯಗಳನ್ನು ಚುಚ್ಚಿಕೊಳ್ಳುವವರಲ್ಲಿ ನೇರವಾಗಿ ಸೋಂಕು ತಗುಲಬಹುದು. ಇಲ್ಲಿನ ಜಗ್ಲಾರ್‌ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದರೆ, ಅದು ಹೆಪ್ಪುಗಟ್ಟಿದ ಕೀವು ಸಹಿತ‌ ಪದಾರ್ಥಗಳನ್ನು ಹೃದಯ-ಶ್ವಾಸಕೋಶಗಳಿಗೆ ಸಾಗಿಸಬಹುದು. ಕ್ಯಾರೊಟಿಡ್‌ ರಕ್ತನಾಳದಲ್ಲಿ ಒತ್ತಡ ಹೆಚ್ಚು ಒಡೆದುಹೋಗಬಹುದು.
ಶ್ವಾಸನಾಳದ ಮೂಲದಲ್ಲಿರುವ ಅವಕಾಶ (pretrachial space)
ಥೈರಾಯ್ಡ ಮೂಳೆಯಿಂದ ಎದೆಗೂಡಿನ ಮೇಲುಭಾಗದ ತ‌ನಕ ಶ್ವಾಸನಾಳದ ಮುಂಭಾಗದಲ್ಲಿರುವ ಅವಕಾಶ ಇದು.

ಇಲ್ಲಿ ಜಖಂ, ಪರಕೀಯ ವಸ್ತುಗಳು, ಎಂಡೊಸ್ಕೋಪಿನಂತಹ ವೈದ್ಯಕೀಯ ಪರಿಕರಗಳಿಂದಾಗಿ ಅನ್ನನಾಳದ ಗೋಡೆ ಅಕಸ್ಮಾತ್‌ ಹರಿದಾಗ, ಸೋಂಕು ತ‌ಗುಲಬಹುದು.

ಆಹಾರ ನುಂಗಲು ಕಷ್ಟವಾಗುವುದು, ನುಂಗುವಾಗ ನೋವು, ಜ್ವರ, ಸ್ವರ ಕರ್ಕಷಗೊಳ್ಳುವುದು ಮತ್ತು ಉಸಿರಾಟಕ್ಕೆ ಅಡ್ಡಿಗಳು ಕಾಣಿಸಿಕೊಳ್ಳುವುದು ಈ ತೊಂದರೆಯ ಲಕ್ಷಣಗಳು.
ಟಾನ್ಸಿಲ್‌ ಮೇಲುಭಾಗದ ಅವಕಾಶ (pretonsillar space)
ಟಾನ್ಸಿಲ್‌ಗ‌ಳು ಮತ್ತು ಕನ್‌ಸ್ಟ್ರಿಕ್ಟರ್‌ಗಳ ನಡುವಿನ ಅವಕಾಶ ಇದು. ಪದೇ ಪದೇ ಟಾನ್ಸಿಲ್‌ಗ‌ಳ ಸೋಂಕು ಕಾಣಿಸಿಕೊಳ್ಳುವ ಬಹು ಸಾಮಾನ್ಯವಾದ ಸೋಂಕು ಇದು.

ಆಹಾರ ನುಂಗಲು ಕಷ್ಟವಾಗುವುದು, ನೋವು, ಜೊಲ್ಲು ಸೋರುವುದು, ಸ್ವರದಲ್ಲಿ ಬದಲಾವಣೆ, ಜ್ವರ, ಅಂಗುಳು ಇಕ್ಕಡೆಗಳಲ್ಲಿ ಸರಿಸಮನಾಗಿಲ್ಲದಿರುವುದು, ಟಾನ್ಸಿಲ್‌ ಮಧ್ಯದಿಂದ ಜರುಗಿರುವುದು ಮತ್ತಿತರ ಲಕ್ಷಣಗಳನ್ನು ಈ ಸೋಂಕು ಹೊಂದಿರುತ‌¤ದೆ.
ಕಿವಿಯ ಬಳಿಯ ಅವಕಾಶ (paortid space)
ದೇಹ ದ್ರವ ಕಡಿಮೆಯಾಗಿರುವ, ದುರ್ಬಲಗೊಂಡಿರುವ ಮತ‌ು¤ ಬಾಯಿಯ ಆರೋಗ್ಯ ತೊಂದರೆ ಇರುವವರು ಹಾಗೂ ಲಾಲಾರಸಗ್ರಂಥಿಗಳಲ್ಲಿ ಅಡ್ಡಿ ಇರುವವರಿಗೆ ಈ ಸೋಂಕು ಸುಲಭವಾಗಿ ಕಾಣಿಸಿಕೊಳ್ಳುತ‌¤ದೆ. ನೋವು, ದ್ರವತ‌ುಂಬಿದ ಬಾವು, ಚರ್ಮ ಕೆಂಪಾಗುವುದು ಮತ‌ು¤ ಜ್ವರ ಇವರಲ್ಲಿ ಕಂಡುಬರುತ‌¤ದೆ. ಕ್ರಮೇಣ ಈ ಸೋಂಕು ಇರುವವರಿಗೆ ಬಾಯಿಯ ಚಲನೆ ಕಷ್ಟವಾಗುತ್ತದೆ.
ಕೆನ್ನೆಯ ಭಾಗದ ಅವಕಾಶ (temporal space)
ಕೆನ್ನೆಯಲ್ಲಿರುವ ನಾರು ಅಂಗಾಂಶಗಳಾದ ಟೆಂಪೊರಾಲಿಸ್‌ ಫಾಸಿಯಾ  ಮತ‌ು¤ ಪೆರಿಯೋಸ್ಟಿಯಮ್‌ಗಳ ನಡುವಿರ ಭಾಗ ಇದು ಈ ತೊಂದರೆ ಇರುವವರಲ್ಲಿ ನೋವು, ಬಾಯಿಯ ಚಲನೆ ಕಷ್ಟವಾಗಿರುವುದು ಅಥವಾ ಕೆಳದವಡೆ ಜರುಗಿರುವುದು ಕಂಡುಬರುತ್ತದೆ.
ಚಿಕಿತ್ಸೆಗೆ ಅಡ್ಡಿಗಳುಕತ್ತಿನ ಆಳದ ಸೋಂಕುಗಳನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರಚೆಲ್ಲುವ ಪ್ರಕ್ರಿಯೆಗೆ ಅಂತಹ ಅಡ್ಡಿಗಳೇನಿಲ್ಲ. ಆದರೆ ಸೋಂಕಿನಿಂದ ಉಸಿರಾಟಕ್ಕೆ ಅಡ್ಡಿ ಆಗಿರುವವರಲ್ಲಿ ಉಸಿರಾಟಕ್ಕೆ ಹಾದಿ ಸುಗಮ ಮಾಡಿಕೊಡುವುದು ಆದ್ಯತೆಯಾಗಿರುತ‌¤ದೆ. ಉಸಿರಾಟ ಸುಗಮವಾದ ಬಳಿಕ ಶಸ್ತ್ರಕ್ರಿಯೆಯನ್ನು ನಡೆಸಬಹುದು.
ಪ್ರಯೋಗಾಲಯ ತಪಾಸಣೆಗಳುಕತ್ತಿನಾಳದ ಸೋಂಕುಗಳ ಪತ್ತೆಗೆ ಈ ಕೆಳಗಿನ ತಪಾಸಣೆಗಳು ಜೊತೆಗೆ ರೋಗ ಚರಿತ್ರೆಯ ವಿಶ್ಲೇಷಣೆ, ದೈಹಿಕ ತಪಾಸಣೆಗಳು ಅಗತ್ಯವಿರುತ್ತವೆ.

* ರಕ್ತ ತ‌ಪಾಸಣೆ.

* ರಕ್ತಕಣಗಳ ಸಂಖ್ಯೆ.

* ಶಸ್ತ್ರಕ್ರಿಯೆ ನಡೆಸಿ, ಸೋಂಕನ್ನು ಹೊರಗೆಳೆಯಬೇಕಾಗಿರುವವರಲ್ಲಿ ರಕ್ತಹೆಪ್ಪುಗಟ್ಟುವ ಪ್ರಕ್ರಿಯೆಯ ತಪಾಸಣೆ.

* ಕೀವು ಉಂಟಾಗಿರುವ ರೋಗಿಗಳಲ್ಲಿ ರಕ್ತದ ವಿಶ್ಲೇಷಣೆ.

* ಗುಳ್ಳೆಗಳ ಗ್ರಾಮ್‌ ಸ್ಟ್ರೇನ್‌ ತಪಾಸಣೆ. (ಸೂಕ್ಷ್ಮ ಜೀವಾಣುಗಳ ಚಿಕಿತ್ಸೆ ಆರಂಭಿಸಲು ಇದು ಅಗತ್ಯ)
ಕ್ಷ-ಕಿರಣಬಿಂಬ ಅಧ್ಯಯನಗಳು
ಕತ್ತಿನ ರೇಡಿಯೋಗ್ರಫಿ ಬಿಂಬ
*ಬೆನ್ನು ಹುರಿಯ ಆರಂಭದ ಭಾಗದಲ್ಲಿ ಮೃದು ಅಂಗಾಂಶಗಳ ಬಾವು, ಪರಕೀಯ ವಸ್ತುಗಳು, ಚರ್ಮದಾಳದಲ್ಲಿ ದ್ರವ-ಅನಿಲ ಮಟ್ಟ, ಬೆನ್ನುಹುರಿಯ ಭಾಗಗಳಿಗೆ ಹಾನಿಯಾಗಿರುವುದು ಈ ತಪಾಸಣೆೆಯಿಂದ ಪತ್ತೆಯಾಗುತ್ತದೆ.
ಎದೆಯ ಕ್ಷ-ಕಿರಣ ಬಿಂಬ
ಎದೆಗೂಡಿನ ವಿಶ್ಲೇಷಣೆ, ಅಲ್ಲಿ ಅನಿಲ ತ‌ುಂಬಿರುವ ಸ್ಥಿತಿ, ನ್ಯುಮೋನಿಯಾ ದಂತ‌ಹ ಸ್ಥಿತಿಗಳ ವಿಶ್ಲೇಷಣೆಗೆ ಈ ತಪಾಸಣೆ ಸಹಾಯಕ.
ಸಿ.ಟಿ. ಸ್ಕ್ಯಾನಿಂಗ್‌
ಆಳ ಕತ್ತಿನ ಸೋಂಕುಗಳ ಚಿಕಿತ್ಸೆಗೆ ಸಿ.ಟಿ. ಸ್ಕ್ಯಾನಿಂಗ್‌ ಪ್ರಮುಖವಾದ ತಪಾಸಣೆ. ಸೋಂಕಿನ ಸ್ಥಳ, ಸೋಂಕು ಹರಡಿರುವ ವಿಸ್ತಾರ, ಸಮೀಪದ ನರ-ರಕ್ತನಾಳಗಳಿಗೆ ಸೋಂಟು ಉಂಟುಮಾಡಿರುವ ಹಾನಿ ಮತ್ತಿತ‌ರ ವಿಚಾರಗಳನ್ನು ಈ ಸ್ಕ್ಯಾನಿಂಗ್‌ ಮೂಲಕ ಪತ್ತೆ ಹಚ್ಚಬಹುದು.

ಎಂ.ಆರ್‌.ಐ.

ಸಮಯ ಮತ್ತು ವೆಚ್ಚದ ಕಾರಣಗಳಿಂದಾಗಿ ಎಂ.ಆರ್‌.ಐ. ಪ್ರಾಥಮಿಕ ತಪಾಸಣೆ ವಿಧಾನವಾಗಿ ಬಳಕೆಯಲ್ಲಿಲ್ಲ. ಆದರೆ ಈ ತಪಾಸಣೆೆಯಿಂದ ಸೋಂಕಿನ ಸ್ಪಷ್ಟ ಕಲ್ಪನೆ ದೊರೆಯಬಲ್ಲುದು.
ಆಲ್ಟ್ರಾ ಸೌಂಡ್‌
ಸೋಂಕಿನ ಭಾಗಕ್ಕೆ ಸೂಕ್ಷ್ಮ ಸೂಜಿ ತಲುಪಿಸಿ, ಸೋಂಕನ್ನು ಹೀರಿ ತೆಗೆಯುವ ಪ್ರಕ್ರಿಯೆಯ ವೇಳೆ ಅಲ್ಟ್ರಾಸೌಂಡ್‌ ಮಾರ್ಗದರ್ಶನ ಪಡೆಯಲಾಗುತ್ತದೆ.
ಆರ್ತೆರಿಯೋಗ್ರಫಿ

ಕ್ಯಾರೋಟಿಡ್‌, ಜಗುಲಾರ್‌ ಅಥವಾ ಇನ್ನೊಮಿನೇಟ್‌ ರಕ್ತನಾಳಗಳು ಸೋಂಕಿಗೆ ಒಳಗಾಗಿರುವಾಗ ಈ
ತಪಾಸಣೆ ಸಹಾಯಕ.
ಚಿಕಿತ್ಸೆಗಳು

ಉಸಿರಾಟಕ್ಕೆ ಅಡ್ಡಿಗಳಿದ್ದಾಗ

* ಉಸಿರಾಟಕ್ಕೆ ಅಡ್ಡಿಗಳಿದ್ದಾಗ, ಅದನ್ನು  ನಿವಾರಿಸುವುದು ಪ್ರಥಮ ಆದ್ಯತೆ. ರೋಗಿಗೆ ತೀವ್ರ ನಿಗಾ, ಶ್ವಾಸನಾಳ ಅಥವಾ ಮೂಗಿನ ಮೂಲಕ ಟ್ಯೂಬನ್ನು ಇಳಿಸುವುದು ಅಥವಾ ಶ್ವಾಸನಾಳದ ಮಧ್ಯದಲ್ಲಿ ತೂತು ಕೊರೆದು ಉಸಿರಾಟಕ್ಕೆ ಅವಕಾಶ ಮಾಡಿಕೊಡುವುದು ಮತ್ತಿತರ ತುರ್ತು ಕ್ರಮಗಳು ಅಗತ್ಯಬೀಳಬಹುದು.
ವಿಶ್ಲೇಷಣೆಗಳು
*ಸೂಕ್ಷ್ಮಾಣು ನಿರೋಧಕ ನೇರ ಚಿಕಿತ್ಸೆಗಳಿಗಾಗಿ, ಸಾಧ್ಯವಿದ್ದಲ್ಲೆಲ್ಲ ವಿಶ್ಲೇಷಣೆಗಾಗಿ ಸೋಂಕು ದ್ರವ್ಯಗಳನ್ನು ಪಡೆಯುವುದು. ಕತ್ತಿನ ಗುಳ್ಳೆಯ ದ್ರವ ಅಥವಾ ರಕ್ತಗಳನ್ನು ಈ ವಿಶ್ಲೇಷಣೆಗೆ ಅಳವಡಿಸಬಹುದು.
ರಕ್ತನಾಳಗಳ ಮೂಲಕ ಆ್ಯಂಟಿಬಯಾಟಿಕ್‌ಗಳು
* ಸೋಂಕುಗಳು ಕಾಣಿಸಿಕೊಂಡಿರುವವರಲ್ಲಿ ರೋಗ ವಿಶ್ಲೇಷಣೆಯ ವರದಿಗಳು ದೊರೆಯುವ ಮುನ್ನವೇ ಸಾಮಾನ್ಯ ಆ್ಯಂಟಿ ಬಯಾಟಿಕ್‌ ಚಿಕಿತ್ಸೆ ಆರಂಭಿಸಬೇಕಾಗುತ್ತದೆ.

* ವರದಿಗಳು ದೊರೆತ‌ ಬಳಿಕ ಸೂಕ್ತ ಆ್ಯಂಟಿಬಯಾಟಿಕ್‌ಗಳನ್ನು ನೀಡಬೇಕಾಗುತ್ತದೆ.

* ನೂರಕ್ಕೆ 50ರಷ್ಟು  ಪ್ರಕರಣಗಳಲ್ಲಿ ಶಸ್ತ್ರಕ್ರಿಯೆ ಇಲ್ಲದೆ, ಉಸಿರಾಟಕ್ಕೆ ಅಡ್ಡಿ ಆಗದಂತೆ ಆ್ಯಂಟಿಬಯಾಟಿಕ್‌ಗಳ ಚಿಕಿತ್ಸೆಯ ಮೂಲಕವೇ ತೊಂದರೆಗಳನ್ನು  ಪರಿಹರಿಸಬಹುದು.

* ಕನಿಷ್ಠ 48 ತಾಸುಗಳ ತನಕ ರೋಗಿಗಳಿಗೆ ರಕ್ತನಾಳಗಳ ಮೂಲಕ ಆ್ಯಂಟಿಬಯಾಟಿಕ್ಸ್‌ ನೀಡಲಾಗುತ್ತದೆ.
ಶಸ್ತ್ರಕ್ರಿಯಾ ಚಿಕಿತ್ಸೆ
*ಸೋಂಕಿನ ಭಾಗವನ್ನು ಶಸ್ತ್ರಕ್ರಿಯೆಯ ಮೂಲಕ ತಲುಪಿ, ಅಲ್ಲಿನ ಸೋಂಕನ್ನು ತೆರವುಗೊಳಿಸುವುದು ಈ ಚಿಕಿತ್ಸೆಯ ಮೂಲ ಉದ್ದೇಶ. ಸಾಮಾನ್ಯವಾಗಿ 48-72ತಾಸುಗಳ ತನಕ ರಕ್ತನಾಳಗಳ ಮೂಲಕ ಆ್ಯಂಟಿಬಯಾಟಿಕ್‌ಗಳನ್ನು ನೀಡಿದ್ದರೂ, ಪರಿಸ್ಥಿತಿ ಸುಧಾರಿಸದವರಲ್ಲಿ ಮತ್ತು ಗುಳ್ಳೆಗಳಿಂದಾಗಿ ಸಂಕೀರ್ಣ ತೆೊಂದರೆಗಳು ಉಂಟಾಗಿರುವವರಲ್ಲಿ ಶಸ್ತ್ರಕ್ರಿಯೆ ಅಗತ್ಯ ಬಿದ್ದಿದೆ.

*ಕೆಲವರಲ್ಲಿ ಸೂಕ್ಷ್ಮಸೂಜಿಗಳನ್ನು ಸೋಂಕಿನ ಭಾಗಕ್ಕೆ ತಲುಪಿಸಿ, ಅಲ್ಲಿಂದ ಸೋಂಕು ದ್ರವ್ಯಗಳನ್ನು ಹೀರಿ ತೆಗೆಯಲಾಗುವುದು.
ಶಸ್ತ್ರಕ್ರಿಯೆಯ ಬಳಿಕ
ಶಸ್ತ್ರಕ್ರಿಯೆಯ ಬಳಿಕ ಚಿಕಿತ್ಸೆಗೆ ರೋಗಿಯ ಪ್ರತಿಕ್ರಿಯೆಯನ್ನು ನಿಕಟ ನಿಗಾದಲ್ಲಿರಿಸಿ ನೋಡಬೇಕಾಗುತ್ತದೆ. ಅಲ್ಲಿ ಪುನಃ ದ್ರವ ಶೇಖರಣೆ ಆದರೆ, ಅದನ್ನು ಹೊರತೆಗೆಯಬೇಕಾಗುತ್ತದೆ. ರೋಗಿಯ ಅಗತ್ಯಕ್ಕೆ ತಕ್ಕಂತೆ ಆ್ಯಂಟಿಬಯಾಟಿಕ್‌ಗಳನ್ನು ನೀಡಬೇಕಾಗುತ್ತದೆ. ರೋಗಿ ತನ್ನ ಸೋಂಕಿನಿಂದ ಪೂರ್ಣ ಮುಕ್ತವಾಗುವ ತನಕ ವೈದ್ಯರ ಆರೈಕೆಗೆ ಒಳಗಾಗುತ್ತಿರಬೇಕಾಗುತ್ತದೆ.
ಸಂಕೀರ್ಣ ತೊಂದರೆಗಳು
ಕತ್ತಿನಾಳದ ಸೋಂಕುಗಳು ಹಲವು ಬಾರಿ ಜೀವಕ್ಕೇ ಕುತ್ತು ತ‌ರಬಲ್ಲ ಸಂಕೀರ್ಣ ತೊಂದರೆಗಳಿಗೆ ಕಾರಣವಾಗಬಹುದು. ಸೂಕ್ತ ಚಿಕಿತ್ಸೆಗಳು ಸಕಾಲದಲ್ಲಿ ದೊರೆಯದಿದ್ದಾಗ, ಅಥವಾ ಚಿಕಿತ್ಸೆಯ ಬಗ್ಗೆ ನಿರ್ಲಕ್ಷ್ಯತೋರಿದಾಗ ಈ ರೀತಿಯ ಸಂಕೀರ್ಣ ತೊಂದರೆಗಳು ಕಾಣಿಸಿಕೊಳ್ಳಬಹುದು. ಅಂತಹ ಕೆಲವು ಸಂಕೀರ್ಣತೊಂದರೆಗಳು ಈ ಕೆಳಗಿನಂತಿವೆ.

* ಶ್ವಾಸನಾಳಗಳು ಒತ್ತಡಕ್ಕೀಡಾಗಿ ಉಸಿರಾಟಕ್ಕೆ ಅಡ್ಡಿಯಾಗುವುದು.

*ದೇಹದ ಭಾಗಗಳಲ್ಲಿ ದ್ರವ-ಅನಿಲ ತುಂಬುವುದು.

*ರಕ್ತನಾಳಗಳ ಸಂಕೀರ್ಣ ತೊಂದರೆಗಳು.

* ಎದೆ ಗೂಡಿನ ಉರಿಯೂತ‌.

* ನರವ್ಯವಸ್ಥೆಗೆ ಹಾನಿಗಳು.

* ರಕ್ತ ಪ್ರವಾಹದಲ್ಲಿ ಕೀವು ಕಾಣಿಸಿಕೊಳ್ಳುವುದು.

*ಕೀವಿನಿಂದ ಆಘಾತ.

*ಸೆರ್ವೈಕಲ್‌ ನಾರು ಅಂಗಾಂಶಗಳು ಕೊಳೆಯುವುದು.

*ಬೆನ್ನುಹುರಿ, ಕೆಳದವಡೆ, ತಲೆಬುರುಡೆಯ ಮೂಳೆಗಳ ಉರಿಯೂತ ಕಾಣಿಸಿಕೊಳ್ಳುವುದು.

* ಕುತ್ತಿಗೆ ತಿರುಚಿರುವುದರ ಜೊತೆ ಉರಿಯೂತಕ್ಕೆ ಗುರಿಯಾಗಿರುವುದು.
ಕತ್ತಿನಾಳದ ಸೋಂಕುಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ  ದೊರೆತರೆ ಫಲಿತಾಂಶ ಚೆನ್ನಾಗಿಯೇ ಇರುತ್ತದೆ. ಚಿಕಿತ್ಸೆ ವಿಳಂಬವಾದಂತೆ ಸಂಕೀರ್ಣ ತೊಂದರೆಗಳೂ ಹೆಚ್ಚಾಗಬಹುದು. ಒಮ್ಮೆ ಪರಿಪೂರ್ಣ ಚಿಕಿತ್ಸೆ ದೊರೆತ ಬಳಿಕ ಕತ್ತಿನಾಳದ ಸೋಂಕುಗಳು ಮರುಕಳಿಸುವ ಸಾಧ್ಯತೆಗಳು ಕಡಿಮೆ.

ಈ ಸೋಂಕುಗಳಿಗೆ ಶಸ್ತ್ರಕ್ರಿಯೆ ನಡೆಸಬೇಕೊ ಅಥವಾ ಆ್ಯಂಟಿಬಯಾಟಿಕ್‌ಗಳ ಚಿಕಿತ್ಸೆಯೇ ಸಾಕೊ ಎಂಬುದು ಇನ್ನೂ ವೈದ್ಯಕೀಯ ಜಗತ್ತಿನಲ್ಲಿ ಚರ್ಚೆಯ ವಿಚಾರವಾಗಿಯೇ ಉಳಿದಿದೆ. ಸಾಮಾನ್ಯವಾಗಿ ಮಕ್ಕಳಲ್ಲಿ ರಕ್ತನಾಳದ ಮೂಲಕ ಆ್ಯಂಟಿಬಯಾಟಿಕ್‌ ನೀಡಿಕೆ ಸಾಕಾಗುತ್ತದೆ.

48 ತಾಸುಗಳ ಆ್ಯಂಟಿಬಯಾಟಿಕ್‌  ನೀಡಿಕೆಯ ಬಳಿಕವೂ ಪರಿಸ್ಥಿತಿ ಸುಧಾರಿಸಿರದಿದ್ದರೆ ಶಸ್ತ್ರಕ್ರಿಯೆ ಅಗತ್ಯ ಬೀಳಬಹುದು. ಈ ಬಗ್ಗೆ ರೋಗಿಯ ಸ್ಥಿತಿಯನ್ನಾಧರಿಸಿ, ವೈದ್ಯರೇ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು ಸರಿಯಾದ ಹಾದಿ.
ಕುತ್ತಿಗೆ ಬಹಳ ಸಂಕೀರ್ಣವಾದ ಅಂಗ. ಅನಾದಿ ಕಾಲದಿಂದಲೂ ಈ ಸಂಕೀರ್ಣ ಭಾಗದಲ್ಲಿ ಸಂಭವಿಸುವ ಸೋಂಕುಗಳು ವೈದ್ಯರಿಗೆ ಸವಾಲುಗಳಾಗಿಯೇ ಉಳಿದಿವೆ. ಸಂಕೀರ್ಣವಾದ ಅಂಗಭಾಗಗಳು ಇರುವ ಈ ಪ್ರದೇಶದಲ್ಲಿ ಸೋಂಕಿನ ಪತ್ತೆ  ಮತ್ತು ಚಿಕಿತ್ಸೆ ಬಹಳ ಜಟಿಲ. ಆದರೆ ಇಂದು ಆಧುನಿಕ ತಂತ್ರಜ್ಞಾನಗಳು, ಔಷಧಿಗಳು ಮತ್ತು ವೈದ್ಯಕೀಯ ಕೌಶಲಗಳು ಈ ಸವಾಲುಗಳನ್ನೂ ಮೀರಿ ಬೆಳೆಯುವುದು ಸಾಧ್ಯವಾಗಿದೆ.
ಕತ್ತಿನ ಆಳದಲ್ಲಿ ಸಂಭವಿಸಬಹುದಾದ ಸೋಂಕುಗಳಿಗೆ ಕಾರಣಗಳು ಹಲವು. ಅಂತಹ ಕೆಲವು ಕಾರಣಗಳು ಇಲ್ಲಿವೆ.

*ಟಾನ್ಸಿಲ್‌ ಅಥವಾ ಗಂಟಲಿನ ಸೋಂಕುಗಳು.

*ಹಲ್ಲಿನ ಸೋಂಕುಗಳು ಮತ್ತು ಗುಳ್ಳೆಗಳು.

*ಬಾಯಿಯ ಶಸ್ತ್ರಕ್ರಿಯೆಗಳು.

*ಲಾಲಾರಸ  ಗ್ರಂಥಿಗಳಲ್ಲಿ ಸೋಂಕು ಅಥವಾ ಅಡ್ಡಿ.

*ಗಂಟಲು ಅಥವಾ ಬಾಯಿಯ ಕುಳಿಗೆ ಜಖಂ (ಬಂದೂಕಿನ ಗುಂಡಿನೇಟು, ಗಂಟಲಿನ ಗಾಯ, ಮೀನಿನ ಮುಳ್ಳು ಅಥವಾ ಮೂಳೆಗಳಂತಹ ಹರಿತ ಪದಾರ್ಥಗಳಿಂದ ಅನ್ನನಾಳ ಹರಿದಿರುವುದು... ಇತ್ಯಾದಿ.)

*ಅನ್ನನಾಳದ ಎಂಡೊಸ್ಕೋಪಿ ಅಥವಾ ಶ್ವಾಸಕೋಶದ ಎಂಡೊಸ್ಕೋಪಿ.

* ಪರಕೀಯ ವಸ್ತುಗಳ ಪ್ರವೇಶ.

*ಸೆರ್ವೈಕಲ್‌ ದುಗ್ಧಗ್ರಂಥಿಗಳ ಉರಿಯೂತ.

* ಶ್ವಾಸಕೋಶದಲ್ಲಿ ಸೀಳಿನಂತ‌ಹ ನ್ಯೂನತೆಗಳು.

* ಥೈರೊಗ್ಲಾಸಲ್‌ ಕಾಲುವೆಯಲ್ಲಿ ಸಿಸ್ಟ್‌ಗಳು.

* ಥೈರಾಯ್ಡ ಉರಿಯೂತ.

* ದವಡೆಯ ಮೂಳೆಗಳ ಉರಿಯೂತ‌ (ತುದಿಯಲ್ಲಿ ಕಲ್ಲುಗಟ್ಟಿರುವ ಮತ್ತು ಕೀವು ತುಂಬಿರುವ  ಸ್ಥಿತಿ.)

* ಧ್ವನಿ ಪೆಟ್ಟಿಗೆಯಲ್ಲಿ ದ್ರವ ತುಂಬಿದ ಗಡ್ಡೆ ಬೆಳೆದಿರುವ ಸ್ಥಿತಿ.

* ರಕ್ತನಾಳಕ್ಕೆ ಚುಚ್ಚಿಕೊಳ್ಳುವ ಮಾದಕ ದ್ರವ್ಯಗಳ ಬಳಕೆ.
ನೂರಕ್ಕೆ 20-50ರಷ್ಟು ಕತ್ತಿನಾಳದ ಸೋಂಕು ರೋಗಗಳಲ್ಲಿ ಸೋಂಕಿಗೆ ಖಚಿತವಾದ ಕಾರಣವನ್ನು ಗುರುತಿಸುವುದು ಬಹಳ ಕಷ್ಟ. ಎಚ್‌ಐವಿ ಸೋಂಕಿನಿಂದಾಗಿ ದೇಹದ ರೋಗ ನಿರೋಧಕ ವ್ಯವಸ್ಥೆ ಹಾನಿಗೀಡಾಗಿರುವವರು, ಕೀಮೊತೆರಪಿಗೆ ಒಳಗಾಗಿರುವರು ಅಥವಾ ಅಂಗಾಂಗ ಕಸಿಗಾಗಿ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಔಷಧಿಯನ್ನು ಸೇವಿಸಿದವರು... ಕತ್ತಿನಾಳದ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ.
ರೋಗದ ಸ್ವರೂಪ
ಕತ್ತಿನಾಳದ ಸೋಂಕಿಗೆ ಕಾರಣಗಳು ಹಲವಿದ್ದರೂ, ಒಮ್ಮೆ ಸೋಂಕು ತಗುಲಿದಾಗ ಅದು ಈ ಕೆಳಗಿನ ಯಾವುದಾದರೊಂದು ಹಾದಿಯ ಮೂಲಕ ಕುತ್ತಿಗೆಯ ಆಳವನ್ನು ತ‌ಲುಪುತ್ತದೆ.

* ಬಾಯಿಯ ಕುಳಿ-ಮುಖ ಅಥವಾ ಕುತ್ತಿಗೆಯ ಹೊರಭಾಗಕ್ಕೆ ತ‌ಗುಲಿದ ಸೋಂಕು ದುಗ್ಧ‌­ಗ್ರಂಥಿಗಳ ವ್ಯವಸ್ಥೆಯ ಮೂಲಕ ಕತ್ತಿನ ಆಳಕ್ಕೆ ತ‌ಲುಪಬಹುದು.

* ದುಗ್ಧ‌­ಗ್ರಂಥಿಗಳ ರೋಗಗಳಿಂದಾಗಿ ಕೀವು ತುಂಬಿ, ಕತ್ತಿನಾಳಕ್ಕೆ ತಲುಪಬಹುದು.

* ಕತ್ತಿನಲ್ಲಿರುವ ತೆರೆದ ಸ್ಥಳಗಳ ನಡುವಿನ ಸಂಪರ್ಕದ ಹಾದಿಗಳ ಮೂಲಕ ಸೋಂಕು ಕತ್ತಿನಾಳವನ್ನು ತಲುಪಬಹುದು.

* ಪರಕೀಯ ವಸ್ತುಗಳು ಚುಚ್ಚಿ, ಕತ್ತಿನಾಳಕ್ಕೆ ನೇರವಾಗಿ ಸೋಂಕು ತಗುಲಬಹುದು.

ಈ ಕೆಳಗಿನ ಕಾರಣಗಳಿಂದಾಗಿ ಕತ್ತಿನಾಳದ ಸೋಂಕುಗುಳ್ಳೆಗಳು ರೋಗಲಕ್ಷಣಗಳನ್ನು ತೋರ್ಪಡಿಸತೊಡಗುತ್ತವೆ.
* ಉರಿಯೂತಕ್ಕೊಳಗಾದ ಅಂಗಾಂಶ ಅಥವಾ ಗುಳ್ಳೆಗಳಿಂದ ಆಸುಪಾಸಿನ ಭಾಗಗಳ ಮೇಲೆ ಬೀಳುವ ಒತ್ತಡ.

* ಸೋಂಕಿನ ಪ್ರಕ್ರಿಯೆಯಲ್ಲಿ ಆಸುಪಾಸಿನ ಭಾಗಗಳು ನೇರವಾಗಿ ಒಳಗೊಳ್ಳುವುದು.

ಸಾಮಾನ್ಯವಾಗಿ ಕತ್ತಿನಾಳಕ್ಕೆ ತಲುಪುವ ರೋಗಾಣುಗಳು ಬಾಯಿಯಲ್ಲಿ ಹೆಚ್ಚಾಗಿ ವಾಸವಾಗಿರುವ ಆಮ್ಲಜನಕ ಬಳಸುವ ಅಥವಾ ಬಳಸದ  ಜೀವಾಣುಗಳಾಗಿರುತ್ತವೆ.
ರೋಗಲಕ್ಷಣಗಳು
ಸಾಮಾನ್ಯವಾಗಿ ಕತ್ತಿನ ಆಳದಲ್ಲಿ ಸೋಂಕುಗಳನ್ನು ಹೊಂದಿರುವ ರೋಗಿಗಳ ತಪಾಸಣೆಯ ವೇಳೆ ಈ ಕೆಳಗಿನ ಲಕ್ಷಣಗಳನ್ನು ಗಮನಿಸಲಾಗುತ್ತದೆ.

*ನೋವು.

* ಇತ್ತೀಚೆಗೆ ಹಲ್ಲಿನ ಚಿಕಿತ್ಸೆ ನಡೆದಿರುವುದು.

* ಮೇಲಿನ ಶ್ವಾಸಾಂಗ ವ್ಯೂಹದ ಸೋಂಕು.

* ಕತ್ತು ಅಥವಾ ಬಾಯಿಯ ಕುಳಿಗೆ ಜಖಂ.

*ಉಸಿರಾಟಕ್ಕೆ ಕಷ್ಟವಾಗುವುದು.

* ಆಹಾರ ನುಂಗಲು ಕಷ್ಟವಾಗುವುದು.

* ರೋಗನಿರೋಧಕ ವ್ಯವಸ್ಥೆ ಕುಸಿದಿರುವುದು ಅಥವಾ ಹಾನಿಗೊಂಡಿರುವುದು.

* ತೊಂದರೆ ಕಾಣಿಸಿಕೊಳ್ಳುವ ಆವರ್ತನ.

* ಒಮ್ಮೆ ಕಾಣಿಸಿಕೊಂಡ ರೋಗಲಕ್ಷಣ ಎಷ್ಟು ಅವಧಿಗೆ ಉಳಿದಿರುತ್ತದೆ ಎಂಬ ವಿಚಾರ.

ರೋಗಿಯ ದೈಹಿಕ ತಪಾಸಣೆಯ ವೇಳೆ ಸೋಂಕು ತ‌ಗುಲಿರುವ ಭಾಗವನ್ನು ಗುರುತಿಸಲು ಪ್ರಯತ್ನಿಸಲಾಗುತ್ತದೆ. ಅದಲ್ಲದೆ ಸೋಂಕಿನಿಂದ ಕಾಣಿಸಿಕೊಳ್ಳಬಲ್ಲ ಸಂಕೀರ್ಣ ತೊಂದರೆಗಳನ್ನು ಗುರುತಿಸಲಾಗುತ್ತದೆ. ರೋಗಿಯ ಕುತ್ತಿಗೆ ಮತ್ತು ತಲೆಗಳ ಕೂಲಂಕಷ ತಪಾಸಣೆ ಈ ಹಿನ್ನೆಲೆಯಲ್ಲಿ ಅಗತ್ಯವಿರುತ್ತದೆ. ಜೊತೆಗೆ, ಹಲ್ಲುಗಳು ಮತ್ತು ಟಾನ್ಸಿಲ್‌ಗ‌ಳನ್ನೂ ತಪಾಸಣೆಗೆ ಒಳಪಡಿಸಲಾಗುತ್ತದೆ. ಕತ್ತಿನ ಆಳದ ಸೋಂಕುಗಳ ಸಾಮಾನ್ಯರೋಗ ಲಕ್ಷಣಗಳೆಂದರೆ ಜ್ವರ, ಬಿಳಿ ರಕ್ತ ಕಣದ ಪ್ರಮಾಣದಲ್ಲಿ ಏರಿಕೆ ಮತ್ತು ಬಾವು. ಉಳಿದಂತೆ ಸೋಂಕು ಕಾಣಿಸಿಕೊಂಡ ಭಾಗವನ್ನವಲಂಬಿಸಿ, ಕೆಲವು ರೋಗಲಕ್ಷಣಗಳು ಈ ಕೆಳಗಿನಂತೆ ತಲೆದೋರಬಹುದು.

*ನೂರಕ್ಕೆ 70ರಷ್ಟು ಸಣ್ಣಮಕ್ಕಳ ಗಂಟಲ ಹಿಂಬದಿಯ ಸೋಂಕುಗಳಲ್ಲಿ ಕುತ್ತಿಗೆ ಅಸಹಜ ಏರು ತ‌ಗ್ಗುಗಳಿಂದ ಕೂಡಿರುತ್ತದೆ, ಗಡ್ಡೆಗಳು ಅಥವಾ ದುಗ್ಧಗ್ರಂಥಿಗಳು  ರೋಗಗ್ರಸ್ಥವಾಗಿರುವುದು ಕಂಡುಬರುತ್ತದೆ.

*ಗಂಟಲಿನ ಆಸುಪಾಸಿನ ಭಾಗಗಳು ಸೋಂಕಿಗೆ ಒಳಗಾಗಿರುವವರಲ್ಲಿ ಗಂಟಲಿನ ಒಳಗೋಡೆ ಅಸಹಜವಾಗಿರುತ್ತದೆ ಮತ್ತು ಟಾನ್ಸಿಲ್‌ಗ‌ಳ ಸಹಿತ  ಸ್ಥಾನಾಂತರಗೊಂಡಿರುವುದು ಗೋಚರಿಸುತ್ತದೆ.

*ಬಾಯಿಯ ರೆಕ್ಕೆಯಾಕಾರದ ಸ್ನಾಯುಗಳ ಉರಿಯೂತಕ್ಕಾಗಿ ಬಾಯಿಯ ಚಲನೆ ಸ್ಥಗಿತಗೊಂಡಿರುವ ಸ್ಥಿತಿ ()
* ಬೆನ್ನು ಹುರಿಯ ಆಸುಪಾಸಿನ ಸ್ನಾಯುಗಳು ಉರಿಯೂತ‌ಕ್ಕೀಡಾಗುವುದರಿಂದ ಕುತ್ತಿಗೆಯ ಚಲನೆ ಮಿತ‌ಗೊಳ್ಳುವುದು ಮತ್ತು ಕುತ್ತಿಗೆ ತಿರುಚಿ ವಿಕೃತಗೊಳ್ಳುವುದು
(torticollis).

* ತಲೆ ಮತ್ತು ಕುತ್ತಿಗೆಯಿಂದ ಮೆದುಳನ್ನು ತಲುಪುವ ನರಗಳಿಗೆ ಹಾನಿ ಉಂಟಾಗಿ ಧ್ವನಿ ಕರ್ಕಷಗೊಂಡಿರುವುದು ಮತ್ತಿತರ ತೊಂದರೆಗಳು ಹಾಗೂ ಸೆರ್ವೈಕಲ್‌ ಸಿಂಪೆಥೆಟಿಕ್‌ ನರಗಳಿಗೆ ಹಾನಿಯುಂಟಾಗಿ ಹೋರ್ನರ್‌ ರೋಗ ಕಾಣಿಸಿಕೊಳ್ಳುವುದು

* ಪದೇ ಪದೇ ಜ್ವರ ಕಾಣಿಸಿಕೊಳ್ಳುತ್ತಿರುವುದು. (ಇದಕ್ಕೆ ಕುತ್ತಿಗೆಯ ಆಳದಲ್ಲಿರುವ ಜಗುಲಾರ್‌ ಅಶುದ್ಧ ರಕ್ತ ನಾಳಗಳ ಉರಿಯೂತದಿಂದಾಗಿ ರಕ್ತಹೆಪ್ಪುಗಟ್ಟಿರುವುದು ಅಥವಾ ಕೀವು ತುಂಬಿ ಅಡ್ಡಿಗಳಾಗಿರುವುದು ಕಾರಣವಾಗಿರುತ್ತದೆ.)

* ಉಸಿರಾಟ ಕಷ್ಟವಾಗುವುದು. ಇದು ಶ್ವಾಸಕೋಶದಲ್ಲಿ ಸಂಕೀರ್ಣ ತೊಂದರೆಗಳನ್ನು ಸೂಚಿಸುತ್ತಿರಬಹುದು.

trismus
ಕುತ್ತಿಗೆಯ ಸಂರಚನೆ
ಮುಖದ ವಿವಿಧ ಪದರಗಳಿಂದಾಗಿ ಕುತ್ತಿಗೆಯಲ್ಲಿ ಹಲವಾರು ವಾಸ್ತವಿಕ ಮತ‌ು¤ ಸಂಭಾವ್ಯ ಅವಕಾಶಗಳು (ಖಾಲಿ ಜಾಗಗಳು) ಸೃಷ್ಟಿಯಾಗಿರುತ್ತವೆ.

* ಕುತ್ತಿಗೆಯ ಉದ್ದಕ್ಕೂ ಇರುವ ಅವಕಾಶಗಳು.

*ಗಂಟಲಿನ ಸುತ‌¤ಲಿನಲ್ಲಿರುವ ಅವಕಾಶ.

* ಅಪಾಯದ ಅವಕಾಶ.

* ದೇಹದಕುಳಿಯ ರಕ್ತನಾಳಗಳ ಅವಕಾಶ.

* ಬೆನ್ನುಹುರಿಯ ಆರಂಭದ ಭಾಗದಲ್ಲಿರುವ ಅವಕಾಶ .

* ಕುತ್ತಿಗೆಯ ಮುಂಭಾಗದಲ್ಲಿರುವ ಹೈಯಾಯ್ಡ ಮೂಳೆಯ ಮೇಲುಭಾಗದ ಅವಕಾಶಗಳು.

* ಗಂಟಲಿನ ಸಮೀಪದ ಅವಕಾಶ .

* ಮೇಲುದವಡೆಯ ಅಡಿಯ ಅವಕಾಶ.

* ಕಿವಿಯ ಆಸುಪಾಸಿನ ಅವಕಾಶ.

* ಕಿವಿಯ ಆಸುಪಾಸಿನ ಅವಕಾಶ.

* ಕೆಳದವಡೆಯ ಅಡಿಯ ಅವಕಾಶ.

* ಟಾನ್ಸಿಲ್‌ಗ‌ಳ ಮೇಲ್ಭಾಗದ ಅವಕಾಶ.

* ಹೈಯಾಯ್ಡ ಮೂಳೆಯ ಕೆಳಭಾಗದ ಅವಕಾಶಗಳು.

* ದೇಹದ ಕುಳಿಗಳ ಮುಂಭಾಗದ ಅವಕಾಶ.
ಕತ್ತಿನಾಳದ ಅವಕಾಶಗಳು
ಮುಖದ ಸ್ನಾಯುಪದರಗಳ ಪ್ರತಿಒತ‌¤ಡದಲ್ಲಿರುವ ಏರಿಳಿತ‌ಗಳ ಫಲವಾಗಿ ಕತ್ತಿನ ಆಳದಲ್ಲಿ ಸುಮಾರು 11 ಅವಕಾಶಗಳು (ಖಾಲಿ ಜಾಗಗಳು) ಸೃಷ್ಟಿಯಾಗಿರುತ್ತವೆ. ಇವು ವಾಸ್ತವ ಅವಕಾಶಗಳಾಗಿರಬಹುದು ಅಥವಾ ಸಂಭಾವ್ಯ ಅವಕಾಶಗಳಾಗಿದ್ದು, ಮುಖದ ಪದರಗಳ ನಡುವೆ ಕೀವು ತುಂಬಿದಾಗ ಸೃಷ್ಟಿಗೊಳ್ಳಬಹುದು. ಈ ಅವಕಾಶಗಳ ನಡುವೆ ಸಂಪರ್ಕ ಜಾಲವಿದ್ದು, ಒಂದೆಡೆ ತಗುಲಿದ ಸೋಂಕು ಇನ್ನೊಂದು ಅವಕಾಶಕ್ಕೆ ಹರಡಿಕೊಳ್ಳುವ ಅಪಾಯ ಇರುತ್ತದೆ. ಈ ಅವಕಾಶಗಳ ಬಗ್ಗೆ ವಿವರವಾಗಿ ತಿಳಿಯೋಣ.
ಗಂಟಲಿನ ಸಮೀಪದ ಅವಕಾಶ (parapharyngeal space)
ಇದು ಮುಖದ ವ್ಯವಸ್ಥೆಯ ಹಲವಾರು ಅಂಗಾಂಗಗಳ ಅಸ್ಥಿತ್ವದಿಂದ ಉಂಟಾಗಿರುವ ತಿರುವು ಮುರುವಾಗದ ಪಿರಾಮಿಡ್‌ ಆಕೃತಿಯ ಅವಕಾಶ. ಇದು ಕುತ್ತಿಗೆಯ ಮುಂಭಾಗದಲ್ಲಿರುವ ಹೈಲಾಯ್ಡ ಮೂಳೆಯ ಮೇಲು ಭಾಗದಲ್ಲಿರುತ್ತದೆ.

ಟಾನ್ಸಿಲ್‌ಗ‌ಳು, ಗಂಟಲು, ಹಲ್ಲು, ಲಾಲಾರಸ ಗ್ರಂಥಿಗಳು, ಮೂಗಿನ ಸೋಂಕುಗಳು ಅಥವಾ ದವಡೆಯ ಗುಳ್ಳೆಗಳು  ಈ ಅವಕಾಶಕ್ಕೆ ಸೋಂಕನ್ನು ಹರಡಬಲ್ಲವು. ಈ ಭಾಗಕ್ಕೆ ಸೋಂಕು ತಗುಲಿದವರಿಗೆ ಗಂಟಲಿನ ಗೋಡೆ ಮತ್ತು ಟಾನ್ಸಿಲ್‌ಗ‌ಳು ಸ್ಥಳಾಂತರಿತಗೊಂಡು ಕಾಣಿಸುವುದು ಬಹುಮುಖ್ಯ ಲಕ್ಷಣವಾಗಿದ್ದು, ಜೊತೆಗೆ ಬಾಯಿಯ ಚಲನೆ ಸ್ಥಗಿತಗೊಂಡಿರುವುದು,  ಜೊಲ್ಲು ಸುರಿಯುವುದು, ಆಹಾರ ನುಂಗಲು ಕಷ್ಟವಾಗುವುದು, ಆಹಾರ ನುಂಗುವಾಗ ನೋವು... ಮತ್ತಿತ‌ರ ಲಕ್ಷಣಗಳು ಕಾಣಿಸಿಕೊಂಡಿರುತ್ತವೆ.
ಗಂಟಲಿನ ಸುತ್ತಲಿನ ಅವಕಾಶ (retropharyngeal space)ತಲೆಬುರುಡೆಯ ತಳದಿಂದ ಶ್ವಾಸನಾಳದ ಕವಲಿನ ತನಕ ಗಂಟಲಿನ ಸುತ್ತಲೂ ಕಂಡುಬರುವ ಈ ಅವಕಾಶದಲ್ಲಿ ದುಗ್ಧಗ್ರಂಥಿಗಳು ಇರುತ್ತವೆ. ಈ ಭಾಗಕ್ಕೆ ಸೋಂಕು ಗಂಟಲು ಅಥವಾ ಅನ್ನನಾಳಕ್ಕೆ ಜಖಂ ಆದಾಗ ನೇರವಾಗಿ ಅಥವಾ ಬೇರೆ ಅವಕಾಶಗಳಿಂದ  ಪರೋಕ್ಷವಾಗಿ ಪ್ರವೇಶಿಸಬಹುದು. ಮಕ್ಕಳಲ್ಲಿ ಹೆಚ್ಚಾಗಿ ಈ ಸೋಂಕಿಗೆ ಮೇಲಿನ ಶ್ವಾಸನಾಳದ ಸೋಂಕು ಕಾರಣವಾಗಿದ್ದರೆ, ದೊಡ್ಡವರಲ್ಲಿ ಪರಕೀಯ ವಸ್ತುಗಳು ಅಥವಾ ಜಖಂ ನಿಂದ ಕಾಣಿಸಿಕೊಂಡಿರುತ್ತವೆ. ಮೂಗು, ಅಡೆನಾಯ್ಡಗಳು, ಸೈನಸ್‌ಗಳಿಂದಲೂ ಅಲ್ಲಿಗೆ ಸೋಂಕು ತ‌ಗುಲಬಹುದು.

ಈ ಭಾಗದಲ್ಲಿರುವ ಸೋಂಕು ಬೆನ್ನುಹುರಿಯ ಮೊದಲು ಇರುವ ಅವಕಾಶ  ಮತ್ತು ಅಲ್ಲಿಂದ ಎದೆಗೂ ಹರಡಬಹುದು. ಇಲ್ಲಿ ಎದ್ದ ಗುಳ್ಳೆಗಳು ಉಬ್ಬಿ ಗಂಟಲಿನ ಮಟ್ಟದಲ್ಲಿ ಗ್ರಂಥಿಗಳು ಐದು ವರ್ಷ ಪ್ರಾಯ ದಾಟಿದ ಬಳಿಕ ಕುಗ್ಗುವುದರಿಂದಾಗಿ, ಅಲ್ಲಿ ಸೋಂಕು ತಗಲುವ ಸಾಧ್ಯತೆಗಳು ಅತ್ಯಧಿಕ.
ಬೆನ್ನುಹುರಿಯ ಆರಂಭದ ಭಾಗದಲ್ಲಿರುವ ಅವಕಾಶ (prevertebral space)
ಡೇಂಜರ್‌ ಸ್ಪೇಸ್‌ನ ಮುಂಭಾಗದಲ್ಲಿರುವ ಈ ಅವಕಾಶ ತಲೆಬುರುಡೆಯ ತಳದಿಂದ ಬೆನ್ನು ಹುರಿಯ ತಳಭಾಗದ  ಮೂಳೆಯ ತ‌ನಕ ಹಬ್ಬಿದೆ.

ಇಲ್ಲಿ ಸೋಂಕಿಗೆ ಬೇರೆ ಭಾಗಗಳಿಂದ ಸೋಂಕು ತಗಲುವುದು, ಆಘಾತ‌ (ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಚಿಕಿತ್ಸಾ ಪರಿಕರಗಳು) ಮತ್ತಿತ‌ರ ಕಾರಣಗಳಿರುತ್ತವೆ. ಸೋಂಕು ಬೆನ್ನು ಹುರಿಗೆ ತಗುಲಿದರೆ ಬೆನ್ನು ಹುರಿ ದುರ್ಬಲಗೊಳ್ಳುವ ಅಥವಾ ಮೂಳೆ-ಅಸ್ಥಿಮಜ್ಜೆಗಳ ಉರಿಯೂತಕ್ಕೆ ಕಾರಣವಾಗಬಹುದು.
ಅಪಾಯದ ಅವಕಾಶ (Danger space)ಇದು ಗಂಟಲಿನ ಸುತ್ತಲಿನ ಅವಕಾಶ ಮತ್ತು ಬೆನ್ನುಹುರಿಯ ಆರಂಭದ ಭಾಗದಲ್ಲಿರುವ ಅವಕಾಶಗಳ ನಡುವಿನ ಅವಕಾಶವಾಗಿದ್ದು, ತಲೆಬುರುಡೆಯ ತಳದಿಂದ ದವಡೆಯ ತ‌ನಕ ಹಬ್ಬಿದೆ.

ಬೇರೆ ಅವಕಾಶಗಳಿಂದ ಈ ಅವಕಾಶಕ್ಕೆ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಈ ಭಾಗದಲ್ಲಿ ತೆಳ್ಳಗೆ ಹರಡಿರುವ ಮೆದು ಅಂಗಾಂಶಗಳು ಸೋಂಕು ಬೇಗನೆ ಹರಡುವಂತೆ ಮಾಡುತ್ತದೆ. ಇಲ್ಲಿ ಹರಡಿದ ಸೋಂಕು ಎದೆಯ ಗೂಡಿನ ಉರಿಯೂತ , ಎದೆಗೂಡಿನಲ್ಲಿ ಗಾಳಿಯ ಒತ್ತಡ, ಕೀವು ತ‌ುಂಬಿ ಕೊಳೆಯುವಿಕೆ ಮತ್ತಿತರ ಮರಣಾಂತಿಕ ಅಪಾಯಗಳು ಕಂಡುಬರಲು ಕಾರಣ ಆಗಬಹುದು.
ಕೆಳದವಡೆಯ ಅಡಿಭಾಗದ ಅವಕಾಶ (masticator space)
ಬಾಯಿಯ ರೆಕ್ಕೆಯಾಕಾರದ ಸ್ನಾಯುಗಳ ನಾರು ಅಂಗಾಂಶ ಮತ್ತು ಕೆಳದವಡೆಯ ಸ್ನಾಯುಗಳ ನಡುವೆ ಇರುವ ಅವಕಾಶ ಇದು.

ಗಂಟಲಿನ ಸಮೀಪದ ಅವಕಾಶಗಳು, ಕಿವಿಯ ಆಸುಪಾಸು ಅಥವಾ ಕೆನ್ನೆಯ ಅವಕಾಶ ಗಳಿಂದ ಇಲ್ಲಿಗೆ ಸೋಂಕು ಹರಿದು ಬರಬಹುದು. ವಿಶೇಷವಾಗಿ ಹಲ್ಲಿನ ಸೋಂಕುಗಳು, ಮುಖದ ಮೂಳೆಮುರಿತಗಳ ಚಿಕಿತ್ಸೆಯ ಬಳಿಕ ಈ ಸೋಂಕು ತಲೆದೋರಬಹುದು.
ಮೇಲುದವಡೆಯ ಅಡಿಭಾಗದ ಅವಕಾಶ (submandibular space)ನಾಲಿಗೆಯ ಅಡಿ ಮತ್ತು ಮೇಲುದವಡೆಯ ಅಡಿಭಾಗಗಳಲ್ಲಿ ಎರಡು ವಿಭಾಗಗಳನ್ನು ಹೊಂದಿರುವ ಅವಕಾಶ ಇದು. ಬಾಯಿಯ ಜಖಂ, ಹಲ್ಲಿನ ಗುಳ್ಳೆಗಳು ಅಥವಾ ಲಾಲಾಗ್ರಂಥಿಗಳ ಉರಿಯೂತಗಳ ಕಾರಣದಿಂದಾಗಿ ದ್ವಿತಿಯ ಹಂತ‌ದ ಸೋಂಕು ಇಲ್ಲಿ ಕಾಣಿಸಿಕೊಳ್ಳಬಹುದು.

ಈ ಸೋಂಕು ತಗುಲಿರುವವರಲ್ಲಿ ಜೊಲ್ಲು ಸುರಿಯುವಿಕೆ, ಬಾಯಿ ತೆರೆಯಲು ಕಷ್ಟವಾಗುವುದು, ನೋವು, ಆಹಾರ ನುಂಗಲು ಕಷ್ಟವಾಗುವುದು, ದವಡೆಯ ಅಡಿಭಾಗದಲ್ಲಿ ಬಾವು, ಉಸಿರಾಟ ಕಷ್ಟವಾಗುವುದು, ನಾಲಿಗೆ ಸ್ಥಳಾಂತರಿತಗೊಂಡು ತಿರುಚಿರುವುದು ಕಂಡುಬರಬಹುದು. ತುತ‌ುìಚಿಕಿತ್ಸೆ ದೊರೆಯದಿದ್ದರೆ ಪ್ರಾಣಕ್ಕೆ ಅಪಾಯ ತರಬಲ್ಲ ಸ್ಥಿತಿ ಇದು.
ಕುತ್ತಿಗೆಯ ಬಳಿಯ ಅವಕಾಶ
ಕುತ್ತಿಗೆಯ ಆಸುಪಾಸಿನ ಭಾಗಗಳಲ್ಲಿರುವ ವಿವಿಧ ರಕ್ತನಾಳಗಳು, ನರಗಳು ಮತ್ತು ನಾರು ಅಂಗಾಂಶಗಳ ನಡುವಿನ ಸಂಭಾವ್ಯ ಅವಕಾಶ ಇದು.

ಬೇರೆ ಭಾಗಕ್ಕೆ ತಗುಲಿದ ಸೋಂಕುಗಳು ಇಲ್ಲಿಗೆ ಹರಡಬಹುದು ಅಥವಾ ರಕ್ತನಾಳಕ್ಕೆ ಮಾದಕ ದ್ರವ್ಯಗಳನ್ನು ಚುಚ್ಚಿಕೊಳ್ಳುವವರಲ್ಲಿ ನೇರವಾಗಿ ಸೋಂಕು ತಗುಲಬಹುದು. ಇಲ್ಲಿನ ಜಗ್ಲಾರ್‌ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದರೆ, ಅದು ಹೆಪ್ಪುಗಟ್ಟಿದ ಕೀವು ಸಹಿತ‌ ಪದಾರ್ಥಗಳನ್ನು ಹೃದಯ-ಶ್ವಾಸಕೋಶಗಳಿಗೆ ಸಾಗಿಸಬಹುದು. ಕ್ಯಾರೊಟಿಡ್‌ ರಕ್ತನಾಳದಲ್ಲಿ ಒತ್ತಡ ಹೆಚ್ಚು ಒಡೆದುಹೋಗಬಹುದು.
ಶ್ವಾಸನಾಳದ ಮೂಲದಲ್ಲಿರುವ ಅವಕಾಶ (pretrachial space)ಥೈರಾಯ್ಡ ಮೂಳೆಯಿಂದ ಎದೆಗೂಡಿನ ಮೇಲುಭಾಗದ ತ‌ನಕ ಶ್ವಾಸನಾಳದ ಮುಂಭಾಗದಲ್ಲಿರುವ ಅವಕಾಶ ಇದು.
ಇಲ್ಲಿ ಜಖಂ, ಪರಕೀಯ ವಸ್ತುಗಳು, ಎಂಡೊಸ್ಕೋಪಿನಂತಹ ವೈದ್ಯಕೀಯ ಪರಿಕರಗಳಿಂದಾಗಿ ಅನ್ನನಾಳದ ಗೋಡೆ ಅಕಸ್ಮಾತ್‌ ಹರಿದಾಗ, ಸೋಂಕು ತ‌ಗುಲಬಹುದು.

ಆಹಾರ ನುಂಗಲು ಕಷ್ಟವಾಗುವುದು, ನುಂಗುವಾಗ ನೋವು, ಜ್ವರ, ಸ್ವರ ಕರ್ಕಷಗೊಳ್ಳುವುದು ಮತ್ತು ಉಸಿರಾಟಕ್ಕೆ ಅಡ್ಡಿಗಳು ಕಾಣಿಸಿಕೊಳ್ಳುವುದು ಈ ತೊಂದರೆಯ ಲಕ್ಷಣಗಳು.
ಟಾನ್ಸಿಲ್‌ ಮೇಲುಭಾಗದ ಅವಕಾಶ (pretonsillar space)ಟಾನ್ಸಿಲ್‌ಗ‌ಳು ಮತ್ತು ಕನ್‌ಸ್ಟ್ರಿಕ್ಟರ್‌ಗಳ ನಡುವಿನ ಅವಕಾಶ ಇದು. ಪದೇ ಪದೇ ಟಾನ್ಸಿಲ್‌ಗ‌ಳ ಸೋಂಕು ಕಾಣಿಸಿಕೊಳ್ಳುವ ಬಹು ಸಾಮಾನ್ಯವಾದ ಸೋಂಕು ಇದು.

ಆಹಾರ ನುಂಗಲು ಕಷ್ಟವಾಗುವುದು, ನೋವು, ಜೊಲ್ಲು ಸೋರುವುದು, ಸ್ವರದಲ್ಲಿ ಬದಲಾವಣೆ, ಜ್ವರ, ಅಂಗುಳು ಇಕ್ಕಡೆಗಳಲ್ಲಿ ಸರಿಸಮನಾಗಿಲ್ಲದಿರುವುದು, ಟಾನ್ಸಿಲ್‌ ಮಧ್ಯದಿಂದ ಜರುಗಿರುವುದು ಮತ್ತಿತರ ಲಕ್ಷಣಗಳನ್ನು ಈ ಸೋಂಕು ಹೊಂದಿರುತ‌¤ದೆ.
ಕಿವಿಯ ಬಳಿಯ ಅವಕಾಶ (paortid space)
ದೇಹ ದ್ರವ ಕಡಿಮೆಯಾಗಿರುವ, ದುರ್ಬಲಗೊಂಡಿರುವ ಮತ‌ು¤ ಬಾಯಿಯ ಆರೋಗ್ಯ ತೊಂದರೆ ಇರುವವರು ಹಾಗೂ ಲಾಲಾರಸಗ್ರಂಥಿಗಳಲ್ಲಿ ಅಡ್ಡಿ ಇರುವವರಿಗೆ ಈ ಸೋಂಕು ಸುಲಭವಾಗಿ ಕಾಣಿಸಿಕೊಳ್ಳುತ್ತದೆ. ನೋವು, ದ್ರವತ‌ುಂಬಿದ ಬಾವು, ಚರ್ಮ ಕೆಂಪಾಗುವುದು ಮತ್ತು ಜ್ವರ ಇವರಲ್ಲಿ ಕಂಡುಬರುತ್ತದೆ. ಕ್ರಮೇಣ ಈ ಸೋಂಕು ಇರುವವರಿಗೆ ಬಾಯಿಯ ಚಲನೆ ಕಷ್ಟವಾಗುತ್ತದೆ.
ಕೆನ್ನೆಯ ಭಾಗದ ಅವಕಾಶ (temporal space)ಕೆನ್ನೆಯಲ್ಲಿರುವ ನಾರು ಅಂಗಾಂಶಗಳಾದ ಟೆಂಪೊರಾಲಿಸ್‌ ಫಾಸಿಯಾ ಮತ್ತು ಪೆರಿಯೋಸ್ಟಿಯಮ್‌ಗಳ ನಡುವಿರ ಭಾಗ ಇದು ಈ ತೊಂದರೆ ಇರುವವರಲ್ಲಿ ನೋವು, ಬಾಯಿಯ ಚಲನೆ ಕಷ್ಟವಾಗಿರುವುದು ಅಥವಾ ಕೆಳದವಡೆ ಜರುಗಿರುವುದು ಕಂಡುಬರುತ್ತದೆ.
ಚಿಕಿತ್ಸೆಗೆ ಅಡ್ಡಿಗಳು

ಕತ್ತಿನ ಆಳದ ಸೋಂಕುಗಳನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರಚೆಲ್ಲುವ ಪ್ರಕ್ರಿಯೆಗೆ ಅಂತಹ ಅಡ್ಡಿಗಳೇನಿಲ್ಲ. ಆದರೆ ಸೋಂಕಿನಿಂದ ಉಸಿರಾಟಕ್ಕೆ ಅಡ್ಡಿ ಆಗಿರುವವರಲ್ಲಿ ಉಸಿರಾಟಕ್ಕೆ ಹಾದಿ ಸುಗಮ ಮಾಡಿಕೊಡುವುದು ಆದ್ಯತೆಯಾಗಿರುತ‌¤ದೆ. ಉಸಿರಾಟ ಸುಗಮವಾದ ಬಳಿಕ ಶಸ್ತ್ರಕ್ರಿಯೆಯನ್ನು ನಡೆಸಬಹುದು.
ಪ್ರಯೋಗಾಲಯ ತಪಾಸಣೆಗಳು
ಕತ್ತಿನಾಳದ ಸೋಂಕುಗಳ ಪತ್ತೆಗೆ ಈ ಕೆಳಗಿನ ತಪಾಸಣೆಗಳು ಜೊತೆಗೆ ರೋಗ ಚರಿತ್ರೆಯ ವಿಶ್ಲೇಷಣೆ, ದೈಹಿಕ ತಪಾಸಣೆಗಳು ಅಗತ್ಯವಿರುತ್ತವೆ.

* ರಕ್ತ ತ‌ಪಾಸಣೆ.

* ರಕ್ತಕಣಗಳ ಸಂಖ್ಯೆ.

* ಶಸ್ತ್ರಕ್ರಿಯೆ ನಡೆಸಿ, ಸೋಂಕನ್ನು ಹೊರಗೆಳೆಯಬೇಕಾಗಿರುವವರಲ್ಲಿ ರಕ್ತಹೆಪ್ಪುಗಟ್ಟುವ ಪ್ರಕ್ರಿಯೆಯ ತಪಾಸಣೆ.

* ಕೀವು ಉಂಟಾಗಿರುವ ರೋಗಿಗಳಲ್ಲಿ ರಕ್ತದ ವಿಶ್ಲೇಷಣೆ.

* ಗುಳ್ಳೆಗಳ ಗ್ರಾಮ್‌ ಸ್ಟ್ರೇನ್‌ ತಪಾಸಣೆ. (ಸೂಕ್ಷ್ಮ ಜೀವಾಣುಗಳ ಚಿಕಿತ್ಸೆ ಆರಂಭಿಸಲು ಇದು ಅಗತ್ಯ)
ಕ್ಷ-ಕಿರಣಬಿಂಬ ಅಧ್ಯಯನಗಳು
ಕತ್ತಿನ ರೇಡಿಯೋಗ್ರಫಿ ಬಿಂಬ
*ಬೆನ್ನು ಹುರಿಯ ಆರಂಭದ ಭಾಗದಲ್ಲಿ ಮೃದು ಅಂಗಾಂಶಗಳ ಬಾವು, ಪರಕೀಯ ವಸ್ತುಗಳು, ಚರ್ಮದಾಳದಲ್ಲಿ ದ್ರವ-ಅನಿಲ ಮಟ್ಟ, ಬೆನ್ನುಹುರಿಯ ಭಾಗಗಳಿಗೆ ಹಾನಿಯಾಗಿರುವುದು ಈ ತಪಾಸಣೆೆಯಿಂದ ಪತ್ತೆಯಾಗುತ್ತದೆ.
ಎದೆಯ ಕ್ಷ-ಕಿರಣ ಬಿಂಬ
ಎದೆಗೂಡಿನ ವಿಶ್ಲೇಷಣೆ, ಅಲ್ಲಿ ಅನಿಲ ತ‌ುಂಬಿರುವ ಸ್ಥಿತಿ, ನ್ಯುಮೋನಿಯಾ ದಂತ‌ಹ ಸ್ಥಿತಿಗಳ ವಿಶ್ಲೇಷಣೆಗೆ ಈ ತಪಾಸಣೆ ಸಹಾಯಕ.
ಸಿ.ಟಿ. ಸ್ಕ್ಯಾನಿಂಗ್‌
ಆಳ ಕತ್ತಿನ ಸೋಂಕುಗಳ ಚಿಕಿತ್ಸೆಗೆ ಸಿ.ಟಿ. ಸ್ಕ್ಯಾನಿಂಗ್‌ ಪ್ರಮುಖವಾದ ತಪಾಸಣೆ. ಸೋಂಕಿನ ಸ್ಥಳ, ಸೋಂಕು ಹರಡಿರುವ ವಿಸ್ತಾರ, ಸಮೀಪದ ನರ-ರಕ್ತನಾಳಗಳಿಗೆ ಸೋಂಟು ಉಂಟುಮಾಡಿರುವ ಹಾನಿ ಮತ್ತಿತ‌ರ ವಿಚಾರಗಳನ್ನು ಈ ಸ್ಕ್ಯಾನಿಂಗ್‌ ಮೂಲಕ ಪತ್ತೆ ಹಚ್ಚಬಹುದು.
ಎಂ.ಆರ್‌.ಐ.
ಸಮಯ ಮತ್ತು ವೆಚ್ಚದ ಕಾರಣಗಳಿಂದಾಗಿ ಎಂ.ಆರ್‌.ಐ. ಪ್ರಾಥಮಿಕ ತಪಾಸಣೆ ವಿಧಾನವಾಗಿ ಬಳಕೆಯಲ್ಲಿಲ್ಲ. ಆದರೆ ಈ ತಪಾಸಣೆಯಿಂದ ಸೋಂಕಿನ ಸ್ಪಷ್ಟ ಕಲ್ಪನೆ ದೊರೆಯಬಲ್ಲುದು.
ಆಲ್ಟ್ರಾ ಸೌಂಡ್‌
ಸೋಂಕಿನ ಭಾಗಕ್ಕೆ ಸೂಕ್ಷ್ಮ ಸೂಜಿ ತಲುಪಿಸಿ, ಸೋಂಕನ್ನು ಹೀರಿ ತೆಗೆಯುವ ಪ್ರಕ್ರಿಯೆಯ ವೇಳೆ ಅಲ್ಟ್ರಾಸೌಂಡ್‌ ಮಾರ್ಗದರ್ಶನ ಪಡೆಯಲಾಗುತ್ತದೆ.
ಆರ್ತೆರಿಯೋಗ್ರಫಿ
ಕ್ಯಾರೋಟಿಡ್‌, ಜಗುಲಾರ್‌ ಅಥವಾ ಇನ್ನೊಮಿನೇಟ್‌ ರಕ್ತನಾಳಗಳು ಸೋಂಕಿಗೆ ಒಳಗಾಗಿರುವಾಗ ಈ ತಪಾಸಣೆ ಸಹಾಯಕ.
ಚಿಕಿತ್ಸೆಗಳು: ಉಸಿರಾಟಕ್ಕೆ ಅಡ್ಡಿಗಳಿದ್ದಾಗ
* ಉಸಿರಾಟಕ್ಕೆ ಅಡ್ಡಿಗಳಿದ್ದಾಗ, ಅದನ್ನು  ನಿವಾರಿಸುವುದು ಪ್ರಥಮ ಆದ್ಯತೆ. ರೋಗಿಗೆ ತೀವ್ರ ನಿಗಾ, ಶ್ವಾಸನಾಳ ಅಥವಾ ಮೂಗಿನ ಮೂಲಕ ಟ್ಯೂಬನ್ನು ಇಳಿಸುವುದು ಅಥವಾ ಶ್ವಾಸನಾಳದ ಮಧ್ಯದಲ್ಲಿ ತೂತು ಕೊರೆದು ಉಸಿರಾಟಕ್ಕೆ ಅವಕಾಶ ಮಾಡಿಕೊಡುವುದು ಮತ್ತಿತರ ತುರ್ತು ಕ್ರಮಗಳು ಅಗತ್ಯಬೀಳಬಹುದು.
ವಿಶ್ಲೇಷಣೆಗಳು
*ಸೂಕ್ಷ್ಮಾಣು ನಿರೋಧಕ ನೇರ ಚಿಕಿತ್ಸೆಗಳಿಗಾಗಿ, ಸಾಧ್ಯವಿದ್ದಲ್ಲೆಲ್ಲ ವಿಶ್ಲೇಷಣೆಗಾಗಿ ಸೋಂಕು ದ್ರವ್ಯಗಳನ್ನು ಪಡೆಯುವುದು. ಕತ್ತಿನ ಗುಳ್ಳೆಯ ದ್ರವ ಅಥವಾ ರಕ್ತಗಳನ್ನು ಈ ವಿಶ್ಲೇಷಣೆಗೆ ಅಳವಡಿಸಬಹುದು.
ರಕ್ತನಾಳಗಳ ಮೂಲಕ ಆ್ಯಂಟಿಬಯಾಟಿಕ್‌ಗಳು
* ಸೋಂಕುಗಳು ಕಾಣಿಸಿಕೊಂಡಿರುವವರಲ್ಲಿ ರೋಗ ವಿಶ್ಲೇಷಣೆಯ ವರದಿಗಳು ದೊರೆಯುವ ಮುನ್ನವೇ ಸಾಮಾನ್ಯ ಆ್ಯಂಟಿ ಬಯಾಟಿಕ್‌ ಚಿಕಿತ್ಸೆ ಆರಂಭಿಸಬೇಕಾಗುತ್ತದೆ.

* ವರದಿಗಳು ದೊರೆತ‌ ಬಳಿಕ ಸೂಕ್ತ ಆ್ಯಂಟಿಬಯಾಟಿಕ್‌ಗಳನ್ನು ನೀಡಬೇಕಾಗುತ್ತದೆ.

* ನೂರಕ್ಕೆ 50ರಷ್ಟು  ಪ್ರಕರಣಗಳಲ್ಲಿ ಶಸ್ತ್ರಕ್ರಿಯೆ ಇಲ್ಲದೆ, ಉಸಿರಾಟಕ್ಕೆ ಅಡ್ಡಿ ಆಗದಂತೆ ಆ್ಯಂಟಿಬಯಾಟಿಕ್‌ಗಳ ಚಿಕಿತ್ಸೆಯ ಮೂಲಕವೇ ತೊಂದರೆಗಳನ್ನು  ಪರಿಹರಿಸಬಹುದು.

* ಕನಿಷ್ಠ 48 ತಾಸುಗಳ ತನಕ ರೋಗಿಗಳಿಗೆ ರಕ್ತನಾಳಗಳ ಮೂಲಕ ಆ್ಯಂಟಿಬಯಾಟಿಕ್ಸ್‌ ನೀಡಲಾಗುತ್ತದೆ.
ಶಸ್ತ್ರಕ್ರಿಯಾ ಚಿಕಿತ್ಸೆ
*ಸೋಂಕಿನ ಭಾಗವನ್ನು ಶಸ್ತ್ರಕ್ರಿಯೆಯ ಮೂಲಕ ತಲುಪಿ, ಅಲ್ಲಿನ ಸೋಂಕನ್ನು ತೆರವುಗೊಳಿಸುವುದು ಈ ಚಿಕಿತ್ಸೆಯ ಮೂಲ ಉದ್ದೇಶ. ಸಾಮಾನ್ಯವಾಗಿ 48-72ತಾಸುಗಳ ತನಕ ರಕ್ತನಾಳಗಳ ಮೂಲಕ ಆ್ಯಂಟಿಬಯಾಟಿಕ್‌ಗಳನ್ನು ನೀಡಿದ್ದರೂ, ಪರಿಸ್ಥಿತಿ ಸುಧಾರಿಸದವರಲ್ಲಿ ಮತ್ತು ಗುಳ್ಳೆಗಳಿಂದಾಗಿ ಸಂಕೀರ್ಣ ತೊಂದರೆಗಳು ಉಂಟಾಗಿರುವವರಲ್ಲಿ ಶಸ್ತ್ರಕ್ರಿಯೆ ಅಗತ್ಯ ಬಿದ್ದಿದೆ.

*ಕೆಲವರಲ್ಲಿ ಸೂಕ್ಷ್ಮಸೂಜಿಗಳನ್ನು ಸೋಂಕಿನ ಭಾಗಕ್ಕೆ ತಲುಪಿಸಿ, ಅಲ್ಲಿಂದ ಸೋಂಕು ದ್ರವ್ಯಗಳನ್ನು ಹೀರಿ ತೆಗೆಯಲಾಗುವುದು.
ಶಸ್ತ್ರಕ್ರಿಯೆಯ ಬಳಿಕ
ಶಸ್ತ್ರಕ್ರಿಯೆಯ ಬಳಿಕ ಚಿಕಿತ್ಸೆಗೆ ರೋಗಿಯ ಪ್ರತಿಕ್ರಿಯೆಯನ್ನು ನಿಕಟ ನಿಗಾದಲ್ಲಿರಿಸಿ ನೋಡಬೇಕಾಗುತ್ತದೆ. ಅಲ್ಲಿ ಪುನಃ ದ್ರವ ಶೇಖರಣೆ ಆದರೆ, ಅದನ್ನು ಹೊರತೆಗೆಯಬೇಕಾಗುತ್ತದೆ. ರೋಗಿಯ ಅಗತ್ಯಕ್ಕೆ ತಕ್ಕಂತೆ ಆ್ಯಂಟಿಬಯಾಟಿಕ್‌ಗಳನ್ನು ನೀಡಬೇಕಾಗುತ್ತದೆ. ರೋಗಿ ತನ್ನ ಸೋಂಕಿನಿಂದ ಪೂರ್ಣ ಮುಕ್ತವಾಗುವ ತನಕ ವೈದ್ಯರ ಆರೈಕೆಗೆ ಒಳಗಾಗುತ್ತಿರಬೇಕಾಗುತ್ತದೆ.
ಸಂಕೀರ್ಣ ತೊಂದರೆಗಳು
ಕತ್ತಿನಾಳದ ಸೋಂಕುಗಳು ಹಲವು ಬಾರಿ ಜೀವಕ್ಕೇ ಕುತ‌ು¤ತ‌ರಬಲ್ಲ ಸಂಕೀರ್ಣ ತೊಂದರೆಗಳಿಗೆ ಕಾರಣವಾಗಬಹುದು. ಸೂಕ್ತ ಚಿಕಿತ್ಸೆಗಳು ಸಕಾಲದಲ್ಲಿ ದೊರೆಯದಿದ್ದಾಗ, ಅಥವಾ ಚಿಕಿತ್ಸೆಯ ಬಗ್ಗೆ ನಿರ್ಲಕ್ಷ್ಯತೋರಿದಾಗ ಈ ರೀತಿಯ ಸಂಕೀರ್ಣ ತೊಂದರೆಗಳು ಕಾಣಿಸಿಕೊಳ್ಳಬಹುದು. ಅಂತಹ ಕೆಲವು ಸಂಕೀರ್ಣತೊಂದರೆಗಳು ಈ ಕೆಳಗಿನಂತಿವೆ.

* ಶ್ವಾಸನಾಳಗಳು ಒತ್ತಡಕ್ಕೀಡಾಗಿ ಉಸಿರಾಟಕ್ಕೆ ಅಡ್ಡಿಯಾಗುವುದು.

*ದೇಹದ ಭಾಗಗಳಲ್ಲಿ ದ್ರವ-ಅನಿಲ ತುಂಬುವುದು.

*ರಕ್ತನಾಳಗಳ ಸಂಕೀರ್ಣ ತೊಂದರೆಗಳು.

* ಎದೆ ಗೂಡಿನ ಉರಿಯೂತ‌.

* ನರವ್ಯವಸ್ಥೆಗೆ ಹಾನಿಗಳು.

* ರಕ್ತ ಪ್ರವಾಹದಲ್ಲಿ ಕೀವು ಕಾಣಿಸಿಕೊಳ್ಳುವುದು.

*ಕೀವಿನಿಂದ ಆಘಾತ.

*ಸೆರ್ವೈಕಲ್‌ ನಾರು ಅಂಗಾಂಶಗಳು ಕೊಳೆಯುವುದು.

*ಬೆನ್ನುಹುರಿ, ಕೆಳದವಡೆ, ತಲೆಬುರುಡೆಯ ಮೂಳೆಗಳ ಉರಿಯೂತ ಕಾಣಿಸಿಕೊಳ್ಳುವುದು.

* ಕುತ್ತಿಗೆ ತಿರುಚಿರುವುದರ ಜೊತೆ ಉರಿಯೂತಕ್ಕೆ ಗುರಿಯಾಗಿರುವುದು.
ಕತ್ತಿನಾಳದ ಸೋಂಕುಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ  ದೊರೆತರೆ ಫಲಿತಾಂಶ ಚೆನ್ನಾಗಿಯೇ ಇರುತ್ತದೆ. ಚಿಕಿತ್ಸೆ ವಿಳಂಬವಾದಂತೆ ಸಂಕೀರ್ಣ ತೊಂದರೆಗಳೂ ಹೆಚ್ಚಾಗಬಹುದು. ಒಮ್ಮೆ ಪರಿಪೂರ್ಣ ಚಿಕಿತ್ಸೆ ದೊರೆತ ಬಳಿಕ ಕತ್ತಿನಾಳದ ಸೋಂಕುಗಳು ಮರುಕಳಿಸುವ ಸಾಧ್ಯತೆಗಳು ಕಡಿಮೆ.

ಈ ಸೋಂಕುಗಳಿಗೆ ಶಸ್ತ್ರಕ್ರಿಯೆ ನಡೆಸಬೇಕೊ ಅಥವಾ ಆ್ಯಂಟಿಬಯಾಟಿಕ್‌ಗಳ ಚಿಕಿತ್ಸೆಯೇ ಸಾಕೊ ಎಂಬುದು ಇನ್ನೂ ವೈದ್ಯಕೀಯ ಜಗತ್ತಿನಲ್ಲಿ ಚರ್ಚೆಯ ವಿಚಾರವಾಗಿಯೇ ಉಳಿದಿದೆ. ಸಾಮಾನ್ಯವಾಗಿ ಮಕ್ಕಳಲ್ಲಿ ರಕ್ತನಾಳದ ಮೂಲಕ ಆ್ಯಂಟಿಬಯಾಟಿಕ್‌ ನೀಡಿಕೆ ಸಾಕಾಗುತ್ತದೆ. 48 ತಾಸುಗಳ ಆ್ಯಂಟಿಬಯಾಟಿಕ್‌  ನೀಡಿಕೆಯ ಬಳಿಕವೂ ಪರಿಸ್ಥಿತಿ ಸುಧಾರಿಸಿರದಿದ್ದರೆ ಶಸ್ತ್ರಕ್ರಿಯೆ ಅಗತ್ಯ ಬೀಳಬಹುದು. ಈ ಬಗ್ಗೆ ರೋಗಿಯ ಸ್ಥಿತಿಯನ್ನಾಧರಿಸಿ, ವೈದ್ಯರೇ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು ಸರಿಯಾದ ಹಾದಿ.

ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ| ದೀಪಕ್‌ ರಂಜನ್‌ ನಾಯಕ್‌,  ಪ್ರೊಫೆಸರ್‌ ಮತ್ತು  ಮುಖ್ಯಸ್ಥರು,ಇ.ಎನ್‌.ಟಿ. ವಿಭಾಗ, ಕೆ.ಎಂ.ಸಿ., ಮಣಿಪಾಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ