Translate

ಶುಕ್ರವಾರ, ಜನವರಿ 20, 2017

ಶಾಲಾ ಮಕ್ಕಳಲ್ಲಿ ಶ್ರವಣ ದೋಷ ಪತ್ತೆ ಮಾಡುವ ಅಗತ್ಯ

ಶಾಲಾ ಮಕ್ಕಳಲ್ಲಿ ಶ್ರವಣ ದೋಷ ಅಥವಾ ಕಿವುಡುತನ ಅನ್ನುವುದು ಮಗುವಿನ ಮಾತು ಮತ್ತು ಭಾಷಾ ಕೌಶಲದ ಬೆಳವಣಿಗೆಯಲ್ಲಿ ಬಹಳಷ್ಟು ಹಿನ್ನಡೆಯನ್ನು ಉಂಟುಮಾಡುತ್ತದೆ‌. ಇದರಿಂದ  ಮಗುವಿನ ಸಾಮಾಜಿಕ, ಭಾವನಾತ್ಮಕ, ಗ್ರಹಿಕೆಯ ಶಕ್ತಿ, ಶೈಕ್ಷಣಿಕ ಅಭಿವೃದ್ಧಿ, ಉದ್ಯೋಗ ಹಾಗೂ ಆರ್ಥಿಕ ಶಕ್ತಿಯ ಮೇಲೆ ಬಹಳಷ್ಟು ಪರಿಣಾಮವನ್ನು  ಕಡಿಮೆ ಮಾಡಬಹುದು. 
ಕೆಲವು ಕಿವಿಕೇಳುವ ತೊಂದರೆಗಳು ಹುಟ್ಟಿನಿಂದ ಇರುತ್ತದೆ, ಇನ್ನು ಕೆಲವು ಕಿವಿಕೇಳುವ ತೊಂದರೆಗಳು ಮಕ್ಕಳು ಶಾಲೆಗೆ ಹೋಗುವ ವಯಸ್ಸಿನಲ್ಲಿ ಆರಂಭವಾಗುತ್ತದೆ. ಹುಟ್ಟಿನಿಂದ ಮಗುವಿಗೆ ಕೇಳುವ  ತೊಂದರೆ ಇದ್ದರೆ ಮಗುವಿನ  ಮಾತು ಕುಂಠಿತಗೊಳ್ಳುತ್ತದೆ. ಮಗುವಿಗೆ ಶಾಲೆಯ ವಯಸ್ಸಿನಲ್ಲಿ  ಕಿವಿಯ ದೋಷವಿದ್ದರೆ ಶಾಲೆಯ ಪಾಠವನ್ನು ಗ್ರಹಿಸಲು ಕಷ್ಟವಾಗುತ್ತದೆ. ಆದುದರಿಂದ ಶಾಲೆಗಳಲ್ಲಿ, ವಿದ್ಯಾರ್ಥಿಗಳಿಗೆ ನಿಯಮಿತ  ಕಿವಿ ಸ್ಕ್ರೀನಿಂಗ್‌ ಅನ್ನು ಕಡ್ಡಾಯ ಮಾಡದೆ ಹೋದರೆ, ಹೆಚ್ಚು ತೀವ್ರವಾಗಿಲ್ಲದ, ಅಥವಾ ಈಗಷ್ಟೇ ಆರಂಭವಾಗುತ್ತಿರುವ ಅಥವಾ ಒಂದು ಕಿವಿ ಕೇಳಿಸದೆ ಇರುವ ಸಂದರ್ಭಗಳು ಪತ್ತೆ ಆಗದೆಯೇ ಹೋಗುವ ಅಥವಾ ತಪಾಸಣೆ ತಪ್ಪಾಗಿ ಹೋಗುವ ಮತ್ತು ರೋಗ ಪರಿಸ್ಥಿತಿಯ ನಿರ್ವಹಣೆ ಸರಿಯಾಗಿ ಆಗದೆ ಇರುವ ಸಂದರ್ಭ ಬರಬಹುದು. 
 
ಈ ಎಲ್ಲ ಕಾರಣಗಳಿಂದಾಗಿ ಶ್ರವಣ ದೋಷವನ್ನು ಆರಂಭದಲ್ಲಿಯೇ ಗುರುತಿಸುವುದು ಮತ್ತು ಸರಿಯಾದ ಚಿಕಿತ್ಸಾ ಕ್ರಮವನ್ನು ಅನುಸರಿಸುವುದು ಮತ್ತು/ಅಥವಾ ಸರಿಪಡಿಸಿಕೊಳ್ಳುವುದು ಬಹಳ ಆವಶ್ಯಕ. ಮಗುವಿನಲ್ಲಿ ಇರುವಂತಹ ಶ್ರವಣ ದೋಷವನ್ನು ಬಹಳ ಬೇಗನೆ ಗುರುತಿಸದೇ ಇರುವುದು ಅಥವಾ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಕೊಡಿಸದೆ ಇರುವುದರಿಂದ ಆ ಮಗುವಿನ ಶೈಕ್ಷಣಿಕ ಪ್ರಗತಿ, ಗ್ರಹಿಕೆಯ ಸಾಮರ್ಥ್ಯ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ವಿಶೇಷ ಪ್ರಭಾವ ಉಂಟಾಗುತ್ತದೆ. ಮಾತು ಕಲಿಯುವ ಪ್ರಕ್ರಿಯೆಗೆ ಆಧಾರ ನೀಡಬೇಕು ಅನ್ನುವುದು ಕಿವುಡುತನವನ್ನು ಆರಂಭದಲ್ಲೇ ಪತ್ತೆ ಮಾಡಬೇಕು ಎನ್ನುವುದರ ಹಿಂದಿನ ಉದ್ದೇಶ. ಕಿವುಡುತನದ ದುಷ್ಪರಿಣಾಮಗಳನ್ನು ತಗ್ಗಿಸಲು ಇರುವ ಆರಂಭಿಕ ಹಂತಗಳು ಅಂದರೆ ಹೊಸದಾಗಿ ಆರಂಭವಾಗುತ್ತಿರುವ ಶ್ರವಣ ದೋಷವನ್ನು ಮತ್ತು ಒಂದು ಅಥವಾ ಎರಡೂ ಕಿವಿಗಳಲ್ಲಿ ಇರುವ ಶ್ರವಣ ದೋಷವನ್ನು ಪತ್ತೆ ಮಾಡುವುದು, ಸೂಕ್ತ ವೈದ್ಯರಲ್ಲಿ ತಪಾಸಣೆ ಮಾಡಿಸುವುದು ಮತ್ತು ಸರಿಯಾದ ಚಿಕಿತ್ಸೆಯನ್ನು ಪಡೆಯುವುದು.
ಶಾಲಾ ಕೊಠಡಿಯಲ್ಲಿ ಮಗುವು ನಡೆದುಕೊಳ್ಳುವ ರೀತಿಯು ಮಗುವಿಗೆ ಇರಬಹುದಾದ ಕಿವುಡುತನವನ್ನು ಸೂಚಿಸುತ್ತಿರಬಹದು. ಅಂದರೆ ಶಿಕ್ಷಕರು ಹೇಳುವ ವಿಚಾರಕ್ಕೆ ಮಗುವು ಗಮನ ಕೊಡದಿರಬಹುದು, ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುತ್ತಿರಬಹುದು, ಅಥವಾ ಆತನ/ಆಕೆಯ ಶೈಕ್ಷಣಿಕ ಪ್ರಗತಿಯ ಮಟ್ಟ ಬಹಳ ಕಳಪೆ ಇರಬಹುದು, ಮಾತು ಅಥವಾ ಇನ್ನಿತರ ಶ್ರವಣ ಮಾಹಿತಿಗಳನ್ನು ಅನುಸರಿಸಲು ಮಗುವಿಗೆ ಕಷ್ಟವಾಗುತ್ತಿರಬಹುದು, ಕೇಳುವಿಕೆಯ ಅಥವಾ ಆಲಿಸುವ ಸಂದರ್ಭಗಳಲ್ಲಿ ಮಗುವು ಬಹಳ ಬೇಗನೆ ಆಯಾಸಗೊಳ್ಳಬಹುದು,  ಸರಳ ಪ್ರಶ್ನೆಗಳಿಗೂ ಸಹ ಅಸಮರ್ಪಕ ಉತ್ತರಗಳನ್ನು ಕೊಡಬಹುದು, ತನ್ನ ಸಹಪಾಠಿಗಳಿಂದ ದೂರ ಉಳಿಯಬಹುದು, ಮಗುವು ಓದುವ ಕೌಶಲದಲ್ಲಿ ಹಿಂದುಳಿಯಬಹುದು, ಮಾತನಾಡಲು ಮತ್ತು/ಅಥವಾ ಬರೆಯಲು ಕಷ್ಟವಾಗುತ್ತಿರಬಹುದು, ಬಹಳ ಬೇಗನೆ ಕಿರಿಕಿರಿಗೊಳ್ಳಬಹುದು. ಶಾಲಾ ಮಕ್ಕಳಲ್ಲಿ ಈ ಮೇಲೆ ಹೇಳಿದ ಯಾವುದೇ ನಡವಳಿಕೆಯನ್ನು ಗುರುತಿಸುವುದರಿಂದ, ಮಗುವಿನ ಶ್ರವಣ ವಿಶ್ಲೇಷಣೆಯ ಮೂಲಕ ಶ್ರವಣ ದೋಷವು ಯಾವ ಮಟ್ಟದಲ್ಲಿದೆ ಎಂಬುದನ್ನು ಗುರುತಿಸಲು ಸಹಾಯವಾಗುತ್ತದೆ. 
ಸ್ಕ್ರೀನಿಂಗ್‌ ಅಥವಾ ರೋಗಪತ್ತೆ ಮಾಡುವ ಕಾರ್ಯದ ಬಹುಮುಖ್ಯ ಉದ್ದೇಶ ಅಂದರೆ ಕಿವುಡುತನ ಇರಬಹುದು ಎಂಬ ಸಂದೇಹ ಇದ್ದಾಗ ಕಿವುಡುತನದ ಮಟ್ಟವನ್ನು ಗುರುತಿಸುವುದು ಮತ್ತು ಆದಷ್ಟು ಬೇಗನೆ ಮಾಡಬೇಕಾಗಿರುವ ಇನ್ನಷ್ಟು ಪರೀಕ್ಷೆಗಳು ಮತ್ತು ತಪಾಸಣೆಗಳ ಆವಶ್ಯಕತೆ ಇದೆಯೇ ಎಂಬುದನ್ನು ಗುರುತಿಸುವುದಾಗಿರುತ್ತದೆ. ಶಾಲಾ ವಯಸ್ಸಿನ ಮಕ್ಕಳ ಶ್ರವಣ ದೋಷ ಸ್ಕ್ರೀನಿಂಗ್‌ ಅಂದರೆ ಜನ್ಮಜಾತವಾಗಿ ಕಿವುಡುತನ ಇದ್ದು ಅದು ಪತ್ತೆಯಾಗದಿರುವ, ಅನುಸರಣೆ ಸಾಧ್ಯ ಆಗದಿರುವ ಅಥವಾ ಅನಂತರ ಶ್ರವಣ ನಷ್ಟ ಕಾಣಿಸಿಕೊಂಡಿರುವ ಮಕ್ಕಳಲ್ಲಿ ಶ್ರವಣ ದೋಷವನ್ನು ಗುರುತಿಸುವಲ್ಲಿ ವಿಶೇಷ ಪಾತ್ರವನ್ನು ವಹಿಸುವ ತಪಾಸಣಾ ಕ್ರಮ (ಸ್ಕ್ರೀನಿಂಗ್‌) ಆಗಿರುತ್ತದೆ. 
ಶಾಲಾ ವಯಸ್ಸಿನ ಮಕ್ಕಳಲ್ಲಿ ಕಂಡುಬರುವ  ಮೂರು ಬಹುಮುಖ್ಯ ಮತ್ತು ಸಾಮಾನ್ಯ ವಿಧದ ಶ್ರವಣ ದೋಷಗಳು ಯಾವುವು:-
ಕಂಡಕ್ಟಿವ್‌ ಶ್ರವಣ ದೋಷ ಇದು ಶಾಶ್ವತ ಅಲ್ಲದ ಅಥವಾ ಅಲ್ಪಕಾಲಿಕ ವಿಧದ ಶ್ರವಣ ದೋಷ. ಹೊರ ಮತ್ತು/ಅಥವಾ ಮಧ್ಯ ಕಿವಿಯ ಅಸಹಜತೆಗಳಿಂದಾಗಿ (ಕಿವಿಯ ಸೋಂಕು ಅಥವಾ ಕಿವಿಯ ಅಸಹಜ ಸಂರಚನೆ ಇತ್ಯಾದಿ ಕಾರಣಗಳಿಂದ ಉಂಟಾಗುತ್ತದೆ), ಕಂಡಕ್ಟಿವ್‌ ಶ್ರವಣ ದೋಷ ಕಾಣಿಸಿಕೊಳ್ಳಬಹುದು. ಈ ವಿಧದ ಕಿವುಡುತನ ಇರುವ ಬಹಳಷ್ಟು ಪ್ರಕರಣಗಳಿಗೆ ಔಷಧಿ ಅಥವಾ ಶಸ್ತ್ರಚಿಕಿತ್ಸೆಯಿಂದ ಪರಿಹಾರ ಸಿಕ್ಕಿರುತ್ತದೆ. 
ಸೆನ್ಸರಿನ್ಯೂರಲ್‌ ಶ್ರವಣ ದೋಷ ಇದು ಎರಡನೆಯ ವಿಧದ ಮತ್ತು ಶಾಶ್ವತ ರೀತಿಯ ಶ್ರವಣ ದೋಷ ಆಗಿದ್ದು ಒಳಕಿವಿಯ ಅಸ್ವಸ್ಥತೆಯ (ಅಂದರೆ ಮೆದುಳು ಜ್ವರ, ಶಬ್ದಗಳಿಗೆ ಒಡ್ಡಿಕೊಳ್ಳುವುದು ಅಥವಾ ಜನ್ಮಜಾತ ತೊಂದರೆಗಳು ಇತ್ಯಾದಿ) ಕಾರಣದಿಂದಾಗಿ ಇದು ಕಾಣಿಸಿಕೊಳ್ಳುತ್ತದೆ. ಈ ವಿಧದ ಶ್ರವಣ ದೋಷಕ್ಕೆ ಅನುಸರಿಸಬಹುದಾದ ಚಿಕಿತ್ಸಾ ಕ್ರಮ ಅಂದರೆ ಶಸ್ತ್ರಚಿಕಿತ್ಸೆ ಅಥವಾ ಶ್ರವಣ ಸಾಧನಗಳ ಬಳಕೆ. 
ಮಿಶ್ರ ಶ್ರವಣ ದೋಷ ಅಂದರೆ ಕಂಡಕ್ಟಿವ್‌ ಮತ್ತು ಸೆನ್ಸೋನ್ಯೂರಲ್‌ ಶ್ರವಣ ದೋಷಗಳು ಜತೆಯಾಗಿ ಬರುವ ಒಂದು ಶ್ರವಣ ದೋಷ. ಈ ವರ್ಗದ ಶ್ರವಣ ದೋಷದಲ್ಲಿ ಹೊರ ಅಥವಾ ಮಧ್ಯ ಕಿವಿಯಲ್ಲಿ ಮತ್ತು ಒಳಕಿವಿಯಲ್ಲಿ ಅಸ್ವಸ್ಥತೆ ಇರಬಹುದು ಅಥವಾ ಹಾನಿ ಆಗಿರಬಹುದು. 
ಶ್ರವಣ ದೋಷವನ್ನು ಪತ್ತೆ ಮಾಡುವುದು (ಸ್ಕ್ರೀನಿಂಗ್‌) ಅಂದರೆ, ಕಿವುಡುತನ ಇಲ್ಲವೋ ಇದೆಯೋ ಅನ್ನುವುದನ್ನು ಪತ್ತೆ ಮಾಡುವುದು ಅಷ್ಟೆ; ಅದು ಶ್ರವಣ ಸಂವೇದನಾಶೀಲತೆಯ (ಕೇಳುವಿಕೆಯ) ಸಂಪೂರ್ಣ ವಿಶ್ಲೇಷಣೆ ಅಲ್ಲ ಎಂಬುದು ನೆನಪಿಡಬೇಕಾದ ಬಹುಮುಖ್ಯ ವಿಷಯ. ಸ್ಕ್ರೀನಿಂಗ್‌ನಲ್ಲಿ  ಪಾಸ್‌ ಆಗಲಿಲ್ಲ ಅಂದ ಮಾತ್ರಕ್ಕೆ ಅವರಿಗೆ ಕಿವಿಯೇ ಕೇಳಿಸುವುದಿಲ್ಲ ಎಂದು ಅರ್ಥ ಅಲ್ಲ, ಅದಕ್ಕೆ ಬದಲಾಗಿ ಆದಷ್ಟು ಬೇಗನೆ ಇನ್ನಷ್ಟು ಆಳವಾದ ವಿಶ್ಲೇಷಣೆಯ ಅಗತ್ಯ ಇದೆ ಎಂಬುದನ್ನು ಇದು ಸೂಚಿಸುತ್ತಿರಬಹುದು. 
ಈ ಎಲ್ಲ ಕಾರಣಗಳಿಂದಾಗಿ ಶಾಲೆಗಳಲ್ಲಿ ಪಠ್ಯ ಕ್ರಮಕ್ಕೆ ಅನುಸಾರವಾಗಿ, ವಾರ್ಷಿಕ ಶ್ರವಣ ಸ್ಕ್ರೀನಿಂಗ್‌ ಅನ್ನು ಕಡ್ಡಾಯಗೊಳಿಸು ವುದು ಆವಶ್ಯಕ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಉದ್ದೇಶದಿಂದ, ಶಾಲಾ ಆಡಳಿತ ಮತ್ತು ಹೆತ್ತವರಿಗೆ ಮಾಹಿತಿ ನೀಡುವುದಕ್ಕಾಗಿ ಈ ಲೇಖನವನ್ನು ಪ್ರಕಟಿಸುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆ ಅಥವಾ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯ ಆಡಿಯೋಲಜಿ ವಿಭಾಗವನ್ನು ಸಂಪರ್ಕಿಸಬಹುದು. 
- ಡಾ| ಅರ್ಚನಾ ಜಿ.,
ಶ್ರವಣ ತಜ್ಞರು,
ಸ್ಪೀಚ್‌ ಎಂಡ್‌ ಹಿಯರಿಂಗ್‌ ವಿಭಾಗ,
ಡಾ| ಟಿ ಎಂ ಎ ಪೈ ಆಸ್ಪತ್ರೆ ಉಡುಪಿ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ.

ಆನ್‌ಲೈನ್‌ ಶ್ರವಣ ಸಾಧನ....ವರವೋ ಅಥವಾ ಶಾಪವೋ....?

ಕಿವುಡುತನ ಎನ್ನುವುದು ವ್ಯಕ್ತಿಯ ಕೇಳುವಿಕೆಯ ಸಾಮರ್ಥ್ಯವನ್ನು ತಗ್ಗಿಸುವುದಷ್ಟೇ ಅಲ್ಲದೆ ಆತನ ಮಾತುಕತೆಗೆ ತೊಂದರೆ ಉಂಟು ಮಾಡುತ್ತದೆ, ಸಾಮಾಜಿಕವಾಗಿ ಆತನನ್ನು ಪರಿತ್ಯಕ್ತನನ್ನಾಗಿಸುತ್ತದೆ. ಒಂದು ವೇಳೆ ಜನ್ಮಜಾತ ಕಿವುಡುತನ ಇದ್ದರೆ ಅದು ಆ ಮಗುವಿನ ಮಾತು ಮತ್ತು ಭಾಷಾ ಬೆಳವಣಿಗೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಶ್ರವಣಶಕ್ತಿ ಅಥವಾ ಕಿವಿಕೇಳುವ ಸಾಮರ್ಥ್ಯವು ಮನುಷ್ಯನ ಮಾತು ಮತ್ತು ಭಾಷಾ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.  ವ್ಯಕ್ತಿಯ ಕಿವುಡುತನಕ್ಕೆ ಅನೇಕ ಅಂಶಗಳು ಕಾರಣವಾಗುತ್ತವೆ. ಈ ಕಾರಣಗಳನ್ನು ಬಹಳ ಬೇಗನೆ ಪತ್ತೆ ಮಾಡಿ ಪರಿಹಾರ ಕಂಡುಕೊಳ್ಳುವುದು ಬಹಳ ಆವಶ್ಯಕ. ಹೀಗೆ ಮಾಡುವ ಮೂಲಕ ಕಿವುಡುತನದ ತೀವ್ರತೆ ಮತ್ತು ಹಾನಿಯನ್ನು ತಗ್ಗಿಸಿಕೊಳ್ಳಬಹುದು. ಕಿವುಡುತನಕ್ಕೆ ಕಾರಣ ಆಗುವ ಕೆಲವು ಅಂಶಗಳನ್ನು ಔಷಧಿಗಳ ಮೂಲಕ ಮತ್ತು ಸರಿಪಡಿಸುವ ಶಸ್ತ್ರಚಿಕಿತ್ಸೆಗಳ ಮೂಲಕ ತಗ್ಗಿಸಿಕೊಳ್ಳಬಹುದು. ಕಿವುಡುತನದ ಪರಿಣಾಮಗಳನ್ನು ತಗ್ಗಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಅಥವಾ ಔಷಧಿ ಚಿಕಿತ್ಸೆಯು ಒಂದು ಆಯ್ಕೆ ಆಗಿಲ್ಲದಿರುವಾಗ ಶ್ರವಣ ಸಾಧನವನ್ನು ಉಪಯೋಗಿಸುವುದು ಒಂದು ಅನಿವಾರ್ಯ ಪರಿಹಾರ ಆಗಿರಬಹುದು. 
ಶ್ರವಣ ಸಾಧನ ಎಂದರೇನು?
ಶ್ರವಣ ಸಾಧನ ಅಥವಾ ಹಿಯರಿಂಗ್‌ ಎಯ್ಡ ಎಂಬುದು ಕಿವಿ ಕೇಳಿಸುವ ಮಟ್ಟವನ್ನು ಹೆಚ್ಚಿಸುವ ಒಂದು ಸಾಧನ ಆಗಿದ್ದು, ಇದು ಶಬ್ದದ ಸಂಕೇತಗಳನ್ನು ಹಿಗ್ಗಿಸಿ ಅದನ್ನು ಕಿವಿಯ ನಾಳದಲ್ಲಿ ಬಿಡುಗಡೆ ಮಾಡುತ್ತದೆ. ಸರಳ ಶಬ್ದಗಳಲ್ಲಿ  ಹೇಳುವುದಾದರೆ ಶ್ರವಣ ಸಾಧನ ಅನ್ನುವುದು ಕಿವಿಗೆ ಅಳವಡಿಸುವ ಒಂದು ಕಿರು -ಸ್ಪೀಕರ್‌ ಇದ್ದ ಹಾಗೆ. ಆದರೆ ಆಧುನಿಕ ಶ್ರವಣ ಸಾಧನದ ಕಾರ್ಯಚಟುವಟಿಕೆಯು ಸ್ಪೀಕರ್‌ನ ಚಟುವಟಿಕೆಗಷ್ಟೇ ಸೀಮಿತವಾಗಿಲ್ಲ.  ಸುಧಾರಿತ ತಂತ್ರಜಾnನದಿಂದಾಗಿ ಶ್ರವಣ ಸಾಧನಕ್ಕೂ ಸಹ ಸಹಜ ಕಿವಿಯಷ್ಟೇ ಪ್ರಾಮುಖ್ಯತೆಯನ್ನು ಕೊಡಲಾಗುತ್ತಿದೆ.   
ಶ್ರವಣ ಸಾಧನಗಳ ಪ್ರಯೋಜನ
ಶಬ್ದವನ್ನು ವರ್ಧಿಸುವುದು ಮತ್ತು ಅದನ್ನು ಕಿವಿಯಲ್ಲಿ ಬಿಡುಗಡೆ ಮಾಡುವುದು ಶ್ರವಣ ಸಾಧನಗಳ ಕೆಲಸ. ಬೇರೆ ಬೇರೆ ವ್ಯಕ್ತಿಗಳು ಒಡ್ಡಿಕೊಳ್ಳುವ ಬೇರೆ ಬೇರೆ ವಾತಾವರಣಕ್ಕೆ ತಕ್ಕದಾದ ಆಯ್ಕೆಗಳನ್ನು ಈ ಶ್ರವಣ ಸಾಧನಗಳಲ್ಲಿ ಅತ್ಯಾಧುನಿಕ ತಂತ್ರಜಾnನದ ಮೂಲಕ ಸೆಟ್‌ ಮಾಡಲಾಗಿರುತ್ತದೆ. ವ್ಯಕ್ತಿಯ ಶ್ರವಣ ನಷ್ಟದ ಮಾಹಿತಿಗಳನ್ನು  ಶ್ರವಣ ಸಾಧನದ ಪ್ರೋಗ್ರಾಮಿಂಗ್‌ ಸಾಫ್ಟ್ವೇರ್‌ಗೆ ಪೂರೈಸಿದಾಗ, ಈ ರೀತಿಯ ಸೆಟ್‌ ಮಾಡುವಿಕೆ ಸಾಧ್ಯವಾಗುತ್ತದೆ.  
ಶ್ರವಣ ಸಾಧನಕ್ಕಾಗಿ ನಾನು 
ಯಾರನ್ನು ಸಂಪರ್ಕಿಸಬೇಕು?

ಆಡಿಯೋಲಾಜಿಸ್ಟ್‌ಗಳು ಅಂದರೆ ನುರಿತ ಶ್ರವಣ ತಜ್ಞರು. ಅವರು ವ್ಯಕ್ತಿಯ ಶ್ರವಣ ಸಾಮರ್ಥ್ಯವನ್ನು ಪರೀಕ್ಷೆ ಮಾಡುತ್ತಾರೆ. ಸೌಂಡ್‌ ಟ್ರೀಟೆಡ್‌ ರೂಂ ಎಂದು ಕರೆಯಲಾಗುವ ವಿಶೇಷ ಕೊಠಡಿಯಲ್ಲಿ ಶ್ರವಣ ತಜ್ಞರು ಶ್ರವಣ ಪರೀಕ್ಷೆಯನ್ನು ನಡೆಸಬೇಕು. ಶ್ರವಣ ನಷ್ಟದ ಮಟ್ಟವನ್ನು ಗುರುತಿಸಿದ ನಂತರ, ವ್ಯಕ್ತಿಗೆ ಸೂಕ್ತವೆನಿಸುವ ನಿರ್ವಹಣಾ ಕ್ರಮಗಳ ಆಯ್ಕೆಯನ್ನು ನೀಡುತ್ತಾರೆ. ಒಂದುವೇಳೆ ರೋಗಿಗೆ, ಶ್ರವಣ ಸಾಧನದ ಆಯ್ಕೆಯನ್ನು ನೀಡಿದ್ದರೆ, ಶ್ರವಣ ಸಾಧನದೊಂದಿಗೆ ಶ್ರವಣ ತಜ್ಞರು ಟ್ರಯಲ್‌ ಅನ್ನು ನಡೆಸಬೇಕು. ಶ್ರವಣ ಸಾಧನವನ್ನು ಆಯ್ಕೆ ಮಾಡುವಾಗ ವ್ಯಕ್ತಿಯ ಶ್ರವಣ ನಷ್ಟದ ವಿವರಗಳನ್ನು ಶ್ರವಣ ತಜ್ಞರು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ವ್ಯಕ್ತಿಯ ಶ್ರವಣ ನಷ್ಟಕ್ಕೆ ಅನುಗುಣವಾದ ಸಾಫ್ಟ್ವೇರ್‌ ಅನ್ನು ಆರಿಸಿಕೊಳ್ಳಬೇಕಾಗುತ್ತದೆ ಮತ್ತು ಅದಕ್ಕೆ ಪೂರಕವಾದ ಪ್ರೋಗ್ರಾಮಿಂಗ್‌ ಮಾಡಬೇಕಾಗುತ್ತದೆ. ಪ್ರೋಗ್ರಾಮಿಂಗ್‌ ಮಾಡುವಾಗ ರೋಗಿಯ ಪ್ರತಿಕ್ರಿಯೆಯು ಬಹಳ ಮುಖ್ಯವಾಗುತ್ತದೆ, ಯಾಕೆಂದರೆ ಆ ಮೂಲಕ ಸೂಕ್ತ ಹೊಂದಾಣಿಕೆ ಮಾಡಿಕೊಂಡು ಕೇಳುವಿಕೆಯನ್ನು  ಹಿತಕಾರಿಯನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. 
 
ವ್ಯಾಪಕವಾಗಿ ಬೆಳೆದಿರುವ ಜಾಗತಿಕ ಜಾಲತಾಣಗಳಿಂದಾಗಿ ಈಗ ಯಾವ ವಸ್ತುವನ್ನು ಎಲ್ಲಿಂದ ಬೇಕಾದರೂ ಖರೀದಿ ಮಾಡಬಹುದು. ಅನೇಕ ಜನರು ತಮಗೆ ಉತ್ತಮವಾಗಿ ಕಿವಿ ಕೇಳಿಸುವಂತಾಗಲು ಶ್ರವಣ ಸಾಧನಗಳನ್ನೂ ಸಹ ವಿದೇಶಗಳಿಂದ ತರಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ನೀವು ತರಿಸಿಕೊಂಡ ಶ್ರವಣ ಸಾಧನವು ನಿಮಗೆ ಇರುವ ಶ್ರವಣ ನಷ್ಟದ ಮಟ್ಟಕ್ಕೆ ಸಮನಾಗಿ ಹೊಂದಾಣಿಕೆ ಆಗದಿದ್ದರೆ ಆಗ ಏನು ಮಾಡುವುದು? ಒಂದು ವೇಳೆ ನಿಮಗಿರುವ ಶ್ರವಣ ನಷ್ಟದ ಮಟ್ಟಕ್ಕೆ ಶ್ರವಣ ಸಾಧನ ಅನ್ನುವುದು ಸೂಕ್ತ ಚಿಕಿತ್ಸಾ ಆಯ್ಕೆ ಆಗಿಲ್ಲದಿದ್ದರೆ ಆಗ ಏನು ಮಾಡುವಿರಿ? ಒಂದು ವೇಳೆ ನೀವು ಖರೀದಿಸಿದ ಶ್ರವಣ ಸಾಧನವು ನುರಿತ ಶ್ರವಣ ತಜ್ಞರಿಂದ ವ್ಯವಸ್ಥೆಗೊಂಡಿರದಿದ್ದು/ಪ್ರೋಗ್ರಾ ಮಿಂಗ್‌ ಮಾಡಿರದಿದ್ದು, ಧರಿಸಿದ ನಂತರ ಅದು ಹೊಂದಾಣಿಕೆ ಆಗದೆ ನಿಮಗಿರುವ ಕಿವುಡುತನ ಇನ್ನಷ್ಟು ಬಿಗಡಾಯಿಸಿದರೆ ಆಗ ಏನು ಮಾಡುವುದು? ಸೂಕ್ತ ಬೆಲೆಯನ್ನು ಪಾವತಿಸಿ ಖರೀದಿಸಿದ ಶ್ರವಣ ಸಾಧನವೊಂದು ತನ್ನ ಉದ್ದೇಶವನ್ನು ಪೂರೈಸಲಾಗದೆ ಹಾಗೆಯೇ ಮೇಜಿನ ಮೇಲೆ ಅಥವಾ ಕಪಾಟಿನ ಒಳಗೆ ಬಿದ್ದಿರುವುದನ್ನು ನೀವು ಇಷ್ಟಪಡುವಿರಾ.......?
  
ಇದು ತಂತ್ರಜಾnನ ಯುಗ, ನಿಮ್ಮ ಬೆರಳ ತುದಿಯ ಒಂದು ಕ್ಲಿಕ್‌ ಮೂಲಕ ನಿಮಗೆ ಬೇಕಿರುವ ಯಾವ ವಸ್ತುವೂ ಸಹ ನಿಮ್ಮ ಬಾಗಿಲ ಬಳಿ ಬಂದು ಬೀಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ವೆಬೆÕ„ಟ್‌ಗಳ ಮೂಲಕ ಶ್ರವಣ ಸಾಧನಗಳೂ ಸಹ ಆನ್‌ಲೈನ್‌ ಮೂಲಕ ಸಿಗುತ್ತಿವೆ. ಇದು ಶ್ರವಣ ತಜ್ಞರನ್ನು ಭೇಟಿ ಆಗಬೇಕಿರುವ ಆವಶ್ಯಕತೆಯನ್ನು ಸಾರುತ್ತಿದೆ ಎಂಬುದಾಗಿ ಅನೇಕ ಜನರ ಪ್ರಶಂಸೆಗೂ ಕಾರಣವಾಗಿದೆ. ಮಾರ್ಕೆಟ್‌ನಲ್ಲಿ  ಖರೀದಿಸುವ ಇಂತಹ ಶಿಫಾರಸು ರಹಿತ ಶ್ರವಣ ಸಾಧನಗಳಿಗೆ ಓವರ್‌ ದ ಕೌಂಟರ್‌ ಶ್ರವಣ ಸಾಧನಗಳು ಎಂಬುದಾಗಿ ಕರೆಯುತ್ತಾರೆ.
 
ಶಿಫಾರಸು ರಹಿತ ಶ್ರವಣ ಸಾಧನಗಳು
ಇವು ಮೆಡಿಕಲ್‌ ಸ್ಟೋರ್‌ಗಳಲ್ಲಿ, ಇಂಟರ್ನೆಟ್‌ ಮೂಲಕ ಅಥವಾ ಇನ್ನಿತರ ಜನರಲ್‌ ಸ್ಟೋರ್‌ಗಳಲ್ಲಿ 
ಬಿಕರಿಯಾಗುವ ಶ್ರವಣ ಸಾಧನಗಳು. ತಜ್ಞ ವೈದ್ಯರನ್ನು ಭೇಟಿಯಾಗಿ ಸೂಕ್ತ ಶ್ರವಣ ಸಾಧನವನ್ನು ಮಾಡಿಸಿಕೊಳ್ಳಲಾಗದ ವಯಸ್ಕ ವ್ಯಕ್ತಿಗಳು ಈ ಸಾಧನಗಳ ಮಾರಾಟದ ಹಿಂದಿನ ಉದ್ದೇಶಿತ ಗುರಿಗಳು. ತಾವು ಹಿರಿಯ ವಯಸ್ಕರಿಗೆ ಅವಶ್ಯವಿರುವ ಸೇವೆಯನ್ನೂ ಸಹ ಒದಗಿಸುತ್ತೇವೆ ಎಂಬುದಾಗಿ ಇಂತಹ ಶ್ರವಣ ಸಾಧನಗಳನ್ನು ಮಾರಾಟ ಮಾಡುವವರು ಹೇಳಿಕೊಳ್ಳುತ್ತಾರೆ. ಶ್ರವಣ ಸಾಧನವನ್ನು ಖರೀದಿಸುವ ಅನೇಕ ಜನರ ಉದ್ದೇಶವೇನೋ ಈಡೇರುತ್ತದೆ, ಆದರೆ ಹಾಗೆ ಕೊಂಡ ಸಾಧನಗಳಿಂದ ಶ್ರವಣ ನಷ್ಟ ಆಗಿರುವ ಹಲವು ಜನರಿಗೆ ಯಾವ ಸಹಾಯವೂ ಆಗುವುದಿಲ್ಲ ಅನ್ನುವುದು ವಾಸ್ತವ.  
ಇಂತಹ ಶ್ರವಣ ಸಾಧನಗಳು ಎಲ್ಲರಿಗೂ ಸೂಕ್ತವೆನಿಸುವಂತೆ ತಯಾರಾದವುಗಳು ಎಂಬುದಾಗಿ ಹೇಳಿಕೊಂಡು ಮಾರ್ಕೆಟ್‌ನಲ್ಲಿ ಸುಲಭವಾಗಿ ದೊರೆಯುತ್ತವೆ. ಆದರೆ ಅವು ನಿಮಗೆ ಪ್ರಯೋಜನಕಾರಿ ಎಂಬುದಕ್ಕೆ ಏನು ಪುರಾವೆ ಇದೆ? ಅವರು ತಮ್ಮ ವಸ್ತುವನ್ನು ಮಾರಾಟ ಮಾಡುವುದಕ್ಕೆ ಜಾಹೀರಾತು ನೀಡಲು ಹೇಳಿದ ಅದಾಗಿರಬಹುದಲ್ಲವೆ? ಅವು ಯಾವ ಮಟ್ಟದಲ್ಲಿ ನಿಮಗೆ ಪ್ರಯೋಜನಕಾರಿ ಆಗಬಲ್ಲವು ಎಂದು ಪರೀಕ್ಷೆ ಮಾಡುವುದಕ್ಕೆ ನಿಮ್ಮಲ್ಲೇನಾದರೂ ಮಾಪನಾ ಕ್ರಮ ಇದೆಯೇ? ನಿಮ್ಮ ಕಿವುಡುತನ ಹೆಚ್ಚಾಗುತ್ತಾ ಸಾಗಿ, ನಿಮಗೆ ಶ್ರವಣ ಸಾಧನವನ್ನೂ ಬಳಸಲು ಸಾಧ್ಯ ಆಗದಿರುವ ಮಟ್ಟ ತಲುಪಿದರೆ ಆಗ ಏನು ಮಾಡುವಿರಿ? ನೀವು ಖರೀದಿಸಿದ ಶ್ರವಣ ಸಾಧನವು ಒಂದು ಭಿನ್ನವಾದ ಪರಿಸರಕ್ಕೆ, ಅಂದರೆ ಟ್ರಾಫಿಕ್‌ನ ಗಲಾಟೆಯಲ್ಲಿ, ಸಮಾರಂಭದ ಸದ್ದುಗದ್ದಲದಲ್ಲಿ ಅಥವಾ ಮನೆಯ ಕಿರಿಕಿರಿಯ ನಡುವೆ ಶಬ್ದಗಳನ್ನು ಕೇಳಿಸಿಕೊಳ್ಳಲು ಪ್ರಯೋಜನಕಾರಿ ಆಗದೆ ಹೋದರೆ ಏನು ಮಾಡೋದು?
ಹೀಗೆ ಶಿಫಾರಸು ರಹಿತವಾಗಿ ಅಥವಾ ಓವರ್‌ ದ ಕೌಂಟರ್‌ ಕೊಂಡ ಶ್ರವಣ ಸಾಧನಗಳು ಅನೇಕ ಜನರ ಆವಶ್ಯಕತೆಗಳನ್ನು ಪೂರೈಸಲು ಸೋತಿವೆ ಎಂಬುದು ವಾಸ್ತವ. ಯಾಕೆಂದರೆ ಇಂತಹ ಶ್ರವಣ ಸಾಧನಗಳು ಮೈಕ್ರೋಫೋನಿನ ಹಾಗೆ ಒಟ್ಟಾರೆ ಶಬ್ದವನ್ನು ಮಾತ್ರವೇ ಹೆಚ್ಚಿಸುತ್ತವೆಯೇ ಹೊರತು ಶ್ರವಣ ನಷ್ಟವಾಗಿರುವ ವ್ಯಕ್ತಿಯ ಆವಶ್ಯಕತೆಗೆ ಸ್ಪಂದಿಸುವುದಿಲ್ಲ.  ಕಡಿಮೆ ವೆಚ್ಚದಿಂದ ಹಿಡಿದು ದುಬಾರಿ ವೆಚ್ಚದವರೆಗಿನ ಶಿಫಾರಸು ರಹಿತ ಶ್ರವಣ ಸಾಧನಗಳ ಮೇಲೆ ನಡೆಸಿದ ಅನೇಕ ಅಧ್ಯಯನಗಳು ಈ ಅಂಶವನ್ನು ಸಾಬೀತು ಪಡಿಸಿವೆ. ಇಂತಹ ಶ್ರವಣ ಸಾಧನಗಳು ಶ್ರವಣ ನಷ್ಟವಾಗಿರುವ ರೋಗಿಗಳ ಆವಶ್ಯಕತೆಗಳನ್ನು ಪೂರೈಸುವಲ್ಲಿ  ಸೋತಿವೆ ಎಂಬುದು ದೃಢ ಪಟ್ಟಿದೆ. 
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ SOAHS ಸ್ಪೀಚ್‌ ಎಂಡ್‌ ಹಿಯರಿಂಗ್‌ ವಿಭಾಗದಲ್ಲಿ  ಶ್ರವಣ ಸಾಮರ್ಥ್ಯ ಪರೀಕ್ಷೆ ಮತ್ತು ಶ್ರವಣ ಸಾಧನ ಟ್ರಯಲ್‌ ಸೇವೆಗಳನ್ನು  ನೀಡಲಾಗುತ್ತಿದೆ. 
ಶ್ರವಣ ಸಾಧನ ಖರೀದಿಸುವಾಗ ಗಮನಿಸಬೇಕಾದ ಅಂಶಗಳು
ನುರಿತ ಶ್ರವಣ ತಜ್ಞರು (ಆಡಿಯೋಲಜಿಸ್ಟ್‌ ) ನಿಮ್ಮ ಕಿವಿ ಪರೀಕ್ಷೆ ಮಾಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ
ಸೌಂಡ್‌ ಟ್ರೀಟೆಡ್‌ ರೂಂ ನಲ್ಲಿ ನಿಮ್ಮ ಕಿವಿಗಳನ್ನು ವಿವರವಾಗಿ ಪರೀಕ್ಷೆ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ
ನುರಿತ ಶ್ರವಣ ತಜ್ಞರಿಂದ ನೀವು ಶ್ರವಣ ಸಾಧನವನ್ನು ಖರೀದಿಸಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ
ನಿಮ್ಮ ಶ್ರವಣ ನಷ್ಟಕ್ಕೆ ಸೂಕ್ತವೆನಿಸುವಂತೆ ನಿಮ್ಮ ಶ್ರವಣ ಸಾಧನದಲ್ಲಿ  ಪ್ರೋಗ್ರಾಮಿಂಗ್‌ ಮಾಡುವುದು ನಿಮ್ಮ ಶ್ರವಣ ಸಾಧನ ಸ್ವೀಕೃತ ಎನಿಸಿಕೊಳ್ಳಲು ಇರುವ ಬಹುಮುಖ್ಯ ಅಂಶ. 
ನುರಿತ ಶ್ರವಣ ತಜ್ಞರಿಂದ ಸೂಕ್ತ ರೀತಿಯಲ್ಲಿ ಪ್ರೋಗ್ರಾಮಿಂಗ್‌ ಮಾಡಿಲ್ಲದ ಶ್ರವಣ ಸಾಧನವು ತನ್ನ ಉದ್ದೇಶವನ್ನು ಪೂರೈಸುವಲ್ಲಿ  ವಿಫ‌ಲವಾಗುತ್ತದೆ.   
- ಡಾ|ಭಾರ್ಗವಿ ಪಿ. ಜಿ.,
ಅಸಿಸ್ಟಂಟ್‌ ಪ್ರೊಫೆಸರ್‌,
ಸ್ಪೀಚ್‌ ಎಂಡ್‌ ಹಿಯರಿಂಗ್‌ ವಿಭಾಗ, SOAHS,, ಮಣಿಪಾಲ.

ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆಹಾರ ಕ್ರಮ

ದೀರ್ಘ‌ಕಾಲಿಕ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಪೋಷಕಾಂಶಗಳ ಕೊರತೆ ಅನ್ನುವುದು ಬಹಳ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆ. ಒಂದು ಬಾರಿ ದೀರ್ಘ‌ಕಾಲಿಕ ಮೂತ್ರಪಿಂಡದ ಕಾಯಿಲೆ ಕಾಣಿಸಿಕೊಂಡಿತು ಅಂದರೆ, ಈಗಾಗಲೆ ಇರುವ ಮಧುಮೇಹ ಮತ್ತು ಅನಿಯಂತ್ರಿತ ರಕ್ತದೊತ್ತಡ ಕಾಯಿಲೆಯ ಜತೆಗೆ ಪ್ರೊಟೀನಿನ ಕೊರತೆ, ರಕ್ತಹೀನತೆ, ದ್ರವಾಂಶ ಸಂಗ್ರಹಣೆ, ಸೋಂಕು, ಹಾರ್ಮೋನ್‌ ಅಸಮತೋಲನ ಮತ್ತು ಇನ್ನಿತರ ಸಂಬಂಧಿತ ಅಸಹಜತೆಗಳ ವಿಷವರ್ತುಲ ಆರಂಭವಾಗುತ್ತದೆ. ಪೋಷಣೆಯ ಕೊರತೆಯಿಂದಾಗಿ ರೋಗಿಯ ಜೀವನ ಗುಣಮಟ್ಟ ಮತ್ತು ಜೀವಿತಾವಧಿ ಕುಸಿಯುತ್ತದೆ. 
ಡಯಾಲಿಸಿಸ್‌ನಲ್ಲಿ ಇರುವ ರೋಗಿಗಳಲ್ಲಿ ಪೋಷಣೆಯ ಮಟ್ಟವು ವ್ಯತ್ಯಾಸಗೊಳ್ಳಲು ಕಾರಣ ಆಗುವ ಅಂಶಗಳು ಎಂದರೆ
ಯುರೇಮಿಯಾ - ಹಸಿವನ್ನು ತಗ್ಗಿಸುತ್ತದೆ. 
ಡಯಾಲಿಸಿಸ್‌ ಚಿಕಿತ್ಸೆಯ ಕಾರಣದಿಂದಾಗಿ ಶರೀರದಲ್ಲಿನ ಅಮಿನೋ ಆಸಿಡ್‌ ಮತ್ತು ಪ್ರೋಟೀನ್‌ ನಷ್ಟವಾಗುತ್ತದೆ. 
ಡಯಾಲಿಸಿಸ್‌ ರೋಗಿಗಳು ವಯಸ್ಸಿಗೆ ಮೊದಲೆ ಮುಪ್ಪಾಗುವುದು ಮತ್ತು ಅವರಲ್ಲಿ ಕಾಣಿಸಿಕೊಳ್ಳುವ ಸಹ-ರೋಗಸೂಚಕ ಅಂಶಗಳು ದೀರ್ಘ‌ಕಾಲಿಕ ಮೂತ್ರಪಿಂಡ ಕಾಯಿಲೆ ಕಾಣಿಸಿಕೊಳ್ಳಲು ಇರುವ ಬಹುಮುಖ್ಯ ಕಾರಣ. 
ಇನ್ನಿತರ ಅಂಶಗಳು ಸಹ ಈ ಪರಿಸ್ಥಿತಿಗೆ ಕಾರಣವಾಗುತ್ತವೆ 
ಭಾವನಾತ್ಮಕ ಕಿರಿಕಿರಿ
ಪೋಷಕಾಂಶಗಳು ದೇಹಗತ ಆಗದಿರುವ ಅಸಾಮರ್ಥ್ಯ
ಸೂಚಿಸಿದ ಆಹಾರಗಳು ರುಚಿಕರವಾಗಿಲ್ಲದಿರುವುದು ಇತ್ಯಾದಿ
ಪ್ರೋಟೀನ್‌ ಕೊರತೆ:
 ಅಂತಿಮ ಹಂತದ ಮೂತ್ರಪಿಂಡ ವೈಫ‌ಲ್ಯದಿಂದ ಬಳಲುತ್ತಿರುವ ರೋಗಿಗಳಲ್ಲಿ ಪ್ರೋಟೀನ್‌ ಕೊರತೆ ಬಹಳ ಸಾಮಾನ್ಯವಾಗಿ ಕಂಡುಬರುವ ತೊಂದರೆ. ಈ ಸವಾಲನ್ನು ಎದುರಿಸುವುದು ವೈದ್ಯರುಗಳ ಚಿಕಿತ್ಸೆಯ ಉದ್ದೇಶವಾಗಿರುತ್ತದೆ. 
ಸಾಮನ್ಯವಾಗಿ ಪೋಷಣೆಯ ಕೊರತೆಗೆ ಕಾರಣವಾಗುವ ಅಂಶಗಳು
ಆಹಾರಕ್ಕೆ ಸಂಬಂಧಿಸಿದ ನಿರ್ಬಂಧಗಳು
ಹಸಿವಿಲ್ಲದಿರುವಿಕೆ
ಡಯಾಲಿಸಿಸ್‌ ಅವಧಿಯಲ್ಲಿ ಪೋಷಕಾಂಶಗಳು ನಷ್ಟವಾಗುವುದು.
ಸೋಂಕು ಹೆಚ್ಚಳ
ಚಯಾಪಚಯ ಕ್ರಿಯೆ ಮತ್ತು ಹಾರ್ಮೋನಿನಲ್ಲಾಗುವ 
ವ್ಯತ್ಯಾಸಗಳು
ಪ್ರೋಟೀನ್‌ ಆವಶ್ಯಕತೆ:
 ಡಯಾಲಿಸಿಸ್‌ ಮೇಲೆ ಅವಲಂಬಿತರಲ್ಲದ ರೋಗಿಗಳಿಗೆ ಹೋಲಿಸಿದರೆ, ಡಯಾಲಿಸಿಸ್‌ನಲ್ಲಿ ಇರುವ ರೋಗಿಗಳಿಗೆ ಪ್ರೋಟೀನ್‌ ಆವಶ್ಯಕತೆ ಹೆಚ್ಚು. ಹೆಮೋಡಯಾಲಿಸಿಸ್‌ನ ಪ್ರತೀ ಅವಧಿಯಲ್ಲಿ 1-3 ಗ್ರಾಂ ಪ್ರೋಟೀನ್‌ ನಷ್ಟವಾಗುತ್ತದೆ ಮತ್ತು ಪೆರಿಟೋನಿಯಲ್‌ ಡಯಾಲಿಸಿಸ್‌ನಲ್ಲಿ  ಪ್ರತಿ 24 ಗಂಟೆಗೆ 5-15 ಗ್ರಾಂ ಪ್ರೋಟೀನ್‌ ನಷ್ಟವಾಗುತ್ತದೆ. ತಟಸ್ಥ ನೈಟ್ರೋಜನ್‌ ಸಂತುಲನೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೆಮೋಡಯಾಲಿಸಿಸ್‌ನಲ್ಲಿ ಇರುವ ರೋಗಿಗೆ ಸಾಮಾನ್ಯವಾಗಿ ದಿನಕ್ಕೆ 1.2 g/kg  ಪ್ರೋಟೀನ್‌ ಬೇಕಾಗುವುದು. ಪೆರಿಟೋನಿಯಲ್‌ ಡಯಾಲಿಸಿಸ್‌ನಲ್ಲಿ ಇರುವ ರೋಗಿಗೆ ದಿನಕ್ಕೆ 1.2 g/kg  ಪ್ರೋಟೀನ್‌ ಬೇಕಾಗುತ್ತದೆ. ಒಂದುವೇಳೆ ಅವರಲ್ಲಿ ಪೋಷಕಾಂಶಗಳ ಕೊರತೆ ಕಾಣಿಸಿಕೊಂಡಲ್ಲಿ, ಅವರಿಗೆ ದಿನಕ್ಕೆ 1.3 g/kg ನ್ನು ಶಿಫಾರಸು ಮಾಡಬೇಕು. ಸುಮಾರು 50% ದಷ್ಟು ಪ್ರೋಟೀನ್‌ ವಿಶೇಷ ಜೈವಿಕಾಂಶದಿಂದ ಕೂಡಿದ್ದಾಗಿರಬೇಕು. ಹಾಲು ಮತ್ತು ಹಾಲಿನ ಉತ್ಪನ್ನಗಳು, ಮೊಟ್ಟೆ, ಮೀನು ಮತ್ತು ಸೋಯಾ ಉತ್ಪನ್ನಗಳು ವಿಶೇಷ ಜೈವಿಕಾಂಶಗಳನ್ನು ಒಳಗೊಂಡಿರುವ ಆಹಾರಗಳು. ಪೆರಿಟೋನೈಟಿಸ್‌ ಎಂಬುದು ವಿಶೇಷ ಕ್ಯಾಟಬಾಲಿಕ್‌ ಸ್ಥಿತಿ, ಇಂತಹ ಪರಿಸ್ಥಿತಿಯಲ್ಲಿ ಇರುವ ರೋಗಿಗಳಿಗೆ ದಿನಕ್ಕೆ ಕನಿಷ್ಠ 1.5A/MAನಷ್ಟು ಪ್ರೋಟೀನ್‌ ಆವಶ್ಯಕತೆ ಇರುತ್ತದೆ. 
ಡಯಾಲಿಸಿಸ್‌ನಲ್ಲಿ ಇರುವ ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳಿಗೆ ಶರೀರ ತೂಕಕ್ಕೆ ಅನುಗುಣವಾಗಿ ಬೇಕಾಗುವ ಶಕ್ತಿಯ ಆವಶ್ಯಕತೆ 35  kcal/kg   ಮತ್ತು 60 ವಯಸ್ಸಿಗಿಂತ ಮೇಲಿನವರಿಗೆ 30-35  kcal/kg. ಡೆಕೊÕ$óàಸ್‌ ಮೂಲದ ಡಯಾಲಿಸಿಸ್‌ನಲ್ಲಿ ಗುಕೋಸ್‌ ಹೀರಿಕೆ ಆಗುವ ಕಾರಣದಿಂದಾಗಿ ಒಟ್ಟು ಪಾಸಿಟಿವ್‌ ಕ್ಯಾಲೊರಿ ಗಳಿಕೆ ಆಗುತ್ತದೆ. ಪೆರಿಟೋನಿಯಲ್‌ ಡಯಾಲಿಸಿಸ್‌ನಲ್ಲಿರುವ ರೋಗಿಗಳು ಹೆಚ್ಚಾಗಿ ಪೆರಿಟೋನಿಯಲ್‌ ಕುಹರದಲ್ಲಿ ಆಗುವ ಡಯಾಲೈಸೇಟ್‌ ಮತ್ತು ಗುÉಕೋಸ್‌ ಹೀರಿಕೆಯ (100-200g/day)ಕಾರಣದಿಂದಾಗಿ ಕಿಬ್ಬೊಟ್ಟೆಯ ಕಿರಿಕಿರಿ ಮತ್ತು ಹಸಿವಿಲ್ಲದಿರುವಿಕೆಯನ್ನು ಅನುಭವಿಸುತ್ತಿರುತ್ತಾರೆ. ಒಟ್ಟು ಕ್ಯಾಲೊರಿ ಸೇವನೆಯನ್ನು ಲೆಕ್ಕಹಾಕುವಾಗ, ಪೆರಿಟೋನಿಯಲ್‌ ಡಯಾಲೈಸೇಟ್‌ ಕ್ಯಾಲೊರಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುವುದು. ಡಯಾಲೈಸೇಟ್‌ನಿಂದಾಗಿ ಒಬ್ಬ ರೋಗಿಯು ದಿನಕ್ಕೆ 300-350 kcal/ಯನ್ನು ಪಡೆಯುತ್ತಾನೆ.  
ಮೂತ್ರಪಿಂಡ ವೈಫ‌ಲ್ಯ ಇರುವ ರೋಗಿಗಳಲ್ಲಿ ಪಾಸೆ#àಟ್‌ ಮತ್ತು ಪೊಟ್ಯಾಷಿಯಂ ವಿಸರ್ಜನೆಯ ಕೊರತೆಯ ಕಾರಣದಿಂದಾಗಿ ಹೈಪರ್‌ ಪಾಸ್ಪೇಟುಮಿಯಾ ಮತ್ತು ಹೈಪರ್‌ ಕಲೆಮಿಯಾ ಕಾಣಿಸಿಕೊಳ್ಳುವ ಅಪಾಯವಿದೆ. 
ಹೈಪರ್‌ ಪಾಸ್ಪೇಟುಮಿಯಾವನ್ನು ತಡೆಯುವುದಕ್ಕಾಗಿ ಆಹಾರದ ಮೂಲಕ ಪಾಸ್ಫರಸ್‌ ಸೇವನೆಯನ್ನು ತಡೆಯುವುದಕ್ಕಾಗಿ ದಿನಕ್ಕೆ 800-1000mg ಮಿತಿಯಲ್ಲಿರಬೇಕು. ಪೊಟ್ಯಾಷಿಯಂ ಸೇವನೆಯ ಮಿತಿಯು ದಿನಕ್ಕೆ 1mEq/kd  ನಷ್ಟು ಇರಬೇಕು. ಹೆಚ್ಚಿನ ಪ್ರಮಾಣದಲ್ಲಿ ಪಾಸ್ಫರಸ್‌ ಇರುವ ಆಹಾರವನ್ನು ವರ್ಜಿಸಬೇಕು. ಅಧಿಕ ಪೊಟ್ಯಾಷಿಯಂ ಇರುವ ಹಣ್ಣು ಮತ್ತು ತರಕಾರಿಗಳನ್ನು ವರ್ಜಿಸಬೇಕು. ಪೊಟ್ಯಾಷಿಯಂ ಅಂಶ ಕಡಿಮೆ ಇರುವ ಹಣ್ಣುಗಳನ್ನು ಸೇವಿಸಬೇಕು. 
ಕ್ಯಾಲ್ಸಿಯಂ ಸೇವನೆಯು ದಿನಕ್ಕೆ  2 ಗ್ರಾಂಗಿಂತ ಕಡಿಮೆ ಇರಬೇಕು, ಪೂರಣಗಳೂ ಸೇರಿದಂತೆ ದಿನಕ್ಕೆ 1,000-1,500 ಮಿ. ಗ್ರಾಂ ಸೂಕ್ತ. ಅಂಗಾಂಶಗಳಲ್ಲಿ ನೀರು ತುಂಬಿಕೊಳ್ಳುವುದನ್ನು (ಈಡಿಮಾ) ತಡೆಯುವುದಕ್ಕಾಗಿ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕಾಗಿ ಉಪ್ಪನ್ನು ಬಹಳ ಮಿತವಾಗಿ ಸೇವಿಸಬೇಕು. ಪ್ರತಿ ದಿನದ ಉಪ್ಪಿನ ಸೇವನಾ ಪ್ರಮಾಣ 2 ಗ್ರಾಂಗಿಂತಲೂ ಕಡಿಮೆ ಇರಬೇಕು.
ಪ್ರತಿದಿನದ ಕೊಲೆಸ್ಟ್ರಾಲ್‌ ಸೇವನೆ 200 ಮಿ. ಗ್ರಾಂ ಗಿಂತಲೂ ಕಡಿಮೆ ಇರಬೇಕು, ಈ ಕಾರಣಕ್ಕಾಗಿ ಕೊಲೆಸ್ಟ್ರಾಲ್‌ ಹೆಚ್ಚು ಇರುವ ಆಹಾರಗಳನ್ನು ವರ್ಜಿಸಬೇಕು. 
 
ಸಾಮಾನ್ಯವಾಗಿ ನೀರಿನಲ್ಲಿ ಕರಗುವ ವಿಟಮಿನ್‌ಗಳು, ಝಿಂಕ್‌, ಖನಿಜಾಂಶ ಇತ್ಯಾದಿ ಪೂರಣಗಳನ್ನು ಸೂಚಿಸುತ್ತಾರೆ.
 
ರಕ್ತಹೀನತೆಯನ್ನು ಆಹಾರದ ಮೂಲಕ ಸರಿಪಡಿಸುವುದು ಅಸಾಧ್ಯ ಹಾಗಾಗಿ ರೋಗಿಗಳಿಗೆ ಫಾಲಿಕ್‌ ಆಸಿಡ್‌ ಮತ್ತು ವಿಟಮಿನ್‌ ಬಿ12 ವನ್ನು ಶಿಫಾರಸು ಮಾಡುತ್ತಾರೆ. ಚಿಕಿತ್ಸೆ ನೀಡುವ ಮೂತ್ರಪಿಂಡ ತಜ್ಞರು ಕಬ್ಬಿಣಾಂಶದ ಪೂರಣ ಮತ್ತು ಎರಿಥ್ರೋಪ್ರೋಟೀನ್‌ ಪ್ರಚೋದಕ ಏಜೆಂಟ್‌ ಅನ್ನು ಸೂಚಿಸುತ್ತಾರೆ. 
- ಅರುಣಾ ಮಲ್ಯ,
ಆಹಾರ ತಜ್ಞರು, ಕೆ.ಎಂ.ಸಿ . ಆಸ್ಪತ್ರೆ,
ಡಾ| ಬಿ. ಆರ್‌. ಅಂಬೇಡ್ಕರ್‌ ವೃತ್ತ,
ಮಂಗಳೂರು.

ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆಹಾರ ಕ್ರಮ

ದೀರ್ಘ‌ಕಾಲಿಕ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಪೋಷಕಾಂಶಗಳ ಕೊರತೆ ಅನ್ನುವುದು ಬಹಳ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆ. ಒಂದು ಬಾರಿ ದೀರ್ಘ‌ಕಾಲಿಕ ಮೂತ್ರಪಿಂಡದ ಕಾಯಿಲೆ ಕಾಣಿಸಿಕೊಂಡಿತು ಅಂದರೆ, ಈಗಾಗಲೆ ಇರುವ ಮಧುಮೇಹ ಮತ್ತು ಅನಿಯಂತ್ರಿತ ರಕ್ತದೊತ್ತಡ ಕಾಯಿಲೆಯ ಜತೆಗೆ ಪ್ರೊಟೀನಿನ ಕೊರತೆ, ರಕ್ತಹೀನತೆ, ದ್ರವಾಂಶ ಸಂಗ್ರಹಣೆ, ಸೋಂಕು, ಹಾರ್ಮೋನ್‌ ಅಸಮತೋಲನ ಮತ್ತು ಇನ್ನಿತರ ಸಂಬಂಧಿತ ಅಸಹಜತೆಗಳ ವಿಷವರ್ತುಲ ಆರಂಭವಾಗುತ್ತದೆ. ಪೋಷಣೆಯ ಕೊರತೆಯಿಂದಾಗಿ ರೋಗಿಯ ಜೀವನ ಗುಣಮಟ್ಟ ಮತ್ತು ಜೀವಿತಾವಧಿ ಕುಸಿಯುತ್ತದೆ. 
ಡಯಾಲಿಸಿಸ್‌ನಲ್ಲಿ ಇರುವ ರೋಗಿಗಳಲ್ಲಿ ಪೋಷಣೆಯ ಮಟ್ಟವು ವ್ಯತ್ಯಾಸಗೊಳ್ಳಲು ಕಾರಣ ಆಗುವ ಅಂಶಗಳು ಎಂದರೆ
ಯುರೇಮಿಯಾ - ಹಸಿವನ್ನು ತಗ್ಗಿಸುತ್ತದೆ. 
ಡಯಾಲಿಸಿಸ್‌ ಚಿಕಿತ್ಸೆಯ ಕಾರಣದಿಂದಾಗಿ ಶರೀರದಲ್ಲಿನ ಅಮಿನೋ ಆಸಿಡ್‌ ಮತ್ತು ಪ್ರೋಟೀನ್‌ ನಷ್ಟವಾಗುತ್ತದೆ. 
ಡಯಾಲಿಸಿಸ್‌ ರೋಗಿಗಳು ವಯಸ್ಸಿಗೆ ಮೊದಲೆ ಮುಪ್ಪಾಗುವುದು ಮತ್ತು ಅವರಲ್ಲಿ ಕಾಣಿಸಿಕೊಳ್ಳುವ ಸಹ-ರೋಗಸೂಚಕ ಅಂಶಗಳು ದೀರ್ಘ‌ಕಾಲಿಕ ಮೂತ್ರಪಿಂಡ ಕಾಯಿಲೆ ಕಾಣಿಸಿಕೊಳ್ಳಲು ಇರುವ ಬಹುಮುಖ್ಯ ಕಾರಣ. 
ಇನ್ನಿತರ ಅಂಶಗಳು ಸಹ ಈ ಪರಿಸ್ಥಿತಿಗೆ ಕಾರಣವಾಗುತ್ತವೆ 
ಭಾವನಾತ್ಮಕ ಕಿರಿಕಿರಿ
ಪೋಷಕಾಂಶಗಳು ದೇಹಗತ ಆಗದಿರುವ ಅಸಾಮರ್ಥ್ಯ
ಸೂಚಿಸಿದ ಆಹಾರಗಳು ರುಚಿಕರವಾಗಿಲ್ಲದಿರುವುದು ಇತ್ಯಾದಿ
ಪ್ರೋಟೀನ್‌ ಕೊರತೆ:
 ಅಂತಿಮ ಹಂತದ ಮೂತ್ರಪಿಂಡ ವೈಫ‌ಲ್ಯದಿಂದ ಬಳಲುತ್ತಿರುವ ರೋಗಿಗಳಲ್ಲಿ ಪ್ರೋಟೀನ್‌ ಕೊರತೆ ಬಹಳ ಸಾಮಾನ್ಯವಾಗಿ ಕಂಡುಬರುವ ತೊಂದರೆ. ಈ ಸವಾಲನ್ನು ಎದುರಿಸುವುದು ವೈದ್ಯರುಗಳ ಚಿಕಿತ್ಸೆಯ ಉದ್ದೇಶವಾಗಿರುತ್ತದೆ. 
ಸಾಮನ್ಯವಾಗಿ ಪೋಷಣೆಯ ಕೊರತೆಗೆ ಕಾರಣವಾಗುವ ಅಂಶಗಳು
ಆಹಾರಕ್ಕೆ ಸಂಬಂಧಿಸಿದ ನಿರ್ಬಂಧಗಳು
ಹಸಿವಿಲ್ಲದಿರುವಿಕೆ
ಡಯಾಲಿಸಿಸ್‌ ಅವಧಿಯಲ್ಲಿ ಪೋಷಕಾಂಶಗಳು ನಷ್ಟವಾಗುವುದು.
ಸೋಂಕು ಹೆಚ್ಚಳ
ಚಯಾಪಚಯ ಕ್ರಿಯೆ ಮತ್ತು ಹಾರ್ಮೋನಿನಲ್ಲಾಗುವ 
ವ್ಯತ್ಯಾಸಗಳು
ಪ್ರೋಟೀನ್‌ ಆವಶ್ಯಕತೆ:
 ಡಯಾಲಿಸಿಸ್‌ ಮೇಲೆ ಅವಲಂಬಿತರಲ್ಲದ ರೋಗಿಗಳಿಗೆ ಹೋಲಿಸಿದರೆ, ಡಯಾಲಿಸಿಸ್‌ನಲ್ಲಿ ಇರುವ ರೋಗಿಗಳಿಗೆ ಪ್ರೋಟೀನ್‌ ಆವಶ್ಯಕತೆ ಹೆಚ್ಚು. ಹೆಮೋಡಯಾಲಿಸಿಸ್‌ನ ಪ್ರತೀ ಅವಧಿಯಲ್ಲಿ 1-3 ಗ್ರಾಂ ಪ್ರೋಟೀನ್‌ ನಷ್ಟವಾಗುತ್ತದೆ ಮತ್ತು ಪೆರಿಟೋನಿಯಲ್‌ ಡಯಾಲಿಸಿಸ್‌ನಲ್ಲಿ  ಪ್ರತಿ 24 ಗಂಟೆಗೆ 5-15 ಗ್ರಾಂ ಪ್ರೋಟೀನ್‌ ನಷ್ಟವಾಗುತ್ತದೆ. ತಟಸ್ಥ ನೈಟ್ರೋಜನ್‌ ಸಂತುಲನೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೆಮೋಡಯಾಲಿಸಿಸ್‌ನಲ್ಲಿ ಇರುವ ರೋಗಿಗೆ ಸಾಮಾನ್ಯವಾಗಿ ದಿನಕ್ಕೆ 1.2 g/kg  ಪ್ರೋಟೀನ್‌ ಬೇಕಾಗುವುದು. ಪೆರಿಟೋನಿಯಲ್‌ ಡಯಾಲಿಸಿಸ್‌ನಲ್ಲಿ ಇರುವ ರೋಗಿಗೆ ದಿನಕ್ಕೆ 1.2 g/kg  ಪ್ರೋಟೀನ್‌ ಬೇಕಾಗುತ್ತದೆ. ಒಂದುವೇಳೆ ಅವರಲ್ಲಿ ಪೋಷಕಾಂಶಗಳ ಕೊರತೆ ಕಾಣಿಸಿಕೊಂಡಲ್ಲಿ, ಅವರಿಗೆ ದಿನಕ್ಕೆ 1.3 g/kg ನ್ನು ಶಿಫಾರಸು ಮಾಡಬೇಕು. ಸುಮಾರು 50% ದಷ್ಟು ಪ್ರೋಟೀನ್‌ ವಿಶೇಷ ಜೈವಿಕಾಂಶದಿಂದ ಕೂಡಿದ್ದಾಗಿರಬೇಕು. ಹಾಲು ಮತ್ತು ಹಾಲಿನ ಉತ್ಪನ್ನಗಳು, ಮೊಟ್ಟೆ, ಮೀನು ಮತ್ತು ಸೋಯಾ ಉತ್ಪನ್ನಗಳು ವಿಶೇಷ ಜೈವಿಕಾಂಶಗಳನ್ನು ಒಳಗೊಂಡಿರುವ ಆಹಾರಗಳು. ಪೆರಿಟೋನೈಟಿಸ್‌ ಎಂಬುದು ವಿಶೇಷ ಕ್ಯಾಟಬಾಲಿಕ್‌ ಸ್ಥಿತಿ, ಇಂತಹ ಪರಿಸ್ಥಿತಿಯಲ್ಲಿ ಇರುವ ರೋಗಿಗಳಿಗೆ ದಿನಕ್ಕೆ ಕನಿಷ್ಠ 1.5A/MAನಷ್ಟು ಪ್ರೋಟೀನ್‌ ಆವಶ್ಯಕತೆ ಇರುತ್ತದೆ. 
ಡಯಾಲಿಸಿಸ್‌ನಲ್ಲಿ ಇರುವ ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳಿಗೆ ಶರೀರ ತೂಕಕ್ಕೆ ಅನುಗುಣವಾಗಿ ಬೇಕಾಗುವ ಶಕ್ತಿಯ ಆವಶ್ಯಕತೆ 35  kcal/kg   ಮತ್ತು 60 ವಯಸ್ಸಿಗಿಂತ ಮೇಲಿನವರಿಗೆ 30-35  kcal/kg. ಡೆಕೊÕ$óàಸ್‌ ಮೂಲದ ಡಯಾಲಿಸಿಸ್‌ನಲ್ಲಿ ಗುಕೋಸ್‌ ಹೀರಿಕೆ ಆಗುವ ಕಾರಣದಿಂದಾಗಿ ಒಟ್ಟು ಪಾಸಿಟಿವ್‌ ಕ್ಯಾಲೊರಿ ಗಳಿಕೆ ಆಗುತ್ತದೆ. ಪೆರಿಟೋನಿಯಲ್‌ ಡಯಾಲಿಸಿಸ್‌ನಲ್ಲಿರುವ ರೋಗಿಗಳು ಹೆಚ್ಚಾಗಿ ಪೆರಿಟೋನಿಯಲ್‌ ಕುಹರದಲ್ಲಿ ಆಗುವ ಡಯಾಲೈಸೇಟ್‌ ಮತ್ತು ಗುÉಕೋಸ್‌ ಹೀರಿಕೆಯ (100-200g/day)ಕಾರಣದಿಂದಾಗಿ ಕಿಬ್ಬೊಟ್ಟೆಯ ಕಿರಿಕಿರಿ ಮತ್ತು ಹಸಿವಿಲ್ಲದಿರುವಿಕೆಯನ್ನು ಅನುಭವಿಸುತ್ತಿರುತ್ತಾರೆ. ಒಟ್ಟು ಕ್ಯಾಲೊರಿ ಸೇವನೆಯನ್ನು ಲೆಕ್ಕಹಾಕುವಾಗ, ಪೆರಿಟೋನಿಯಲ್‌ ಡಯಾಲೈಸೇಟ್‌ ಕ್ಯಾಲೊರಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುವುದು. ಡಯಾಲೈಸೇಟ್‌ನಿಂದಾಗಿ ಒಬ್ಬ ರೋಗಿಯು ದಿನಕ್ಕೆ 300-350 kcal/ಯನ್ನು ಪಡೆಯುತ್ತಾನೆ.  
ಮೂತ್ರಪಿಂಡ ವೈಫ‌ಲ್ಯ ಇರುವ ರೋಗಿಗಳಲ್ಲಿ ಪಾಸೆ#àಟ್‌ ಮತ್ತು ಪೊಟ್ಯಾಷಿಯಂ ವಿಸರ್ಜನೆಯ ಕೊರತೆಯ ಕಾರಣದಿಂದಾಗಿ ಹೈಪರ್‌ ಪಾಸ್ಪೇಟುಮಿಯಾ ಮತ್ತು ಹೈಪರ್‌ ಕಲೆಮಿಯಾ ಕಾಣಿಸಿಕೊಳ್ಳುವ ಅಪಾಯವಿದೆ. 
ಹೈಪರ್‌ ಪಾಸ್ಪೇಟುಮಿಯಾವನ್ನು ತಡೆಯುವುದಕ್ಕಾಗಿ ಆಹಾರದ ಮೂಲಕ ಪಾಸ್ಫರಸ್‌ ಸೇವನೆಯನ್ನು ತಡೆಯುವುದಕ್ಕಾಗಿ ದಿನಕ್ಕೆ 800-1000mg ಮಿತಿಯಲ್ಲಿರಬೇಕು. ಪೊಟ್ಯಾಷಿಯಂ ಸೇವನೆಯ ಮಿತಿಯು ದಿನಕ್ಕೆ 1mEq/kd  ನಷ್ಟು ಇರಬೇಕು. ಹೆಚ್ಚಿನ ಪ್ರಮಾಣದಲ್ಲಿ ಪಾಸ್ಫರಸ್‌ ಇರುವ ಆಹಾರವನ್ನು ವರ್ಜಿಸಬೇಕು. ಅಧಿಕ ಪೊಟ್ಯಾಷಿಯಂ ಇರುವ ಹಣ್ಣು ಮತ್ತು ತರಕಾರಿಗಳನ್ನು ವರ್ಜಿಸಬೇಕು. ಪೊಟ್ಯಾಷಿಯಂ ಅಂಶ ಕಡಿಮೆ ಇರುವ ಹಣ್ಣುಗಳನ್ನು ಸೇವಿಸಬೇಕು. 
ಕ್ಯಾಲ್ಸಿಯಂ ಸೇವನೆಯು ದಿನಕ್ಕೆ  2 ಗ್ರಾಂಗಿಂತ ಕಡಿಮೆ ಇರಬೇಕು, ಪೂರಣಗಳೂ ಸೇರಿದಂತೆ ದಿನಕ್ಕೆ 1,000-1,500 ಮಿ. ಗ್ರಾಂ ಸೂಕ್ತ. ಅಂಗಾಂಶಗಳಲ್ಲಿ ನೀರು ತುಂಬಿಕೊಳ್ಳುವುದನ್ನು (ಈಡಿಮಾ) ತಡೆಯುವುದಕ್ಕಾಗಿ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕಾಗಿ ಉಪ್ಪನ್ನು ಬಹಳ ಮಿತವಾಗಿ ಸೇವಿಸಬೇಕು. ಪ್ರತಿ ದಿನದ ಉಪ್ಪಿನ ಸೇವನಾ ಪ್ರಮಾಣ 2 ಗ್ರಾಂಗಿಂತಲೂ ಕಡಿಮೆ ಇರಬೇಕು.
ಪ್ರತಿದಿನದ ಕೊಲೆಸ್ಟ್ರಾಲ್‌ ಸೇವನೆ 200 ಮಿ. ಗ್ರಾಂ ಗಿಂತಲೂ ಕಡಿಮೆ ಇರಬೇಕು, ಈ ಕಾರಣಕ್ಕಾಗಿ ಕೊಲೆಸ್ಟ್ರಾಲ್‌ ಹೆಚ್ಚು ಇರುವ ಆಹಾರಗಳನ್ನು ವರ್ಜಿಸಬೇಕು. 
 
ಸಾಮಾನ್ಯವಾಗಿ ನೀರಿನಲ್ಲಿ ಕರಗುವ ವಿಟಮಿನ್‌ಗಳು, ಝಿಂಕ್‌, ಖನಿಜಾಂಶ ಇತ್ಯಾದಿ ಪೂರಣಗಳನ್ನು ಸೂಚಿಸುತ್ತಾರೆ.
 
ರಕ್ತಹೀನತೆಯನ್ನು ಆಹಾರದ ಮೂಲಕ ಸರಿಪಡಿಸುವುದು ಅಸಾಧ್ಯ ಹಾಗಾಗಿ ರೋಗಿಗಳಿಗೆ ಫಾಲಿಕ್‌ ಆಸಿಡ್‌ ಮತ್ತು ವಿಟಮಿನ್‌ ಬಿ12 ವನ್ನು ಶಿಫಾರಸು ಮಾಡುತ್ತಾರೆ. ಚಿಕಿತ್ಸೆ ನೀಡುವ ಮೂತ್ರಪಿಂಡ ತಜ್ಞರು ಕಬ್ಬಿಣಾಂಶದ ಪೂರಣ ಮತ್ತು ಎರಿಥ್ರೋಪ್ರೋಟೀನ್‌ ಪ್ರಚೋದಕ ಏಜೆಂಟ್‌ ಅನ್ನು ಸೂಚಿಸುತ್ತಾರೆ. 
- ಅರುಣಾ ಮಲ್ಯ,
ಆಹಾರ ತಜ್ಞರು, ಕೆ.ಎಂ.ಸಿ . ಆಸ್ಪತ್ರೆ,
ಡಾ| ಬಿ. ಆರ್‌. ಅಂಬೇಡ್ಕರ್‌ ವೃತ್ತ,
ಮಂಗಳೂರು.

ಹಿರಿಯ ನಾಗರಿಕರಲ್ಲಿ ದಂತ ಆರೋಗ್ಯ ಸಮಸ್ಯೆಗಳು

ಮುಖವು ಮನಸ್ಸಿನ ಸೂಚಕವಾಗಿದ್ದರೆ, ಬಾಯಿಯ ಶರೀರದ ಸೂಚಕವಾಗಿದೆ. ಬಾಯಿಯು ಒಬ್ಬ ಮನುಷ್ಯನ ಅತೀ ಸೂಕ್ಷ್ಮವಾದ ಜೀವಶಾಸ್ತ್ರೀಯ ಸೂಚಕವಾಗಿದೆ. ಆದರೆ ಇಂತಹ ಮಹತ್ವದ ಅಂಗವನ್ನು ನಿರ್ಲಕ್ಷಿಸಿ, ವಿವಿಧ ರೀತಿಯ ಕಿರುಕುಳಗಳಿಗೆ ಒಳಪಡಿಸುತ್ತೇವೆ. ಪಾನ್‌ಬೀಡ, ಎಲೆ ಅಡಿಕೆ ತಿನ್ನುವುದು, ಬೀಡಿ, ಸಿಗರೇಟ್‌  ಸೇದುವುದು, ಮದ್ಯಪಾನ ಮಾಡುವುದು ಇತ್ಯಾದಿ. ಆದರೆ ಇವೆಲ್ಲವೂ ನಮ್ಮ ಬಾಯಿಗೆ ಶಾಶ್ವತವಾದ ಹಾನಿಯನ್ನುಂಟು ಮಾಡುತ್ತವೆ.ಹಾಗೆಯೇ ವಯಸ್ಸಾದಂತೆಲ್ಲಾ ನಾನಾ ರೀತಿಯ ತೊಂದರೆಗಳಿಗೆ ಕಾರಣವಾಗುತ್ತವೆ.
ಹಿರಿಯ ನಾಗರಿಕರಲ್ಲಿ ದಂತ ಚಿಕಿತ್ಸೆಯು ಯಾಕೆ ಕ್ಲಿಷ್ಟಕರವಾಗಿದೆ? ಹಿರಿಯ ನಾಗರಿಕರು  ಚಲನವಲನಗಳಿಂದ ಹಿಡಿದು ಹಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ವಯೋಸಹಜವಾದ ಶರೀರದ ಬದಲಾವಣೆಗಳು, ಜೀವಕಣಗಳ ನಿರ್ವಹಣೆ, ಶ್ವಾಸೋಚ್ಛಾಸದಲ್ಲಾಗುವ ಬದಲಾವಣೆ, ಹೃದಯದ ಕಾರ್ಯಕ್ಷಮತೆ ಪಂಚೇಂದ್ರಿಯಗಳ ಕಾರ್ಯಪಾಲನೆ, ಪಚನಕ್ರಿಯೆ, ನರಮಂಡಲಗಳ ಸವೆತ ಇತ್ಯಾದಿ ಬದಲಾವಣೆಗಳು ಹಿರಿಯ ನಾಗರಿಕರಲ್ಲಿ ದಂತ ಚಿಕಿತ್ಸೆಗೆ ಸಂಬಂಧಿಸಿದಂತೆ ಈ ಕೆಳಗಿನ ಬದಲಾವಣೆಗಳನ್ನು ತರಬಲ್ಲದು.
ಬಾಯಿಯ ಆರೋಗ್ಯವನ್ನು ಕಾಪಾಡುವಲ್ಲಿ ವೈಫ‌ಲ್ಯ.
ಚಿಕಿತ್ಸೆಯನ್ನು ಪಡೆಯಲು ಮಾನಸಿಕವಾಗಿ ಉತ್ಸುಕತೆಯಿಲ್ಲದಿರುವುದು.
ಒಂದು ವೇಳೆ ಚಿಕಿತ್ಸೆಗೆ ಮನಸ್ಸಿದ್ದರೂ ಶಾರೀರಿಕ ಅಡಚಣೆಗಳಿಂದ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡಿರುವುದು.
ನೆನಪಿನ ಶಕ್ತಿಯ ಕೊರತೆಯಿಂದಾಗಿ ಚಿಕಿತ್ಸಾಪೂರ್ವ ಮತ್ತು ಚಿಕಿತ್ಸಾ ಅನಂತರದ ಸಲಹೆ ಸೂಚನೆಗಳನ್ನು ಪಾಲಿಸದಿರುವುದು.
ಚಿಕಿತ್ಸಾ ನಂತರ ಕೊಡುವ ಔಷಧಿಯನ್ನು ನಿಯಮಿತವಾಗಿ ತೆಗೆದುಕೊಳ್ಳಲು ಸಾಧ್ಯವಾಗದಿರುವುದು.
ಚಿಕಿತ್ಸಾ ಪೂರ್ವ ಮತ್ತು ಅನಂತರ ಸೂಚಿಸುವ ದಂತ ಆರೋಗ್ಯ ಪರಿಕರಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ವಿಫ‌ಲವಾಗುವುದು.
ಯೌವನಾವಸ್ಥೆಯಲ್ಲಿದ್ದ ಧೈರ್ಯ ಮತ್ತು ಆತ್ಮವಿಶ್ವಾಸದ ಕೊರತೆ
ಕೆಲವರಲ್ಲಿ ಆರೋಗ್ಯದಲ್ಲಿ ಅಲ್ಪ ಏರುಪೇರಾದರೂ ಹೊಂದಿಕೊಳ್ಳಲಾಗದ ಮನಃಸ್ಥಿತಿ (ಮಾನಸಿಕ ಉದ್ವೇಗ).
ಈ ಮೇಲೆ ತಿಳಿಸಿದ ಕಾರಣಗಳಿಂದಾಗಿ ಹಿರಿಯ ನಾಗರಿಕರಿಗೆ ದಂತ ಚಿಕಿತ್ಸೆಯು ಕಷ್ಟಕರವಾಗಿದ್ದು ಅದೊಂದು ಸೂಕ್ಷ್ಮವಾದ ವಿಚಾರವಾಗಿದೆ. ಆದುದರಿಂದ ಇದಕ್ಕಾಗಿ ಪ್ರತ್ಯೇಕ ವಿಭಾಗದ ಅಗತ್ಯ ಇದ್ದು, ಇದನ್ನು ಜೀರಿಯಾಟ್ರಿಕ್‌ ಡೆಂಟಿಸ್ಟ್ರಿ ಎಂದು ಕರೆಯಲಾಗುತ್ತದೆ.
ಜೀರಿಯಾಟ್ರಿಕ್‌ ಡೆಂಟಿಸ್ಟ್ರಿ 
ಅಂದರೆ ಏನು?

ಹಿರಿಯ ನಾಗರಿಕರ ಚಿಕಿತ್ಸಕರು ಈ ಮೇಲೆ ತಿಳಿಸಿದ ಅಂಶಗಳನ್ನು ಚೆನ್ನಾಗಿ ಅಭ್ಯಸಿಸಿ, ಅವರ ಮಾನಸಿಕ ಮತ್ತು ದೈಹಿಕ ಅಗತ್ಯತೆಗಳ ಬಗ್ಗೆ, ಬದಲಾವಣೆಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿರಬೇಕಾಗುತ್ತದೆ. ಇದಕ್ಕಾಗಿಯೇ ಮುಂದುವರಿದ ದೇಶಗಳಲ್ಲಿ ಪ್ರತ್ಯೇಕ ವಿಭಾಗವು ಸಾಕಷ್ಟು ಅಭಿವೃದ್ಧಿ ಹೊಂದಿ, ಇಡೀ ವಿಭಾಗವು ಹಿರಿಯ ನಾಗರಿಕರ ದಂತ ಆರೋಗ್ಯ ಕಾಪಾಡುವಲ್ಲಿ ಕಾರ್ಯನಿರ್ವಹಿಸುತ್ತದೆ. ನಮ್ಮ ದೇಶದಲ್ಲಿ ಈ ವಿಭಾಗವು ಶೈಶಾವಾವಸ್ಥೆಯಲ್ಲಿದ್ದು, ಇದರ ಅಭಿವೃದ್ಧಿ ಆಗಬೇಕಾಗಿದೆ.
ಮಣಿಪಾಲ್‌ ಕಾಲೇಜು ಆಫ್ ಡೆಂಟಲ್‌ ಸಾಯನ್ಸಸ್‌, ಅತ್ತಾವರ ಮಂಗಳೂರು, ಇಲ್ಲಿ ಪ್ರತೀ ಗುರುವಾರ ನುರಿತ ದಂತ ವೈದ್ಯರ ಪ್ರತ್ಯೇಕ ತಂಡದಿಂದ ಹಿರಿಯ ನಾಗರಿಕರ ಎಲ್ಲ ವಿಧದ ದಂತ ಆರೋಗ್ಯ ಸಮಸ್ಯೆಗಳ ಆವಶ್ಯಕತೆಗಳಿಗೆ ಸ್ಪಂದಿಸಲು ಜೀರಿಯಾಟ್ರಿಕ್‌ ಕ್ಲಿನಿಕ್‌ ಕಾರ್ಯನಿರ್ವಹಿಸುತ್ತದೆ.
ಜೀರಿಯಾಟ್ರಿಕ್‌ ಕ್ಲಿನಿಕ್‌ನ 
ವಿಶೇಷತೆಗಳು

1ಎಲ್ಲ ವಿಧದ ಸಲಹೆ, ಸೂಚನೆಗಳು ಮತ್ತು ಚಿಕಿತ್ಸೆಗಳು ಒಂದೇ ಸೂರಿನಡಿಯಲ್ಲಿ ಲಭ್ಯ.
2 ದಂತ ವೈದ್ಯಕೀಯದ ವಿವಿಧ ವಿಭಾಗಗಳ ಪರಿಣತ ವೈದ್ಯರ ತಂಡ ಲಭ್ಯ.
3 ಈ ಕ್ಲಿನಿಕ್‌ನಲ್ಲಿ ವಾರದ ನಿಗದಿತ ದಿನ (ಗುರುವಾರ)ವನ್ನು ಹಿರಿಯ ನಾಗರಿಕರಿಗೆ ಮೀಸಲಾಗಿರಿಸಿದೆ.
4 ಸಲಹೆ, ಸೂಚನೆಗಳು ಮತ್ತು ತಪಾಸಣೆ ಉಚಿತವಾಗಿದ್ದು, ರಿಯಾಯಿತಿ ದರದಲ್ಲಿ  ಚಿಕಿತ್ಸೆಯನ್ನು ಒದಗಿಸಲಾಗುವುದು.
5ಕ್ರಮೇಣ ಕಾಲೇಜು, ಸರಕಾರ ಮತ್ತು ಇತರ ಮೂಲಗಳಿಂದ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಉಚಿತ ಚಿಕಿತ್ಸೆಯ ವ್ಯವಸ್ಥೆ.
ಹಿರಿಯ ನಾಗರಿಕರಲ್ಲಿ 
ದಂತ ಆರೋಗ್ಯ ಸಮಸ್ಯೆಗಳು

ಹಲ್ಲುಗಳ ಬೇರಿನ ದಂತಕ್ಷಯ (ದಂತ ಕುಳಿ)
ವಸಡು ರೋಗಗಳು
ಹಲ್ಲುಗಳ ಸವೆತ
ಬಾಯಿ ಒಣಗಟ್ಟುವುದು
ಬಾಯಿಯ ದುರ್ವಾಸನೆ
ಕೃತಕ ದಂತ ಪಂಕ್ತಿಗಳು
ಬಾಯಿಯ ಕ್ಯಾನ್ಸರ್‌ ಇತ್ಯಾದಿ...
ದಂತಕ್ಷಯ/ಹುಳುಕು ಹಲ್ಲು
ದಂತ ಕ್ಷಯವು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಹಲ್ಲುಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿರುವ ಪಿಷ್ಟ ಸಕ್ಕರೆಯ ಅಂಶದ ಮೇಲೆ ಬ್ಯಾಕ್ಟೀರಿಯಾಗಳು ಸೇರಿಕೊಂಡು, ಲಾಕ್ಟಿಕ್‌ ಆ್ಯಸಿಡ್‌ (ಔಚcಠಿಜಿc ಅcಜಿಛ) ಎಂಬ ಆಮ್ಲವನ್ನು  ಉತ್ಪತ್ತಿ ಮಾಡುತ್ತದೆ. ಈ ಆಮ್ಲವು ನಮ್ಮ ಶರೀರದಲ್ಲಿಯೇ ಅತೀ ಗಟ್ಟಿಯಾದ ಹಲ್ಲಿನ ಹೊರಪದರದ ಎನಾಮಲ್‌ನ್ನು ಹಾಳು ಮಾಡುತ್ತದೆ.
ದಂತ ಕುಳಿಯ ಗುಣಲಕ್ಷಣಗಳು
ಹಲ್ಲುಗಳ ಮಧ್ಯೆ ಕಪ್ಪಾದ ಚುಕ್ಕೆಗಳು ಉಂಟಾಗಿ ಕ್ರಮೇಣ ಕುಳಿಗಳಾಗುವುದು.
ಎರಡು ಹಲ್ಲುಗಳ ಮಧ್ಯೆ ತಿಂದ ಆಹಾರ ಸಿಕ್ಕಿಹಾಕಿಕೊಳ್ಳಬಹುದು. 
ಬಿಸಿ ಅಥವಾ ತಣ್ಣನೆಯ ಪಾನೀಯ/ನೀರು ಕುಡಿದಾಗ ನೋವು ಉಂಟಾಗಿ ಕ್ರಮೇಣ ತೀವ್ರತರವಾದ ತಡೆಯಲಾಗದ ನೋವು ಬರಬಹುದು.
ಹಲ್ಲುಗಳ ಶಕ್ತಿ ಕುಂಠಿತವಾಗಿ ತುಂಡಾಗುವುದು.
ಈ ಮೇಲಿನ ಯಾವುದಾದರೊಂದು ಲಕ್ಷಣಗಳು ಕಂಡುಬಂದಲ್ಲಿ ದಂತ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆಗೊಳಪಡಿಸುವುದು ಉತ್ತಮ. ಪ್ರಾಥಮಿಕ ಹಂತದಲ್ಲಿ ಈ ತೊಂದರೆಗಳನ್ನು ತುಂಬಿಸಿ/ಫಿಲ್ಲಿಂಗ್‌ಗಳನ್ನು ಮಾಡಿ ಮುಂದಕ್ಕೆ ನೋವು ಬಾರದ ಹಾಗೆ ತಡೆಗಟ್ಟಬಹುದು.
ಒಂದು ವೇಳೆ ದಂತಕುಳಿ ಜಾಸ್ತಿ ಇದ್ದರೆ, ಅಂತಹ ಹಲ್ಲುಗಳಿಗೆ ರೂಟ್‌ ಕೆನಾಲ್‌ ಮಾಡಿ, ಕ್ಯಾಪ್‌ ಹಾಕಿಸುವುದರ ಮೂಲಕ ಹಲ್ಲನ್ನು ಉಳಿಸಿಕೊಳ್ಳಬಹುದು.
ಇನ್ನೂ ಜಾಸ್ತಿ ಹಾಳಾಗಿದ್ದರೆ, ಸರಿಪಡಿಸುವ ಹಂತದಿಂದ ಹೆಚ್ಚು ತೊಂದರೆಯಾಗಿದ್ದರೆ, ಅವುಗಳನ್ನು ಕೀಳಿಸಿ ಆ ಜಾಗದಲ್ಲಿ ಕೃತಕ ದಂತವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
ವಸಡು ರೋಗಗಳು
ವಸಡಿನಿಂದ ರಕ್ತಸ್ರಾವ, ವಸಡಿನ ಜಾರಿಕೆ, ಬಾಯಿ ವಾಸನೆ, ಹಲ್ಲುಗಳು ಅಲುಗಾಡುವುದು, ಇವೆಲ್ಲವೂ ವಸಡು ರೋಗದ ಲಕ್ಷಣಗಳು.
ವಸಡು ರೋಗಕ್ಕೆ ಕಾರಣಗಳು
ಹಲ್ಲಿನ ಮೇಲೆ ಕಟ್ಟಿರುವ ಸೂಕ್ಷ್ಮಾಣು ಜೀವಿಗಳ ಪದರ 
ಟಾರ್ಟರ್‌  ಅಥವಾ ಸುಣ್ಣ  
ವಸಡಿನ ನೈಸರ್ಗಿಕ ಪ್ರತಿಬಂಧಕ ಕ್ರಿಯೆಗಳ ದುರ್ಬಲತೆ
ಬದಲಾದ ಬಿಳಿ ರಕ್ತಕಣಗಳ ಕಾರ್ಯಕ್ಷಮತೆ
ಇತರ ರೋಗಗಳ ಪ್ರಭಾವ (ಡಯಾಬೆಟೆಸ್‌,ಏಡ್ಸ್‌ , ಲ್ಯುಕೇಮಿಯಾ)
ದಿನನಿತ್ಯ ಸರಿಯಾದ ಕ್ರಮದಲ್ಲಿ ಬ್ರಶ್‌ ಮಾಡದಿರುವುದು.
ಬಾಯಿಯಿಂದ ಉಸಿರಾಡುವುದು ಇತ್ಯಾದಿ...
ತಡೆಗಟ್ಟುವಿಕೆ 
ದಿನನಿತ್ಯ ಎರಡು ಸಲ ಬೆಳಗ್ಗೆ ಮತ್ತು ರಾತ್ರಿ ಹಲ್ಲನ್ನು ಉಜ್ಜಬೇಕು. ಹಲ್ಲನ್ನು ಎಷ್ಟು ಸಲ, ಎಷ್ಟು ಹೊತ್ತು ಬ್ರಶ್‌ ಮಾಡುತ್ತೀರಿ ಎಂಬುದು ಮುಖ್ಯ ಅಲ್ಲ. ನೀವು ಹೇಗೆ, ಎಷ್ಟು ಪರಿಣಾಮಕಾರಿಯಾಗಿ ಮಾಡುತ್ತೀರಿ ಎಂಬುದು ಮುಖ್ಯವಾಗಿರುತ್ತದೆ.
ಈಗಾಗಲೇ ವಸಡಿನ ತೊಂದರೆಯಿಂದ ಬಳಲುವವರು, ಬ್ರಶ್‌ ಮಾಡುವುದರ ಜತೆಗೆ, ಪೂರಕವಾಗಿ ದಂತ ವೈದ್ಯರಿಂದ ಶಿಫಾರಸು ಪಡೆದ ರಾಸಾಯನಿಕಗಳನ್ನು , ಡೆಂಟಲ್‌ ಫ್ಲಾಸ್‌ನ್ನು  ಉಪಯೋಗಿಸಬಹುದು.
ಧೂಮಪಾನವನ್ನು ತ್ಯಜಿಸುವುದು, ಗುಟ್ಕಾ, ಪಾನ್‌ಮಸಾಲ ಜಗಿಯುವುದನ್ನು ಬಿಡುವುದು ಕೂಡ ಹಲ್ಲು ಮತ್ತು ವಸಡಿನ ಆರೋಗ್ಯಕ್ಕೆ ಉತ್ತಮ.
ಸಮತೋಲಿತ ಆಹಾರ, ಸೇವನೆ ಕೂಡ ವಸಡು ಮತ್ತು ಹಲ್ಲುಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಯಾವುದೇ ಆಹಾರವನ್ನು ತಿಂದ ಅನಂತರ ಬಾಯಿ ಮುಕ್ಕಳಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
ನಿಯಮಿತವಾಗಿ ದಂತ ವೈದ್ಯರನ್ನು ಭೇಟಿಯಾಗಿ, ದಂತ ಪಂಕ್ತಿಯನ್ನು ಪರೀಕ್ಷಿಸಿಕೊಂಡು, ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಕೂಡ ಬಹಳ ಮುಖ್ಯ.
ಹಲ್ಲುಗಳ ಸವೆತ
ಹಲ್ಲುಗಳ ಸವೆತ ಕೂಡ ಹಿರಿಯ ನಾಗರಿಕರಲ್ಲಿ ಒಂದು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ.
ಕಾರಣಗಳು
ಹಲ್ಲು ಕಡಿತ 
ಬಲವಾಗಿ, ಹೆಚ್ಚು ಸಮಯ, ಸರಿಯಾದ ಕ್ರಮ ಅನುಸರಿಸದೆ ಹಲ್ಲು ಉಜ್ಜುವುದು.
ಎನಾಮಲ್‌ ಅಥವಾ ಹಲ್ಲಿನ ಇತರ ಪದರಗಳಲ್ಲಿನ ನ್ಯೂನತೆಗಳು
ಒಂದು ವೇಳೆ ಹಲ್ಲು ಕಡಿತ ಕಾರಣವಾಗಿದ್ದರೆ ಅಂತವರನ್ನು ಸೂಕ್ತವಾಗಿ ಪರೀಕ್ಷಿಸಿ ಸಮಾಲೋಚನೆ ಮಾಡಿ ಅಗತ್ಯವಿದ್ದಲ್ಲಿ ಹಲ್ಲಿಗೆ ರಕ್ಷಣಾ ಕವಚವನ್ನು ನೀಡಿದರೆ ಸ್ವಲ್ಪ ಮಟ್ಟಿನ ಪರಿಹಾರ ದೊರೆಯುತ್ತದೆ.
ಹಲ್ಲು ಉಜ್ಜುವಿಕೆಯ ತೊಂದರೆಯಿಂದಾಗಿ ಹಲ್ಲು ಸವೆತ ಉಂಟಾಗಿದ್ದರೆ ಹಲ್ಲನ್ನು ಸರಿಯಾದ ಕ್ರಮದಲ್ಲಿ ಮೆತ್ತನೆಯ ಬ್ರಶ್‌ನಿಂದ ಉಜ್ಜಬೇಕು. ಬ್ರಶ್‌ನ್ನು ಪ್ರತೀ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಬದಲಾಯಿಸುತ್ತಿರಬೇಕು.
ಹಲ್ಲಿನ ಹೊರಪದರ (ಎನಾಮಲ್‌) ಅಥವಾ ಇನ್ನಿತರ ಪದರುಗಳ ತೊಂದರೆಯಿದ್ದರೆ ದಂತ ವೈದ್ಯರಿಂದ ಪರೀಕ್ಷಿಸಿ, ಎಕ್ಸ್‌- ರೇ  ಇತ್ಯಾದಿ ತಪಾಸಣೆ ಮಾಡಿಸಿ, ಸೂಕ್ತ ಚಿಕಿತ್ಸೆಯನ್ನು ಮಾಡಿಸಬೇಕಾಗುತ್ತದೆ.
ಬಾಯಿಯ ಒಣಗುವಿಕೆ
ಕಾರಣಗಳು: 
ಸಾಕಷ್ಟು ನೀರು ಸೇವಿಸದಿರುವುದು.
ಔಷಧಿಗಳ ಸೇವನೆ
ಕ್ಯಾನ್ಸರ್‌ ಚಿಕಿತ್ಸೆಗಳು
ಜೊಲ್ಲು ರಸ ಗ್ರಂಥಿಗಳ ತೊಂದರೆಗಳು
ಬಾಯಿ ಒಣಗುವಿಕೆಯು, ದಂತ ಕುಳಿ, ವಸಡು ರೋಗಗಳು ಮತ್ತು ಬಾಯಿಯ ವಾಸನೆಗೆ ಕಾರಣವಾಗುವುದು, ಇದರಿಂದ ಇಂತಹ ಸಮಸ್ಯೆ ಕಂಡುಬರುವವರು, ಕಾರಣವನ್ನು ಅರಿತುಕೊಂಡು ಸೂಕ್ತ ಪರಿಹಾರವನ್ನು ಮಾಡಿಸಿಕೊಳ್ಳುವುದು ಉತ್ತಮ.
ಬಾಯಿಯ ದುರ್ವಾಸನೆ
ಕಾರಣಗಳು
ಬಾಯಿಯನ್ನು ಸ್ವತ್ಛವಾಗಿಡದೆ ಇರುವುದು.
ಹುಳುಕು ಹಲ್ಲುಗಳು
ಶುಚಿಯಾಗಿಡದ ಕೃತಕ ದಂತ ಪಂಕ್ತಿಗಳು
ಸಾಕಷ್ಟು ನೀರನ್ನು ಸೇವಿಸದಿರುವುದು.
ಬಾಯಿ ಮತ್ತು ಮೂಗಿನಲ್ಲಾಗುವ ಸೋಂಕು ರೋಗಗಳು
ಶ್ವಾಸಕೋಶ, ಪಿತ್ತಜನಕಾಂಗ ಮತ್ತು ಜಠರದ ತೊಂದರೆಗಳು
ಹಸಿದಿರುವುದು 
ಆಹಾರ ಸೇವನೆಯಿಂದ (ಬೆಳ್ಳುಳ್ಳಿ, ಆಲ್ಕೋಹಾಲ್‌, ಕಾಫಿ...)
ಮದ್ಯಪಾನ ಮತ್ತು ಧೂಮಪಾನ.
ಈ ಮೇಲೆ ತಿಳಿಸಿದ ಕಾರಣಗಳಲ್ಲದೆ, ಇನ್ನೂ ಅನೇಕ ಕಾರಣಗಳಿರಬಹುದು. ಇದಕ್ಕೆ ದಂತವೈದ್ಯರನ್ನು ಭೇಟಿಯಾದರೆ ಅವರು ಕೂಲಂಕಷ‌ವಾಗಿ ಪರೀಕ್ಷಿಸಿ ಸೂಕ್ತ ಕಾರಣವನ್ನು ಪತ್ತೆ ಹಚ್ಚಿ, ಅವರಿಂದ ಸಲಹೆ ಸೂಚನೆಗಳನ್ನು ಪಡೆಯುವುದರಿಂದ ಬಾಯಿಯ ದುರ್ವಾಸನೆಯ ಸಮಸ್ಯೆಯಿಂದ ಪಾರಾಗಬಹುದು.
ಕೃತಕ ದಂತ ಪಂಕ್ತಿ
ಹೆಚ್ಚಿನ ವಯೋವೃದ್ಧರು ವಿವಿಧ ಕಾರಣಗಳಿಂದ ತಮ್ಮ ಹಲ್ಲನ್ನು ಕಳೆದುಕೊಂಡ ಮೇಲೆ ಕೃತಕ ಹಲ್ಲುಗಳನ್ನು ಅಳವಡಿಸಿಕೊಂಡಿರುತ್ತಾರೆ. ಹೆಚ್ಚಿನವರು ಕೃತಕ ಹಲ್ಲುಗಳಿಗೆ ಬೇಗನೇ ಹೊಂದಾಣಿಕೆಯಾದರೆ, ಕೆಲವರಿಗೆ ಹೊಂದಾಣಿಕೆಯಾಗುವುದು ಕಷ್ಟವಾಗುತ್ತದೆ. ಮೊದಮೊದಲು ಬಾಯಿಯ ಒಳಗೆ ಏನೋ ಹೊಸದಾದ ವಸ್ತುವೊಂದು ಇದ್ದಂತೆ ಅನಿಸತೊಡಗಿ, ಬಾಯಲ್ಲಿ ಜಾಸ್ತಿ ಜೊಲ್ಲು ಸುರಿಯಬಹುದು. ಹಾಗೆಯೇ ದಿನಕಳೆದಂತೆ ನಾಲಗೆ, ತುಟಿ ಮತ್ತು ವಸಡುಗಳು ಹೊಂದಿಕೊಂಡು ಕೃತಕಹಲ್ಲು ಗಳು ದೇಹದ ಸ್ವಾಭಾವಿಕ ಅಂಗದಂತೆ ಕಾರ್ಯನಿರ್ವಹಿಸುತ್ತದೆ.
ಪ್ರಾರಂಭದಲ್ಲಿ ಸಣ್ಣಪುಟ್ಟ ನೋವು, ಗಾಯದ ತೊಂದರೆ, ಜೊಲ್ಲು ಸುರಿಸುವಿಕೆ ದಂತ ಪಂಕ್ತಿಯ ಜಾರುವಿಕೆ ಇತ್ಯಾದಿ ಸಾಮಾನ್ಯವಾಗಿರುತ್ತದೆ.
ಆಹಾರವನ್ನು ಜಗಿಯುವಾಗ ಎಡ ಮತ್ತು ಬಲ ಎರಡೂ ಬದಿಯಲ್ಲಿ ತುಟಿಯನ್ನು ಮುಟ್ಟಿ ಜಗಿಯಬೇಕು. ಮುಂದಿನ ಹಲ್ಲಿನಿಂದ ಆಹಾರವನ್ನು ಎಂದೆಂದಿಗೂ ಜಗಿಯಬಾರದು.
ಕೆಮ್ಮು ಅಥವಾ ಸೀನು ಮತ್ತು ಆಕಳಿಕೆ ಬಂದಾಗ ಕೈಯಿಂದ ಬಾಯನ್ನು ಮುಚ್ಚಿ ಹಿಡಿಯುವುದರಿಂದ ಹಲ್ಲಿನ ಸೆಟ್ಟು ಬಾಯಿಯಿಂದ ಜಾರಿ ಕೆಳಗೆ ಬೀಳದಂತೆ ಜಾಗ್ರತೆ ವಹಿಸಬಹುದು.
ರಾತ್ರಿ ಸಮಯ ಕೃತಕ ದಂತ ಪಂಕ್ತಿಗಳನ್ನು ತಣ್ಣೀರು ತುಂಬಿದ ಡಬ್ಬಿಯಲ್ಲಿ  ಇಡಬೇಕು. ಇದರಿಂದ ಒಸಡಿಗೆ ವಿಶ್ರಾಂತಿ ಸಿಗುತ್ತದೆ.
ಕೃತಕ ದಂತ ಪಂಕ್ತಿಯನ್ನು ಟೂತ್‌ಬ್ರಶ್‌ ಮತ್ತು ಸಾಬೂನಿನಿಂದ ದೊಡ್ಡ ಅಗಲವಾದ ಪಾತ್ರೆಯಲ್ಲಿ  ನೀರಿಟ್ಟು ಅದರ ಮೇಲೆ ಪ್ರತೀ ದಿನ ತೊಳೆಯಬೇಕು.
ಬಾಯಿಯ ಕ್ಯಾನ್ಸರ್‌ 
ಬಾಯಿಯು ಒಂದು ಮಹತ್ವದ ಅಂಗ. ಆದರೆ ಅದನ್ನು ನಿರ್ಲಕ್ಷಿಸಿ, ನಾವು ವಿವಿಧ ರೀತಿಯ ಕಿರುಕುಳಗಳಿಗೆ ಒಳಪಡಿಸುತ್ತೇವೆ. ಪಾನ್‌ಬೀಡ, ಎಲೆ ಅಡಿಕೆ, ಹೊಗೆಸೊಪ್ಪು ತಿನ್ನುವುದು, ಬೀಡಿ, ಸಿಗರೇಟು ಸೇದುವುದು, ಮದ್ಯಪಾನ ಇತ್ಯಾದಿ... ಆದರೆ ಇವೆಲ್ಲವೂ ಬಾಯಿಯ ನಾನಾ ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ  ಮುಖ್ಯವಾದವು ವಸಡುರೋಗಗಳಲ್ಲಿ  ಕ್ಯಾನ್ಸರ್‌ಪೂರ್ವ ವಿಕಾರಗಳಿಂದ ಕೆಂಪು ಮಚ್ಚೆ , ಬಿಳಿ ಮಚ್ಚೆ ,  ಬಾಯಿಯ ಬಿಗಿ ಹಿಡಿತ ಬಾಯಿಯ ಕ್ಯಾನ್ಸರ್‌ ಇತ್ಯಾದಿ... ಇವುಗಳಲ್ಲಿ ಬಾಯಿಯ ಕ್ಯಾನ್ಸರ್‌ ಭಯಂಕರವಾಗಿದ್ದು , ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ ಖಂಡಿತ.
ಪರಿಹಾರೋಪಾಯಗಳು
ಬಾಯಿಯ ಆರೋಗ್ಯಕ್ಕೆ  ಸಲಹೆ ಸೂಚನೆಗಳು:
ದಿನನಿತ್ಯ ಎರಡು ಸಲ ಬೆಳಗ್ಗೆ ಮತ್ತು ರಾತ್ರಿ ಹಲ್ಲನ್ನು ಪರಿಣಾಮಕಾರಿಯಾಗಿ ಉಜ್ಜಬೇಕು. ನೀವು ಉಪಯೋಗಿಸುವ ಟೂತ್‌ಬ್ರಶ್‌ ಮತ್ತು ಪೇಸ್ಟ್‌ನ ನಮೂನೆ ಕೂಡ ಮುಖ್ಯವಾಗಿರುತ್ತದೆ.
ದಂತ ಕುಳಿಯ ತೊಂದರೆಗೆ ಒಳಗಾಗಿದ್ದವರು ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್‌ನ್ನು ಉಪಯೋಗಿಸುವುದು ಉತ್ತಮ.
ಜೆಲ್‌ ಮಾದರಿ ಮತ್ತು ಹಲ್ಲು ಪುಡಿಯನ್ನು ಉಪಯೋಗಿಸುವುದರಿಂದ ಹಲ್ಲು ಬೇಗನೆ ಸವೆಯುವುದರಿಂದ, ಇವುಗಳನ್ನು ಉಪಯೋಗಿಸದಿರುವುದು ಒಳ್ಳೆಯದು.
ಟೂತ್‌ಬ್ರಷ್‌: ಸಣ್ಣ ಗಾತ್ರದ ತಲೆಯಿರುವ ಮೂರರಿಂದ ನಾಲ್ಕು ಸಾಲು ಪಂಕ್ತಿಯ ಬ್ರಸಲ್ಸ್‌ ಇರುವ ಮೃದುವಾದ ಬ್ರಷ್‌ನ್ನು ಉಪಯೋಗಿಸಬೇಕು. 
ವಸಡಿನ ತೊಂದರೆಯಿದ್ದವರು ನಿಯಮಿತವಾಗಿ ಬ್ರಷ್‌ ಮಾಡುವುದರ ಜತೆಗೆ ದಂತ ವೈದ್ಯರಿಂದ ಶಿಫಾರಸು ಪಡೆದ ಬಾಯಿ ಮುಕ್ಕಳಿಸುವ ರಾಸಾಯನಿಕಗಳನ್ನು  ಉಪಯೋಗಿಸಬಹುದು.
ಧೂಮಪಾನವನ್ನು ತ್ಯಜಿಸುವುದು ಗುಟ್ಕಾ, ಪಾನ್‌ಮಸಾಲ ಜಗಿಯುವುದನ್ನು ಬಿಡುವುದು ಕೂಡ ಹಲ್ಲು, ವಸಡು ಮತ್ತು ಬಾಯಿಯ ಆರೋಗ್ಯಕ್ಕೆ ಅತ್ಯಂತ ಪೂರಕವಾದ ಅಂಶವಾಗಿರುತ್ತದೆ.
ಸಮತೋಲಿತ ಆಹಾರ ಸೇವನೆ ಕೂಡ ವಸಡು ಮತ್ತು ಹಲ್ಲಿನ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ದಂತ ವೈದ್ಯರನ್ನು ನಿಯಮಿತವಾಗಿ ಭೇಟಿಯಾಗಿ ಅವರಿಂದ ದಂತಪಂಕ್ತಿಯನ್ನು ಪರೀಕ್ಷಿಸಿಕೊಂಡು, ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಬಹಳ ಮುಖ್ಯ 
- ಡಾ| ಆನಂದ್‌ ಅಮೃತ್‌ರಾಜ್‌, 
ವಿಭಾಗ ಮುಖ್ಯಸ್ಥರು, ಡಿಪಾರ್ಟ್‌ಮೆಂಟ್‌ ಆಫ್ ಓರಲ್‌ ಆ್ಯಂಡ್‌
ಮ್ಯಾಕ್ಸಿಲ್ಲೋಫೇಷಿಯಲ್‌ ಸರ್ಜರಿ,
ಮಣಿಪಾಲ್‌ ಕಾಲೇಜು ಆಫ್ ಡೆಂಟಲ್‌ ಸರ್ಜರಿ, ಮಂಗಳೂರು.
-ಡಾ| ಧರ್ಣಪ್ಪ  ಪೂಜಾರಿ
ಅಸೋಸಿಯೇಟ್‌ ಪ್ರೊಫೆಸರ್‌
ಓರಲ್‌ ಸರ್ಜರಿ, ಮಣಿಪಾಲ್‌ ಕಾಲೇಜು ಆಫ್ ಡೆಂಟಲ್‌
ಸಯನ್ಸಸ್‌ ಮಂಗಳೂರು

ಕಾಕ್ಲಿಯರ್‌ ಅಳವಡಿಕೆ

ಕಿವುಡುತನ ಎನ್ನುವುದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುವ ಒಂದು ಸಾಮಾನ್ಯ ರೀತಿಯ ರೋಗ ಪರಿಸ್ಥಿತಿ. ಕಿವುಡುತನದಲ್ಲಿಯೂ ಬೇರೆ ಬೇರೆ ಶ್ರೇಣಿ/ಮಟ್ಟ ಮತ್ತು ವಿಧಗಳು ಇವೆ. ಕಿವುಡುತನಕ್ಕೆ ಬೇರೆ ಬೇರೆ ಅಂಶಗಳು ಕಾರಣ ಆಗಿರಬಹುದು. ಕಂಡಕ್ಟಿವ್‌ ಹಿಯರಿಂಗ್‌ ಲಾಸ್‌ ಎನ್ನುವುದು ಹೊರಕಿವಿ ಮತ್ತು ಮಧ್ಯಕಿವಿಯನ್ನು ಬಾಧಿಸುವ ಒಂದು ವಿಧದ ಕಿವುಡುತನ. ಕಿವಿಯ ಸೋಂಕು, ಕಿವಿಯ ಮೇಣ ಮತ್ತು ಇನ್ನಿತರ ಜನ್ಮಜಾತ ತೊಂದರೆಗಳು ಈ ಕಿವುಡುತನಕ್ಕೆ ಕಾರಣ ಆಗಿದ್ದು, ಔಷಧಿ ಮತ್ತು ಶಸ್ತ್ರಚಿಕಿತ್ಸಾ  ವಿಧಾನಗಳಿಂದ ಇದಕ್ಕೆ ಚಿಕಿತ್ಸೆ ನೀಡಬಹುದು ಮತ್ತು ಕಿವುಡುತನವನ್ನು ಸರಿಪಡಿಸಿಕೊಳ್ಳಬಹುದು. ಇನ್ನೊಂದು ರೀತಿಯ ಕಿವುಡುತನ ಅಂದರೆ ಸೆನ್ಸರಿನ್ಯೂರಲ್‌ ಕಿವುಡುತನ ಅಥವಾ ನರಸಂವೇದನಾ ಕಿವುಡುತನ. ಒಳಕಿವಿಯ ಮೇಲೆ ಇದರ ಪರಿಣಾಮ ಹೆಚ್ಚು. ಈ ಕಿವುಡುತನ ಕಾಣಿಸಿಕೊಳ್ಳಲು ಇರುವ ಪ್ರಮುಖ ಕಾರಣ ಅಂದರೆ ವಯಸ್ಸಾಗುವುದು, ನರದ ತೊಂದರೆ, ಕೆಲವು ಔಷಧಿಗಳ ಅಡ್ಡ ಪರಿಣಾಮಗಳು, ದೊಡ್ಡ ಶಬ್ದಕ್ಕೆ ಕಿವಿಗಳನ್ನು ಒಡ್ಡಿಕೊಳ್ಳುವುದರಿಂದ ಆಗುವ ಹಾನಿಗಳು ಮತ್ತು ಹುಟ್ಟುವಾಗಲೇ ಒಳಕಿವಿಯ ಕೆಲವು ಭಾಗಗಳಿಗೆ ಹಾನಿ ಆಗಿರುವುದು. 
ಸಾಮಾನ್ಯವಾಗಿ ಈ ವಿಧದ ಕಿವುಡುತನವನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ ಮತ್ತು ಇಂತಹ ರೀತಿಯ ಕಿವುಡುತನದ ರೋಗಲಕ್ಷಣಗಳಿಗೆ ಯಾವುದೇ ಚಿಕಿತ್ಸಾ ಕ್ರಮಗಳು ಇನ್ನಷ್ಟೆ ಲಭ್ಯ ಆಗಬೇಕಿದೆ. ಕೊನೆಯ ವಿಧದ ಕಿವುಡುತನಕ್ಕೆ  
ಮಿಕ್ಸ್‌$x ಹಿಯರಿಂಗ್‌ ಲಾಸ್‌ ಅಥವಾ ಮಿಶ್ರ ರೀತಿಯ ಕಿವುಡುತನ ಎಂದು ಹೆಸರು. ಬಾಹ್ಯ/ಮಧ್ಯ ಕಿವಿ ಮತ್ತು ಒಳಕಿವಿಯ ಕೆಲವು ನ್ಯೂನತೆಗಳ ಕಾರಣದಿಂದಾಗಿ ಈ ರೀತಿಯ ಕಿವುಡುತನ ಕಾಣಿಸಿಕೊಳ್ಳುತ್ತದೆ. ಈ ವಿಧದ ಕಿವುಡುತನವು ಸಣ್ಣ ಮಟ್ಟದಿಂದ ಬಹಳ ತೀವ್ರ ರೂಪದಲ್ಲಿ (ಸಂಪೂರ್ಣ ಕಿವುಡುತನ) ಇರಬಹುದು. ಹೆಚ್ಚಿನ ಪ್ರಕರಣಗಳಲ್ಲಿ ವ್ಯಕ್ತಿಯ ಕೇಳುವಿಕೆಯನ್ನು ಮತ್ತು ಜೀವನ ಗುಣಮಟ್ಟವನ್ನು ಉತ್ತಮಪಡಿಸಲು ಶ್ರವಣ ಸಾಧನಗಳನ್ನು ಆರಿಸಿಕೊಳ್ಳುವುದು ಆಯ್ಕೆಯ ಒಂದು ವಿಧಾನವಾಗಿರುತ್ತವೆ. ಸಾಧಾರಣದಿಂದ ತೀವ್ರ ಸ್ವರೂಪದ ಕಿವುಡುತನ ಇರುವವರಿಗೆ ಶ್ರವಣ ಸಾಧನಗಳಿಂದ ಪ್ರಯೋಜನ ಆಗಬಹುದು, ಆದರೆ ಸಂಪೂರ್ಣ ಕಿವುಡುತನ ಇರುವವರಿಗೆ ಶ್ರವಣ ಸಾಧನಗಳಿಂದ ಹೆಚ್ಚು ಪ್ರಯೋಜನ ಆಗದು. ಈ ರೀತಿಯಲ್ಲಿ  ವಿಶೇಷ ಶ್ರವಣ ನಷ್ಟ ಆಗಿರುವ ವ್ಯಕ್ತಿಗಳಿಗೆ ಕಾಕ್ಲಿಯರ್‌  ಇಂಪ್ಲಾಂಟ್‌ ಅನ್ನು ಸೂಚಿಸುತ್ತಾರೆ. 
ಕಾಕ್ಲಿಯರ್‌ ಇಂಪ್ಲಾಂಟ್‌ಗಳು, ನಷ್ಟವಾಗಿರುವ ಅಥವಾ ಹಾನಿಗೊಳಗಾಗಿರುವ ಹೇರ್‌ ಸೆಲ್‌ಗ‌ಳಿಗೆ ಬದಲಿಯಾಗಿ/ಪರ್ಯಾಯವಾಗಿ ಕೆಲಸ ಮಾಡುತ್ತವೆ, ಅಂದರೆ ಹೇರ್‌ ಸೆಲ್‌ಗ‌ಳು ಸ್ವೀಕರಿಸುವ ಶಬ್ದದ ಫ್ರೀಕ್ವೆನ್ಸಿ ಮತ್ತು ಆಂಪ್ಲಿಟ್ಯೂಡ್‌ ಅನ್ನು ಅನುಕರಿಸಿ, ಇಂಪ್ಲಾಂಟ್‌ ಶಬ್ದವನ್ನು ಪುನಾರಚನೆ ಮಾಡುತ್ತವೆ. 
ಇಂಪ್ಲಾಂಟ್‌ಗಳ ಮೂಲಕ, ಮಾತು ಮತ್ತು ಸುತ್ತಮುತ್ತಲಿನ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಮಟ್ಟಕ್ಕೆ ಶ್ರವಣ ಸಾಮರ್ಥ್ಯವನ್ನು ಸುಧಾರಿಸಬಹುದು; ಆದರೆ ಶಬ್ದದ ಗುಣಮಟ್ಟವು ಸ್ವಾಭಾವಿಕ ಕೇಳಿಸುವಿಕೆಗಿಂತ ಭಿನ್ನವಾಗಿರಬಹುದು ಮತ್ತು ಒಳಬರುವ ಶಬ್ದದ ಮೇಲಿನ ನರವ್ಯೂಹದ ಕಾರ್ಯಾಚರಣೆ ಭಿನ್ನವಾಗಿರುತ್ತದೆ. ಶಸ್ತ್ರಚಿಕಿತ್ಸೆಯ ಮೂಲಕ ಇಂಪ್ಲಾಂಟ್‌ ಅನ್ನು ಕಿವಿಯ ಹಿಂಭಾಗದ ಚರ್ಮದ ಅಡಿಯಲ್ಲಿ ಅಳವಡಿಸುತ್ತಾರೆ. ಈ ಸಾಧನವು ಒಳಗೊಂಡಿರುವ ಭಾಗಗಳು ಅಂದರೆ: ಬಾಹ್ಯ ಮೈಕ್ರೋಫೋನ್‌, ಸ್ಪೀಚ್‌ ಪ್ರಾಸೆಸರ್‌, ಆಂತರಿಕ ಗ್ರಾಹಕ ಮತ್ತು ಎಲೆಕ್ಟ್ರೋಡ್‌. 
 
ಈ ಶಸ್ತ್ರಚಿಕಿತ್ಸೆ ಮತ್ತು ಸಾಧನದಿಂದ ಯಾವ ಮಟ್ಟದಲ್ಲಿ ಪ್ರಯೋಜನ ಆಗಬಹುದು ಎಂಬುದನ್ನು ಬೇರೆ ಬೇರೆ ಅಂಶಗಳು ನಿರ್ಧರಿಸುತ್ತವೆ. ಕಾಕ್ಲಿಯರ್‌ ಅಳವಡಿಸುವ ಕೇಂದ್ರಗಳು ವ್ಯಕ್ತಿಗತ ಆಧಾರದಲ್ಲಿ ಮತ್ತು ವ್ಯಕ್ತಿಯ ಕೇಳುವಿಕೆಯ ಹಿನ್ನೆಲೆ, ಶ್ರವಣದೋಷಕ್ಕೆ ಕಾರಣವಾಗಿರುವ ಅಂಶಗಳು, ಕೇಳುವಿಕೆಯ ಸಾಮರ್ಥ್ಯ, ಮಾತನ್ನು ಗುರುತಿಸುವ ಸಾಮರ್ಥ್ಯ, ಆರೋಗ್ಯ ಮಟ್ಟ ಮತ್ತು  ವ್ಯಕ್ತಿಯ ಶ್ರವಣ ಪುನಃಶ್ಚೇತನ/ಪುನಃಶ್ಚೇತನದಲ್ಲಿ ಕುಟುಂಬದ ಬದ್ಧತೆ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಮಗುವು ಈ ಚಿಕಿತ್ಸೆಯನ್ನು ಪಡೆದ ನಂತರ ಅದರ ಪೂರ್ತಿ ಪ್ರಮಾಣದ  ಪ್ರಯೋಜನ ಪಡೆಯಲು  ಮಾತಿನ ತರಬೇತಿಯನ್ನೂ ಪಡೆಯಬೇಕಾಗುತ್ತದೆ. 
ಕಾಕ್ಲಿಯರ್‌ ಇಂಪ್ಲಾಂಟ್‌  
ಅಂದರೆ ಏನದು? 

ಕಾಕ್ಲಿಯರ್‌ ಇಂಪ್ಲಾಂಟ್‌ ಎನ್ನುವುದು ಒಂದು ಎಲೆಕ್ಟ್ರಾನಿಕ್‌ ಸಾಧನ, ಉಪಯುಕ್ತ ಶಬ್ದಗಳನ್ನು ಗ್ರಹಿಸಲು ಇದನ್ನು ಶಸ್ತ್ರಚಿಕಿತ್ಸೆಯ ಮೂಲಕ ಒಳಕಿವಿಯ ಒಳಭಾಗದಲ್ಲಿ ಇರಿಸುತ್ತಾರೆ. ಈ ಶ್ರವಣ ಸಾಧನವು ಕೇಳುವಿಕೆಯ ಶಕ್ತಿಯನ್ನು ಮತ್ತು ಇಂಪ್ಲಾಂಟ್‌ ಬಳಸುವವರ ಸಂವಹನಾ ಸಾಮರ್ಥ್ಯವನ್ನು ಉತ್ತಮಪಡಿಸುತ್ತದೆ. ತೀವ್ರದಿಂದ ಗಂಭೀರ ರೂಪದ ಶ್ರವಣದೋಷ ಇರುವ ರೋಗಿಗಳಿಗೆ ಇದು ಬಹಳ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಚಿಕಿತ್ಸೆ. ತಮ್ಮ ಕಾಕ್ಲಿಯಾ (ಒಳಗಿವಿಯ ಸುರುಳಿ)ದಲ್ಲಿನ ಸಂವೇದನಾ ಕೋಶಗಳು ಹಾನಿಗೀಡಾಗಿರುವ ಕಾರಣದಿಂದ ಕಿವುಡರಾಗಿರುವ ರೋಗಿಗಳಿಗೆ ಕಾಕ್ಲಿಯರ್‌ ಅಳವಡಿಕೆಯಿಂದ ಶ್ರವಣಶಕ್ತಿಯನ್ನು ಮರಳಿ ಪಡೆಯಲು ಸಹಾಯ ಆಗಬಹುದು. ನಮ್ಮ ಶರೀರದಲ್ಲಿನ ಹೆಚ್ಚಿನ ಜೀವಕೋಶಗಳು ಒಮ್ಮೆ ಹಾನಿಗೊಳಗಾದರೆ ಮತ್ತೆ ಚೇತರಿಸಿಕೊಳ್ಳುತ್ತವೆ, ಆದರೆ ಸಂವೇದನಾ ಕೋಶಗಳು ಒಮ್ಮೆ ಹಾನಿಗೊಳಗಾದರೆ ಅವು ಮತ್ತೆ ಪುನಃಶ್ಚೇತನಗೊಳ್ಳುವುದಿಲ್ಲ.   
ಉಚಿತ ಇಂಪ್ಲಾಂಟ್‌ ಸಾಧನಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಒಂದು ಪ್ರಾಯೋಗಿಕ ಯೋಜನೆಯಲ್ಲಿ 133 ಜನ ರೋಗಿಗಳಿಗೆ ಉಚಿತ ಶ್ರವಣ ಸಾಧನವನ್ನು ಒದಗಿಸುವ ಮೂಲಕ ಕರ್ನಾಟಕ ರಾಜ್ಯದ ಜನತೆಯನ್ನು ಶ್ರವಣ ದೋಷದಿಂದ ಮುಕ್ತಗೊಳಿಸುವ ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರ ಮಹತ್ವಾಕಾಂಕ್ಷೆಯ ಯೋಜನೆ ಅಕ್ಟೋಬರ್‌ 28, ಬುಧವಾರದಂದು ವಾಸ್ತವಿಕ ರೂಪವನ್ನು ಪಡೆಯಿತು. ಕರ್ನಾಟಕದಲ್ಲಿ  ವಿವಿಧ ಯೋಜನೆಗಳು ಕಾರ್ಯರೂಪದಲ್ಲಿದ್ದು, ಜಿಲ್ಲೆಯ ಸುಮಾರು 11 ಮಕ್ಕಳು ಈಗಾಗಲೆ ಉಚಿತ ಕಾಕ್ಲಿಯರ್‌ ಇಂಪ್ಲಾಂಟ್‌ ಅನ್ನು ಪಡೆದಿರುತ್ತಾರೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಪೂರ್ತಿ ಶ್ರವಣ ದೋಷ ಇರುವ ಮಕ್ಕಳನ್ನು ಗುರುತಿಸಲಾಗುತ್ತಿದ್ದು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ  ADIP ಯೋಜನೆಯ ಅಡಿಯಲ್ಲಿ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತದೆ. 
- ಅರ್ಚನಾ ಜಿ.,
ಅಸಿಸ್ಟೆಂಟ್‌ ಪ್ರೊಫೆಸರ್‌,
ಸ್ಪೀಚ್‌ ಎಂಡ್‌ ಹಿಯರಿಂಗ್‌ ವಿಭಾಗ,
ಮಣಿಪಾಲ ವಿಶ್ವದ್ಯಾನಿಲಯ
ಮಣಿಪಾಲ.

ಮಗುವಿನ ಜೊತೆಗೆ ಮಾತುಕತೆಯಾಡುವುದು ಎಷ್ಟು ಅಗತ್ಯ?

""ಈ ದಿನ ಹೇಗೆ ಕಳೀತು ರಾಘವ''? 
""ಇವತ್ತು ಶಾಲಿನಿ ಟೀಚರ್‌ ನನ್ನ ಬಯ್ದು ಬಿಟ್ರಾ''. 
""ಹೌದಾ, ಯಾಕೆ ಏನಾಯ್ತು?'' 
""ನನ್ನನ್ನ ಜಾನ್‌ ದೂಡಿದ.'' 
 ""ಹೌದಾ........ ಯಾಕೆ?''
""ನಾನು ವರಾಂಡದಲ್ಲಿ ನಡ್ಕೊಂಡ್‌ ಹೋಗ್ತಾ ಇದ್ದೆ, ಅವ್ನು ಓಡ್ತಾ ಬಂದು ನನ್ನ ತಳ್ಳಿದ''
 ""ಅಯ್ಯೋ ದೇವೆÅ! ಅದು ಒಳ್ಳೇದಲ್ಲ, ಹಾಗ್‌ ಮಾಡಾºರ್ದು!, ಸರಿ ಆಮೇಲೇನಾಯ್ತು?''
""ಶಾಲಿನಿ ಟೀಚರ್‌ ನಮ್ಮನ್ನ ನೋಡಿದ್ರು ಮತ್ತು ನಮ್ಗೆ ಬಯ್ದು ಬಿಟ್ರಾ, ನಾವು ಒಬ್ಬರಿಗೊಬ್ಬರು ಸಾರಿ ಕೇಳ್ಬೇಕು ಅಂತ ಹೇಳಿದ್ರು ಮತ್ತು ಇನ್ಮುಂದೆ  ಗೆಳೆಯರಾಗಿ ಇಬೇìಕು ಅಂತ ಹೇಳಿದ್ರು.''
""ಸರಿ, ಒಳ್ಳೆ ಹುಡುಗ ನೀನು, ಒಳ್ಳೇ ಹುಡುಗ್ರು ಇನ್ನೊಬ್ರ ಜೊತೆ ಯಾವತ್ತೂ ಕೆಟ್ಟದಾಗಿ ನಡ್ಕೊಳಲ್ಲ. ನೀನು ಎಲ್ಲರ ಜೊತೆಗೂ ಒಳ್ಳೇ ರೀತೀಲಿ ಇಬೇìಕು ಆಯ್ತಾ'' 
ಇದು ರಾಘವ ಮತ್ತು ಅವನ ಅಮ್ಮನ ನಡುವೆ ನಡೆದ ಸಂಭಾಷಣೆ. ಪಾರಿಭಾಷಿಕ ಉದ್ದೇಶಕ್ಕಾಗಿ ನಾನು ಇದನ್ನು ""ವೈಯಕ್ತಿಕ ವಿವರಣೆ'' ಎಂಬುದಾಗಿ ಕರೆಯುತ್ತೇನೆ. ನಾವೆಲ್ಲರೂ ನಮ್ಮ ಮಕ್ಕಳ ಜೊತೆ ಮಾತುಕತೆ ನಡೆಸುತ್ತೇವೆ. ಆದರೆ ಈ ರೀತಿಯ ಮಾತುಕತೆಗಳಿಂದ ಮಗುವಿನ ಶೈಕ್ಷಣಿಕ ಕೌಶಲಕ್ಕೆ ಅಥವಾ ಬೆಳವಣಿಗೆಗೆ ಪ್ರಯೋಜನವಾಗುತ್ತದೆ ಎಂದು ನೀವು ಭಾವಿಸುತ್ತೀರಾ? ಅಥವಾ ಹಾಗೆ ಭಾವಿಸುವುದು ಕೇವಲ ಭ್ರಮೆ ಅಥವಾ ತಪ್ಪು ಕಲ್ಪನೆ ಎಂಬುದು ನಿಮ್ಮ ಭಾವನೆಯೇ? ಇಂತಹ ಪ್ರಶ್ನೆಗಳು ನಿಮ್ಮದಾಗಿದ್ದಲ್ಲಿ  ಈ ಲೇಖನದಲ್ಲಿವೆ ಕೆಲವು ಉತ್ತರಗಳು.
ಖಂಡಿತವಾಗಿಯೂ ಅದೊಂದು ತಪ್ಪು ಕಲ್ಪನೆ ಅಲ್ಲ  ಮತ್ತು ಒಂದು ಘಟನೆ ಅಥವಾ ವಿಷಯವನ್ನು  ವಿವರಿಸುವುದು ಅಂದರೆ ಖಂಡಿತವಾಗಿಯೂ ಅದೊಂದು ಬಹುಮುಖ್ಯ ಕೌಶಲ. ವಿವರಿಸುವ ಕೌಶಲದ ಬಗ್ಗೆ ಸಂಶೋಧಕರು ಸಂಶೋಧನೆಯಲ್ಲಿ  ತೊಡಗಿದ್ದು, ಮಕ್ಕಳ ಜೊತೆಗೆ ನಾವು ದಿನನಿತ್ಯ ನಡೆಸುವ ಸಂವಹನದಲ್ಲಿನ ವಿವರಣಾ ಕೌಶಲ ಮತ್ತು ಅದರ ಬೆಳವಣಿಗೆಯ ವಿವಿಧ ಹಂತಗಳನ್ನು ಕೆಲವು ಕುತೂಹಲಕಾರಿ ಉದಾಹರಣೆಗಳ ಸಹಿತ ವಿವರಿಸುತ್ತಾರೆ.  
ನಾವೀಗ ಈ ಹೇಳಿಕೆಯ ಜೊತೆಗೆ ಆರಂಭಿಸೋಣ!
ಒಂದು ವಿವರಣೆ ಅನ್ನುವುದು ಒಬ್ಬ ಮಗುವಿನಿಂದ ಬಂದುದಾಗಿದ್ದರೆ ಅದು ಅಸಲಿಯಾಗಿರುತ್ತದೆ - ಯಾಕೆಂದರೆ ಅದು ಆ ವಿಷಯಕ್ಕೆ ಆ ಮಗುವಿನ ಮನಸ್ಸು  ಸ್ಪಂದಿಸಿದ ರೀತಿ ಆಗಿರುತ್ತದೆ 
- ಚಾರ್ಲೊಟ್‌ ಮೇಸನ್‌.
1. ಕಾಲ್ಪನಿಕ ಕತೆಗಳನ್ನು ಹೇಳುವುದು ಮತ್ತು ಅವುಗಳನ್ನು ಮರು-ನಿರೂಪಿಸುವುದು.
2.  ಘಟನೆಗಳನ್ನು ಕ್ರಮಬದ್ಧವಾಗಿ ವಿವರಿಸುವುದು 
3.  ವೈಯಕ್ತಿಕ ನೆನಪಿನ ಮೇರೆಗೆ ವಾಸ್ತವಿಕ ಘಟನೆಯನ್ನು ವಿವರಿಸುವುದು 
ಇವು ವಿವಿಧ ರೀತಿಯ ವಿವರಣಾ ಕೌಶಲಗಳು.  ಮಕ್ಕಳಲ್ಲಿ  ಸಾಮಾನ್ಯ ವಿವರಣಾ ಕೌಶಲ ಆರಂಭವಾಗುವುದಕ್ಕೆ ಬಹಳ ಮೊದಲೆ ವೈಯಕ್ತಿಕ ವಿವರಣಾ ಕೌಶಲ ಬೆಳೆದಿರುತ್ತದೆ. ಒಂದು ಮಗುವಿನಲ್ಲಿರುವ ವಿವರಣಾ ಕೌಶಲ ಅಥವಾ ವಿವರಿಸುವ ಕಲೆಯು ಅದರ ಶಿಕ್ಷಣ, ಉತ್ತಮ ಸಾಮಾಜಿಕ ಸಂವಹನ ಮತ್ತು ತಾತ್ತಿ$Ìಕ ಕಾರಣಗಳ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.
ಕಾಲ್ಪನಿಕ ಕಥೆ ಹೇಳುವುದು ಮತ್ತು ಅದನ್ನು ಮರು-ನಿರೂಪಣೆ ಮಾಡುವುದು ಇಲ್ಲಿ ಮಗುವು ತಾನು ಕೇಳಿದ ಸಂಗತಿಗಳನ್ನು ಕಲ್ಪಿಸಿಕೊಳ್ಳುತ್ತದೆ ಅನ್ನುವುದು ಬಹಳ ಕುತೂಹಲಕಾರಿಯಾದ ಅಂಶ. ಒಂದು ಸಂಗತಿಯನ್ನು ಮಗುವು ಕಥೆಯಲ್ಲಿ ಕೇಳಿರಬಹುದು ಅಥವಾ ಕಾಟೂìನ್‌, ಸಿನೆಮಾಗಳಲ್ಲಿ ನೋಡಿರಬಹುದು. ಕೆಲವು ಬಾರಿ ಮಕ್ಕಳು ಆ ಸಂಗತಿಗಳನ್ನು ತಮ್ಮದೇ ಅನುಭವ ಎನ್ನುವಂತೆ ಹೇಳುತ್ತಾರೆ. ಜಾನ್‌ನ ಒಂದು ಕಾಲ್ಪನಿಕ ಕಥೆ ಇಲ್ಲಿದೆ.
ಒಮ್ಮೆ ನಮ್ಮ ತೋಟಕ್ಕೆ ಒಂದು ನಾಗರಹಾವು ಬಂದಿತ್ತು. ಅದು ತುಂಬಾ ದೊಡ್ಡದಿತ್ತು ಮತ್ತು ಭಾರಿ ಉದ್ದ ಇತ್ತು. ನನ್ನ ಅಪ್ಪ ಆಫೀಸ್‌ಗೆ ಹೋಗಿದ್ರು, ನನ್ನ ಅಮ್ಮ ಮತ್ತು ಅಜ್ಜಿಗೆ ಆ ಹಾವನ್ನು ನೋಡಿ ತುಂಬಾ ಭಯ ಆಯ್ತು, ಅವ್ರು ಹೆದರಿಕೊಂಡು ಮನೆಯೊಳಗೆ ಓಡಿಬಿಟ್ರಾ. ನಾನು ಕೂಡ್ಲೆ ನಮ್ಮ ಅಡೆY ಕೋಣೆಗೆ ಹೋದೆ ಮತ್ತು ಚೋಟಾ ಭೀಮ್‌ನ ಹಾಗೆ ಒಂದು ಲಡ್ಡುವನ್ನು ತಿಂದೆ. ನಂಗೆ ಶಕ್ತಿ ಬಂತು. ನಾನು ಆ ಹಾವನ್ನು ಎತ್ತಿ ಆ ಕಡೆ ಬಿಸಾಡಿ ಬಿಟ್ಟೆ, ನಮ್ಮ ಮನೆಯವೆÅಲ್ಲಾ ನಂಗೆ ಒಳ್ಳೆ ಹುಡುಗ ಅತಂದ್ರು ಕ್ರಮಬದ್ಧವಾಗಿ ಘಟನೆಯನ್ನು ವಿವರಿಸುವುದು ಅಂದರೆ ಮುಂದೆ ಜರಗಲಿರುವ ಸಂಗತಿಗಳನ್ನು ಅವುಗಳು ಜರಗುವ ಸರಣಿಯಲ್ಲಿಯೇ ಅಥವಾ ಅವು ಜರುಗಬೇಕಾಗಿರುವ ಯೋಜಿತ ರೀತಿಯಲ್ಲಿಯೇ ಆ ಘಟನೆಗಳನ್ನು ವಿವರಿಸುವುದು.
ಈ ಬೇಸಗೆ ರಜೆಯಲ್ಲಿ ನನ್ನ ಅಪ್ಪ, ನಮ್ಮ ಮನೆಯವರನ್ನೆಲ್ಲಾ  ಟ್ರಿಪ್‌ ಕರ್ಕೊಂಡು ಹೋಗ್ಲಿಕ್ಕೆ ಯೋಜಿಸಿದ್ದಾರೆ. ಮೊದಲು ಊಟಿಗೆ, ನಂತರ ಕೊಡೈಕ್ಕೆನಾಲ್‌ಗೆ ಮತ್ತು ಕೊನೆಯಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್‌ಗೆ. ನನ್ನ ಅಪ್ಪ ನನಗಾಗಿ ತುಂಬಾ ಆಟಿಕೆ, ಕಾರ್‌ ಮತ್ತು ಐಸ್‌ ಕ್ರೀಂ ಅನ್ನು ತೆಗೆದುಕೊಡ್ತೇನೆ ಅಂತ ಹೇಳಿದ್ದಾರೆ. ರಜಾ ದಿನ ಬರೋವರೆಗೆ ಕಾಯೋದಿಕ್ಕೆ ನನೆY ಸಾಧ್ಯವೇ ಇಲ್ಲ.
ವೈಯಕ್ತಿಕ ನೆನಪಿನ ಮೇರೆಗೆ ವಾಸ್ತವಿಕ ಸಂಗತಿಯನ್ನು ವಿವರಿಸುವುದರೊಂದಿಗೆ ಈ ಲೇಖನ ಆರಂಭವಾಗಿತ್ತು. ಅಲ್ಲಿ ಆ ಮಗುವು ತನ್ನ ನಿತ್ಯ ಜೀವನದಲ್ಲಿ ಘಟಿಸಿದ ಅಥವಾ ತನಗೆ ಎದುರಾದ ಸನ್ನಿವೇಶವನ್ನು  ವಿವರಿಸುತ್ತಿದ್ದ.
ಕಥನ ನಿರೂಪಣೆ : ಅಂದರೆ ಹೆಚ್ಚಿನ ಸಂದರ್ಭಗಳಲ್ಲಿ ಪ್ರಚೋದನೆ ಸಿಕ್ಕಾಗ ತನಗಾದ ಒಂದು ವೈಯಕ್ತಿಕ ಅನುಭವವನ್ನು ಭೂತಕಾಲ ಪ್ರಯೋಗದಲ್ಲಿ  ವಿವರಿಸುವುದು. (ಹೆಡºರ್ಗ್‌ ಹಾಗೂ ವೆಸ್ಟ್‌ಬೈ 1993).
ಅಮ್ಮ : ""ರಾಮ್‌, ನಿಂಗೆ ನೆನಪಿದೆಯಾ, ಕಳೆದ ಶುಕ್ರವಾರ ನಾವು ಸರ್ಕಸ್‌ ನೋಡ್ಲಿಕ್ಕೆ ಹೋಗಿದ್ದಾಗ ಏನಾಗಿತ್ತು ಅಂತ?
ರಾಮ್‌: ಹೌದಮ್ಮಾ, ಅಲ್ಲಿ ಆನೆಗಳು, ಕುದುರೆ, ನಾಯಿಗಳು ಇದುÌ. ಅವುಗಳು ಹಾರೋದು ಮತ್ತು ಆಟವಾಡೋದು ನೋಡೋದಿಕ್ಕೆ ಬಹಳ ಮಜವಾಗಿತ್ತು. ಆನೆಗಳು ಬೈಸಿಕಲ್‌ ಓಡಿಸ್ತಾ ಇದ್ವಲ್ಲ ನಂಗೆ ಅದು ಬಹಳ ಇಷ್ಟ ಆಯ್ತು. ಅಮ್ಮ ನನೆY ಆಟ ಆಡೋದಿಕ್ಕೆ ಒಂದು ಆನೇನ ನಾವು ಯಾವತ್ತು ತರೋದು?
ಕಾರಣ ವಿವರಣೆ: ಒಂದು ವೈಯಕ್ತಿಕ ಅನುಭವವನ್ನು ಯಾವ ಪ್ರಚೋದನೆಯೂ ಇಲ್ಲದೆ ವಿವರಿಸುತ್ತಾ ಸಾಗುವುದು. ಆ ಅನುಭವವು ಸಾಮಾನ್ಯವಾಗಿ ಕೇಳುಗನು ಹಂಚಿಕೊಂಡದ್ದಾಗಿರುವುದಿಲ್ಲ. (ಹೆಡºರ್ಗ್‌ ಹಾಗೂ ವೆಸ್ಟ್‌ಬೈ 1993)
ಈ ದಿನ ಹೇಗೆ ಕಳೀತು ರಾಘವ? ಇವತ್ತು ಶಾಲಿನಿ ಟೀಚರ್‌ ನನ್ನ ಬಯ್ದು ಬಿಟ್ರಾ. ಹೌದಾ, ಯಾಕೆ ಏನಾಯ್ತು? ನನ್ನನ್ನ ಜಾನ್‌ ದೂಡಿದ.  ಹೌದಾ........ ಯಾಕೆ?ನಾನು ವರಾಂಡದಲ್ಲಿ ನಡ್ಕೊಂಡ್‌ ಹೋಗ್ತಾ ಇದ್ದೆ, ಅವ್ನು ಓಡ್ತಾ ಬಂದು ನನ್ನ ತಳ್ಳಿದ ಅಯ್ಯೋ ದೇವೆÅ! ಅದು ಒಳ್ಳೇದಲ್ಲ, ಹಾಗ್‌ ಮಾಡಾºರ್ದು!, ಸರಿ ಆಮೇಲೇನಾಯ್ತು? ಶಾಲಿನಿ ಟೀಚರ್‌ ನಮ್ಮನ್ನ ನೋಡಿದ್ರು ಮತ್ತು ನಮ್ಗೆ ಬಯ್ದು ಬಿಟ್ರಾ, ನಾವು ಒಬ್ಬರಿಗೊಬ್ಬರು ಸಾರಿ ಕೇಳ್ಬೇಕು ಅಂತ ಹೇಳಿದ್ರು ಮತ್ತು ಇನ್ಮುಂದೆ  ಗೆಳೆಯರಾಗಿ ಇಬೇìಕು ಅಂತ ಹೇಳಿದ್ರು. ಸರಿ, ಒಳ್ಳೆ ಹುಡುಗ ನೀನು, ಒಳ್ಳೇ ಹುಡುಗ್ರು ಇನ್ನೊಬ್ರ ಜೊತೆ ಯಾವತ್ತೂ ಕೆಟ್ಟದಾಗಿ ನಡ್ಕೊಳಲ್ಲ. ನೀನು ಎಲ್ಲರ ಜೊತೆಗೂ ಒಳ್ಳೇ ರೀತೀಲಿ ಇಬೇìಕು ಆಯ್ತಾ.
ವಿಲ್ಲಿಯ ಲ್ಯಾಬೋವ್‌ ಅನ್ನುವವರು ವೈಯಕ್ತಿಕ ವಿವರಣೆಯ ಪ್ರಪ್ರಥಮ ಮತ್ತು ಬಹುದೊಡ್ಡ ಸಂಶೋಧಕರು. ನಾಲ್ಕು ಅಂಶಗಳನ್ನು ಆಧರಿಸಿ ಅವರು ವಿವರಣಾ ಕೌಶಲದ ಬೆಳವಣಿಗೆಯ ಸರಣಿಯನ್ನು ಅಭಿವೃದ್ಧಿಪಡಿಸಿದರು. 
1.  ವಸ್ತುಸ್ಥಿತಿ  (ವಸ್ತು ವಿಷಯದ ಬಗೆಗಿನ ವಿವರಣಾತ್ಮಕ ಮಾಹಿತಿ) 
2. ಕ್ರಿಯೆ (ಭಿನ್ನವಾದ, ಸರಣಿ ಕ್ರಮದ ಭೂತಕಾಲದ ಘಟನೆಗಳು) 
3. ವಿಶ್ಲೇಷಣೆ :ನಡೆದ ಘಟನೆಯ ಬಗ್ಗೆ ಹೇಗೆ, ಎಲ್ಲಿ, ಯಾಕೆ, ಏನು ಮತ್ತು ಯಾರು ಎಂಬ ಬಗ್ಗೆ ವಿವರಿಸುವಾತನ ಅನಿಸಿಕೆ 
4. ನಿರ್ಣಯ ಮತ್ತು ಪರಿಸಮಾಪ್ತಿ 
ಮಕ್ಕಳಲ್ಲಿ ಕಾಲ್ಪನಿಕ ವಿವರಣೆಯ ಅಂಶ ಬೆಳೆಯುವ ಮೊದಲೆ ಅವರ ವೈಯಕ್ತಿಕ ವಿವರಣೆಯ ಬೆಳವಣಿಗೆಯು ರಚನಾತ್ಮಕ ಜಟಿಲತೆಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂಬುದನ್ನು  ವಿಲಿಯಂ ಲ್ಯಾಬೋವ್‌ ರುಜುವಾತು ಪಡಿಸಿದರು.  ಹಾಗಾಗಿ, ನಾವು ಮಕ್ಕಳಲ್ಲಿನ ವೈಯಕ್ತಿಕ ವಿವರಣಾ ಕೌಶಲಕ್ಕೆ ಉತ್ತೇಜನ ನೀಡಿದರೆ ಅದು ಮಕ್ಕಳ ಅಕ್ಷರಜಾnನ ಕೌಶಲವನ್ನು ಉತ್ತಮ ಪಡಿಸುತ್ತದೆ.
ಶಾಲಾ-ಪೂರ್ವ ಹಂತದಲ್ಲಿರುವ ಮಕ್ಕಳಲ್ಲಿ ಅಕ್ಷರ ಜಾnನ ಬೆಳೆಯಲು ವಿವರಣೆ ಸಹಿತ ಸಂವಾದವು ಬಲವಾದ ಉತ್ತೇಜನ ಆಗಬಲ್ಲದು.   ಸುಸಂಬದ್ಧ  ವಿವರಣಾ ಸಾಮರ್ಥ್ಯವು ಶೈಕ್ಷಣಿಕ ಅಭ್ಯಾಸವು ಯಾವ ಅಡೆ-ತಡೆಯೂ ಇಲ್ಲದಂತೆ ಸಾಗುತ್ತದೆ ಎಂಬುದರ ಮುನ್ಸೂಚನೆ ಆಗಿರುತ್ತದೆ. ಸಂಶೋಧಕರ ಒಂದು ತಂಡವು ಭಾಷಾ ನ್ಯೂನತೆ ಇದ್ದ ಮತ್ತು ಭಾಷೆಯನ್ನು ಕಲಿಯುತ್ತಿದ್ದ ನಾಲ್ಕರಿಂದ ಆರು ವರ್ಷ ನಡುವಿನ ವಯಸ್ಸಿನ 87 ಮಕ್ಕಳನ್ನು ಗಮನಿಸಿದರು. ಒಂದು ಸಣ್ಣ ಕಥೆಯನ್ನು ಮತ್ತೆ ನೆನಪು ಮಾಡಿಕೊಂಡು ಹೇಳುವ ಸಾಮರ್ಥ್ಯ ಇರುವ ಮಕ್ಕಳಲ್ಲಿ ಭಾಷೆಯ ಕಲಿಕೆಯ ಬೆಳವಣಿಗೆಯನ್ನೂ ಸಹ ಅತ್ಯುತ್ತಮವಾಗಿ ನಿರೀಕ್ಷಿಸಬಹುದು ಎಂಬ ಅಂಶವನ್ನು ಅವರು ಕಂಡುಕೊಂಡರು. ವೈಯಕ್ತಿಕ ವಿವರಣಾ ಕೌಶಲವು ಭಾಷಾ ಬೆಳವಣಿಗೆಗೆ ಪೂರಕ ಎಂಬುದನ್ನು ಅವರು ಕಂಡುಕೊಂಡರು. ಸಂವಾದ ಕೌಶಲದ ಕೊರತೆಗೂ ಓದುವಿಕೆಗೂ ಸಂಬಂಧ ಇದೆ ಎಂಬುದು ಅವರ ಅಭಿಪ್ರಾಯವಾಗಿತ್ತು.  ಹೆಚ್ಚಾಗಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ನಾವು ಇದನ್ನು ಕಾಣಬಹುದು.
ಭಾಷೆಗೆ ಸಂಬಂಧಿಸಿದ ಅರಿವಿನ ಸಮಸ್ಯೆ ಇದೆಯೇ ಎಂದು ವಿಶ್ಲೇಷಣೆ ಮಾಡುವ ಮೂಲಕ, ಇರುವ ಸಮಸ್ಯೆಗೆ ಪರಿಹಾರ ಕಂಡುಕೊಂಡು ಕಲಿಕೆಯ ಅಸಾಮರ್ಥ್ಯವನ್ನು ಆರಂಭದಲ್ಲೇ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ  ವಿವರಣಾ ಕೌಶಲವು ಸಹಾಯ ಮಾಡಬಹುದು. ಮಕ್ಕಳಲ್ಲಿನ ವಿವರಣಾ ಕೌಶಲ ಅನ್ನುವುದು ಮಕ್ಕಳಲ್ಲಿ ಉತ್ತಮ ಶೈಕ್ಷಣಿಕ ಮತ್ತು ಸಾಮಾಜಿಕ ಕೌಶಲವನ್ನು ನಿರೀಕ್ಷಿಸಬಹುದಾದ ಅದರಲ್ಲೂ  ವಿಶೇಷವಾಗಿ ಓದುವ ಮತ್ತು ಬರೆಯುವ ಕೌಶಲದ ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸಬಹುದಾದ ಪ್ರಮಾಣಿಕ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ.
ಎರಡನೆಯ ತರಗತಿಯಲ್ಲಿದ್ದು, ಓದುವಿಕೆಯ ತೊಂದರೆ ಇರುವ ಮಕ್ಕಳಲ್ಲಿ. ಅವರು ಎರಡರಿಂದ ಆರು ವರ್ಷಗಳ ವಯೋಮಾನದವರಾಗಿದ್ದಾಗ ಅವರಲ್ಲಿ ವಾಕ್ಯ ರಚನೆಯ ತೊಂದರೆ ಇತ್ತು ಎಂಬುದನ್ನು ಸ್ಕ್ಯಾರ್‌ ಬಾರೋ (1990) ಎಂಬ ಸಂಶೋಧಕರು ಕಂಡುಕೊಂಡರು. ಇಂತಹ ಮಕ್ಕಳು ಎರಡರಿಂದ ಆರು ವರ್ಷಗಳ ನಡುವೆ ಸರಾಗವಾಗಿ ಮಾತನಾಡಲು ಆಗದಿರುವ ತೊಂದರೆ, ವಾಕ್ಯ ರಚನೆಯ ತೊಂದರೆ ಉಚ್ಚಾರಣೆಯ ದೋಷ ಇತ್ಯಾದಿ ಸಮಸ್ಯೆಗಳನ್ನು ಅನುಭವಿಸಿರುತ್ತಾರೆ. ಓದುವ ತೊಂದರೆ ಇರುವ ಮಕ್ಕಳಿಗೆ ವಿವರಣೆ ಸಹಿತ ಸಂವಾದ ಕೌಶಲದ ಕೊರತೆಯೂ ಇರುತ್ತದೆ. ಅಂದರೆ ಬಹಳ ಪರಿಚಿತ ಇರುವ ಘಟನೆಯ ಹಂತಗಳನ್ನು ನೆನಪು ಮಾಡಿಕೊಳ್ಳಲು ಆಗದಿರುವುದು ಮತ್ತು ವಿವರಿಸಲು ವಾಕ್ಯ ಜೋಡಣೆ ಮಾಡಲು ಆಗದಿರುವುದು, ಮತ್ತು ಘಟನೆಯ ವಿವಿಧ ಹಂತಗಳನ್ನು ಜೋಡಿಸಲು ಸೂಕ್ತ ಜೋಡಣಾ ಶಬ್ದಗಳನ್ನು ಹೊಂದಿಸಲು ಆಗದಿರುವುದು, ನೆನಪು ಮಾಡಿಕೊಳ್ಳಲು ಹೇಳಿದಾಗ ಮಾಮೂಲಿ ಮತ್ತು ಬಹುಮುಖ್ಯ ಕೊಂಡಿಗಳನ್ನು ಬಿಟ್ಟು ಬಿಡುವುದು. ಒಂದು ಕತೆಯ ಬಹುಮುಖ್ಯ ಅಂಶಗಳಲ್ಲಿ ಕೆಲವೇ ಕೆಲವನ್ನು ಹೇಳುವುದು ಇವೆಲ್ಲವೂ ಓದುವಿಕೆಯ ತೊಂದರೆ ಇರುವ ಮಕ್ಕಳು ಎದುರಿಸುವ ಇನ್ನಿತರ ಸವಾಲುಗಳಾಗಿರುತ್ತವೆ. ಈ ಎಲ್ಲಾ ಅಂಶಗಳನ್ನು ಶಾಲೆಯಲ್ಲಿ ಅಧ್ಯಾಪಕರು ಪರೀಕ್ಷಿಸಿ ನೋಡಬಹುದು ಮತ್ತು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡರೆ ಅಂತಹ ಮಕ್ಕಳಿಗೆ ಬಹುದೊಡ್ಡ ಪ್ರಯೋಜನವಾದೀತು.
ಶಾಲಾಪೂರ್ವ ಹಂತದಲ್ಲಿರುವ ಮಕ್ಕಳಲ್ಲಿ ವಿಷಯವನ್ನು ಗ್ರಹಿಸುವ ಸಾಮರ್ಥ್ಯ ಮತ್ತು ಆರಂಭಿಕ ಅಕ್ಷರ ಜಾnನದ ಇತರ ಅಂಶಗಳಾದ ಶಬ್ದಗಳನ್ನು ಹೇಳುವ ಸಾಮರ್ಥ್ಯ, ಧ್ವನಿಯ ಬಗೆಗಿನ ಅರಿವು ಮತ್ತು ಬರಹದ ಆರಂಭಿಕ ಕೌಶಲಗಳಿಗೂ ಬಲವಾದ ಸಂಬಂಧ ಇದೆ ಎಂಬುದಾಗಿ ಸಂಶೋಧಕರು ಒತ್ತಿ ಹೇಳುತ್ತಾರೆ (ಡಿಕ್ಸನ್‌ ಮತ್ತು ಸ್ನೋ, 1987). ಭಾಷೆಯನ್ನು, ಓದುವಾಗ ಇರುವ ಕಷ್ಟದ ಮಟ್ಟವು ಅದನ್ನು ಅರ್ಥಮಾಡಿಕೊಳ್ಳುವಾಗ ಅಥವಾ ಗ್ರಹಿಸುವಾಗ ಇರುವುದಕ್ಕಿಂತ ಬಹಳ ಕಡಿಮೆ ಇರುತ್ತದೆ.
ಉದಾ: ಮಗುವು ತನಗೆ ಪರಿಚಿತ ಇರುವ ಚಿತ್ರ ಮತ್ತು ಕಥೆಗಳನ್ನು ಗ್ರಹಿಸಬಹುದು ಆದರೆ ಅದರಲ್ಲಿ ಕೆಲವನ್ನು ಮಾತ್ರ ಓದಬಹುದು. ಉದಾ: 6-7 ವರ್ಷದ ಹೆಚ್ಚಿನ ಮಕ್ಕಳು 4,000 ಅಥವಾ ಅದಕ್ಕಿಂತ ಹೆಚ್ಚಿನ ಶಬ್ದಗಳನ್ನು ಕೇಳಿ ಅರ್ಥಮಾಡಿಕೊಳ್ಳಬಹುದು ಆದರೆ ಅವರಿಗೆ ಓದಲು ಸಾಧ್ಯವಾಗುವುದು ಸುಮಾರು 600 ಶಬ್ದಗಳನ್ನು ಮಾತ್ರ. ಇದರ ಅರ್ಥ ವಿಷಯವನ್ನು ಓದಿ ಗ್ರಹಿಸುವುದಕ್ಕಿಂತಲೂ ಕೇಳಿ ಗ್ರಹಿಸುವ ಸಾಮರ್ಥ್ಯವು ಮುಂದಿರುತ್ತದೆ (0-14 ವರ್ಷಗಳು) ಆದರೆ ಆ ಬಳಿಕದ 15 ರಿಂದ 17 ವರ್ಷ ವಯೋಮಾನದಲ್ಲಿ ಕೇಳಿ ಗ್ರಹಿಸುವುದಕ್ಕಿಂತಲೂ ಓದಿ ಗ್ರಹಿಸುವ ಸಾಮರ್ಥ್ಯವು ಮುಂದಿರುತ್ತದೆ. ಹಾಗಾಗಿ ಮಕ್ಕಳನ್ನು ವಿವರಣಾ ಕೌಶಲಕ್ಕೆ ಹೆಚ್ಚು ಒತ್ತು ನೀಡಿದಂತೆಲ್ಲಾ ಅವರಲ್ಲಿನ ಓದುವಿಕೆಯ ಕೌಶಲವು ಇನ್ನಷ್ಟು ಉತ್ತಮಗೊಳ್ಳುತ್ತದೆ (ಜೀನೆ ಎಸ್‌ 1983).
ಅಕ್ಷರ ಜಾnನದ ಸಾಧನೆಯನ್ನು ಮುಂಗಾಣುವಲ್ಲಿ ಮೌಖೀಕ ವಿವರಣೆಯ ಪಾತ್ರ- ಪ್ರಾಮುಖ್ಯತೆ ಏನು ಎಂಬುದನ್ನು ಇದು ಎತ್ತಿ ತೋರಿಸುತ್ತದೆ.
ನಾವು ಏನು ಮಾಡಬೇಕು?
ಹಂತ 1: ನಿಮ್ಮ ಮಗುವಿನ ಮಾತು ಮತ್ತು ಭಾಷಾ ಕೌಶಲವನ್ನು ಗುರುತಿಸುವುದು
ನಿಮ್ಮ ಮಗುವು ಓರಗೆಯ ಇತರ ಮಕ್ಕಳ ಹಾಗೆಯೆ ಮಾತನಾಡುತ್ತದೆಯೇ? ಅದಕ್ಕೆ ಇಲ್ಲ ಅಥವಾ ಅಷ್ಟೊಂದು ಅಲ್ಲ ಎಂಬುದು ನಿಮ್ಮ ಉತ್ತರ ಆಗಿದ್ದರೆ, ಯಾಕಿಲ್ಲ ಎಂದು ನೀವು ಯೋಚಿಸಬೇಕು. ಅದು ಮಗುವಿನಲ್ಲಿರುವ ತೆರೆದುಕೊಳ್ಳುವಿಕೆಯ ಕೊರತೆಯಿಂದ ಆಗಿರಬಹುದು, ಈ ನಿಟ್ಟಿನಲ್ಲಿ ಪೂರಕ ಪರಿಸರವನ್ನು ನೀವು ನಿಮ್ಮ ಮಗುವಿಗೆ ಒದಗಿಸಬೇಕು. ಅಥವಾ ಮಗುವಿನಲ್ಲಿ  ವಿವಿಧ ಕಾರಣಗಳಿಂದ ಬೆಳೆದಿರುವ ನಾಚಿಕೆಯ ಸ್ವಭಾವವೂ ಇದಕ್ಕೆ ಕಾರಣ ಆಗಿರಬಹುದು ಅಥವಾ ನಿಮ್ಮ ಮಗುವು ನಿಧಾನವಾಗಿ ತೆರೆದುಕೊಳ್ಳುವ ಸ್ವಭಾವದವನಾಗಿರಬಹುದು ಅಥವಾ ಆತನಲ್ಲಿ ಮಾತು ಮತ್ತು ಭಾಷಾ ಕೌಶಲದ ಬೆಳವಣಿಗೆ ಬಹಳ ನಿಧಾನವಾಗಿ ಆಗುತ್ತಿರಬಹುದು ಅಥವಾ ಇದು ಕಲಿಕೆಯ ನ್ಯೂನತೆಯ ಮೊದಲ ಹಂತವೂ ಸಹ ಆಗಿರಬಹುದು.
ಹಂತ 2: ಮಗುವಿನಲ್ಲಿ ಆಗುತ್ತಿರುವ ವಿವರಿಸುವ ಸಾಮರ್ಥ್ಯದ ಬೆಳವಣಿಗೆಯನ್ನು ಗಮನಿಸುವುದು.
ಒಂದು ಕಥೆಯನ್ನು ಮತ್ತೆ ಮತ್ತೆ ಹೇಳು ಎಂದು ಮಗುವನ್ನು ಒತ್ತಾಯಿಸುವುದಕ್ಕೆ ಬದಲಾಗಿ ಒಂದು ವೈಯಕ್ತಿಕ ಅನುಭವವನ್ನು ವಿವರಿಸುವಂತೆ ಮಗುವನ್ನು ಪ್ರೋತ್ಸಾಹಿಸಿ. ಅದು ಆ ಮಗುವಿನ ದಿನನಿತ್ಯದ ಚಟುವಟಿಕೆಯ ಸಂದರ್ಭ ಆಗಿರಬಹುದು ಅಥವಾ ಪ್ರತಿ ದಿನದ ಯಾವುದೋ ಒಂದು ಘಟನೆಯೂ ಆಗಿರಬಹುದು.  ಮಗು ಆ ಘಟನೆಯನ್ನು ವಿವರಿಸುತ್ತಾ ಇರುವಾಗ ಅದರಲ್ಲಿ ನಿಮಗೆ ಆಸಕ್ತಿ, ಕುತೂಹಲ ಇದೆ ಎಂದು ತೋರಿಸಿ. ಏನಾಯಿತು ಮತ್ತು ಹೇಗೆ ನಡೆಯಿತು ಎಂಬ ಬಗ್ಗೆ ನಿಮಗೆ ಆಸಕ್ತಿ ಇದೆ ಎಂದು ತೋರಿಸಿಕೊಳ್ಳಿ. ಆಮೇಲೆ ಏನಾಯಿತು? ಆಮೇಲೆ ನೀನೇನು ಮಾಡಿದೆ ಅಯ್ಯೋ...ಹಾಗಾಯ್ತಾ.........ಇತ್ಯಾದಿ ಭಾವನೆಗಳನ್ನು ತೋರಿಸಿ.  ಲ್ಯಾಬೊವ್‌ ಹೇಳುತ್ತಾರೆ, ಮಕ್ಕಳು ಒಂದು ಸರಳ ಘಟನೆಯ ಒಳಹೊಕ್ಕು ನೋಡಿದ ಹಾಗೆಲ್ಲಾ ವೈಯಕ್ತಿಕ ವಿವರಣೆಯು ಅವರನ್ನು ಇನ್ನಷ್ಟು ಯೋಚಿಸುವಂತೆ ಮಾಡುತ್ತದೆ. ಕುತೂಹಲ ಮತ್ತು ಕಲ್ಪನೆಯ ಜೊತೆಗೆ ಅವರ ವೈಯಕ್ತಿಕ ಯೋಚನೆ ಮತ್ತು ಅನುಭವಗಳು ಇನ್ನಷ್ಟು ಸ್ತರಿಸುತ್ತವೆ ಎಂದು. ವಿವರಣಾ ಕೌಶಲದ ಬೆಳವಣಿಗೆಯ ಹಂತಗಳನ್ನು ಕೆಳಗೆ ಕೊಡಲಾಗಿದೆ ಇದು ಮಕ್ಕಳಲ್ಲಿನ ಕೌಶಲದ ಬೆಳವಣಿಗೆಯ ಮೇಲೆ ನಿಗಾ ಇರಿಸಲು ಸಹಾಯ ಮಾಡುತ್ತದೆ.
ಮಗುವನ್ನು ಯಾವುದರಲ್ಲಾದರೂ ಮಗ್ನಗೊಳಿಸುವುದು ಬಹಳ ಆವಶ್ಯಕ ಯಾಕೆಂದರೆ ಇದು ಮಗುವಿನ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ವಾಸ್ತವ ಏನೆಂದರೆ ವಿವರಣಾ ಕೌಶಲ ಅನ್ನುವುದು ಆ ಮಗುವು ಶಾಲೆಯಲ್ಲಿ ಕಲಿಯುವ ಪಾಠದಷ್ಟೆ ಮಹತ್ವದ್ದು, ಪಂಚಾಂಗ ಗಟ್ಟಿ ಇಲ್ಲದಿದ್ದರೆ, ಮನೆ ಕಟ್ಟುವುದು ಅಸಾಧ್ಯ. ಹೀಗಾಗಿ, ಮಕ್ಕಳು ಹೆಚ್ಚು ಹೆಚ್ಚು ಕಲಿತು ಯಶಸ್ವಿಗಳೆನಿಸಲು ಶಿಕ್ಷಕರು ಮತ್ತು ಪಾಲಕರು ಒಂದು ಹೆಜ್ಜೆ ಮುಂದಿರಿಸಬೇಕು. ನೆನಪಿಡಿ, ಒಬ್ಬ  ಹಿರಿಯರನ್ನು ಸರಿಪಡಿಸುವುದಕ್ಕಿಂತಲೂ, ಒಂದು ಮಗುವನ್ನು ತಿದ್ದುವುದು ಹೆಚ್ಚು ಸುಲಭ.
ಮಕ್ಕಳಲ್ಲಿನ ವಿವರಣಾ ಕೌಶಲ ಅನ್ನುವುದು ಮಕ್ಕಳಲ್ಲಿ ಉತ್ತಮ ಶೈಕ್ಷಣಿಕ ಮತ್ತು ಸಾಮಾಜಿಕ ಕೌಶಲವನ್ನು ನಿರೀಕ್ಷಿಸಬಹುದಾದ ಅದರಲ್ಲೂ ವಿಶೇಷವಾಗಿ ಓದುವ ಮತ್ತು ಬರೆಯುವ ಕೌಶಲದ ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸಬಹುದಾದ ಪ್ರಮಾಣಕ ಎಂದು ಹೇಳುತ್ತಾರೆ ಸಂಶೋàಧಕರಾದ ಮೆಕ್‌ ಕೇಬ್‌ ಮತ್ತು ರಾಲಿನ್ಸ್‌  (2000).
ಜಟಿಲತೆ¿å  ಅಂಶಗಳಿಗೆ ಸಂಬಂಧಿಸಿದ ಹಾಗೆ ಬೆಳವಣಿಗೆ¿å ಹಂತಗಳ ಗಮನಿಸುವಿಕೆ (ವಸ್ತುಸ್ಥಿತಿ, ಕ್ರಿಯೆ, ವಿಶ್ಲೇಷಣೆ ಮತ್ತು ಪರಿಸಮಾಪ್ತಿ)
ವಿಲ್ಲಿಯಂ ಲೆಬೋವ್‌ ವ್ಯವಸ್ಥೆಗೊಳಿಸಿದ ಲೆಬೋವಿಯನ್‌ ನಿರ್ವಹಣಾ ವ್ಯವಸ್ಥೆಯು ವಿವರಣಾ ಕೌಶÇÂದ ಅಪಾಯದಲ್ಲಿ ಇರುವ ಮಕ್ಕಳನ್ನು ಗಮನಿಸಲು ನಮಗೆ ಸಹಾಯ ಮಾಡುತ್ತವೆ. ಇದನ್ನು ವಿಶೇಷ ಮಟ್ಟದ ವಿವರಣಾ ವಿನ್ಯಾಸದ ಬೆಳವಣಿಗೆಯ ಹಂತಗಳು ಎಂಬುದಾಗಿ ಕರೆಯುತ್ತಾರೆ. ಅದು ಈ ಕೆಳಗಿನಂತಿದೆ:
ಒಂದು ಘಟನೆಯ ವಿವರಣೆ: ಮಾತುಕತೆಯಲ್ಲಿ ಭೂತಕಾಲಕ್ಕೆ ಸಂಬಂಧಿಸಿದ ಒಂದೇ ಒಂದು ಘಟನೆಯ ವಿವರಣೆ ಇರುವುದು. ಮೂರೂವರೆ ವರ್ಷಕ್ಕೆ ಮೊದಲೇ ಇದು ಕಂಡುಬರುತ್ತದೆ. ಉದಾ.: ನನಗೆ ಒಂದು ಜೇನು ನೊಣ ಕಚ್ಚಿತು. 
 
ಎರಡು ಘಟನೆಗಳ ವಿವರಣೆ: ಇದರಲ್ಲಿ  ಭೂತಕಾಲದ ಎರಡು ಘಟನೆಗಳಿಗೆ ಸಂಬಂಧಿಸಿದ ವಿವರಣೆ ಇರುತ್ತವೆ. ಮೂರೂವರೆ ವರ್ಷದಲ್ಲಿ  ಈ ಬೆಳವಣಿಗೆ ಕಂಡುಬರುತ್ತದೆ. ಉದಾ: ನನಗೆ ಒಂದು ಜೇನು ನೊಣ ಕಚ್ಚಿತು. ಅದು ನನ್ನ ಪಾದಕ್ಕೆ ಚುಚ್ಚಿತು.

ವಿವಿಧ ಘಟನೆಗಳ ವಿವರಣೆ: ಇದರಲ್ಲಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಭೂತಕಾಲಕ್ಕೆ ಸಂಬಂಧಿಸಿದ ಘಟನೆಗಳ ವಿವರಣೆ ಇರುತ್ತವೆ.
ಹಾರು ಕಪ್ಪೆಯಂತಹ ವಿವರಣೆ: ಎರಡು ಅಥವಾ ಹೆಚ್ಚು ಭೂತಕಾಲಕ್ಕೆ ಸಂಬಂಧಿಸಿದ ಘಟನೆಗಳ ವಿವರಣೆ ಇರುತ್ತದೆ. ಆದರೆ ಘಟನೆಗಳು ಸಮಯಾನುಕ್ರಮದಲ್ಲಿ ಇರುವುದಿಲ್ಲ ಮತ್ತು/ಅಥವಾ ಅದರಲ್ಲಿ ಮುಖ್ಯ ಘಟನೆಗಳು ಬಿಟ್ಟು ಹೋಗಿರಲೂ ಬಹುದು (ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಮಾತನಾಡುವುದು). ನಾಲ್ಕು ವರ್ಷ ಪ್ರಾಯದಲ್ಲಿ ಈ ಬೆಳವಣಿಗೆ ಕಂಡುಬರುತ್ತದೆ. 
ಉದಾ: ಯಾರು ವೇಗವಾಗಿ ಓಡುವವರು ಎಂದು ಆಮೆ ಮತ್ತು ಮೊಲದ ಬೆಟ್‌. ಆಮೆ ಬಹಳ ನಿಧಾನ ಇದ್ದುದಕ್ಕೆ ಮೊಲ ತಮಾಷೆ ಮಾಡಿತು.  ಆದರೆ ಕೊನೆಗೆ ಮೊಲ ಗೆದ್ದಿತು. ಆ ಮೊಲ ಮರದ ಕೆಳಗೆ ನಿದ್ದೆ ಹೋಗುವುದಕ್ಕೆ ಮೊದಲೇ ಆಮೆ ಗೆದ್ದಿತ್ತು. 
ಕಾಲಗಣನೆ ಇದರಲ್ಲಿ ಎರಡು ಅಥವಾ ಹೆಚ್ಚು ಭೂತಕಾಲದ ಘಟನೆಗಳು ಇರುತ್ತವೆ ಮತ್ತು ಇವು ತರ್ಕಬದ್ಧ ರೀತಿಯಲ್ಲಿ ಇರಬಹುದು ಅಥವಾ ಮಾಮೂಲಿ ರೀತಿಯಲ್ಲಿ ಇರಬಹುದು. ಎಲ್ಲ  ವಯಸ್ಸಿನವರಲ್ಲಿಯೂ ಈ ಹಂತ ಕಂಡುಬರುತ್ತದೆ. 
ವಿಶೇಷ ಘಟ್ಟದಲ್ಲಿ ಅಂತ್ಯವಾಗುವ ವಿವರಣೆ ತರ್ಕಬದ್ಧ ರೀತಿಯಲ್ಲಿ ಅಥವಾ ಮಾಮೂಲಿ ರೀತಿಯಲ್ಲಿ ಇರುವಂತಹ2 ಅಥವಾ ಹೆಚ್ಚು ಭೂತಕಾಲದ ಘಟನೆಗಳ ವಿವರಣೆ. ಈ ವಿವರಣೆಯು ಒಂದು ವಿಶೇಷಘಟ್ಟವನ್ನು ಹೊಂದಿರುತ್ತದೆ. ಆದರೆ ಪರಿಸಮಾಪ್ತಿ (ಪರಿಹಾರ) ಇರುವುದಿಲ್ಲ. ಇದು ಐದನೆಯ ವಯಸ್ಸಿ ನಲ್ಲಿ ಕಂಡುಬರುತ್ತದೆ. ಉದಾ: ನನಗೆ ಒಂದು ಜೇನು ನೊಣ ಕಚ್ಚಿತು. ಅದು ನನ್ನ ಪಾದಕ್ಕೆ ಚುಚ್ಚಿತು. ನಾನು ಕಿರುಚಿದೆ, ಕಿರುಚಿದೆ ಮತ್ತು ಜೋರಾಗಿ ಅತ್ತುಬಿಟ್ಟೆ (ವಿಶೇಷ ಘಟ್ಟ- ನಾನು ಕಿರುಚಿದೆ, ಕಿರು ಚಿದೆ ಮತ್ತು ಜೋರಾಗಿ ಅತ್ತುಬಿಟ್ಟೆ ).
ವಿಶೇಷ ಘಟ್ಟದಲ್ಲಿ ಅಂತ್ಯವಾಗುವ ಅತ್ಯುನ್ನತ ವಿವರಣೆ ತರ್ಕಬದ್ಧ ರೀತಿಯಲ್ಲಿ ಅಥವಾ ಮಾಮೂಲಿ ರೀತಿಯಲ್ಲಿ ಇರುವಂತಹ ಎರಡು ಅಥವಾ ಹೆಚ್ಚು ಭೂತಕಾಲದ ಘಟನೆಗಳು. ಈ ವಿವರಣೆಯು ಒಂದು ವಿಶೇಷಘಟ್ಟವನ್ನು (ಘಟನೆಯ ವಿಶೇಷ ಘಟ್ಟ ) ಮತ್ತು ಪರಿಸಮಾಪ್ತಿ (ಪರಿಹಾರ) ಯನ್ನು ಹೊಂದಿರುತ್ತದೆ. ಇದು ಆರು ಮತ್ತು ಅದಕ್ಕಿಂತ ಮೇಲಿನ ವಯಸ್ಸಿನಲ್ಲಿ ಕಂಡುಬರುತ್ತದೆ. 
ಉದಾ: ನನಗೆ ಒಂದು ಜೇನು ನೊಣ ಕಚ್ಚಿತು. ಅದು ನನ್ನ ಪಾದಕ್ಕೆ ಚುಚ್ಚಿತು. ನಾನು ಕಿರುಚಿದೆ, ಕಿರುಚಿದೆ ಮತ್ತು ಜೋರಾಗಿ ಅತ್ತುಬಿಟ್ಟೆ (ವಿಶೇಷ ಘಟ್ಟ). ನನ್ನ ಅಪ್ಪ, ಅಮ್ಮ ಹೊರಗೆ ಬಂದರು ಮತ್ತು ನನ್ನನ್ನು ಮನೆಯೊಳಗೆ ಕರೆದುಕೊಂಡು ಹೋದರು (ಪರಿಸಮಾಪ್ತಿ).ಮಕ್ಕಳಲ್ಲಿನ ವಿವರಣಾ ಕೌಶಲದ ಬೆಳವಣಿಗೆಯ ಆರಂಭಿಕ ಹಂತಗಳು  (Hedburg and Stoel - Gammon,, 1986)
ಹಂತ 1: 
ಒಟ್ಟೊಟ್ಟಾಗಿ ಹೇಳುವುದು 
(2 ವರ್ಷ) 

ನಿಮ್ಮ ಮಗುವು ಒಂದಕ್ಕೊಂದು ಸಂಬಂಧವೇ ಇಲ್ಲದ ರಾಶಿ ರಾಶಿ ವಿಷಯಗಳನ್ನು ಬೆಸೆದು ಹೇಳಬಹುದು. ಕಥೆಯಲ್ಲಿ  ವಿಷಯವನ್ನು ಒಂದಕ್ಕೊಂದು ಬೆಸೆಯಲು ಪೂರಕ ಶಬ್ದವನ್ನು ಬಳಸದೆ ಮಾತುಕತೆಯಲ್ಲಿ  ವಿಷಯಗಳು ಆಗಾಗ ಮರುಕಳಿಸ ಬಹುದು ಮತ್ತು ಸರಳ ವರ್ತಮಾನ ಕಾಲವಾಚಕವನ್ನು ಬಳಸಬಹುದು.  ಉದಾ: ಒಬ್ಬಳು ಹುಡುಗಿ ಬಿಸ್ಕಿಟ್‌ ತಿನ್ನುತ್ತಾ ಇದ್ದಾಳೆ, ಒಬ್ಬ ವ್ಯಕ್ತಿ ಕಾರಿನ ಕಡೆ ಹೋದ, ಮಗು ನಿದ್ದೆ ಮಾಡುತ್ತಾ ಇದೆ.  
ಹಂತ 2: 
ಸರಣಿಗಳು (2-3 ವರ್ಷ) 

ಈ ಹಂತದಲ್ಲಿ ನಿಮ್ಮ ಮಗುವು ಮಗುವಿನ ಕಥಾ ಭಾಗವನ್ನು ಇಚ್ಛಾನುಸಾರ ಜೋಡಿಸಿ ಹೇಳಲು ಆರಂಭಿಸಬಹುದು. ಈ ಸರಣಿಯಲ್ಲಿ ಒಂದು ಕೇಂದ್ರ ಪಾತ್ರ, ಒಂದು ವಿಷಯ ಅಥವಾ ಪರಿಸರ ಇರಬಹುದು. 
ಉದಾ: ಅವಳು ತನ್ನ ತಂದೆಯ ಜತೆಗೆ ವಾಸಿಸುತ್ತಿದ್ದಳು. ಅವಳು ತನ್ನ ತಾಯಿಯ ಜತೆಗೆ ವಾಸಿಸುತ್ತಿದ್ದಳು. ಅಜ್ಜ ಮತ್ತು ಅಜ್ಜಿ ಜತೆಗೆ ವಾಸಿಸುತ್ತಿದ್ದರು. ಈ ಮೂರು ಮಕ್ಕಳು ತಮ್ಮ ಅಜ್ಜಿಯ ಜತೆಗೆ ಇದ್ದರು ಮತ್ತು ಈ ಎರಡು ಪ್ರಾಣಿಗಳು ಅವರ ಜತೆ ಇದ್ದವು. 
ಹಂತ 3: 
ಆರಂಭಿಕ ವಿವರಗಳು (2-4 ವರ್ಷ)

ಆರಂಭಿಕ ವಿವರಗಳು, ಒಂದು ಕೇಂದ್ರ ಪಾತ್ರ, ವಿಷಯ ಅಥವಾ ಪರಿಸರ ಇತ್ಯಾದಿ ವಿವರಗಳನ್ನು ಒಳಗೊಂಡ ಸರಣಿಯ ರೂಪದ ವಿವರಗಳು.  ಮಗುವಿನ ಚರ್ಚಾ ವಿಷಯ ಮತ್ತು ಪಾತ್ರಗಳ ಮೌಖೀಕ ಚಹರೆಗಳು ಅಥವಾ ದೇಹದ ಭಂಗಿಗಳು ಸರಣಿಯಲ್ಲಿ ಬದಲಾಗುತ್ತಿರುತ್ತವೆ. 
ಉದಾ: ನನ್ನ ಅಪ್ಪ, ಅವರು ಕೆಲಸಕ್ಕೆ ಹೊರಟು ಹೋದರು. ನನ್ನ ಅಮ್ಮ ಉಳಿದುಕೊಂಡರು ಮತ್ತು ನಿದ್ದೆ ಹೋದರು. ನನ್ನ ಇಬ್ಬರು ಸಹೋದರರು, ಅವರು ಆಟಿಕೆಗಳ ಜತೆಗೆ ಆಡಲು ಹೋದರು. ನನ್ನ ನಾಯಿ, ಅದು ಹೊರಗೆ ಹೋಯಿತು. ನನ್ನ ಕಿಟ್ಟಿ ಬೆಕ್ಕು ಮೇಲೆ ಬಂತು ಮತ್ತು ಅದು ನನಗೆ ಕಚಗುಳಿ ಮಾಡಿತು ಮತ್ತು ಮೇಲೆ ಬಂತು ಮತ್ತು ಮಿಯಾಂ ಅನ್ನಲು ಆರಂಭಿಸಿತು. ಆಮೇಲೆ ನಾನು ಅಳಲು ಆರಂಭಿಸಿದೆ. ಯಾಕೆಂದರೆ ಅದು ನನ್ನನ್ನು ಕಚ್ಚಿತು. ನನ್ನ ಸಹೋದರರು ಓಡುತ್ತಾ ಬಂದರು ಮೈಕ್‌ ಏನಾಯಿತು ಎಂದು ಕೇಳಿದ. ನನ್ನ ಕಿಟ್ಟಿ ಬೆಕ್ಕು ನಂಗೆ ಕಚ್ಚಿ ಬಿಟ್ಟಿತು ಅಂತ ಹೇಳಿದೆ. ಅಮ್ಮ ಓಡುತ್ತಾ ಬಂದರು, ಮತ್ತು ಅವರು  ಏನಾಯಿತು, ಓಹೋ ಕಿಟ್ಟಿ ಬೆಕ್ಕು ನಿನ್ನನ್ನು ಕಚ್ಚಿತಾ,  ಸರಿ ಎಂದು ಕೇಳಿದರು.  
ಕೇಂದ್ರೀಕೃತವಲ್ಲದ ಸರಣಿಗಳು 
(4-4 1/2 ವರ್ಷಗಳು)

ಒಂದು ಕೇಂದ್ರೀಕೃತವಲ್ಲದ ಸರಣಿಯಲ್ಲಿ ಕೇಂದ್ರ ಪಾತ್ರಗಳು ಇರುವುದಿಲ್ಲ. ಇವು ಘಟನೆಗಳ ಸರಣಿಗಳಾಗಿದ್ದು ಅವು ವ್ಯವಸ್ಥಿತವಾಗಿ ಅಥವಾ ಕಾರ್ಯ-ಕಾರಣ ಸಂಬಂಧದಿಂದ ಒಂದಕ್ಕೊಂದು ಬೆಸೆದಿರುತ್ತವೆ. ಜೋಡಿಸುವ ಶಬ್ದಗಳಾದ ಮತ್ತು, ಆದರೆ ಯಾಕೆಂದರೆ ಇತ್ಯಾದಿ ಶಬ್ದಗಳು ಇಲ್ಲಿ ಬಳಕೆ ಆಗಿರಬಹುದು.  
 
ಉದಾ:  ಈ ಮನುಷ್ಯ ನಡೆಯುತ್ತಾ ಇದ್ದಾನೆ. ಅವನು ಒಂದು ನಾಯಿ ಮತ್ತು ಒಂದು ಬೆಕ್ಕನ್ನು ನೋಡಿದ ಮತ್ತು ನಾಯಿ  ಮತ್ತು ಬೆಕ್ಕಿನ ಜತೆಗೆ ಒಂದು ಹುಡುಗಿಯನ್ನೂ ಸಹ ನೋಡಿದ.  ಆತ ಹಲೋ ಎಂದು ಹೇಳಿದ. ಆತ ಹಿಂದಕ್ಕೆ ಹೋಗಿ ಸಹೋದರಾ, ಇಲ್ಲಿ ಬಾ ಎಂದು ಹೇಳಿದ. ಹಾಗಾಗಿ ಆಕೆಯ ಅಜ್ಜಿ ಎದ್ದು ಆಕೆಯ ಕಡೆಗೆ ನಡೆದರು ಮತ್ತು ನಿಮ್ಗೆ ಡಾನ್ಸ್‌ ಮಾಡಲು ಹೋಗ್ಲಿಕ್ಕೆ ಇದೆಯಾ? ಎಂದು ಕೇಳಿದರು. ಅವರು ಡಾನ್ಸ್‌ ಮಾಡಲು ಹೋದರು ಮತ್ತು ಅದು ಬಹಳ ನಿಧಾನದ ಡಾನ್ಸ್‌ ಆಗಿತ್ತು. ಅವರು ಹಿಂದಕ್ಕೆ ಬಂದರು.  ಆಮೇಲೆ ಈ ಎರಡು ಮಕ್ಕಳು ಬಂದರು. ಆಮೇಲೆ ಮೊದಲಿಗೆ ಅವನು ಹೇಳಿದ. ನಾನಲ್ಲ. ಆಮೇಲೆ ಅವನು ಹೇಳಿದ ಏನು? ನನಗೆ ಹೊರಗೆ ಊಟಕ್ಕೆ ಹೋಗ್ಲಿಕ್ಕೆ ಇದೆ. ಹಾಗಾಗಿ ಅವರು ಊಟಕ್ಕೆ ಹೊರಗೆ ಹೋದರು. 
ಕೇಂದ್ರೀಕೃತ ಸರಣಿಗಳು (5 ವರ್ಷ)
ಕೇಂದ್ರೀಕೃತ ಸರಣಿಗಳಲ್ಲಿ ಒಂದು ಕೇಂದ್ರ ಪಾತ್ರ ಮತ್ತು ಘಟನೆಗಳ ಒಂದು ವ್ಯವಸ್ಥಿತ ಸರಣಿ ಇರುತ್ತದೆ. 
ಈ ಸರಣಿಗಳಲ್ಲಿ ವರ್ಣಿಸಲಾದ ಘಟನೆಗಳು ಸಾಹಸದ ರೂಪವನ್ನು ಪಡೆಯುತ್ತವೆ. 
ಉದಾ:  ಒಂದಾನೊಂದು ಕಾಲದಲ್ಲಿ ಕ್ರಿಸ್ಟೀ ಎಂಬ ಹೆಸರಿನ ತಾಯಿ ಒಬ್ಬಳು ಇದ್ದಳು. ಅವಳ ಗಂಡನ ಹೆಸರು ಟಾಮ್‌ ಮತ್ತು ಅವರಿಗೆ ಕೆಲವು ಮಕ್ಕಳು ಇದ್ದರು. ಅವರ ಹೆಸರು ಹೀಥರ್‌ ಮತ್ತು ಕ್ರಿಸ್ಟೀ. ಅವರಲ್ಲಿ ಒಬ್ಬ ಹುಡುಗ ಇದ್ದ. ಅವನ ಹೆಸರು ರಾನಿ. ತಾಯಿ ಹುಡುಗನನ್ನು ಹೊರಗೆ ಹೋಗಿ ಆಡುವಂತೆ ಹೇಳಿದರು. ಅನಂತರ ಹುಡುಗ ಒಳಗೆ ಬಂದು ಹೇಳಿದ  ಅಮ್ಮ, ಅಮ್ಮ ನಮ್ಮ ನಾಯಿ ಹೊರಗಡೆ ಇದೆ ಮತ್ತು ಅದು ಬೊಗಳುತ್ತಾ ಇದೆ. ನಾನು ಹೊರಗೆ ಹೋಗಿ ನೋಡುತ್ತೇನೆ ಏನು ನೀನು ಬೊಗಳುತ್ತಿರುವುದು?  ಅವನು ಯಾಕೆ ಬೊಗಳ್ತಾ ಇದ್ದಾನೆ ಅಂತ ನಂಗೆ ಗೊತ್ತಿಲ್ಲ, ಟಾಮಿ, ರಾನಿ, ರಾನಿ. ಅವನು ಯಾಕೆ ಬೊಗಳ್ತಾ ಇದ್ದಾನೆ ಅಂತ ನಂಗೆ ಗೊತ್ತಿಲ್ಲಾ. ಅವನಿಗೆ ಒಳಗೆ ಬಬೇìಕಾಗಿದೆ ನಾನು ಅವನನ್ನು ಒಳಗೆ ಕರ್ಕೊಂಡು ಬತೇìನೆ ಅಲ್ಲ, ನಾನು ಅವನನ್ನು ಒಳಗೆ ತತೇìನೆ. ಮಕ್ಕಳಲ್ಲಿ ಆರಂಭಿಕ ವಿವರಣಾ ಕೌಶಲ ಬೆಳವಣಿಗೆಯಿಂದ ಆರಿಸಲಾಗಿದೆ (ಹೆಡºರ್ಗ್‌ ಆ್ಯಂಡ್‌ ಸ್ಟಾಯೆಲ್‌ ಗ್ಯಾಮೊನ್‌ 1986) .
- ಡಾ| ವೆಂಕಟರಾಜ ಐತಾಳ್‌ ಯು., 
ಪ್ರೊಫೆಸರ್‌, ಸ್ಪೀಚ್‌ ಎಂಡ್‌ ಹಿಯರಿಂಗ್‌ ವಿಭಾಗ,SOAHS ಮಣಿಪಾಲ.